Katheyondu Shuruvagide: ವರ್ಣಿಕಾಳನ್ನು ಬಿಟ್ಟು ಬೇರೆ ಹುಡುಗಿಯ ಜೊತೆ ಸಾಮ್ರಾಟ್ ಡೇಟಿಂಗ್!

By ಎಸ್ ಸುಮಂತ್

ಯುವರಾಜ್ ಬಹದ್ದೂರ್ ಸಂಪೂರ್ಣವಾಗಿ ಬದಲಾಗಿದ್ದಾನೆ. ಅದು ನೋಡಿಗರ ಕಣ್ಣಿಗೆ ಎದ್ದು ಕಾಣುತ್ತಿದೆ. ಯಾವಾಗಲೂ ಸಿಡಿ ಸಿಡಿ ಎನ್ನುತ್ತಿದ್ದ ಯುವ, ಈಗ ನಗು ಮುಖದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಈ ನಗು ಮುಖ ಕೆಲವರಿಗೆ ಖುಷಿ ತರಿಸಿದ್ರೆ, ಇನ್ನು ಕೆಲವರಿಗೆ ಕೋಪ ತರಿಸುತ್ತಿದೆ. ಅದರಲ್ಲೂ ಅಮ್ಮ ಮತ್ತು ಮಾವನಿಗೆ ಈ ಬದಲಾವಣೆ ಒಂದು ಚೂರು ಇಷ್ಟವಾಗುತ್ತಿಲ್ಲ.

ಯುವ ಸದ್ಯ ಅತ್ತೆ ಮಾವನ ಮನೆಗೆ ಬಂದಿದ್ದಾನೆ. ಅತ್ತೆ ಮಾವನ ಆತಿಥ್ಯವನ್ನು ಸ್ವೀಕರಿಸುತ್ತಿದ್ದಾನೆ. ಬೀಗರ ಮನೆಯಲ್ಲೂ ಅಳಿಯನ ಬದಲಾವಣೆ ನೋಡಿ ಖುಷಿಯಾಗಿದ್ದಾರೆ. ಆದರೆ ಯುವ ಇಷ್ಟೊಂದು ಬದಲಾವಣೆಯಾಗಿರುವುದು ಯಾಕೆ ಎಂಬುದು ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ಯುವನ ಬದಲಾವಣೆಯ ಹಿಂದೆ ಇರುವುದು ಪ್ರೀತಿ ಅಲ್ಲ, ಬದಲಿಗೆ ವರ್ಣಿಕಾಳ ಹುಡುಕಾಟ.

ಯುವನ ಕಷ್ಟ ನೋಡಿ ಮರುಗಿದ ಕೃತಿ..!

ಯುವನ ಕಷ್ಟ ನೋಡಿ ಮರುಗಿದ ಕೃತಿ..!

ಬಹದ್ದೂರ್ ವಂಶದ ಕುಡಿ ಯುವರಾಜ್ ಬಹದ್ದೂರ್. ಹುಟ್ಟುವಾಗಲೇ ಚಿನ್ನದ ಸ್ಪೂನ್ ಹಿಡಿದು ಹುಟ್ಟಿದ. ಕಷ್ಟ ಜೊತೆಗೆ ಬಡತನ ಎರಡನ್ನು ಹತ್ತಿರದಿಂದ ಫೀಲ್ ಮಾಡಿದವನಲ್ಲ. ಆದ್ರೆ, ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲೂ ಬಯಸಿ, ಬೇಡವೆಂದವಳನ್ನು ಕೈ ಹಿಡಿದಿದ್ದಾನೆ. ಹಲವು ಗುದ್ದಾಟದ ನಡುವೆ ಆ ಹುಡುಗಿಯನ್ನೇ ಒಪ್ಪಿಕೊಂಡಿದ್ದಾನೆ. ಯಾವುದೋ ಕಾರಣಕ್ಕೆ ಹೆತ್ತಮ್ಮನ ಮಾತನ್ನೇ ಧಿಕ್ಕರಿಸಿ ಕೃತಿ ಮನೆಗೆ ಬಂದಿದ್ದಾನೆ. ಬಹದ್ದೂರ್ ಮನೆಯಲ್ಲಿ ಇದ್ದಂತ ಯಾವ ಸೌಲಭ್ಯವು ಅಷ್ಟಾಗಿ ಕೃತಿ ಮನೆಯಲ್ಲಿ ಸಿಗದ ಕಾರಣ, ಈಗ ಬೆನ್ನು ನೋವು ಭರಿಸಿಕೊಂಡು ಕೂತಿದ್ದಾನೆ.

