Katheyondu shuruvagide: ತನ್ನ ಹಣೆಗೆ ಕಳಂಕ ಹಚ್ಚಲು ಹೋದ ವರ್ಣಿಕಾಳನ್ನು ಬಿಡ್ತಾಳಾ ಕೃತಿ..?
ಯುವನನ್ನು ಪ್ರೀತಿಸುವಾಗ ಬಹದ್ದೂರ್ ಮನೆಗೆ ಸೊಸೆಯಾಗಿ ಹೋಗ್ತೀನಿ, ಎಲ್ಲಾ ಶ್ರೀಮಂತಿಕೆಯನ್ನು ನಾನೇ ಅನುಭವಿಸ್ತೀನಿ ಅಂತ ತುಂಬಾನೆ ಆಸೆ ಪಟ್ಟಿದ್ದಳು. ಆದರೆ, ಅಲ್ಲಿ ಎಂಟ್ರಿಯಾಗಿದ್ದು ಮಾತ್ರ ಸಾಮ್ರಾಟ್. ಆಮೇಲೆ ಆಗಿದ್ದೆಲ್ಲವೂ ಬರೀ ಅತ್ಯಾಕರ್ಷಣೆಯೇ ಆಗಿ ಹೋಯ್ತು. ಯುವನನ್ನು ಅನ್ ರೋಮ್ಯಾಂಟಿಕ್ ಎಂದುಕೊಂಡ ವರ್ಣಿಕಾ, ನಾಟಕದ ಪ್ರೀತಿ ತೋರಿದ ಸಾಮ್ರಾಟ್ ಗೆ ಬಿದ್ದಳು, ಮದುವೆ ಮನೆಯಿಂದ ಮದುವೆ ಮುರಿದುಕೊಂಡು ಅವನಿಂದೆಯೇ ಹೊರಟು ಹೋದಳು.
ಆದರೆ ಈಗ ಎಲ್ಲೂ ಗತಿಯಿಲ್ಲವೆಂಬಂತೆ ಮತ್ತೆ ಅಮ್ಮನ ಮನೆಯನ್ನೇ ಅರಸಿ ಬಂದಿದ್ದಾಳೆ. ಸಾಮ್ರಾಟ್ ಬೀದಿಗೆ ಬಿದ್ದಿದ್ದಾನೆ. ಕದ್ದು ಮುಚ್ಚಿ ಬಿಲ ಸೇರುವ ಇಲಿಯಂತೆ ಬಂದವಳು ಯುವ ಕೈಗೆ ಸಿಕ್ಕಿಬಿದ್ದಿದ್ದಾಳೆ. ಆದರೆ, ಇಲ್ಲೂ ಕೃತಿಯನ್ನೇ ಕೆಟ್ಟವಳನ್ನಾಗಿ ಮಾಡುವುದಕ್ಕೆ ಯತ್ನಿಸಿದ್ದಾಳೆ. ಈಗ ಕೃತಿ ಕಾಪಾಡುವುದಕ್ಕೆ ಪುಷ್ಪಾನೇ ಬರಬೇಕಾಗಿದೆ.

ವರ್ಣಿಕಾಳಿಂದ ಕೃತಿಯ ಬಗ್ಗೆ ಆರೋಪ
ಅಮ್ಮನ ಮನೆ ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ತಿಳಿದ ವರ್ಣಿಕಾ ಸೀದಾ ರಾತ್ರಿ ಎಲ್ಲರು ಮಲಗಿದ್ದಾಗ ಮನೆಗೆ ಬಂದು ಸೇರಿದ್ದಾಳೆ. ಅದರಲ್ಲೂ ನೀರು ಕುಡಿಯಲು ಎದ್ದು ಬಂದ ಯುವರಾಜನ ಬಳಿಯೇ ತಗಲಾಕಿಕೊಂಡಿದ್ದಾಳೆ. "ಇಷ್ಟೆಲ್ಲಾ ಆಗಿದ್ದೂ ಕೃತಿಯ ಪ್ಲ್ಯಾನ್ ನಿಂದಾನೇ ಈ ರೀತಿಯ ಸಮಸ್ಯೆ ಎಲ್ಲಾ ಆಗಿದ್ದು. ಅವಳಿಗೆ ಶ್ರೀಮಂತರ ಮನೆಯ ಸೊಸೆಯಾಗಬೇಕೆಂಬ ಆಸೆ. ಅದಕ್ಕೆ ಹೀಗೆಲ್ಲಾ ಮಾಡಿದ್ದಾಳೆ. ಇದರಲ್ಲಿ ನಂದೇನು ತಪ್ಪಿಲ್ಲ. ಅವತ್ತು ನನ್ನ ಫೋನ್ ಯಾಕೆ ರಿಸೀವ್ ಮಾಡಬೇಕಿತ್ತು ಕೇಳಿ" ಎಂದು ಯುವನ ಮುಂದೆ ಪ್ರಶ್ನಿಸಿದ್ದಾಳೆ.

