Don't Miss!
- Sports
Border-Gavaskar Trophy: ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಬಿಗ್ ಹಿಟ್ಟರ್ ರೆಡಿ?; ದೊಡ್ಡ ಸುಳಿವು ನೀಡಿದ 'SKY'
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Lifestyle
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu shuruvagide:ಯುವರಾಜನ ಪಕ್ಕ ಮದುಮಗಳಾಗಿ ಕೂರುತ್ತಾಳಾ ಕೃತಿ..?
ಬಹದ್ದೂರ್ ಫ್ಯಾಮಿಲಿ ಹಾಗೂ ಪುಷ್ಪಾ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿತ್ತು. ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ ಎಲ್ಲವೂ ಮುಗಿದು, ಇಂದು ಮದುವೆಯ ಹಂತಕ್ಕೆ ಬಂದು ನಿಂತಿತ್ತು. ವರ್ಣಿಕಾ ಹಾಗೂ ಯುವರಾಜನ ಬದುಕಲ್ಲಿ ಹೊಸದೊಂದು ಅಧ್ಯಾಯ ಶುರುವಾಗುವ ಹೊತ್ತದು. ಆದರೆ ಅದು ಆಗುವುದಕ್ಕೆ ಹೇಗೆ ಸಾಧ್ಯ. ಎಲ್ಲಾ ಶಾಸ್ತ್ರಗಳನ್ನು ಉಲ್ಟಾ ಮಾಡಿಕೊಂಡೇ ಬಂದಿದ್ದಳು ವರ್ಣಿಕಾ.
ಹೆಸರಿಗೆ ಮಾತ್ರ ಯುವರಾಜನನ್ನು ಪ್ರೀತಿಸುತ್ತಿದ್ದಳು. ಸಾಮ್ರಾಟ್ ಪರಿಚಯವಾಗುವುದಕ್ಕೂ ಮುನ್ನ, ಇಂಪ್ರೆಸ್ ಮಾಡುವುದಕ್ಕೂ ಮುನ್ನ ಯುವರಾಜನನ್ನೇ ಪ್ರೀತಿಸುತ್ತಿದ್ದಳು. ಅದ್ಯಾವಾಗ ಸಾಮ್ರಾಟ್ ನಡುವಲ್ಲಿ ಬಂದನೋ, ಅಲ್ಲಿಂದ ನಾಟಕಗಳು ಶುರುವಾದವೂ. ಅರಿಶಿನ ಶಾಸ್ತ್ರದಲ್ಲಿ ತಲೆ ಸುತ್ತಿ ಬಿದ್ದಳು, ಬಳೆ ಶಾಸ್ತ್ರದಲ್ಲಿ ಕೃತಿಗೆ ಬಳೆ ತೊಡಿಸಿಳು. ಈಗ ಹೇಳದೆ, ಕೇಳದೆ ಮನೆ ಬಿಟ್ಟು ಹೋದಳು.
ಜನ
ಇಂದಿಗೂ
ನನ್ನನ್ನು
ಧನ್ಯಾ
ಎಂದೇ
ಗುರುತಿಸುತ್ತಾರೆ
:
ದೀಪಿಕಾ

ಮನೆಯವರಿಗೆಲ್ಲಾ ಗಾಬರಿ
ಹಸೆಮನೆಯ ಮೇಲೆ ಗಂಡನ್ನು ಕರೆದುಕೊಂಡು ಬಂದು ಕೂರಿಸಿದ್ದಾರೆ. ಮುಹೂರ್ತಕ್ಕೆ ಸಮಯವೂ ಆಗುತ್ತಿದೆ. ಇಷ್ಟಾದರೂ ವಧು ಮಾತ್ರ ಬರಲೇ ಇಲ್ಲ. ಎಲ್ಲರೂ ವಧುವಿಗಾಗಿ ಕಾಯುತ್ತಿದ್ದಾರೆ. ಅಂದು ಅರಿಶಿನ ಶಾಸ್ತ್ರದ ದಿನ ತಲೆ ಸುತ್ತಿ ಬಿದ್ದಂತೆ ಇಂದು ಬಿದ್ದಿರಬಹುದಾ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಯುವರಾಜ ಹಸೆಮಣೆ ಮೇಲೆ ಕೂತುಕೊಂಡು ಟೆನ್ಶನ್‌ನಲ್ಲಿದ್ದಾನೆ.

ಗಾಬರಿಯಾಗಿದ್ದಾರೆ ಪುಷ್ಪಾ ಮತ್ತು ಮಕ್ಕಳು
ವರ್ಣಿಕಾ ಕಾಣಿಸುತ್ತಿಲ್ಲ ಎಂಬುದು ಮನೆಯವರಿಗೆ ಗೊತ್ತಾಗಿದೆ. ಮನೆ ಬಿಟ್ಟು ಹೋಗಿದ್ದಾಳೆ ಎಂಬುದಕ್ಕೂ ಕುರುಹುಗಳನ್ನು ಬಿಟ್ಟು ಹೋಗಿದ್ದಾಳೆ. ಈಗ ಮನೆಯವರ ಮುಂದೆ ಇರುವ ಟಾರ್ಗೆಟ್ ಎಂದರೆ ವರ್ಣಿಕಾಳನ್ನು ಹೇಗಾದರೂ ಮಾಡಿ ಹುಡುಕಬೇಕು ಎಂಬುದು. ಅದರಂತೆ ಸಹನಾ ನಾನೇ ಹುಡುಕಿಕೊಂಡು ಬರುತ್ತೇನೆ ಎಂದಿದ್ದಾಳೆ. ಇದರ ನಡುವೆ ಕೃತಿ ಕೂಡ ನಾನು ಹುಡುಕುತ್ತೇನೆ ಅಂತ ಹೊರಟಿದ್ದಾಳೆ. ಇತ್ತ ಸುಳ್ಳಿನ ಕಥೆ ಕಟ್ಟಿದ ಪುಷ್ಪಾಗೆ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ.

