Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide:ಬೇಡ ಎಂದರೂ ಮತ್ತೆ ಮತ್ತೆ ಒಂದಾಗುತ್ತಿರೋ ಕೃತಿ, ಯುವರಾಜ್..!
ಬಹದ್ದೂರ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇತ್ತ ಹುಡುಗಿ ಮನೆಯಲ್ಲಿ ತನ್ನ ತಂಗಿ ಯಾರೆಂಬುದನ್ನು ಮುಚ್ಚಿಟ್ಟುಕೊಂಡೆ ಮದುವೆಯ ತಯಾರಿ ಜೋರಾಗಿ ನಡೆಸುತ್ತಿದ್ದಾರೆ. ಎಷ್ಟೇ ಮರೆಮಾಚಬೇಕು ಎಂದುಕೊಂಡರು ಯುವರಾಜ್ ಹಾಗೂ ಕೃತಿ ಪದೇ ಪದೇ ಎದುರಾಗುತ್ತಲೇ ಇದ್ದಾರೆ. ಇಂದು ಕೂಡ ಎದುರು ಬದುರಾಗಿದ್ದಾರೆ.
ವಿಧಿ ಎಂಬುದೊಂದು ಇದೆಯಲ್ಲ ಅದು ಏನೇ ಮಾಡಿದರೂ, ಯಾವುದೇ ಪ್ರಯತ್ನ ಪಟ್ಟರು ವಿಧಿ ಎಂಬುದು ಏನು ಬರೆದಿರುತ್ತೋ ಅದೇ ಆಗುತ್ತೆ. ಅದರಂತೆ ಈಗ ಕೃತಿ ಮತ್ತು ಯುವರಾಜ್ ವಿಚಾರದಲ್ಲಿಯೂ ಅದೇ ನಡೆಯುತ್ತಿದೆ. ಕಣ್ಣೆದುರಿಗೆ ಬಂದರೆ ಸಾಕು ಇಬ್ಬರು ಕಿತ್ತಾಡುತ್ತಾರೆ. ಜಗಳ ಅತಿರೇಕಕ್ಕೆ ಏರುತ್ತೆ. ಅಂತಹ ಜೋಡಿಗಳು ಪದೇ ಪದೆ ಎದುರಾಗುತ್ತಿರುವುದು ಇದೇ ವಿಧಿಯಿಂದ.
ಮೊದಲ
ಬಾರಿಗೆ
ಖಳನಾಯಕಿಯಾಗಿ
ಮೋಡಿ
ಮಾಡುತ್ತಿರೋ
ನಟಿ
ಸುಕೃತಾ
ನಾಗ್!

ಅರಿಶಿನ ಶಾಸ್ತ್ರದಲ್ಲಿ ಯುವರಾಜ್
ಈಗಾಗಲೇ ಬಹದ್ದೂರ್ ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಬ್ಯಾಕ್ ಟು ಬ್ಯಾಕ್ ಶಾಸ್ತ್ರಗಳು ಶುರುವಾಗಿದೆ. ಅದರಲ್ಲಿ ಇಂದು ಅರಿಶಿನ ಶಾಸ್ತ್ರ ಕೂಡ ಆರಂಭವಾಗಿದೆ. ಯುವರಾಜ್‌ಗೆ ಕೃತಿ ಕಂಡರೆ ಆಗುವುದಿಲ್ಲ ಎಂಬುದು ಅವರಿಗೂ ಗೊತ್ತು. ಆದರೂ ಕೃತಿಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಕೃತಿ ಇಲ್ಲೆ ಎಲ್ಲೋ ಇದ್ದಾಳೆ ಎಂಬುದು ಯುವರಾಜನ ಮನಸ್ಸು ಹೇಳಿದೆ.

ಕೃತಿಯಿಂದಾನೇ ಬಂತು ಪೇಟ
ಅರಿಶಿನ ಶಾಸ್ತ್ರಕ್ಕೆಂದು ಯುವರಾಜನಿಗೆ ಪೇಟವನ್ನು ತರಿಸಲಾಗಿತ್ತು. ಅದು ಕೃತಿಗೆ ಆರ್ಡರ್ ಕೊಡಲಾಗಿತ್ತು. ಇದು ಯುವರಾಜನಿಗೆ ತಿಳಿದಿರಲಿಲ್ಲ. ಆದರೂ ಅ ಪೇಟವನ್ನು ಮನೆಯವರೆಲ್ಲರೂ ಇಷ್ಟಪಟ್ಟಿದ್ದರು. ಆದರೆ ಆ ಪೇಟವನ್ನು ನೋಡಿದಾಕ್ಷಣ ಯುವರಾಜನಿಗೆ ಇದು, ಕೃತಿನೇ ತಯಾರು ಮಾಡಿದ್ದು ಎಂಬ ಅನುಮಾನ ಮೂಡಿದೆ. ಅದಕ್ಕಾಗಿಯೇ ಅರಿಶಿನ ಶಾಸ್ತ್ರದಿಂದಾನೇ ಎದ್ದು ಹೋಗಿದ್ದಾನೆ. ಅದರ ನಡುವೆಯೇ ಮಾಧ್ಯಮದವರು ಎದುರಾದರೂ ಕೂಡ, ಅವರು ಪ್ರಶ್ನೆಗಳನ್ನು ಕೇಳಿದರು ಕೂಡ ಯುವರಾಜನ ಗಮನ ಇದ್ದಿದ್ದು, ಕೃತಿ ಎಲ್ಲಿದ್ದಾಳೆ ಎಂಬುದರ ಬಗ್ಗೆನೇ.

