Katheyondu Shuruvagide: ಸ್ವಾಭಿಮಾನಕ್ಕೆ ಅಡ್ಡಿಯಾದರೆ ಕೃತಿ ಸುಮ್ಮನಿರಲ್ಲ.. ಗಂಡನಾದ್ರೂ, ಅತ್ತೆಯಾದ್ರೂ ಸರಿ!

By ಎಸ್ ಸುಮಂತ್

ಕೃತಿ ಮೊದಲಿನಿಂದಾನು ಸ್ವಾಭಿಮಾನದ ಹುಡುಗಿ. ಯಾವತ್ತಿಗೂ ಸ್ವಾಭಿಮಾನಕ್ಕೆ ಅಡ್ಡಿ ಬಂದರೆ ಸುಮ್ಮನೆ ಇರುವವಳೇ ಅಲ್ಲ. ಬಡತನ ಇದ್ದಾಕ್ಷಣ ಶ್ರೀಮಂತರ ದುರಹಂಕಾರದ ಮಾತಿಗೆ ತಲೆ ತಗ್ಗಿಸುವಂತೆ ಕೃತಿ ಬೆಳೆದಿಲ್ಲ. ಅದನ್ನು ಅನುಸರಿಸುವುದಕ್ಕೂ ಹೋಗಲ್ಲ. ಇದು ಕೃತಿಯ ಪಾಲಿಸಿ. ಇದೇ ಕಾರಣಕ್ಕೆ ಕಂಡ ಕಂಡಲ್ಲಿ ಕೃತಿ ಮತ್ತು ಯುವರಾಜ್ ಬಹದ್ದೂರ್‌ಗೆ ಜಗಳ ನಡೆಯುತ್ತಾ ಇದ್ದದ್ದು.

ಈಗ ವಿಧಿಯಾಟದ ಮುಂದೆ ಇಬ್ಬರ ಮದುವೆಯಾಗಿದೆ. ಕೃತಿ ಬಾಯ್ಬಿಟ್ಟು ಹೇಳುತ್ತಿದ್ದಾಳೆ. ನಾನು ಮೋಸ ಮಾಡಿಲ್ಲ, ಪರಿಸ್ಥಿತಿಗೆ, ಅನಿವಾರ್ಯತೆಗೆ ಕಟ್ಟು ಬಿದ್ದು ಈ ರೀತಿ ನಡೆದುಕೊಂಡಿದ್ದೇನೆ ಎಂದು. ಆದರೂ ಯುವರಾಜ್ ಅದನ್ನು ನಂಬುವ ಗೋಜಿಗೆ ಹೋಗದೇನೆ, ಮತ್ತೆ ಮತ್ತೆ ಅವಳ ಮೋಸವನ್ನು ಪ್ರೂವ್ ಮಾಡುತ್ತೇನ ಎಂದು ಹೊರಟಿದ್ದಾನೆ. ಈಗ ಕೃತಿಗೆ ಮತ್ತೆ ಸ್ವಾಭಿಮಾನದ ಪ್ರಶ್ನೆ ಎದುರಾಗಿದ್ದು, ಕೈ ಮಾಡಲು ಬಂದ ಯುವರಾಜ್‌ನನ್ನೇ ಹೆದರಿಸಿದ್ದಾಳೆ.

ಅಮ್ಮನ ನಂಬಿಕೆ ಗಳಿಸಲು ಹೊರಟ ಯುವ

ಅಮ್ಮನ ನಂಬಿಕೆ ಗಳಿಸಲು ಹೊರಟ ಯುವ

ಶಾಂತಲಾಗೆ ಈಗಾಗಲೇ ಯುವನ ಮೇಲೆ ಗಂಟಲಿನ ತನಕ ಕೋಪ ಬಂದಿದೆ ಎಂದು ಮಾತು ಮೀರದ ಮಗ ಈ ರೀತಿ ಮಾಡಿ ಬಿಟ್ಟನಲ್ಲ ಎಂಬ ನೋವು ಅವಳಲ್ಲಿ ಇದೆ. ಅದನ್ನು ಈಗಾಗಲೇ ಆ ನೋವನ್ನು ಹೊರಗೆ ಹಾಕಿದ್ದಾಳೆ. ಮೊನ್ನೆ ಮೊನ್ನೆಯಷ್ಟೇ ನಾನು ಈ ಮನೆಯಲ್ಲಿ ಇರಲ್ಲ. ಕೃತಿಯನ್ನು ಹೊರಗೆ ಕಳುಹಿಸು ಅಂತ ಹೇಳಿ ತಲೆ ತಿರುಗಿ ಬಿದ್ದಿದ್ದಳು. ಆಗಲೂ ಜೀವ ಉಳಿಸಿದ್ದು ಇದೇ ಕೃತಿ. ಈಗ ಯುವನಿಗೆ ಅಮ್ಮ ತುಂಬಾ ಮುಖ್ಯವಾಗಿದ್ದಾರೆ. ಅದಕ್ಕೆಂದೇ ಅಮ್ಮನ ಬಳಿ ಸತ್ಯ ಹೇಳುತ್ತಿದ್ದಾನೆ. ಕೃತಿಯ ಮನೆಗೆ ಹೋಗಿದ್ದು, ಆ ಮನೆಯವರ ವಿಚಾರವನ್ನು ಬಯಲು ಮಾಡುವುದಕ್ಕೆ. ಸುಳ್ಳನ್ನು ಸಾಬೀತು ಮಾಡುವುದಕ್ಕೆ ಎಂದಿದ್ದಾನೆ.

