Don't Miss!
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide:ವರ್ಣಿಕಾ ಜೊತೆ ಮದುವೆ ಆಗುತ್ತಿದ್ದರೂ ಯುವರಾಜನ ಗಮನ ಕೃತಿ ಮೇಲೆ..!
ಯುವರಾಜ್ ಅಂಡ್ ವರ್ಣಿಕಾ ಮದುವೆಯ ಶಾಸ್ತ್ರಗಳು ಎರಡು ಮನೆಯಲ್ಲೂ ಬಹಳ ಅದ್ದೂರಿಯಾಗಿ ಸಾಗುತ್ತಿದೆ. ಆ ಕಡೆ ಯುವರಾಜ್ ಮನೆಯಲ್ಲಿ ಹೆತ್ತ ತಾಯಿಯೇ ಮದುವೆ ಶಾಸ್ತ್ರದಲ್ಲಿ ಭಾಗಿಯಾಗುವಂತಿಲ್ಲ. ಇತ್ತ ವರ್ಣಿಕಾ ಮನೆಯಲ್ಲಿ ಸ್ವಂತ ತಂಗಿಯನ್ನೇ ಕಾಣದಂತೆ ಬಚ್ಚಿಟ್ಟಿದ್ದಾರೆ. ಈ ರೀತಿಯಾಗಿ ಮದುವೆಯ ಕೆಲಸಗಳು ಸಾಗುತ್ತಿವೆ.
ಆದರೆ ಬಚ್ಚಿಟ್ಟರು, ಎಷ್ಟೇ ಮುಚ್ಚಿಟ್ಟರು ಕೃತಿ ಮತ್ತು ಯುವರಾಜ್ ಭೇಟಿ ಆಗಾಗ ನಡೆಯುತ್ತಲೇ ಇದೆ. ಮದುವೆಯಾಗುತ್ತಿರುವುದು ವರ್ಣಿಕಾ ಆದರೂ ಯುವರಾಜನ ಮನಸ್ಸು ಸಿಕ್ಕಾಪಟ್ಟೆ ವಾಲುತ್ತಿರುವುದು ಮಾತ್ರ ಕೃತಿ ಎಲ್ಲಿ ಎಂಬುದರ ಕಡೆಗೆ.
ಕಿರುತೆರೆ
ನಂತರ
ಹಿರಿತೆರೆಗೆ
ಕಾಲಿಟ್ಟ
ನಿಶಾ
ಹೆಗಡೆ

ಮನೆಗಾಗಿ ಹಣದ ಸಹಾಯ ಮಾಡಿದ ಕೃತಿ
ಕೃತಿಗೂ, ಯುವರಾಜನಿಗೂ ಯಾವಾಗಲೂ ಜಗಳ ಎಂಬುದು ಗೊತ್ತೆ ಇದೆ. ಅದಕ್ಕಾಗಿಯೇ ಕೃತಿ, ತನ್ನ ಮಗಳೆಂದು ತಾಯಿಯೂ ಹೇಳಿಲ್ಲ. ಕೃತಿ ತನ್ನ ಅಕ್ಕ ಎಂದು ವರ್ಣಿಕಾ ಕೂಡ ಹೇಳಿಲ್ಲ. ಇಬ್ಬರು ಈ ಮದುವೆಯಿಂದ ಕೃತಿಯನ್ನು ದೂರವೇ ಇಟ್ಟಿದ್ದಾರೆ. ಆಗಾಗ ಮನಸ್ಸಿಗೆ ನೋವಾದರೂ ಕೃತಿ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದಾಳೆ. ಜೊತೆಗೆ ಮನೆಗೆ, ಅಕ್ಕನ ಮದುವೆಗೆ ಹಣದ ಸಹಾಯವನ್ನು ಮಾಡುತ್ತಿದ್ದಾಳೆ. ಕೃತಿ ತಂದುಕೊಟ್ಟ ಹಣವನ್ನು ನೋಡಿ, ಅಮ್ಮ ಭಾವುಕಳು ಆಗಿದ್ದಾಳೆ. ಭಾರವಾದ ಮನಸ್ಸಿನಿಂದಾನೇ ಕೃತಿಗೆ ಬೇಸರ ಮಾಡಿಕೊಳ್ಳಬೇಡ ಎಂದು ಹೇಳಿದ್ದಾಳೆ.

ಅಕ್ಕನನ್ನು ತಬ್ಬಿದ ಕೃತಿ
ಮದುವೆ ಕೆಲಸದಿಂದ ಕೃತಿಯನ್ನು ದೂರವೇ ಇಟ್ಟಿದ್ದರು. ಯಾವುದೇ ಬೇಸರವನ್ನು ಮಾಡಿಕೊಳ್ಳದೆ ನಿಭಾಯಿಸಬೇಕಾದ ಜವಾಬ್ದಾರಿಯನ್ನು ಮರೆಯದೆ ನಿಭಾಯಿಸುತ್ತಾಳೆ. ಈಗ ಅಕ್ಕನನ್ನು ಮದುವೆಗಾಗಿ ತಾನೇ ತಯಾರು ಮಾಡಿದ್ದಾಳೆ. ಅಕ್ಕನನ್ನು ಅಲಂಕಾರ ಮಾಡಿದ್ದಾಳೆ. ಕೊನೆಯಲ್ಲಿ ರೂಮಿನಿಂದ ಎದ್ದು ಹೊರಡುವಾಗ, ಅಕ್ಕನಿಗೆ ಒಳ್ಳೆಯದ್ದನ್ನೇ ವಿಶ್ ಮಾಡಿದ್ದಾಳೆ. "ನಿನ್ನ ಜೀವನ ನೀನು ಅಂದುಕೊಂಡಂತೆ ಇರಲಿ. ನಾನು ಬಯಸುವುದು ಕೂಡ ಅದನ್ನೇ" ಎಂದು ತಬ್ಬಿಕೊಂಡು ಎಮೋಷನಲ್ ಆಗಿದ್ದಾಳೆ.

