Katheyondu Shuruvagide: ವರ್ಣಿಕಾಳ ಹಿಂದೆ ಹೋಗಿ ಕೃತಿ & ಯುವನ ಕೈಲಿ ಸಿಕ್ಕಿಬಿದ್ದ ಸಾಮ್ರಾಟ್..!

By ಎಸ್ ಸುಮಂತ್

ಯುವನನ್ನು‌ ಪ್ರೀತಿಸುವ ನಾಟಕವಾಡಿ, ಮದುವೆಯ ಎಲ್ಲಾ ಶಾಸ್ತ್ರಗಳನ್ನು ಒಟ್ಟೊಟ್ಟಿಗೆ ಮುಗಿಸಿಕೊಂಡು, ಆ ಕಡೆಯಲ್ಲಿ ಸಾಮ್ರಾಟ್ ಜೊತೆಗೂ ಪ್ರೀತಿಯಲ್ಲಿ ಬಿದ್ದಿದ್ದಳು ವರ್ಣಿಕಾ. ಸಾಮ್ರಾಟ್‌ನ ವಂಚನೆಗೆ ಮರುಳಾಗಿ‌ ಮದುವೆ ಮನೆಯಿಂದಾನೇ ಓಡಿ ಹೋಗಿದ್ದಳು. ಸ್ವಲ್ಪ ದಿನ ಸಾಮ್ರಾಟ್ ಜೊತೆಗೇನೆ ಯಾವುದೋ ಹೊಟೇಲ್‌ನಲ್ಲಿ ತಂಗಿದ್ದಳು. ಬಳಿಕ ಮನೆಗೆ ಬಂದ ವರ್ಣಿಕಾ ಬೇರೆಯದ್ದೆ ವರಸೆ ಶುರು ಮಾಡಿದ್ದಳು.

ಮೊದಲೇ ಕೃತಿಯನ್ನು ಕಂಡರೆ ಆಗದೆ ಇರುವ ಯುವನ ಎದುರಿಗೆ, ಇದೆಲ್ಲಾ ಕೃತಿಯದ್ದೇ ಪ್ಲ್ಯಾನ್ ಅಂದಿದ್ದಳು. ಇದನ್ನು ಯುವ ಬಲವಾಗಿ ನಂಬಿ ಮತ್ತಷ್ಟು ಮಾನಸಿಕ ಹಿಂಸೆ ನೀಡಿದ್ದ. ಆದರೆ, ಕೃತಿ ತನ್ನ ಹಠ ಬಿಡುವವಳಲ್ಲ. ನನ್ನದು ಯಾವುದೇ ರೀತಿಯ ತಪ್ಪಿಲ್ಲ ಎಂಬುದನ್ನು ಪ್ರೂವ್ ಮಾಡಲು ಹೊರಟಿದ್ದಾಳೆ. ಅದಕ್ಕೆ ತಂಗಿ ಸಹನಾಳ ಸಹಾಯವೂ ಸಿಕ್ಕಿದೆ. ಪ್ರೂಫ್ ಸಮೇತ ಯುವರಾಜ್ ಕೈಗೆ ಒಪ್ಪಿಸಿಯೂ ಆಗಿದೆ. ಇನ್ನು ಮುಂದಿನ ನಿರ್ಧಾರವೇನಿದ್ದರು ಯುವರಾಜ್ ಬಹದ್ದೂರ್ ಮಾಡಬೇಕು ಅಷ್ಟೇ.

Katheyondu Shuruvagide Serial Written Update on March 23rd episode

ಮುತ್ತೈದೆ ವ್ರತ ಮಾಡಲು ಬಂದ ವರ್ಣಿಕಾ

ವರ್ಣಿಕಾಗೆ ಸಾಮ್ರಾಟ್‌ನ ಮದುವೆಯಾಗಬೇಕೆಂಬ ಬಯಕೆ. ಅದಕ್ಕಾಗಿಯೇ ಸಾಕಷ್ಟು ಹರಸಾಹಸ ಪಡುತ್ತಿದ್ದಾಳೆ. ಈಗಾಗಲೇ ಸಾಮ್ರಾಟ್ ಉಲ್ಟಾ ಹೊಡೆಯುವುದಕ್ಕೆ ಪ್ರಯತ್ನ ಪಟ್ಟರು, ಅವನಿಗೆ ಮೂಗು ದಾರ ಹಾಕಿ, ತನ್ನತ್ತ ಸೆಳೆದುಕೊಂಡಿದ್ದಾಳೆ. ಬ್ಲಾಕ್ ಮೇಲ್ ಸೂತ್ರ ಬಳಸಿ ತಾನು ಹೇಳಿದ ರೀತಿ ಕೇಳುವಂತೆ ಮಾಡಿದ್ದಾಳೆ‌. ಈಗ ಇಬ್ಬರ ಮದುವೆ ಸುಸೂತ್ರವಾಗಿ ನೆರವೇರಲಿ ಎಂದುಕೊಂಡು ಮುತ್ತೈದೆ ವ್ರತ ಮಾಡಿದ್ದಾಳೆ. ಜೊತೆಗೆ ಸಾಮ್ರಾಟ್ ಜೊತೆಗೇನೆ ದೇವಸ್ಥಾನಕ್ಕೂ ಬಂದಿದ್ದಾಳೆ. ಇಬ್ಬರು ಜೊತೆಯಾಗಿ ಪೂಜೆ ಮಾಡಬೇಕೆಂದು ಹಠ ಮಾಡಿದ್ದಾಳೆ‌.