ಕೃತಿ ಮೋಸಗಾತಿ ಎಂದೇ ಅಮ್ಮನ ಬಳಿ ಹೇಳಿದ ಯುವ

ಕೃತಿ ಮೋಸಗಾತಿ ಎಂದೇ ಅಮ್ಮನ ಬಳಿ ಹೇಳಿದ ಯುವ

ಅಮ್ಮನನ್ನು ಸಮಾಧಾನ ಮಾಡುವ ಬರದಲ್ಲಿ ಯುವ, ಕೃತಿಯ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾನೆ. ಆ ನನ್ನ ಶತ್ರುಗಳ ಮನೆಗೆ ಹೋಗುವುದಕ್ಕೆ ಒಂದು ಕಾರಣ ಇದೇ ಅಮ್ಮ. ಅವರ ಮೋಸ, ಸುಳ್ಳನ್ನು ಬಯಲಿಗೆಳೆಯಬೇಕು ಎಂದೇ ಅಲ್ಲಿಗೆ ಹೋಗಿದ್ದೆ. ಇಲ್ಲ ಎಂದಿದ್ದರೆ ನನ್ನ ಶತ್ರುಗಳ ಮನೆಯಲ್ಲಿ ಒಂದು ದಿನವೂ ಇರುತ್ತಿರಲಿಲ್ಲ. ನನ್ನ ನಂಬು ಅಮ್ಮ ಎಂದು ಗೋಗರೆಯುತ್ತಿದ್ದ ಯುವ. ಶಾಂತಾಲ ಕೂಡ ಮಗನ ಮಾತನ್ನು ನಂಬಿದಳು. ಮಗನಿಗೆ ಸಮಧಾನ ಮಾಡುತ್ತಿದ್ದಳು.

ಸುಳ್ಳುಗಾರ ನೀವೂ ಎಂದ ಕೃತಿ

ಸುಳ್ಳುಗಾರ ನೀವೂ ಎಂದ ಕೃತಿ

ಕೃತಿ ಅಷ್ಟರಲ್ಲಿ ಆ ಜಾಗಕ್ಕೆ ಬಂದಳು. ಯುವರಾಜ್‌ಗೆ ಕ್ಲಾಸ್ ತೆಗೆದುಕೊಂಡಳು. "ನಮ್ಮನ್ನು ನಮ್ಮ ಮನೆಯವರನ್ನು ಸುಳ್ಳುಗಾರರು, ಮೋಸಗಾರರು ಎನ್ನುವುದಕ್ಕೆ ನಿಮಗೆ ಎಷ್ಟು ಧೈರ್ಯ. ಯಾಕೆ ನೀವೂ ಸುಳ್ಳನ್ನೇ ಹೇಳಿಲ್ವಾ. ಒಳ್ಳೆಯವರು ಎಂಬ ಮುಖವಾಡ ಹಾಕಿಕೊಂಡು ನಮ್ಮ ಮನೆಯವರನ್ನು ಮರಳು ಮಾಡ್ತಾ ಇದ್ದೀರ ಅಲ್ವಾ. ನೀವೂ ಮೋಸಗಾರರು ಅಲ್ವಾ" ಎಂದು ಪ್ರಶ್ನಿಸಿದ್ದಾಳೆ.

ಕೃತಿ ಮೇಲೆಯೇ ಕೈ ಎತ್ತಿದ ಯುವ..!

ಕೃತಿ ಮೇಲೆಯೇ ಕೈ ಎತ್ತಿದ ಯುವ..!

ಯುವರಾಜ್ ಹಾಡಿದ ಒಂದೊಂದು ಮಾತು ಕೃತಿಗೆ ಬೇಸರ ಉಂಟು ಮಾಡಿದೆ. ಅದನ್ನೇ ಹೇಳುವಾಗ "ನಿಮ್ಮ ಅಮ್ಮನ ಮುಂದೆ ಸತ್ಯ ಹೇಳುವುದಕ್ಕೆ ಭಯ ಆಗ್ತಾ ಇದ್ಯಾ. ನಮ್ಮ ಮನೆಗೆ ಹೋಗೋಣಾ ಅಂತ ನೀವೇ ಹೇಳಿದ್ದು ಅಲ್ವಾ. ಸ್ವಾಭಿಮಾನ ಅಂತ ಬಂದಾಗ ನಾನು ಯಾರಿಗೂ ಹೆದರಲ್ಲ. ಮೇಲಿಂದ ಮೇಲೆ ಸುಳ್ಳು ಹೇಳುತ್ತಾ ಇರೋದು ನೀವೂ" ಎಂದಾಕ್ಷಣಾ ಯುವರಾಜ್‌ಗೆ ಇನ್ನಿಲ್ಲದ ಕೋಪ ಬಂದಿದೆ. ತಕ್ಷಣ ಅವಳನ್ನು ಹೊಡೆಯುವುದಕ್ಕೆ ಹೋಗಿದ್ದಾನೆ‌. ಆದರೆ, ಕೃತಿ ಅದಕ್ಕೆಲ್ಲಾ ಎಲ್ಲಿ ಹೆದರುತ್ತಾಳೆ. ಯುವನ ಕೈಯನ್ನು ತಡೆ ಹಿಡಿದಿದ್ದಾಳೆ.

More from Filmibeat

English summary
Star Suvarna Serial Katheyondu shuruvagide Written Update on March 17th Episode. Here is the details about Kruthi and Yuvaraj fighting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X