Katheyondu Shuruvagide: ವರ್ಣಿಕಾಳ ಹುಡುಕಲು ಹೋಗಿ ಕಳೆದು ಹೋಗುತ್ತಿದ್ದಾನಾ ಯುವ?
ಬಹದ್ದೂರ್ ಮನೆಯಲ್ಲಿ ಶಾಂತಲಾಳ ಮಾತನ್ನು ಯಾರು ಕೂಡ ಅಲ್ಲಗಳೆಯುವುದಿಲ್ಲ. ಅದರಲ್ಲೂ ಮಗ ಯುವ ಅಂತೂ ಬಿಲ್ ಕುಲ್ ಮೀರುವುದಿಲ್ಲ. ಶಾಂತಲಾ ಕೂಡ ಯುವನಿಗಾಗಿ ಏನು ಬೇಕಾದರೂ ಮಾಡುತ್ತಾಳೆ. ಆದರೆ, ಅದ್ಯಾಕೋ ತಾಯಿಯ ಮನಸ್ಸನ್ನು ಸಿಕ್ಕಾಪಟ್ಟೆ ನೋಯಿಸುತ್ತಾ ಇದ್ದಾನೆ. ಕಾರಣವನ್ನು ಹೇಳದೆಯೇ ನೋವು ಕೊಡುತ್ತಾ ಇದ್ದಾನೆ.
ವರ್ಣಿಕಾ ಮಾಡಿದ ಮೋಸ ಶಾಂತಲಾ ಮನಸ್ಸಲ್ಲಿ, ಯುವನ ಮನಸ್ಸಲ್ಲಿ ಬೇರೂರಿ ಬಿಟ್ಟಿದೆ. ಆದರೆ, ಕೃತಿಯ ಮೇಲೆ ಗಾಢವಾದ ಅನುಮಾನವೂ ಇದೆ. ಇವಳೇ ಮಾಡಿರುವ ಮೋಸವಿದು ಎಂದೇ ನಂಬಿದ್ದಾರೆ. ಹೀಗಾಗಿ ಮೊದಲು ವರ್ಣಿಕಾಳನ್ನು ಹುಡುಕಿ, ಬಳಿಕ ಕೃತಿಯ ನಿಜ ಸ್ವರೂಪ ಬಯಲಿಗೆಳೆಯಲು ಯತ್ನಿಸುತ್ತಿದ್ದಾನೆ.

ಶಾಂತಳಿಗೆ ನೋವು ಕೊಡ್ತಿರೋದೇಕೆ ಯುವ..?
ಶಾಂತಲಾಳಿಗೆ ಯುವ ಸಾಕಷ್ಟು ನೋವು ಕೊಟ್ಟಿದ್ದಾನೆ. ತನ್ನ ಮಗ ನನ್ನ ಮಾತನ್ನು ಎಂದಿಗೂ ಮೀರುವುದಿಲ್ಲ ಎಂದೇ ಭರವಸೆ ಇಟ್ಟುಕೊಂಡಿದ್ದಳು ಶಾಂತಲಾ. ಆದ್ರೆ ಕೃತಿಯ ತವರು ಮನೆಗೆ ಹೋಗುವ ವಿಚಾರದಲ್ಲಿ ಅಮ್ಮನಿಗೆ ನೋವಾದರೂ ಚಿಂತಿಸದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೊರಟೇ ಹೋದ. ಅದರ ಹಿಂದಿರುವ ಉದ್ದೇಶವೇ ಬೇರೆಯಾಗಿದೆ. ಶಾಂತಲಾಗೂ ಆ ಉದ್ದೇಶ ತಿಳಿದಿದ್ದರೆ ಖಂಡಿತಾ ಸಪೋರ್ಟ್ ಮಾಡ್ತಾ ಇದ್ದಳು. ಆದರೆ, ಯಾವುದನ್ನು ಹೇಳದೆ ಯುವ ಒಬ್ಬನೇ ಪ್ಲ್ಯಾನ್ ಮಾಡ್ತಾ ಇದ್ದಾನೆ. ಅದಕ್ಕೆಂದೇ ಮನೆಯವರ ಮಾತೆಲ್ಲಾ ಧಿಕ್ಕರಿಸಿ ಹೋಗಿದ್ದಾನೆ. ತಾಯಿಗೆ ನೋವಾಗುತ್ತೆ ಎಂಬುದನ್ನು ಲೆಕ್ಕಕ್ಕೆ ಇಡದೆ ಹೊರಟಿದ್ದಾನೆ.

