Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide:ಆತ್ಮಹತ್ಯೆಯ ನಾಟಕವಾಡಿ ಸಾಮ್ರಾಟ್‌ನನ್ನು ವಲಿಸಿಕೊಳ್ತಾಳಾ ವರ್ಣಿಕಾ?
ಬಹದ್ದೂರ್ ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ ಎಲ್ಲವೂ ನಡೆಯುತ್ತಿದೆ. ಆದರೆ ಸಾಮ್ರಾಟ್ ಮಾಡಿದ ಹುಚ್ಚು ಕಾಮಿಡಿಗೆ ಈಗ ವರ್ಣಿಕಾ ಗೊಂದಲದ ನಿರ್ಧಾರಕ್ಕೆ ಬಂದು ನಿಂತಿದ್ದಾಳೆ. ಯುವರಾಜನಿಗಿಂತ ಸಾಮ್ರಾಟ್‌ನನ್ನೇ ಪ್ರೀತಿಸುತ್ತಿದ್ದೀನಿ ಎಂಬ ನಿರ್ಧಾರಕ್ಕೆ ಬಂದು ನಿಂತಿದ್ದಾಳೆ. ಈ ನಿರ್ಧಾರ ಬಹದ್ದೂರ್ ಮನೆಯಲ್ಲಿ ಸಮಸ್ಯೆಯಾಗಿಯೂ ಕಾಡಬಹುದು.
ವಿಧಿಯಾಟದಲ್ಲಿ ಕೃತಿ ಮತ್ತು ಯುವರಾಜ್ ಒಂದಾಗುವುದನ್ನೆ ಬರೆದಿದ್ದಾರೆ. ಹೀಗಾಗಿ ವರ್ಣಿಕಾ ಹಾಗೂ ಯುವರಾಜನಿಗೆ ಸಂಬಂಧಿಸಿದಂತೆ ಏನೇ ಶಾಸ್ತ್ರ ನಡೆದರೂ ಅಷ್ಟಾಗಿ ಏನು ಪ್ರಯೋಜನಕ್ಕೆ ಬರಲ್ಲ. ಈಗ ನಡೆಯುತ್ತಿರುವುದು ಅದೇ.
Srirastu
Subhamastu:ಅಭಿಮಾನಿಗಳ
ಆಸೆ
ಈಡೇರುತ್ತಾ?
ಪೂರ್ಣಿ
ಮಗು
ಬದುಕುತ್ತಾ..?

ಅರಿಶಿನ ಹಚ್ಚಿಕೊಳ್ಳದೆ ವರ್ಣಿಕಾ ಡ್ರಾಮಾ
ಇವತ್ತು ಬಹದ್ದೂರ್ ಮನೆಯಿಂದ ಅರಿಶಿನವನ್ನು ತರಲಾಗಿತ್ತು. ವರನಿಗೆ ಹಚ್ಚಿದ ಅರಿಶಿನವನ್ನೇ ವಧುಗೆ ಹಚ್ಚಬೇಕು. ಅದೇ ರೀತಿ ಇವತ್ತು ಯುವರಾಜನಿಗೆ ಹಚ್ಚಿದ ಅರಿಶಿನವನ್ನೇ ವರ್ಣಿಕಾಗೆ ಹಚ್ಚುವುದಕ್ಕೆ ಸಾಮ್ರಾಟ್ ತಂದಿದ್ದ. ಆದರೆ ಮದುವೆ ಇಷ್ಟವಿಲ್ಲ ವರ್ಣಿಕಾ, ಕಡೆಯಲ್ಲಿ ಇನ್ನೇನು ಅರಿಶಿನ ಹಚ್ಚಬೇಕು ಎನ್ನುವಷ್ಟರಲ್ಲಿ ತಲೆ ಸುತ್ತಿ ಬಿದ್ದವಳಂತೆ ಡ್ರಾಮಾ ಮಾಡಿದಳು. ಎಲ್ಲವೂ ಅಪಶಕುನವೇ ನಡೆಯುತ್ತಿದೆ ಎಂದು ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ವರ್ಣಿಕಾಗೆ ಎನರ್ಜಿ ತುಂಬಲು ನೆಂಟರಿಷ್ಟರೆಲ್ಲ ರೆಡಿಯಾಗಿದ್ದಾರೆ.

ಸಾಮ್ರಾಟ್ ಜೊತೆಗೆ ಲವ್ವಿ ಡವ್ವಿ
ವರ್ಣಿಕಾ ತಲೆ ಸುತ್ತಿ ಬೀಳುತ್ತಿದ್ದಂತೆ ಮನೆಯವರೆಲ್ಲ ಗಾಬರಿಯಾದರು. ಸಾಮ್ರಾಟ್, ವರ್ಣಿಕಾಳನ್ನು ಎತ್ತಿಕೊಂಡು ಹೋಗಿ ರೂಮಿಗೆ ಕರೆದುಕೊಂಡು ಹೋದ. ಎಲ್ಲರೂ ವರ್ಣಿಕಾಳನ್ನು ಕಾಳಜಿ ಮಾಡುತ್ತಿದ್ದರೆ, ವರ್ಣಿಕಾಳ ಮನಸ್ಸು ಮಾತ್ರ ಸಾಮ್ರಾಟ್ ಕಡೆಗೆ ವಾಲುತ್ತಾ ಇತ್ತು. ಎಲ್ಲರನ್ನು ಏನೋ ಒಂದು ನೆಪ ಮಾಡು ಹೊರಗೆ ಕಳುಹಿಸಿದಳು. ಬಳಿಕ ರೂಮ್ ಲಾಲ್ ಮಾಡಿ, ಸಾಮ್ರಾಟ್ ಜೊತೆಗೆ ಲವ್ವಿ ಡವ್ವಿ ಶುರು ಮಾಡಿದ್ದಾನೆ.