ಬೀಗರ ಮನೆಗೆ ಬಂದ ಶಾಂತಲಾ

ಬೀಗರ ಮನೆಗೆ ಬಂದ ಶಾಂತಲಾ

ಯುವ ಎಂದರೆ ಶಾಂತಲಾಗೆ ಸಿಕ್ಕಾಪಟ್ಟೆ ಪ್ರೀತಿ. ಹಾಗೆ ಯುವನಿಗೂ ಅಷ್ಟೇ ತಾಯಿಯೆಂದರೆ ದೇವರಿದ್ದಂತೆ. ಯಾವತ್ತೂ ಆ ದೇವರ ಮಾತನ್ನು ಮೀರಿದ ಉದಾಹರಣೆಯೇ ಇಲ್ಲ. ಆದರೆ ಅದ್ಯಾಕೋ ಇತ್ತಿಚೆಗೆ ತಾಯಿಗೆ ನೋವಾಗುವಂತೆ ನಡೆದುಕೊಳ್ಳುತ್ತಿದ್ದಾನೆ. ತಾಯಿ ಮುಂದೆ ಕೃತಿಯೇ ಮುಖ್ಯವೆಂಬಂತೆ ಆಡುತ್ತಿದ್ದಾನೆ. ಇಂದು ಸೊಂಟಕ್ಕೆ ಏಟು ಬಿದ್ದು ಒದ್ದಾಡುತ್ತಿದ್ದನ್ನು ಕಂಡು ಶಾಂತಲಾ ಮನಸ್ಸು ಕಂಗಲಾಗಿದೆ. ಯಾವತ್ತು ಪುಷ್ಪಾಳ ಮನೆಗೆ ಕಾಲು ಇಡುವುದಿಲ್ಲ ಎನ್ನುತ್ತಿದ್ದ ಶಾಂತಲಾ ಮಗನಿಗಾಗಿ ಕೃತಿಯ ತವರು ಮನೆಗೆ ಬಂದಿದ್ದಾಳೆ.

ಅಮ್ಮ ಕರೆದರು ಹೋಗುತ್ತಿಲ್ಲ ಯುವ..!

ಅಮ್ಮ ಕರೆದರು ಹೋಗುತ್ತಿಲ್ಲ ಯುವ..!

ಪುಷ್ಪಾಳ ಮನೆಗೆ ಬಂದಾಗ ಯುವ ಮುಲಾಮ್ ಹಚ್ಚಿಸಿಕೊಳ್ಳುತ್ತಿದ್ದ. ಇದನ್ನು ಕಂಡ ಶಾಂತಲಾ ಶಾಕ್ ಆಗಿದ್ದಾಳೆ. ಇಲ್ಲಿಗೆ ಬಂದಿದ್ದಕ್ಕೆ ಎಂತ ಗತಿ ಬಂತು ನೋಡು. ಮೊದಲು ಇಲ್ಲಿಂದ ಹೋಗೋಣಾ ಬಾ ಎಂದು ಕರೆದಿದ್ದಾಳೆ. ಆದ್ರೆ, ಯುವನ ರಿಯಾಕ್ಷನ್ ಬೇರೆಯದ್ದೆ ಆಗಿತ್ತು. ನಾನು ಬರಲ್ಲ ಅಮ್ಮ ಎಂದಾಗ ಶಾಂತಲಾ ಶಾಕ್ ಆಗಿದ್ದಾಳೆ. ಅಮ್ಮನಿಗೆ ವಿಚಾರ ಮುಟ್ಟಿಸಿದ್ದು, ಕೃತಿನೇ ಎಂದು ಗೊತ್ತಾದಾಗ ಇನ್ನಷ್ಟು ಬಲವಾಗಿ ತನ್ನ ಹಠ ಸಾಧಿಸಿದ್ದಾನೆ. ವರ್ಣಿಕಾಳನ್ನು ಮರೆ ಮಾಚುವುದಕ್ಕೆ ಈ ರೀತಿಯಾಗಿ ಅಮ್ಮನನ್ನು ಕರೆಸಿದ್ದಾರೆ ಎಂದು ನಂಬಿದ್ದಾನೆ.

ಸಾಮ್ರಾಟ್ ಬಣ್ಣ ಬಯಲು ಮಾಡ್ತಾಳಾ ವರ್ಣಿಕಾ..?

ಸಾಮ್ರಾಟ್ ಬಣ್ಣ ಬಯಲು ಮಾಡ್ತಾಳಾ ವರ್ಣಿಕಾ..?

ಅತ್ತ ಯಾರಿಗೋಸ್ಕರ ಬಹದ್ದೂರ್ ಮನೆಯ ಯುವನನ್ನು ಬಿಟ್ಟು ಓಡಿ ಹೋಗಿದ್ದಳೋ, ವರ್ಣಿಕಾಗೆ ಅವನಿಂದಾನೇ ಮೋಸ ಆಗ್ತಾ ಇದೆ. ಸಾಮ್ರಾಟ್ ಗೆ ಹುಡುಗಿಯರ ಕ್ರೇಜ್ ಇರುವುದು ಅವರ ಅಮ್ಮ ಮತ್ತು ತಂಗಿಗೆ ಮಾತ್ರ ಗೊತ್ತು. ಈಗ ವರ್ಣಿಕಾಳನ್ನು ಬಿಟ್ಟು ಸಾಮ್ರಾಟ್ ಮತ್ತೊಂದು ಹುಡುಗಿಯ ಹಿಂದೆ ಓಡಾಡುತ್ತಿದ್ದಾನೆ. ಆದ್ರೆ ವರ್ಣಿಕಾ ಮನೆಗೂ ಹೋಗುವುದಕ್ಕೆ ಆಗದೆ,ಬೀದಿಯಲ್ಲೂ ಅಡ್ಡಾಡುವುದಕ್ಕೂ ಆಗದೆ, ಸಾಮ್ರಾಟ್ ಗೆ ಬುದ್ದಿ ಕಲಿಸಬೇಕೆಂದು ಯೋಚನೆ ಮಾಡುತ್ತಿದ್ದಾಳೆ.

More from Filmibeat

English summary
Katheyondu Shuruvagide Serial Written Update on March 7th Episode. Here is the details about Yuva still searching for Varnika.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X