Don't Miss!
- News
ಫೆಬ್ರವರಿ 24 ರಿಂದ ಮೂರು ದಿನ ಕಲ್ಯಾಣ ಕರ್ನಾಟಕ ಉತ್ಸವ
- Finance
Matsya Sampada: ಪಿಎಂ ಮತ್ಸ್ಯ ಸಂಪದದಡಿ ಹೊಸ ಯೋಜನೆ ಜಾರಿ, ಸಂಪೂರ್ಣ ಮಾಹಿತಿ
- Sports
ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆಲುವಿನ ಸನಿಹದಲ್ಲಿ ಕರ್ನಾಟಕ: Live ಸ್ಕೋರ್
- Automobiles
'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide:ಚಪ್ಪರಕ್ಕೆ ಬೆಂಕಿ ಹಚ್ಚಿದ ವರ್ಣಿಕಾ.. ಕಂಕಣ ಕಟ್ಟಿಸಿಕೊಂಡ ಸಾಮ್ರಾಟ್..!
'ಕಥೆಯೊಂದು ಈಗ ಶುರುವಾಗಬೇಕಿದೆ' ಆ ಎಲ್ಲಾ ಲಕ್ಷಣಗಳು ಈಗ ಕಾಣುತ್ತಿದೆ. ಯಾಕಂದ್ರೆ ವರ್ಣಿಕಾ ಹಾಗೂ ಸಾಮ್ರಾಟ್ ಇಷ್ಟಪಟ್ಟಂತೆ ನಡೆಯುವ ಎಲ್ಲಾ ಮುನ್ಸೂಚನೆಗಳು ಕಾಣಿಸುತ್ತಿದೆ. ಬಹದ್ದೂರ್ ಮನೆಯಲ್ಲಿ ಹಾಗೂ ವರ್ಣಿಕಾ ಮನೆಯಲ್ಲಿ ಈಗಾಗಲೇ ಮದುವೆ ತಯಾರಿಗಳು ನಡೆಯುತ್ತಿವೆ. ಆದರೆ ಇದರ ನಡುವೆ ಮನಸ್ಸಿನ ಆಸೆಗಳೇ ವಿಭಿನ್ನವಾಗಿದೆ.
ವರ್ಣಿಕಾ ಅಮ್ಮನಿಗೆ ಮಗಳನ್ನು ದೊಡ್ಡ ಮನೆಗೆ ಸೊಸೆ ಮಾಡಿಕೊಡುತ್ತಿದ್ದೀನಿ ಎಂಬ ಆಸೆ ಹಾಗೂ ಖುಷಿ. ಅದಕ್ಕೆಂದೇ ಸಾಲ ಮಾಡಿ, ಮನೆಯನ್ನು ಅಡಮಾನವಿಟ್ಟು ಮದುವೆಯ ತಯಾರಿ ನಡೆಸುತ್ತಿದ್ದಾಳೆ. ಆದರೆ, ವರ್ಣಿಕಾ ಮನಸ್ಸು ಬೇರೆ ಕಡೆಗೆ ವಾಲುತ್ತಿದೆ.
Tripura
Sundari:'ಕುಲವಧು'
ಧಾರಾವಾಹಿಯ
ದಿಶಾ
ಮದನ್
ಮಹಾರಾಣಿ
ಉತ್ಕಲಾ
ಅವತಾರದಲ್ಲಿ
ಪ್ರತ್ಯಕ್ಷ!