ವರ್ಣಿಕಾಳನ್ನು ಹುಡುಕಲು ಹೊರಟ ಯುವ..!
ಬಹದ್ದೂರ್ ಮನೆಯಲ್ಲಿ ಭಾವನೆಗಳ ಅಲ್ಲೋಲ ಕಲ್ಲೋಲವಾದರೂ, ಕೃತಿ ಹೋಗುವುದು ಬೇಡವೆಂದು ನಿರಾಕರಿಸಿದರು ಯುವನಿಗೆ ತನ್ನದೇ ಹಠ ಮುಖ್ಯವಾಗಿತ್ತು. ಅದಕ್ಕೆ ಕಾರಣ ವರ್ಣಿಕಾಳನ್ನು ಹುಡುಕುವ ತವಕ. ವರ್ಣಿಕಾ ಇನ್ನೇನು ಸಿಕ್ಕೆ ಬಿಟು ಎನ್ನುವಾಗ ಹೊಟೇಲ್‌ನಲ್ಲಿ ಎಸ್ಕೇಪ್ ಆಗಿದ್ದಳು. ಆದ್ರೆ ತವರು ಮನೆಯಲ್ಲಿಯೇ ಇರಬಹುದು ಎಂಬ ಅನುಮಾನದಿಂದ ಯುವ, ಕೃತಿಯ ತವರು ಮನೆಗೆ ಬಂದಿದ್ದಾನೆ. ಬಂದ ದಿನವೇ ಎಲ್ಲಾ ರೀತಿಯ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾನೆ. ಇಷ್ಟು ಚಿಕ್ಕ ಮನೆಯಲ್ಲಿ ವರ್ಣಿಕಾಳನ್ನು ಹುಡುಕುವುದು ಸುಲಭ ಎಂದೇ ಭಾವಿಸಿದ್ದಾನೆ.

ಅತ್ತೆ - ಮಾವನಿಗೆ ಗೌರವ ಕೊಡುತ್ತಿರುವ ಯುವ
ವರ್ಣಿಕಾ ಆ ರೀತಿ ಮದುವೆಯ ದಿನ ಎಸ್ಕೇಪ್ ಆಗಿದ್ದು, ಕೃತಿ ಹಸೆಮಣೆ ಮೇಲೆ ಕೂತಿದ್ದು, ನ್ಯೂಸ್ ನಲ್ಲೆಲ್ಲಾ ಸುದ್ದಿಯಾಗಿದ್ದು ಒಂದಾ ಎರಡಾ? ಯುವರಾಜ್ ಮದುವೆಯಲ್ಲಿ ಆದಂತಹ ಅವಾಂತರಗಳು ನೂರೆಂಟು. ಅಂದಿನಿಂದ ಕೃತಿ ಫ್ಯಾಮಿಲಿಯನ್ನು ದ್ವೇಷ ಮಾಡುವುದಕ್ಕೆ ಶುರು ಮಾಡಿದ್ದಾನೆ. ಆ ಮನೆಯವರು ಕೂಡ ಇಲ್ಲಿಗೆ ಬರಬಾರದು ಎಂದೇ ಕಂಡೀಷನ್ ಹಾಕಿದ್ದ. ಆದ್ರೆ ಈಗ ಎಲ್ಲವೂ ಉಲ್ಟಾ ಆಗಿದೆ. ಯುವ ಅತ್ತೆ ಮಾವನ ಮನೆಗೆ ಹೋಗಿದ್ದಾನೆ. ಅಲ್ಲಿ ಎಷ್ಟು ಗೌರವ ಕೊಡಬೇಕು ಅಷ್ಟನ್ನು ಕೊಟ್ಟು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾನೆ.

ಕೃತಿಯ ಪ್ರೀತಿಗೆ ಬೀಳುತ್ತಾನಾ..?
ಕೃತಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾನೆ ಯುವ. ಒಂದೇ ರೂಮಲ್ಲಿ ಇರಲ್ಲ, ನೀನು ಹೇಳಿದಂತೆ ಕೇಳಲ್ಲ ಹೀಗೆ. ಆದ್ರೆ ಎಲ್ಲವೂ ಕೃತಿ ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದಾನೆ. ಬಹದ್ದೂರ್ ಮನೆಯಲ್ಲಿ ಒಂದು ದಿನವೂ ಹಾಕದೆ ಇರುವ ಯುವರಾಜ್ ಈಗ ಕೃತಿ ಹೇಳಿದ್ದಕ್ಕಾಗಿ ಪಂಚೆ ಹಾಕಿ, ಊಟಕ್ಕೆ ಬಂದಿದ್ದಾನೆ. ವರ್ಣಿಕಾಳ ಮೇಲಿನ ಕೋಪ ಕೃತಿ ಮೇಲೆ ಪ್ರೀತಿಯಾಗಿ ಬದಲಾಗುತ್ತಿದೆ. ಅದು ಯುವನಿಗೆ ಗೊತ್ತಾಗಬೇಕಷ್ಟೆ.


Click it and Unblock the Notifications