ವರ್ಣಿಕಾಗೆ ಪಾಠ ಕಲಿಸಿದ ಕೃತಿ
ಕೃತಿ ತನ್ನದು ತಪ್ಪು ಇಲ್ಲ ಎಂದರೆ ಅಲ್ಲಿ ತಲೆ ತಗ್ಗಿಸುವ ಸನ್ನಿವೇಶವೇ ಇರುವುದಿಲ್ಲ. ಅದು ಯಾರಾದರೂ ಸರಿ. ಬಹದ್ದೂರ್ ಮನೆಯಲ್ಲಿಯೇ ಎಲ್ಲರನ್ನು ಧೈರ್ಯವಾಗಿ ಎದುರಿಸಿದ್ದಾಳೆ. ತನ್ನ ಆತ್ಮ ಗೌರವಕ್ಕೆ ಧಕ್ಕೆ ಬಾರದಂತೆ, ತನ್ನ ಮೇಲೆ ಅಪರಾಧ ಬಾರದಂತೆ ಇರುವುದು ಕೃತಿಗೆ ಚೆನ್ನಾಗಿ ಗೊತ್ತು. ಯಾರಾದರೂ ಇಲ್ಲ ಸಲ್ಲದನ್ನು ಹೇಳಿದರೆ ಅವರ ಗ್ರಹಚಾರ ಬಿಡಿಸುತ್ತಾಳೆ. ಇನ್ನು ವರ್ಣಿಕಾ ತಪ್ಪನ್ನೆಲ್ಲಾ ಮಾಡಿ, ತನ್ನ ಮೇಲೆ ಹೇಳುತ್ತಾಳೆ ಅಂದ್ರೆ ಬಿಡ್ತಾಳಾ..? ತೆಗೆದು ಕಪಾಳಕ್ಕೆ ಒಂದು ಬಾರಿಸಿದ್ದಾಳೆ.

ವರ್ಣಿಕಾಳ ಪರವೇ ನಿಂತ ಯುವ
ಯುವನಿಗೆ ಮೊದಲಿನಿಂದಾನೂ ಕೃತಿಯನ್ನು ಕಂಡರೆ ಆಗುವುದಿಲ್ಲ. ಎದುರು ಬದುರು ಸಿಕ್ಕಾಗೆಲ್ಲಾ ಇಬ್ಬರು ಜಗಳವನ್ನು ಬಿಟ್ಟು ಬೇರೆ ಏನನ್ನು ಮಾಡಿಲ್ಲ. ಈಗ ಕೃತಿಯ ಮೇಲಿನ ಕೋಪಕ್ಕೆ, ಅನುಮಾನಕ್ಕೇನೆ ಶಾಸ್ತ್ರದ ನೆಪ ಇಟ್ಟುಕೊಂಡು ಪಂಡಿತ್ ಮನೆಗೆ ಬಂದಿದ್ದಾನೆ. ಇಲ್ಲಿ ಅಂದುಕೊಂಡಂತೆ ವರ್ಣಿಕಾ ಸಿಕ್ಕಿಬಿದ್ದಿದ್ದಾಳೆ. ಈಗ ವರ್ಣಿಕಾ ಹೇಳುತ್ತಿರುವುದೇ ಸತ್ಯವೆಂದು ಭಾವಿಸಿ, ಕೃತಿಯನ್ನೇ ಬಾಯಿ ಮುಚ್ಚಿಸಿದ್ದಾನೆ.

ಕೃತಿಯನ್ನು ಪಾರು ಮಾಡ್ತಾಳಾ ಪುಷ್ಪಾ?
ಮೊದಲಿನಿಂದಾನೂ ಪುಷ್ಪಾಗೆ ಮೂವರು ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಇಷ್ಟಪಟ್ಟಿದ್ದು ವರ್ಣಿಕಾಳನ್ನೇ. ಅದರಲ್ಲೂ ಶ್ರೀಮಂತರ ಮನೆಗೆ ಸೊಸೆಯಾಗಿ ಹೋಗುತ್ತಿದ್ದಾಳೆ ಎಂದಾಗ ಅವಳಷ್ಟು ಸಂಭ್ರಮ ಪಟ್ಟವರು ಮತ್ತೊಬ್ಬರಿಲ್ಲ. ಆದರೆ, ವರ್ಣಿಕಾ ಮದುವೆ ಬಿಟ್ಟು ಓಡಿ ಹೋದಾಗ ಅವಳನ್ನು ಮಗಳು ಎಂಬುದನ್ನು ಮರೆತಿದ್ದಾಳೆ. ಈಗ ಕೃತಿಯ ಸಂಸಾರ ಚೆನ್ನಾಗಿ ಇರಲಿ ಎಂದೇ ಬಯಸುವ ಪುಷ್ಪಾ, ವರ್ಣಿಕಾಳಿಂದ ತೊಂದರೆಯಾಗುತ್ತಿದೆ ಎಂದರೆ ಸುಮ್ಮನೆ ಇರುವುದಿಲ್ಲ ಬಂದು ಗ್ರಹಚಾರ ಬಿಡಿಸುತ್ತಾಳೆ. ಇಬ್ಬರ ಸಂಸಾರ ಉಳಿಯಬೇಕು ಅಂದ್ರೆ ಪುಷ್ಪಾನೆ ಎಂಟ್ರಿ ಕೊಡಬೇಕಾಗಿದೆ.


Click it and Unblock the Notifications