ಸಾಮ್ರಾಟ್‌ಗಾಗಿ ಕಾಯುತ್ತಿದೆ ವರ್ಣಿಕಾ ಮನಸ್ಸು
ವರ್ಣಿಕಾಳನ್ನು ಕಂಡರೆ ಯುವರಾಜ್‌ಗೆ ಇನ್ನಿಲ್ಲದ ಪ್ರೀತಿ. ಈಗಾಗಲೇ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಮೊದ ಮೊದಲಿಗೆ ಯುವರಾಜ್ ಸಿರಿವಂತಿಕೆ ನೋಡಿ ಆತನ ಮೇಲೆಯೇ ವರ್ಣಿಕಾ ಕೂಡ ಪ್ರೀತಿ ಬೆಳೆಸಿಕೊಂಡಿದ್ದಳು. ಅದಕ್ಕಾಗಿಯೇ ಮದುವೆಗೂ ಒಪ್ಪಿಕೊಂಡಿದ್ದಳು. ಆದರೆ ಇದೀಗ ವರ್ಣಿಕಾ ಮನಸ್ಸು ಬೇರೆಯದ್ದನ್ನೆ ಬಯಸುತ್ತಿದೆ. ಇದರಿಂದ ಮನೆಯಲ್ಲಿ ಯಾವ ಥರದ ಸಮಸ್ಯೆ ಎದುರಾಗುತ್ತೋ ಎಂಬ ಆತಂಕವೂ ಅವಳಲ್ಲಿ ಇದ್ದಂತೆ ಕಾಣುತ್ತಿಲ್ಲ.

ಅಣ್ಣನ ಹುಡುಗಿಗೆ ಪ್ಲ್ಯಾನ್ ಮಾಡಿದ ಸಾಮ್ರಾಟ್
ಸಾಮ್ರಾಟ್ ಒಂದು ಹಠವಿದೆ. ಮೊದಲಿನಿಂದಾನು ಅಣ್ಣ ಯುವರಾಜ್‌ಗೆ ಕಾಂಪಿಟ್ ಮಾಡುವುದು. ಅಣ್ಣ ಏನನ್ನಾದರೂ ಪಡೆಯುತ್ತಾನೆ ಅಂದ್ರೆ ಅದನ್ನು ತಪ್ಪಿಸಿ, ತಾನೇ ಪಡೆಯುವುದು. ಈಗ ಮದುವೆಯ ವಿಚಾರದಲ್ಲಿಯೂ ಅದನ್ನೇ ಮಾಡುತ್ತಿದ್ದಾನೆ. ವರ್ಣಿಕಾ ಮತ್ತು ಯುವರಾಜ್ ಮದುವೆ ಫಿಕ್ಸ್ ಆಗಿದೆ ಎಂದು ಗೊತ್ತಿದ್ದರೂ, ಸಾಮ್ರಾಟ್ ವರ್ಣಿಕಾಳ ಮನಸ್ಸನ್ನು ಬದಲಾಯಿಸಿದ್ದಾನೆ. ಗಿಫ್ಟ್‌ಗಳನ್ನು ಕೊಟ್ಟು ಆಸೆ ತೋರಿಸಿದ್ದಾನೆ. ಹೀಗಾಗಿ ವರ್ಣೀಕಾಳ ಮನಸ್ಸು ಸಂಪೂರ್ಣವಾಗಿ ಬದಲಾಗಿದೆ.