ಒಪ್ಪಿಕೊಳ್ಳುವುದಕ್ಕೆ ಸಿದ್ದವಿಲ್ಲದ ವರ್ಣಿಕಾ
ವರ್ಣಿಕಾ, ಯುವರಾಜ್‌ಗಿಂತ ಸಾಮ್ರಾಟ್‌ನನ್ನು ಹೆಚ್ಚಾಗಿ ಪ್ರೀತಿಸಲು ಶುರು ಮಾಡಿದ್ದಾಳೆ. ಯುವರಾಜ್ ಜೊತೆಗೆ ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದರೂ ಸಹ ವರ್ಣಿಕಾ ಮನಸ್ಸು ಸಂಪೂರ್ಣವಾಗಿ ಸಾಮ್ರಾಟ್ ಕಡೆಗೆ ಇದೆ. ಆದರೆ ಇದ್ದಕ್ಕಿದ್ದ ಹಾಗೆ ಸಾಮ್ರಾಟ್ ಉಲ್ಟಾ ಹೊಡೆದಿದ್ದಾನೆ. ಮನೆಯವರೆಲ್ಲ ದ್ವೇಷ ಕಟ್ಟಿಕೊಂಡು ನಾವಿಬ್ಬರು ಒಂದಾಗುವುದರಲ್ಲಿ ಏನಾದರೂ ಅರ್ಥವಿದೆಯಾ. ಮನೆಯವರ ಸಂತೋಷ ಮುಖ್ಯ. ರಿಯಾಲಿಟಿಯನ್ನು ಅರ್ಥ ಮಾಡಿಕೊಂಡು ಬದುಕಬೇಕು ಎಂದು ಸಾಮ್ರಾಟ್ ಹೇಳುತ್ತಿದ್ದಾನೆ. ಆದರೆ ವರ್ಣಿಕಾ, ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನೀನೆ ಬೇಕು ಎಂದು ಹಠ ಮಾಡುತ್ತಿದ್ದಾಳೆ. ಸಾಮ್ರಾಟ್‌ಗೆ ಇರುವ ಚಾಲೆಂಜ್, ಯುವರಾಜ್ ಮದುವೆಯನ್ನು ನಿಲ್ಲಿಸುವುದು.

ಆತ್ಮಹತ್ಯೆ ನಾಟಕವಾಡಿದ ವರ್ಣಿಕಾ
ಸಾಮ್ರಾಟ್‌ನನ್ನು ವರ್ಣಿಕಾ ಹಿಂದೆಯಿಂದ ಬಂದು ತಬ್ಬಿಕೊಂಡಳು. ಸಾಮ್ರಾಟ್ ಆಗ ವರ್ಣಿಕಾಳನ್ನು ರಿಜೆಕ್ಟ್ ಮಾಡಿದ. ಇದು ವರ್ಣಿಕಾಳಿಗೆ ಇಷ್ಟವಾಗಲಿಲ್ಲ. ಹೀಗಾಗಿ ವರ್ಣಿಕಾ ಹೆಚ್ಚು ಕೋಪಗೊಂಡಳು. ಸಾಮ್ರಾಟ್‌ನನ್ನು ಬಿಟ್ಟು ಇರುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಪ್ರೂವ್ ಮಾಡುವುದಕ್ಕೆ ಟ್ರೈ ಮಾಡಿದಳು. ಸಾಮ್ರಾಟ್, ನೀನು ಸಿಗದೆ ಹೋದರೆ ನಾನು ಸತ್ತೆ ಹೋಗುತ್ತೀನಿ ಅಂತ ಚಾಕು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದಳು. ಇದನ್ನು ಕಂಡು ಸಾಮ್ರಾಟ್ ನಿಜಕ್ಕೂ ಗಾಬರಿಯಾದ. ಅದರ ಜೊತೆಗೆ ವರ್ಣಿಕಾ ಇಷ್ಟೊಂದು ಪ್ರೀತಿ ಮಾಡುತ್ತಿರುವುದನ್ನು ಕಂಡು, ತಾನೇನೋ ಸಾಧನೆ ಮಾಡಿದವಳಂತೆ ಬೀಗಿದನು. ಬಳಿಕ ಸಮಾಧಾನ ಮಾಡಿ, ತಬ್ಬಿಕೊಂಡು, ಮತ್ತಷ್ಟು ಭರವಸೆಯನ್ನು ನೀಡಿದ್ದಾನೆ.