Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide:ಮನೆ ಮಾರಿ ಸೀರೆ, ಒಡವೆ ತಂದ ಅಮ್ಮ: ಸುಮ್ಮನೆ ಬಿಡುತ್ತಾಳಾ ಕೃತಿ?
ಕೃತಿ ಮನೆಗಾಗಿ ಕಿರಾಣಿ ಅಂಗಡಿಯಲ್ಲಿ ಕಷ್ಟ ಪಡ್ತಾ ಇದ್ರೆ ಇತ್ತ ಅವರ ಅಮ್ಮ ಬಹಳ ಬೇಗ ಶ್ರೀಮಂತೆ ಆಗಿಬಿಡಬೇಕೆಂದು ಯೋಚನೆ ಮಾಡುತ್ತಿದ್ದಾಳೆ. ಅದಕ್ಕೆ ಹಿರಿಯ ಮಗಳು ಬಹುದ್ದೂರ್ ವಂಶದ ಮಗನನ್ನು ಇಷ್ಟಪಡುತ್ತಾ ಇದ್ದೀನಿ ಅಂತ ಹೇಳಿದ್ದೆ ತಡ, ಸಾಲ ಸೋಲ ಮಾಡುವುದಲ್ಲದೆ, ಕೃತಿಗೂ ಹಿಂಸೆ ಕೊಟ್ಟು, ಅದ್ಧೂರಿಯಾಗಿ ಮದುವೆ ಮಾಡುವುದಕ್ಕೆ ಹೊರಟಿದ್ದಾಳೆ.
ಈಗಾಗಲೇ ವರ್ಣಿಕಾಳನ್ನು ಬಹದ್ದೂರ್ ಮನೆಯವರು ಕೂಡ ಒಪ್ಪಿದ್ದಾರೆ. ಎಂಗೇಜ್ಮೆಂಟ್ ಕೂಡ ಆಗಿದೆ. ಮದುವೆ ತಯಾರಿಯೂ ಅದ್ದೂರಿಯಾಗಿ ಮಾಡುತ್ತಿದ್ದಾರೆ. ಆದರೆ ಕೃತಿ ಅಮ್ಮ ಸ್ಟೇಟಸ್ ಮ್ಯಾಚ್ ಮಾಡಿಕೊಳ್ಳುವುದಕ್ಕೆ ಬೇರೆಯದ್ದೇ ದಾರಿ ಹಿಡಿಯುತ್ತಿದ್ದಾಳೆ. ಅದು ಗಂಡನಿಗೂ, ಮಗಳಿಗೂ ಗೊತ್ತಾಗದಂತ ದಾರಿ.
Shrirasthu
Shubhamasthu:ಶಾರ್ವರಿಯ
ಕೋಪಕ್ಕೆ
ಪ್ರಾಣ
ಕಳೆದುಕೊಳ್ಳುತ್ತಾ
ಪೂರ್ಣಿ
ಮಗು..?

ವರ್ಣಿಕಾಗೆ ಸಾಮ್ರಾಟ್ ಮೇಲೆ ಮನಸ್ಸು
ವರ್ಣಿಕಾಗೆ ಅಕ್ಕಿ ಮೇಲೂ ಆಸೆ ನೆಂಟರ ಮೇಲೂ ಆಸೆ ಎಂಬಂತ ಬುದ್ದಿ. ಯಾಕಂದ್ರೆ ಒಂದೇ ಮನೆಯಲ್ಲಿ ಇಬ್ಬರನ್ನು ಪ್ರೀತಿ ಮಾಡುತ್ತಾ ಇದ್ದಾಳೆ. ಅತ್ತ ಯುವರಾಜನನ್ನು ಪ್ರೀತಿಸುತ್ತಿದ್ದೀನಿ ಎಂಬ ನಾಟಕದ ಜೊತೆಗೆ ಎಂಗೇಜ್ಮೆಂಟ್ ಕೂಡ ಆಗಿದ್ದಾಳೆ. ಆದ್ರೆ ಇತ್ತ ಯುವನ ತಮ್ಮ ಸಾಮ್ರಾಟ್ ಮೇಲೆ ಮನಸ್ಸು ಮಾಡಿದ್ದಾಳೆ. ಏನಾದರೂ ಆಗಲಿ ಸಾಮ್ರಾಟ್ ನನ್ನು ನಾನು ಪ್ರೀತಿಸುತ್ತಾ ಇದ್ದೀನಿ. ಅವನನ್ನೇ ಮದುವೆಯಾಗುವುದು ಅಂತ ಅಮ್ಮನಿಗೆ ಹೇಳಿ ಬಿಡೋಣಾ ಎಂಬ ಪ್ಲ್ಯಾನ್‌ನಲ್ಲಿದ್ದಾಳೆ ವರ್ಣಿಕಾ.