ವರ್ಣಿಕಾಳಿಂದ ಶಾಸ್ತ್ರದಲ್ಲಿ ಎಡವಟ್ಟು
ವರ್ಣಿಕಾಗೆ ಸಾಮ್ರಾಟ್ ಅಂದ್ರೆ ತುಂಬಾ ಇಷ್ಟವಾಗಿ ಬಿಟ್ಟಿದ್ದಾನೆ. ಹಾಗಂತ ಯುವರಾಜ್ ಕೊಟ್ಟ ಗಿಫ್ಟ್ ಅನ್ನು ಸುಮ್ಮನೆ ಬಿಡುತ್ತಿಲ್ಲ. ಅಲ್ಲಿಯೂ ಉಡುಗೊರೆ ತೆಗೆದುಕೊಂಡು, ಆಟವಾಡಿಸುತ್ತಿದ್ದಾಳೆ. ಆದರೆ ಮನೆಯಲ್ಲಿ, ಅಮ್ಮನ ಬಳಿ ಸತ್ಯ ಹೇಳಲೇಬೇಕೆಂದು ಪರದಾಡಿದರು ಅದೊಂದು ಮಾತ್ರ ನಡೆಯುತ್ತಿಲ್ಲ. ಇವತ್ತು ಮದುವೆಯ ತಯಾರಿ ತುಂಬಾ ಅದ್ದೂರಿಯಾಗಿ ನಡೆಯುತ್ತಿದೆ. ಈ ತಯಾರಿಯಲ್ಲಿ ವರ್ಣಿಕಾ ದೊಡ್ಡ ಎಡವಟ್ಟೊಂದನ್ನು ಮಾಡಿದ್ದಾಳೆ. ಚಪ್ಪರದ ಪೂಜೆಯಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಪೂಜೆ ಮಾಡುವುದಕ್ಕೆ ಅವರ ಅಮ್ಮ ಹೇಳಿದರೆ, ವರ್ಣಿಕಾ ಮಾತ್ರ ಮನಸ್ಸಲ್ಲಿ ಎಲ್ಲವೂ ಹಾಳಾಗಿ ಹೋಗಲಿ ಎಂದು ಬೇಡಿಕೊಂಡೆ ಪೂಜೆ ಆರಂಭಿಸಿದ್ದಾಳೆ. ಇದರ ಪರಿಣಾಮವಾಗಿ ಚಪ್ಪರದಲ್ಲಿ ಜೋರಾಗಿ ಬೆಂಕಿ ಹೊತ್ತಿಕೊಂಡಿದೆ.

ಸಾಮ್ರಾಟ್ ಕೈನಲ್ಲಿ ಕಂಕಣ
ಆ ಕಡೆ ಬಹದ್ದೂರ್ ಮನೆಯಲ್ಲೂ ಮದುವೆ ಕಾರ್ಯಗಳು ನಡೆಯುತ್ತಿತ್ತು. ಗಂಡಿಗೆ ಕಂಕಣ ಕಟ್ಟುವ ಶಾಸ್ತ್ರವದು. ಈ ಶಾಸ್ತ್ರದಲ್ಲಿ ಮನೆಯವರೆಲ್ಲರೂ ಭಾಗಿಯಾಗಿದ್ದರು. ಇನ್ನೇನು ಕಂಕಣ ಕಟ್ಟಬೇಕು ಎನ್ನುವಾಗಲೇ ಸಾಮ್ರಾಟ್ ಬಂದು ಕೈವೊಡ್ಡಿದ್ದ. ಅದನ್ನು ಯಾರು ಗಮನಿಸಲೇ ಇಲ್ಲ. ಕಂಕಣ ಕಟ್ಟುವವರು ಕೂಡ ಸಾಮ್ರಾಟ್ ಕೈಗೇನೆ ಕಂಕಣ ಕಟ್ಟಿದ್ದಾರೆ. ಇದನ್ನು ಅವರ ಅಮ್ಮ ಮೊದಲು ನೋಡಿದ್ದು, ಸಾಮ್ರಾಟ್‌ನನ್ನು ಗದರಿಸಿದ್ದಾರೆ. ಆದರೆ ಇದ್ಯಾವುದು ನನಗೆ ಗೊತ್ತೆ ಆಗಲಿಲ್ಲವೆಂಬಂತೆ ಸಾಮ್ರಾಟ್ ನಟಿಸಿದ್ದಾನೆ. ಆದರೆ ಮನಸ್ಸಿನ ಒಳಗೆ ಫುಲ್ ಖುಷಿಯಾಗಿದ್ದಾನೆ. ತಾನಂದುಕೊಂಡಿದ್ದನ್ನು ಸಾಧಿಸಿದ ಖುಷಿ ಅವನಲ್ಲಿ ಕಾಣಿಸುತ್ತಿದೆ.