ಮಾತಂಗಿಗೆ ಸತ್ಯ ತಿಳಿದೇ ಬಿಡ್ತು..!
ಯುವರಾಜ್ ಹಾಗೂ ವರ್ಣಿಕಾ ಮಾತುಕತೆಯಾದಾಗಿನಿಂದಲೂ ಮಾತಂಗಿ ಈ ಫ್ಯಾಮಿಲಿ ಮೇಲೆ ಒಂದು ಕಣ್ಣು ಇಟ್ಟಿದೆ. ಸುಳ್ಳು ಹೇಳುವುದರಲ್ಲಿ ನಂಬರ್ ಒನ್ ಎಂಬುದು ತಿಳಿದ ಬಳಿ ಎಲ್ಲವನ್ನು ಗಮನಿಸುತ್ತಾ ಬಂದಿದ್ದಳು. ಇದೀಗ ವರ್ಣಿಕಾ ಓಡಿ ಹೋಗಿರುವುದನ್ನು ಬಾಗಿಲ ಮರೆಯಲ್ಲಿ ನಿಂತು ಕೇಳಿಸಿಕೊಂಡಿದ್ದಾಳೆ. ಒಳಗೆ ಬಂದಾಗ ಪುಷ್ಪಾ ಮತ್ತಷ್ಟು ಸುಳ್ಳು ಹೇಳಿ ಮ್ಯಾನೇಜ್ ಮಾಡುವುದಕ್ಕೆ ನೋಡಿದ್ದಾಳೆ. ಇದು ಮಾತಂಗಿಗೆ ಇನ್ನಷ್ಟು ಕೋಪ ನೆತ್ತಿಗೇರುವಂತೆ ಮಾಡಿದೆ. ಬಳಿಕ ಜೋರಾಗಿ ಗದರಿ, ಬಾಯಿಗೆ ಬಂದಂಗೆ ಬೈಯ್ಯುವುದಕ್ಕೆ ಶುರು ಮಾಡಿದ್ದಾಳೆ. ಆಗ ಅಲ್ಲಿಯೇ ಇದ್ದ ಕೃತಿ ಅಮ್ಮನಿಗೆ ಬೈಯ್ಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾಳೆ.

ಮಾತಂಗಿ ಮಾತನ್ನು ಕೃತಿ ಒಪ್ಪುತ್ತಾಳಾ..?
ಅಲ್ಲಿ ಮದುವೆಗೆ ಸಮಯ ಹತ್ತಿರ ಬರುತ್ತಿದೆ. ಇತ್ತ ಮನೆಯಲ್ಲಿ ಹುಡುಗಿ ಇಲ್ಲ. ಏನು ಮಾಡಬೇಕೆಂದು ತಿಳಿಯದೆ ಎಲ್ಲರೂ ಕಂಗಾಲಾಗಿದ್ದಾರೆ. ಅದಕ್ಕೆ ಮಾತಂಗಿಯೇ ಹೊಸ ಐಡಿಯಾವೊಂದನ್ನು ನೀಡಿದ್ದಾಳೆ. ಈ ರೀತಿ ಮಾಡಿದರೆ ನಿಮ್ಮ ಮರ್ಯಾದೆಯನ್ನು ಕಾಪಾಡಿಕೊಳ್ಳಬಹುದು ಅಂತ ಹೇಳಿ, ಹಸೆಮಣೆಯಲ್ಲಿ ಮಧುಮಗಳಾಗಿ ಕೃತಿಯನ್ನೇ ಕೂರಿಸಿ ಎಂದಿದ್ದಾಳೆ. ಇದಕ್ಕೆ ಮೊದ ಮೊದಲಿಗೆ ಕೃತಿ ಒಪ್ಪಿಲ್ಲ. ಮುಹೂರ್ತ ಮೀರುವುದಕ್ಕೂ ಮುನ್ನ ಅಕ್ಕನನ್ನು ಕರೆತರುತ್ತೇವೆ ಎಂದೇ ಹೇಳಿದ್ದಾಳೆ. ಆದರೆ ಮಾತಂಗಿಯ ಮಾತೇ ಕಡೆಗೆ ಪುಷ್ಪಾಗೆ ಸರಿ ಎನಿಸಿ, ಕೃತಿ ಬಳಿ ಸೀರೆಯುಟ್ಟು ಹಸೆಮಣೆ ಏರುವುದಕ್ಕೆ ಅಮ್ಮನೇ ಮನವಿ ಮಾಡಿದ್ದಾಳೆ.