Katheyondu Shuruvagide: ವರ್ಣಿಕಾಗೆ ಮೋಸ ಮಾಡ್ತಿರೋ ಸಾಮ್ರಾಟ್.. ಸುಮ್ನೆ ಬಿಡ್ತಾಳಾ ಕೃತಿ..?
ಸಾಮ್ರಾಟ್‌ಗೆ ಒಂದು ಶೋಕಿ ಇದೆ. ಯುವರಾಜ್‌ಗೆ ಏನೇ ಸಿಕ್ಕರು ಅದು ಮೊದಲು ನನ್ನ ಪಾಲಾಗಬೇಕೆಂಬ ಕೆಟ್ಟ ಬಯಕೆಯದು. ಅದೇ ಉದ್ದೇಶದಿಂದಾನೇ ವರ್ಣಿಕಾಳನ್ನು ತಲೆ ಕೆಡಿಸಿ ಮದುವೆ ಮನೆಯಿಂದ ಓಡಿ ಬರುವಂತೆ ಮಾಡಿದ್ದು. ಈಗ ಆ ಆಸೆ ತೀರಿದ ಮೇಲೆ ವರ್ಣಿಕಾಳನ್ನೇ ದೂರ ಮಾಡುತ್ತಾ ಇದ್ದಾನೆ. ಪ್ರೀತಿ ಪ್ರೇಮಾ ಅಂತ ನಾಟಕವಾಡಿ. ಈಗ ಅಂಥದ್ದೊಂದು ಭಾವನೆ ಬೆಳೆದಿತ್ತಾ ಎಂದಿ ವರ್ಣಿಕಾಗೆ ಅನುಮಾನ ಬರುವಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾನೆ.
ಈ ಕಡೆ ಅನ್ಯಾಯ ಮಾಡಿದ್ದು ಯಾರು? ತಪ್ಪಿತಸ್ಥರು ಯಾರು ಎಂಬುದನ್ನು ಅದಾಗಲೇ ಕೃತಿ ಬಯಲು ಮಾಡಿದ್ದಾಳೆ. ಕೃತಿಯ ಪ್ರಯತ್ನದಿಂದ ಸಾಮ್ರಾಟ್ ಎಂಬ ಕಳ್ಳ ಸಿಕ್ಕಾಗಿದೆ. ಇದರಿಂದ ತನ್ನ ಜೀವನವೇನೋ ಸರಿ ಹೋಯ್ತು. ಯುವರಾಜ್ ಬಹದ್ದೂರ್ ನಂಬುವುದಕ್ಕೆ ಶುರು ಮಾಡಿದರು. ಆದರೆ ಈಗ ಕೃತಿಗೆ ಇರುವ ಚಾಲೆಂಜ್ ಮೋಸ ಹೋಗುತ್ತಿರುವ ಅಕ್ಕನನ್ನು ಸರಿ ಮಾಡಬೇಕಾಗಿದೆ.

ವರ್ಣಿಕಾಳಿಂದ ಸಾಮ್ರಾಟ್‌ಗೆ ಕಿರಿಕಿರಿ
ಸಾಮ್ರಾಟ್‌ಗೆ ತನ್ನ ವ್ಯಾಪ್ತಿಯ ಅರಿವಿದೆ. ವರ್ಣಿಕಾಳನ್ನು ಆತ ಬಳಸಿಕೊಂಡಿದ್ದು ಕೇವಲ ಯುವರಾಜ್ ಮದುವೆ ನಿಲ್ಲಲಿ ಎಂಬ ಕಾರಣಕ್ಕಾಗಿ ಅಷ್ಟೇ. ಯುವನ ಮದುವೆ ನಿಲ್ಲಬೇಕು ಆಗ ಮರ್ಯಾದೆ ಹೋಗಬೇಕು ಎಂಬ ಕಾರಣಕ್ಕಾಗಿಯೇ, ಮದುವೆ ಮನೆಗೆ ಅವನೇ ಸ್ವತಃ ಮುತುವರ್ಜಿ ವಹಿಸಿ, ಮೀಡಿಯಾದವರನ್ನು ಕರೆಸಿದ್ದ. ಎಲ್ಲವೂ ಅಂದುಕೊಂಡಂತೆ ಆಗದೆ, ಉಲ್ಟಾ ಹೊಡೆದಾಗ ಬಳಿಕ ಸುಮ್ಮನಾದ. ವರ್ಣಿಕಾಳನ್ನು ಮದುವೆ ಮನೆಯಿಂದ ಎಸ್ಕೇಪ್ ಮಾಡಿಕೊಂಡು ಹೋದವನಿಗೆ ಎಷ್ಟು ದಿನ ನೋಡಿಕೊಳ್ಳುತ್ತಾನೆ. ಈಗ ವರ್ಣಿಕಾ ಮನೆಯಲ್ಲಿದ್ದಾಳೆ. ಆದಷ್ಟು ಅವಳನ್ನು ಅವೈಡ್ ಮಾಡ್ತಿದ್ದಾನೆ.
ವರ್ಣಿಕಾ ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ್ತಿ. ಸಾಮ್ರಾಟ್‌ನನ್ನು ಮೋಸಗಾರ ಎಂಬುದು ತಿಳಿಯದೆ ಪ್ರೀತಿಸುತ್ತಿದ್ದಾಳೆ. ಆಗಾಗ ನಾಟಕವಾಡುವ ಸಾಮ್ರಾಟ್‌ಗೆ ಬುದ್ದಿ ಕಲಿಸುವ ಕಲೆಯೂ ವರ್ಣಿಕಾಗೆ ಗೊತ್ತು. ಈಗ ಭೇಟಿ ಮಾಡೋಣಾ ಬಾ ಅಂದ್ರೆ, ನೋವೇ ಚಾನ್ಸೆ ಇಲ್ಲ ಅಂತಿದ್ದಾನೆ. ಅದಕ್ಕೆ ವರ್ಣಿಕಾ ಬಿಡಬೇಕಲ್ಲ. ನಾನೇ ಮನೆಗೆ ಬರ್ತೀನಿ ಅಂತ ಕೂತಾಗ ಸಾಮ್ರಾಟ್ ಒಪ್ಪಿದ್ದಾನೆ.

