Katheyondu Shuruvagide: ಯುವನ ಕೈಗೇ ಸಿಕ್ಕೇ ಬಿಟ್ಟಳು ವರ್ಣಿಕಾ.. ಕೃತಿ ಮೇಲೆ ಕೋಪ ಜಾಸ್ತಿಯಾಗುತ್ತಾ..?
ಬಹದ್ದೂರ್ ಮನೆಯಲ್ಲಿ ರಾಜನಂತೆ ಬೆಳೆದ ಯುವ, ಈಗ ಎಲ್ಲರ ಮಾತನ್ನು ಮೀರಿ ಪಂಡಿತ್ ಮನೆ ಸೇರಿದ್ದಾನೆ. ಅಲ್ಲಿ ಬಹದ್ದೂರ್ ಮನೆಯಲ್ಲಿ ಇದ್ದಂತೆ ಯಾವುದೇ ಸೌಲಭ್ಯವಿಲ್ಲದೆ ಹೋದರೂ, ಕಷ್ಟಪಟ್ಟುಕೊಂಡು ಅಲ್ಲಿಯೇ ಇದ್ದಾನೆ. ಈಗಾಗಲೇ ಸೊಂಟ ಮುರಿದುಕೊಂಡಿರುವ ಯುವನನ್ನು ಕಂಡು ಶಾಂತಲಾ ಬೇಸರ ಮಾಡಿಕೊಂಡಿದ್ದಾಳೆ. ಮನೆಗೆ ವಾಪಾಸ್ ಹೋಗುವಂಥೆ ಎಲ್ಲರೂ ಹೇಳಿದರೂ ಯುವ ಯಾರ ಮಾತನ್ನು ಕೇಳುತ್ತಿಲ್ಲ.
ಯುವನ ಬದಲಾವಣೆ ಎಲ್ಲರಿಗೂ ಪ್ರೀತಿ ಎಂದೆನಿಸಿದರೂ, ಕೃತಿಗೆ ಅದರ ಹಿಂದೆ ಏನು ಇಲ್ಲ ಎಂಬುದು ಅರ್ಥವಾಗಿದೆ. ಯುವ ಯುವನ ಮನಸ್ಸಲ್ಲಿ ಯಾವತ್ತಿಗೂ ಪ್ರೀತಿ ಅನ್ನೋದು ಚಿಗುರುವುದೇ ಇಲ್ಲ ಅನ್ನೋದು ಅರ್ಥವಾಗಿದೆ. ಆದರೆ ಅದಕ್ಕೆ ವಿರುದ್ಧವಾಗಿ ಯುವನ ಮನಸ್ಸಲ್ಲಿ ಆಗಾಗ ಪ್ರೀತಿ ಎಂಬ ಛಾಯೆ ಇಣುಕು ಹಾಕುತ್ತಾ ಇರುತ್ತೆ, ಯುವ ಅದನ್ನು ಹಂಗೆ ಅಳಿಸಿ ಹಾಕುತ್ತಿದ್ದಾನೆ ಕೂಡ.

ಮನೆಗೆ ವಾಪಾಸ್ ಆದ ವರ್ಣಿಕಾ..!
ಸಾಮ್ರಾಟ್ ನಾಟಕದ ಪ್ರೀತಿಗೆ ಮರುಳಾಗಿ ವರ್ಣಿಕಾ ಮನೆ ಬಿಟ್ಟು ಹೋಗಿದ್ದಳು. ಸಾಮ್ರಾಟ್ ಸಾಮ್ರಾಜ್ಯದಲ್ಲಿ ರಾಣಿಯಾಗಿ ಮೆರೆಯಬಹುದು ಎಂದುಕೊಂಡಿದ್ದಳು. ಆದ್ರೆ ಆಗಿದ್ದೆಲ್ಲವೂ ಉಲ್ಟಾ. ಸ್ವಲ್ಪ ಸಮಯಕ್ಕೇನೆ ಸಾಮ್ರಾಟ್ ಬಂಡವಾಳ ಬಯಲಾಗಿತ್ತು. ಈಗ ವಿಧಿಯಿಲ್ಲದೆ ವರ್ಣಿಕಾ ತಾಯಿಯ ಮನೆಯ ಹಾದಿ ಹಿಡಿದಿದ್ದಾಳೆ. ಏನಾದರೂ ಆಗಲಿ, ಅಮ್ಮನ ಬಳಿ ಬೈಸಿಕೊಂಡಾದರೂ ಸರಿ ಮನೆಯಲ್ಲಿ ಇರುವುದು ಮುಖ್ಯವೆಂದು ಮನೆಗೆ ವಾಪಾಸ್ ಬಂದಿದ್ದಾಳೆ. ಕದ್ದು ಮುಚ್ಚಿ ಮನೆಯ ಹಾದಿ ಹಿಡಿದಿದ್ದಾಳೆ.