ಕೃತಿ ಕೂಡ ಈ ವ್ರತ ಮಾಡಿದ್ದಾಳೆ‌. ಕೊನೆಯಲ್ಲಿ ಗಂಡನಿಂದ ನೀರು ಕುಡಿದ ಮೇಲೆ ವ್ರತ ಪೂರ್ತಿಯಾಗುತ್ತದೆ. ಆದರೆ ಯುವ ನಾನು ಬರುವುದಿಲ್ಲ ಎಂದೇ ಹಠ ಮಾಡಿದ್ದ. ಸತ್ಯ ಅಲ್ಲಿ ಸಿಗುತ್ತೆ ಎಂದು ಕೃತಿ ಕಿವಿ ಮಾತು ಹೇಳಿದಾಗ ಬರುವ ಮನಸ್ಸು ಮಾಡಿದ್ದ. ಕೃತಿಗೆ ಮನದ ಮೂಲೆಯಲ್ಲಿ ನಂಬಿಕೆಯೂ ಇತ್ತು. ಅನುಮಾನವೂ ಇತ್ತು. ಕಡೆಗೂ ಯುವ ದೇವಸ್ಥಾನಕ್ಕೆ ಬಂದ.

Katheyondu Shuruvagide Serial Written Update on March 23rd episode

ಒಂದೇ ದೇವಸ್ಥಾನದಲ್ಲಿ ಯುವ -ಸಾಮ್ರಾಟ್

ಆ ಕಡೆ ಸಾಮ್ರಾಟ್ ಕೂಡ ವರ್ಣಿಕಾಳ ಬ್ಲಾಕ್ ಮೇಲ್ ಕುತಂತ್ರಕ್ಕೆ ಒಳಗಾಗಿ ದೇವಸ್ಥಾನಕ್ಕೆ ಬಂದಿದ್ದಾನೆ. ಇತ್ತ ಸತ್ಯ ತಿಳಿದುಕೊಳ್ಳುವುದಕ್ಕೆ ಯುವರಾಜ್ ಕೂಡ ಬಂದಿದ್ದಾನೆ. ಇನ್ನೇನು ಯುವರಾಜ್ ಮುಂದೆ ಸತ್ಯ ಬಯಲಾಗಬೇಕು ಅಷ್ಟರಲ್ಲಿ ಸಾಮ್ರಾಟ್ ಹಾಗೂ ವರ್ಣಿಕಾ ಎಸ್ಕೇಪ್ ಆಗಿದ್ದರು. ಅಷ್ಟರಲ್ಲಿ ಕೃತಿಯೂ ತಲೆ ತಿರುಗಿ ಬಿದ್ದಳು, ಯುವ ನೀರು ಕುಡಿಸಿ, ವ್ರತ ಪೂರ್ಣಗೊಳಿಸಿದ.

ಸಾಮ್ರಾಟ್‌ಗೆ ಯುವ ಕೂಡ ಇದೇ ದೇವಸ್ಥಾನಕ್ಕೆ ಬಂದಿರುವುದು ಗೊತ್ತಾಯಿತು. ಇದೆಲ್ಲಾ ವರ್ಣಿಕಾಳದ್ದೆ ಪ್ಲ್ಯಾನ್ ಎಂದುಕೊಂಡ. ಬಳಿಕ ವರ್ಣಿಕಾಳ ಜೊತೆ ಜಗಳ ಕೂಡ ಆಡಿದ್ದ. ವರ್ಣಿಕಾ ತಪ್ಪು ನನ್ನದೇನು ಇಲ್ಲ ಎಂದಾಗ, ಮೊದಲು ಇಲ್ಲಿಂದ ಎಸ್ಕೇಪ್ ಆಗುವ ದಾರಿ ನೋಡಬೇಕು ಅಂತ ಸಾಮ್ರಾಟ್ ನೀರು ಕುಡಿಸಿದ. ಅದೇ ಖುಷಿಯಲ್ಲಿ ವರ್ಣಿಕಾ, ಸಾಮ್ರಾಟ್‌ನನ್ನು ತಬ್ಬಿಕೊಂಡಳು. ಅಲ್ಲಿಗೆ ಕೃತಿ ಬಂದಳು, ಹಿಂದೆನೇ ಬಂದ ಯುವನಿಗೆ ನಾನು ತೋರಿಸಬೇಕಾದ ಸತ್ಯ ಇದೆ ಎಂದು ಹೇಳಿದಳು. ಕೋಪದಲ್ಲಿ ಸಾಮ್ರಾಟ್ ಎಂದು ಕೂಗಿದ ಯುವ, ಹಿಗ್ಗಾಮುಗ್ಗಾ ರುಬ್ಬಿದ್ದಾನೆ.

More from Filmibeat

English summary
Star suvarna serial Katheyondu shuruvagide Written Update on March 23rd episode. Here is the details about Yuvaraj catches varnika and Samrat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X