ಬೇರೆ ಮದುವೆಗೆ ಸಿದ್ಧನಾದ ಸಾಮ್ರಾಟ್
ಸಾಮ್ರಾಟ್ ದೊಡ್ಡ ಮೋಸಗಾರ ಅಂತ ಅಮ್ಮ ಮತ್ತು ತಂಗಿಗೆ ಗೊತ್ತು. ಅದರಲ್ಲೂ ಹುಡುಗಿಯರ ವಿಚಾರದಲ್ಲಿ ಖರ್ಚೀಫ್ ಬದಲಾಯಿಸದಂತೆ ಹುಡುಗಿಯರನ್ನು ಬದಲಾಯಿಸುತ್ತಾನೆ ಎಂಬುದು ಗೊತ್ತು. ಈಗ ಬೇರೆ ಮದುವೆಗೆಂದು ಹುಡುಗಿಯನ್ನು ನೋಡುತ್ತಿದ್ದಾರೆ. ಸಾಮ್ರಾಟ್‌ಗೆ ವರ್ಣಿಕಾಳ ನೆನಪೇ ಇಲ್ಲದೆ, ಖುಷಿ ಖುಷಿಯಾಗಿ ಮದುವೆಗೆ ಒಪ್ಪಿದ್ದಾನೆ.
ಕೃತಿಗೆ ಅದಾಗಲೇ ಸಾಮ್ರಾಟ್ ಮೋಸಗಾರ ಎಂಬುದು ಗೊತ್ತಾಗಿದೆ. ಅಕ್ಕನಿಗೆ ಈತನಿಂದ ಮೋಸ ಆಗ್ತಾ ಇದೆ ಎಂಬುದು ಅರಿವಿಗೆ ಬಂದಿದೆ. ಆದರೆ ಯುವರಾಜ್ ಬಳಿ ಸಾಕ್ಚಿಗಳಿಲ್ಲದೆ ಮಾತನಾಡುವುದಕ್ಕೆ ಆಗಲ್ಲ ಎಂದು ಅರಿತು, ಸಾಕ್ಷಿ ಹುಡುಕಲು ಹೊರಟಿದ್ದಾಳೆ. ಸಾಮ್ರಾಟ್ ಅಕ್ಕನ ಜೊತೆಗೆ ಮಾತನಾಡುತ್ತಾ ಇದ್ದದ್ದು ಗೊತ್ತಾಗಿದೆ. ಇವಳ ಕಾಟ ತಪ್ಪಿಸಿಕೊಳ್ಳಬೇಕು ಅಂದ್ರೆ, ಅವಳನ್ನ ಕೊನೆ ಮಾಡಬೇಕು ಎಂದೆಲ್ಲಾ ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಕೃತಿಗೆ ಶಾಕ್ ಆಗಿದೆ. ಈಗ ಅಕ್ಕನ ಪ್ರಾಣ ಹಾಗೂ ಅಕ್ಕನ ಜೀವನ ಸರಿ ಮಾಡಬೇಕಾದ ಜವಾಬ್ದಾರಿ ಕೃತಿಯ ಮೇಲಿದೆ.


Click it and Unblock the Notifications