ವರ್ಣಿಕಾಳನ್ನು ನೋಡಿ ಯುವನಿಗೆ ಸಮಾಧಾನ
ಯುವರಾಜ್ ಬಹದ್ದೂರ್, ಪಂಡಿತ್ ಮನೆಗೆ ಬಂದ ಉದ್ದೇಶವೇ ಬೇರೆ. ಮನೆಯಲ್ಲೆಲ್ಲಾ ಬೇಡ ಬೇಡ ಎಂದರೂ ಯಾರ ಮಾತನ್ನು ಕೇಳದೆ, ಯಾವತ್ತೂ ನೋಯಿಸದ ಅಮ್ಮನನ್ನು ನೋಯಿಸಿ ಪಂಡಿತ್ ಮನೆಗೆ ಬಂದಿದ್ದಾನೆ. ಯಾಕಂದ್ರೆ ಮದುವೆಯಲ್ಲಿ ಆದ ಅವಾಂತರವನ್ನು ಈಗಲೂ ಯುವನ ಕೈನಲ್ಲಿ ಸಹಿಸುವುದಕ್ಕೆ ಆಗಲಿಲ್ಲ. ಹೇಗಾದರೂ ಮಾಡಿ ವರ್ಣಿಕಾಳನ್ನು ಪತ್ತೆ ಹಚ್ಚಿ, ರಿಯಾಲಿಟಿ ಏನು ಅನ್ನೋದು ಅರ್ಥವಾಗಬೇಕಿದೆ. ಅದಕ್ಕೆ ಪಂಡಿತ್ ಮನೆಯಲ್ಲಿ ಕಷ್ಟವಾದರೂ ಅದನ್ನೆಲ್ಲಾ ಸಹಿಸಿಕೊಂಡು ಇದ್ದಾನೆ. ಅವನು ಬಂದಿದ್ದಕ್ಕೂ ಸಾರ್ಥಕವಾಗಿದೆ. ಇಷ್ಟೊಂದು ದಿನ ಕಾದಿದ್ದಕ್ಕೆ ಕಡೆಗೂ ವರ್ಣಿಕಾ ಸಿಕ್ಕಿಬಿದ್ದಿದ್ದಾಳೆ.

ಕೃತಿಯನ್ನು ನಂಬದ ಯುವ!
ಮನೆಗೆ ಕದ್ದು ಮುಚ್ಚಿ ವರ್ಣಿಕಾ ಎಂಟ್ರಿ ಕೊಟ್ಟಾಗಿದೆ. ಆ ಕಡೆ ಯುವನಿಗೆ ಇದೆ ಸಮಯಕ್ಕೆ ಬಾಯಾರಿಕೆಯಾಗಿದೆ. ನೀರು ಕುಡಿಯುವುದಕ್ಕೆ ಅಂತ ಕೆಳಗಡೆ ಬಂದಾಗ ಏನೋ ಸದ್ದಾಗಿದೆ. ವರ್ಣಿಕಾಳಿಗೂ ಯಾರೋ ಬಂದಂತೆ ಭಾಸವಾಗಿದೆ. ಇಬ್ಬರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡಿದ್ದಾರೆ. ಆ ಕಡೆ ಕೃತಿಗೂ ಎಚ್ಚರವಾಗಿದ್ದು, ಯುವರಾಜ್ ಕಾಣಿಸದೆ ಇದ್ದದ್ದನ್ನು ಕಂಡು ಕೆಳಗೆ ಬಂದಿದ್ದಾಳೆ. ಮೂವರು ಒಟ್ಟಿಗೆ ಆಗಿದ್ದಾರೆ. ವರ್ಣಿಕಾಳನ್ನು ಕಂಡು ಕೃತಿ ಅಕ್ಷರಶಃ ಶಾಕ್ ಆಗಿದ್ದಾಳೆ. ಆದ್ರೆ ಕೃತಿಯ ಮಾತನ್ನು ಯುವ ನಂಬುವುದಕ್ಕೆ ಸಿದ್ಧವಿಲ್ಲ.

ಸಾಮ್ರಾಟ್ ನಿಂದ ಮತ್ತೆ ಸಂಕಷ್ಟಕ್ಕೆ ವರ್ಣಿಕಾ..!
ಸಾಮ್ರಾಟ್ ಮೋಸದ ಪ್ರೀತಿಯ ಬಲೆಯನ್ನು ಬೀಸಿದ್ದ. ಆ ಬಲೆಯಲ್ಲಿ ಬಹಳ ದಿನಗಳ ಕಾಲ ಅವನಿಗೆ ಇರುವುದಕ್ಕೆ ಆಗಿಲ್ಲ. ವರ್ಣಿಕಾಳ ಕಾಟವನ್ನು ತಡೆದುಕೊಳ್ಳುವುದಕ್ಕೆ ಆಗಿಲ್ಲ. ಹೀಗಾಗಿ ವರ್ಣಿಕಾಳನ್ನು ಪೂಸಿ ಹೊಡೆದಿದ್ದಾನೆ. ನಿನಗೆ ಕೃತಿ ಬರೀ ತಂಗಿಯಲ್ಲ. ದುಷ್ಮನ್ ಇದ್ದ ಹಾಗೇ. ನೀನು ಮದುವೆಯಾಗಬೇಕಿದ್ದ ಹುಡುಗನನ್ನೇ ಮದುವೆಯಾಗಿದ್ದಾಳೆ ಎಂದಿದ್ದಾನೆ. ಇದರ ದ್ವೇಷ ತೀರಿಸಿಕೊಳ್ಳಲು ನೀನು ಮನೆಗೆ ಹೋಗಲೇಬೇಕೆಂದು ಹೇಳಿ ಕಳುಹಿಸಿದ್ದಾನೆ. ಈ ಬಾರಿಯೂ ಸಾಮ್ರಾಟ್ ಮೋಸಕ್ಕೆ ವರ್ಣಿಕಾ ಬಲಿಯಾಗಿದ್ದಾಳೆ.


Click it and Unblock the Notifications