ಮನೆ ಅಡವಿಟ್ಟು ಹಣ ತಂದ ಅಮ್ಮ
ಹೇಗಾದರೂ ಮಾಡಿ ವರ್ಣಿಕಾಳನ್ನು ಶ್ರೀಮಂತರ ಮನೆಗೆ ಸೊಸೆಯಾಗಿ ಮಾಡಿಬಿಟ್ಟರೆ ನಾನು ಜೀವನದಲ್ಲಿ ಸೆಟಲ್ ಆಗಿ ಬಿಡಬಹುದು ಎಂಬ ಆಸೆ ವರ್ಣಿಕಾ ತಾಯಿಯದ್ದು. ಅದಕ್ಕೆ ವರ್ಣಿಕಾ ಅದ್ಯಾವಾಗ ಬಹದ್ದೂರ್ ವಂಶದ ಕುಡಿಯನ್ನು ಪ್ರೀತಿ ಮಾಡುತ್ತಿದ್ದಾಳೆ ಎಂಬುದು ತಿಳಿಯಿತೋ ಅಲ್ಲಿಂದ ಮಗಳಿಗೆ ಫುಲ್ ಸಪೋರ್ಟ್. ಮೊದಲೇ ಕೃತಿಗೂ ಹಾಗೂ ಬಹದ್ದೂರ್ ವಂಶದ ಯುವರಾಜನಿಗೆ ಕಂಡ ಕಂಡಲ್ಲಿ ಜಗಳ. ಹೀಗಾಗಿ ಮಗಳು ಇನ್ನೊಬ್ಬಳು ಇದ್ದಾಳೆ ಎಂಬುದನ್ನೇ ತಿಳಿಸಿಲ್ಲ. ಕೃತಿಗೂ ಯಾವುದೇ ವಿಚಾರ ತಿಳಿಸಿದ್ದರು ಫೈನ್ಯಾಶ್ಶಿಯರ್ ಬಳಿ ಮನೆ ಅಡವಿಟ್ಟು, ಆ ಹಣದಲ್ಲಿ ವರ್ಣಿಕಾಗೆ ಸೀರೆ, ಒಡವೆ ತಂದಿದ್ದಾಳೆ.

ಕೃತಿಗೆ ಕಷ್ಟವಾದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ
ಅಮ್ಮ ಸಾಲ ಮಾಡಿ ಇಷ್ಟೆಲ ಒಡವೆ, ಹಣ ತಂದಿದ್ದನ್ನು ಕಂಡು ಕೃತಿಗೆ ಟೆನ್ಶನ್ ಆಗಿದೆ. ಹೀಗಾಗಿ ಆ ಹಣ ಎಲ್ಲಿಂದ ಬಂತು, ಸಾಲ ತಗೊಂಡ್ಯಾ ಎಂದೆಲ್ಲಾ ಕೇಳಿದರು ಬಾಯಿ ಬಿಡುತ್ತಿಲ್ಲ. ಮನೆ ಅಡವಿಟ್ಟಿರುವುದನ್ನು ಮಗಳು ಹಾಗೂ ಗಂಡನಿಂದಾನೇ ಮುಚ್ಚಿಟ್ಟಿದ್ದಾಳೆ. ಕೃತಿ ಬಲವಂತ ಮಾಡಿ ಕೇಳಿದಾಗ ದೊಡ್ಡಮ್ಮ ಕೊಟ್ಟಳು ಅಂತ ಸುಳ್ಳು ಹೇಳಿ ಜಾರಿಕೊಂಡಿದ್ದಾಳೆ.

ಬಹದ್ದೂರ್ ವಂಶದ ಸೊಸೆಯಾಗುತ್ತಾಳಾ ಕೃತಿ?
ಬಹದ್ದೂರ್ ವಂಶದಲ್ಲಿ ಯುವರಾಜನಿಗೆ ಕೃತಿಯನ್ನು ಕಂಡರೆ ಆಗುವುದಿಲ್ಲ. ಮಾತಿಗೆ ಮುಂಚೆ ಜೋರು ಜಗಳ ಮಾಡುತ್ತಾನೆ. ಆದರೆ ಯುವರಾಜನ ಇನ್ನೊಬ್ಬ ತಮ್ಮನಿಗೆ ಕೃತಿ ಮೇಲೆ ಮನಸ್ಸಾಗಿದೆ. ಬೇಕು ಬೇಕು ಅಂತಾನೆ ಕೃತಿಯನ್ನು ಹುಡುಕಿಕೊಂಡು ಅಂಗಡಿಗೆ ಹೋಗುತ್ತಾನೆ. ಆದರೆ ಈ ಬಾರಿ ಅಂಗಡಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಮನೆಗೆ ಹೋಗಿದ್ದಾನೆ. ಕೃತಿಗೆ ಅವನನ್ನು ನೋಡಿ ಖುಷಿಯೂ ಹೌದು, ಟೆನ್ಶನ್ ಶುರು. ಯಾಕಂದ್ರೆ ನಾನು ವರ್ಣಿಕಾಳ ತಂಗಿ ಎಂಬುದನ್ನು ಯಾರು ಕೂಡ ಬಹದ್ದೂರ್ ಮನೆಗೆ ತಿಳಿಸಿಲ್ಲ.