ಕೃತಿ ಕೆನ್ನೆಗೆ ಬಿತ್ತು ಶಾಸ್ತ್ರದ ಅರಿಶಿನ
ಕೃತಿ ವಿಚಾರದಲ್ಲಿ ವಿಧಿಯ ಆಟವೇ ವರ್ಕೌಟ್ ಆಗಿದೆ. ಕೃತಿ ಪೇಟ ತಂದು ಕೊಟ್ಟಿದ್ದಳು. ಅದಕ್ಕೆ ಸಂಬಂಧಿಸಿದಂತೆ ಮಾತನಾಡುವುದಕ್ಕೆ ಯುವರಾಜನ ತಮ್ಮನನ್ನು ಹುಡುಕಿಕೊಂಡು ಬರುತ್ತಾಳೆ. ಯಾರಿಗೂ ತಿಳಿಯದಂತೆಯೇ ಕೃತಿ ಗುಟ್ಟಾಗಿ ಬಂದಿದ್ದಳು. ಯುವರಾಜ್ ಕೂಡ ಕೃತಿಯನ್ನೇ ಹುಡುಕಿಕೊಂಡು ಬಂದಿದ್ದ. ಇಬ್ಬರು ಗೊತ್ತಿಲ್ಲದೆ ಡಿಕ್ಕಿ ಹೊಡೆದುಕೊಂಡಿದ್ದಾರೆ. ಈ ವೇಳೆ ಯುವರಾಜ ಹಚ್ಚಿಕೊಂಡಿದ್ದ ಅರಿಶಿನವೇ ಕೃತಿಯ ಕೆನ್ನೆಗೂ ಬಿದ್ದಿದೆ

ಬಳೆ ಶಾಸ್ತ್ರದಲ್ಲೂ ಕೃತಿಗೆ ಸಿಕ್ತು
ಇಂದು ಯುವರಾಜನ ಮನೆಯಲ್ಲಿ ಅರಿಶಿನ ಶಾಸ್ತ್ರವಾದರೆ ಅತ್ತ ವರ್ಣಿಕಾ ಮನೆಯಲ್ಲಿ ಬಳೆ ಶಾಸ್ತ್ರ ನಡೆಯುತ್ತಾ ಇತ್ತು. ವರ್ಣಿಕಾ ಮಧುಮಗಳಾಗಿದ್ದ ಕಾರಣ ಬಳೆಯನ್ನು ತೊಡಿಸಲು ಶುರು ಮಾಡಿದ್ದರು. ಆದರೂ ಪಕ್ಕದಲ್ಲಿಯೇ ಕೂತಿದ್ದ ಕೃತಿಯ ಕೈಯನ್ನು ವರ್ಣಿಕಾ ಮುಂದೆ ಚಾಚಿ ಬಿಟ್ಟಳು. ಮದುವೆಯ ಶಾಸ್ತ್ರದ ಮೊದಲ ಬಳೆ ಕೃತಿ ಕೈಗೆ ಸೇರಿತು. ವರ್ಣಿಕಾಗೆ ಯುವರಾಜನನ್ನು ಮದುವೆಯಾಗುವ ಆಸೆ ಇಲ್ಲ. ಆದರೆ ಸಾಮ್ರಾಟ್ ಮೇಲೆ ಮನಸ್ಸಾಗಿದೆ. ಹೀಗಾಗಿ ಹೇಗಾದರೂ ಮಾಡಿ ಈ ಮದುವೆಯನ್ನು ಮುರಿಯಲೇಬೇಕೆಂದು ಪಟ ತೊಟ್ಟಿದ್ದಾಳೆ. ಅತ್ತ ಕಡೆ ಮಾತಿಗೆ ಮುಂಚೆ ಜಗಳವಾಡುವ ಕೃತಿ ಅಂಡ್ ಯುವರಾಜ್, ಮದುವೆಯಾದರೆ ಹೇಗಿರಬಹುದು. ಆದರೆ ಇಬ್ಬರಿಗೂ ಅದಾಗಲೇ ವಿಧಿ ಫಿಕ್ಸ್ ಮಾಡಿ ಕಳುಹಿಸಿದೆ.