ಮನೆಗೆ ಬಂದ ಯುವರಾಜ
ಹೆಣ್ಣಿನ ಮನೆಗೆ ಗಂಡಿನ ಕಡೆಯವರು ಬರುವ ಸಂಪ್ರದಾಯವಿದೆ. ಅದೇ ಶಾಸ್ತ್ರ ಈಗ ಮುಂದುವರೆದಿದೆ. ವರ್ಣಿಕಾ ಮನೆಗೆ ಯುವರಾಜ ಬಂದಿದ್ದಾನೆ. ಅತ್ತ ಕಡೆ ವರ್ಣಿಕಾಗೆ ಮೊದಲೇ ಮದುವೆ ಇಷ್ಟವಿಲ್ಲ. ಹೀಗಾಗಿ ಶಾಸ್ತ್ರಗಳನ್ನೆಲ್ಲಾ ತಪ್ಪು ತಪ್ಪಾಗಿಯೇ ಮಾಡಿದ್ದಳು. ಈಗ ಮನಸ್ಸಲ್ಲಿ ಬೇರೆ ಜಪ ಮಾಡುತ್ತಿದ್ದಾಳೆ. ಹೇಗಾದರೂ ಮಾಡಿ ಈ ಮದುವೆ ನಿಲ್ಲಿಸು ದೇವರೆ ಎಂದು ಬೇಡಿಕೊಳ್ಳುತ್ತಾ ಇದ್ದಾಳೆ. ಅದರ ನಡುವೆ ಶಾಸ್ತ್ರಗಳು ಕೂಡ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ. ಆದರೆ ಕೊನೆಯಲ್ಲಿ ಗೆಲ್ಲುವುದು ಮಾತ್ರ ವಿಧಿಯೆ.

ಕೃತಿ ಹುಡುಕಾಟದಲ್ಲಿ ಯುವರಾಜ್
ಕೃತಿ, ತಾನೂ ಮದುವೆಯಾಗುತ್ತಿರುವ ವರ್ಣಿಕಾ ತಂಗಿ ಎಂಬುದು ಯುವರಾಜ್‌ಗೆ ಗೊತ್ತಿಲ್ಲ. ವರ್ಣಿಕಾ ಮನೆಗೆ ಇಂದು ಶಾಸ್ತ್ರಕ್ಕಾಗಿ ಬಂದಿದ್ದಾನೆ. ಯುವರಾಜ್‌ನನ್ನು ಬಾಗಿಲಲ್ಲೇ ನಿಲ್ಲಿಸಿ, ಆರತಿ ಬೆಳಗುತ್ತಾ ಇದ್ದರು. ಆಗ ದಿಢೀರನೇ ಕೃತಿ ಬಂದಿದ್ದಾಳೆ. ಯುವರಾಜ್ ಕೂಡ ಕೃತಿಯನ್ನು ನೋಡಿದ್ದಾನೆ. ಆದರೆ ತಕ್ಷಣ ಕೃತಿ, ಅಲ್ಲಿಂದ ಹೊರಟು ಬಿಟ್ಟಳು. ಯುವರಾಜನಿಗೆ ಇದು ಕನಸೋ, ಭ್ರಮೆಯೋ ಎಂಬ ಅನುಮಾನ ಶುರುವಾಯಿತು. ಆದರೂ ಅಲ್ಲೆಲ್ಲಾ ಹುಡುಕಾಡುವುದಕ್ಕೆ ಶುರು ಮಾಡಿದ. ಆಗ ಅಲ್ಲಿದ್ದವರೆಲ್ಲಾ, ಕೃತಿಯನ್ನು ಹುಡುಕುತ್ತಾ ಇರಬೇಕು ಎಂದು ರೇಗಿಸುವುದಕ್ಕೆ ಶುರು ಮಾಡಿದರು. ಆಗ ಯುವರಾಜ್, ಧೈರ್ಯವಾಗಿಯೇ ನಾನು ಹುಡುಕುತ್ತಾ ಇರುವುದು, ವರ್ಣಿಕಾಳನ್ನು ಅಲ್ಲ. ಆ ಹುಡುಗಿಯನ್ನು ಅಂದಾಗ ವರ್ಣಿಕಾಳ ತಾಯಿ ಆ ಹುಡುಗಿ ಇಲ್ಲಿ ಯಾಕಪ್ಪ ಬರುತ್ತಾಳೆ ಎಂದು ಯಾಮಾರಿಸಿದ್ದಾರೆ. ಆದರೂ ಕೃತಿಯ ಹುಡುಕಾಟದಲ್ಲಿಯೇ ಯುವರಾಜನ ಮನಸ್ಸು ತೇಲಾಡಿದೆ.