Katheyondu Shuruvagide: ಕೃತಿಗೆ ಮನಸೋತಿರುವ ಯುವ, ಅಮ್ಮನ ಮುಂದೆ ಧೈರ್ಯವಾಗಿ ಮಾತನಾಡಲು ಆಗುತ್ತಿಲ್ಲ
ಕೃತಿಗೆ ಪ್ರೀತಿ ಕೊಟ್ಟರೆ ಅಪಾರವಾದ ಪ್ರೀತಿ ಕೊಡುತ್ತಾಳೆ. ಗೌರವ ಕೊಟ್ಟರೆ ಗೌರವ ನೀಡುತ್ತಾಳೆ. ಆದರೆ, ಸ್ವಲ್ಪೇ ಸ್ಪಲ್ಪ ಸ್ವಾಭಿಮಾನಕ್ಕೆ ಧಕ್ಕೆಯಾದರೂ ತಿರುಗಿ ಬೀಳುತ್ತಾಳೆ. ಅದನ್ನು ಈಗಾಗಲೇ ಬಹದ್ದೂರ್ ಮನೆಯ ಶಾಂತಲಾ, ಯುವರಾಜ್ ಕಣ್ಣಾರೆ ಕಂಡಿದ್ದಾರೆ. ಹೀಗಾಗಿ ಕೃತಿಯನ್ನು ಯಾವ ರೀತಿ ಪಳಗಿಸಬೇಕೆಂಬುದು ತಿಳಿದಿರಬೇಕು.
ಯುವರಾಜ್ ಸಿಟ್ಟು, ಸಿಡುಕ ಅಂತಾರೆ. ಕೃತಿ ಬಳಿ ಆಗಾಗ ಆ ರೀತಿ ನಡೆದುಕೊಳ್ಳುತ್ತಾನೆ. ಆದರೆ, ಇನ್ನೊಂದು ಕ್ಷಣ ಕೃತಿ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಾನೆ. ಅಂಥದ್ದೊಂದು ಪ್ರಸಂಗವನ್ನು ನಾನು ನೋಡ್ತೀವಿ ಅಂತ ಶಾಂತಲಾ ಕನಸು, ಮನಸ್ಸು ಅಂದುಕೊಂಡಿರಲಿಲ್ಲ ಅನ್ಸುತ್ತೆ. ಈಗ ಕಣ್ಣಾರೆ ಕಂಡು, ಮನಸ್ಸಲ್ಲಿಯೇ ಕೆಂಡಾಮಂಡಲವಾಗುತ್ತಿದ್ದಾಳೆ.

ಕೃತಿಯ ಸಹಾಯಕ್ಕೆ ನಿಂತ ಯುವ
ಮನೆಯಲ್ಲಿ ಪೂಜೆ ಮಾಡಬೇಕಿತ್ತು. ಬಹದ್ದೂರ್ ಮನೆತನ ಎಂದರೆ ಅದು ಕೂಡು ಕುಟುಂಬ. ಸದಾ ದೇವರು, ಪೂಜೆ ಎಂದು ಕೆಲವೊಂದು ಸಂಪ್ರದಾಯಗಳನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಇಂದು ಕೃತಿ ದೇವರಿಗೆ ಅಲಂಕಾರ ಮಾಡಿ ಪೂಜೆಗೆ ಸಿದ್ಧ ಮಾಡಿದ್ದಳು. ಇದಕ್ಕೆಲ್ಲಾ ಯುವರಾಜ್ ಬಹದ್ದೂರ್ ಜೊತೆಯಾಗಿ ನಿಂತು ಸಹಾಯ ಮಾಡಿದ್ದ.

ಕೃತಿ ಮಾತಿಗೆ ತಲೆಯಾಡಿಸಿದ ಯುವ
ಯುವ ಪೂಜೆ ಮಾಡುವುದಕ್ಕೆ ಸಹಾಯ ಮಾಡಿದ್ದ. ಕೃತಿ ತುಂಬಾ ಸಂತೋಷವಾಗಿ, ತುಂಬಾ ವಿಧೇಯತೆಯಿಂದ ಮನೆಯವರನ್ನೆಲ್ಲಾ ಪೂಜೆಗೆ ಕರೆದು ಬನ್ನಿ ಎಂದರೆ, ಯುವ ಒಳ್ಳೆ ಮಗುವಿನ ರೀತಿ ತಲೆಯಾಡಿಸಿ, ಎಲ್ಲರನ್ನು ಕರೆಯಲು ಹೋದರೆ, ಅದಾಗಲೇ ಎಲ್ಲರೂ ಪೂಜೆಗೆ ಬಂದು ನಿಂತಿದ್ದರು. ಯುವನ ವರ್ತನೆ ಕಂಡು ಶಾಂತಲಾ ಅಕ್ಷರಶಃ ನಿಬ್ಬೆರಗಾಗಿದ್ದಳು. ನಿನ್ನೆಯೆಲ್ಲಾ ಅಮ್ಮನಿಗೆ ಸಮಾಧಾನ ಮಾಡಿದ್ದ. ಇನ್ನು ಮುಂದೆ ಕೃತಿ ಮಾತು ಕೇಳಲ್ಲ ಅಂತ ಹೇಳಿದ್ದ ಯುವ, ಇಂದು ಕೃತಿ ಹೇಳುತ್ತಿರುವ ಮಾತಿಗೆ ತಲೆಯಾಡಿಸಿ, ಮುನ್ನಡೆಯುತ್ತಿದ್ದಾನೆ ಎಂಬುದು ಶಾಂತಲಾಗೆ ಅರಗಿಸಿಕೊಳ್ಳಲು ಆಗಲಿಲ್ಲ. ಮಗನನ್ನು ಆಶ್ಚರ್ಯದಿಂದಾನೇ ನೋಡಿದಳು. ಆ ಕಡೆ ಯುವನಿಗೂ ಅಮ್ಮನ ಮುಂದೆ ಕಣ್ಣೆತ್ತಿ ನೋಡುವ ಧೈರ್ಯ ಸಾಕಾಗಲಿಲ್ಲ. ಅಮ್ಮನ ಮುಂದೆ ಸಿಕ್ಕಿ ಬಿದ್ದ ಭಾವದಲ್ಲಿಯೇ ನಿಂತ. ಒಮ್ಮೆ ಅಮ್ಮನನ್ನು ನೋಡುವುದು, ಇನ್ನೊಮ್ಮೆ ತಲೆ ತಗ್ಗಿಸುವುದನ್ನೇ ಮಾಡಿದ.

ಮಾತಂಗಿಗೆ ತಡೆಯಲಾಗ್ತಿಲ್ಲ ಕೋಪ
ದೇವರಿಗೆ ಕೃತಿ ಮಾಡಿದ ಅಲಂಕಾರ ಮನೆಯವರಿಗೆಲ್ಲಾ ತುಂಬಾನೇ ಹಿಡಿಸಿತ್ತು. ಎಲ್ಲರೂ ಹಾಡಿ ಹೊಗಳುವಾಗ, ನನ್ನ ಒಬ್ಬಳಿಂದ ಆಗಿರುವುದಲ್ಲ. ಯುವರಾಜ್ ಅವರು ಕೂಡ ಸಹಾಯ ಮಾಡಿದರು ಎಂದು ಹೇಳಿದಳು. ಆಗ ಮನೆಯವರಿಂದೆಲ್ಲಾ ಯುವನ ಪರ್ಫೆಕ್ಷನಿಸ್ಟ್ ಬಗ್ಗೆ ಹಾಡಿ ಕೊಂಡಾಡಿದರು. ಈಗ ಪೂಜೆ ಮುಗಿಸಿ, ಆರತಿ ಕೊಡಲು ಹೋದಾಗ, ಮಾತಂಗಿಯ ಮುಖದಲ್ಲಿ ಕೋಪ, ವ್ಯಂಗ್ಯವೇ ಕಾಣುತ್ತಾ ಇತ್ತು.

ಕೃತಿಗೆ ಗೊತ್ತಾಗಿದೆ ಸಾಮ್ರಾಟ್ ನಾಟಕ!
ಯುವರಾಜ್ ಬಹದ್ದೂರ್‌ಗೆ ಕೃತಿ ಮೇಲೆ ಇನ್ನು ನಂಬಿಕೆ ಬಂದಿಲ್ಲ. ವರ್ಷಿಕಾ ಬದಲಿಗೆ ಕೃತಿಯೇ ಮೋಸ ಮಾಡಿರುವುದು ಎಂದುಕೊಂಡಿದ್ದಾನೆ. ಕೃತಿಗೆ, ಸಾಮ್ರಾಟ್ ಮಾಡಿರುವ ಮೋಸ ಅದಾಗಲೇ ಗೊತ್ತಾಗಿದೆ. ಈಗ ಸಾಕ್ಷಿ ಸಮೇತ ಹಿಡಿಯಲು ಸಹನಾಳ ಸಹಾಯ ತೆಗೆದುಕೊಂಡಿದ್ದಾಳೆ. ವರ್ಣಿಕಾ ಮತ್ತು ಸಾಮ್ರಾಟ್ ಒಂದೇ ಕಡೆ ಭೇಟಿಯಾಗುವ ಸಂದರ್ಭವೂ ಬಂದಿದೆ. ಈ ಕಡೆ ಕೃತಿ, ಯುವನನ್ನು ದೇವಸ್ಥಾನಕ್ಕೆ ಕರೆದಿದ್ದಾಳೆ. ಬರುವುದಕ್ಕೆ ಯುವ ಒಪ್ಪದೆ ಇದ್ದಾಗ, ಇಂದು ಸತ್ಯ ಸಾಕ್ಷಿ ಸಮೇತ ಪ್ರೂವ್ ಆಗುತ್ತೆ ಬನ್ನಿ ಎಂದು ಕರೆದುಕೊಂಡು ಹೊರಟಿದ್ದಾಳೆ.


Click it and Unblock the Notifications











