For Quick Alerts
  ALLOW NOTIFICATIONS  
  For Daily Alerts

  ಸ್ವಾಭಿಮಾನಿ ಹಾಗೂ ಅಹಂಕಾರಿಯ ನಡುವೆ 'ಕಥೆಯೊಂದು ಶುರುವಾಗಿದೆ'

  By ಎಸ್ ಸುಮಂತ್
  |

  ಸ್ಟಾರ್ ಸುವರ್ಣ ವಾಹಿನಿ ಯಾವಗಲೂ ಹೊಸತನಕ್ಕೆ ತೆರೆದುಕೊಳ್ಳುತ್ತಾ ಇರುತ್ತದೆ. ನೋಡುಗರಿಗೆ ಮನರಂಜಿಸಲು ಸದಾ ಕಾತುರವಾಗಿರುತ್ತದೆ. ಅದರ ಬೆನ್ನ ಹಿಂದೆ ಹೊರಟಾಗಲೇ ಹಲವು ಬಗೆಯ ಧಾರಾವಾಹಿಗಳು, ರಿಯಾಲಿಟಿ ಶೋಗಳು ಸ್ಟಾರ್ ಸುವರ್ಣದಲ್ಲಿ ತೆರೆದುಕೊಳ್ಳುತ್ತವೆ. ಈಗಾಗಲೇ ಸಾಕಷ್ಟು ಧಾರಾವಾಹಿಗಳು ಮನೆಯ ಮಹಿಳೆಯರನ್ನು ಹಿಡಿದಿಟ್ಟಿರುವಾಗ, ರಿಯಾಲಿಟಿ ಶೋಗಳು ನಗಿಸುತ್ತಿರುವಾಗ ʻಕಥೆಯೊಂದು ಶುರುವಾಗಿದೆʼ ಹೊಸದಾಗಿ ಸೇರ್ಪಡೆಯಾಗುತ್ತಿದೆ.

  ಸದ್ಯದ ಕಾಲದಲ್ಲಿ ಹೆಣ್ಣು ಯಾರಿಗೇನು ಕಡಿಮೆಯಿಲ್ಲ. ಹಾಗಂತ ಅದು ಅಹಂ ಅಲ್ಲ. ತಾನು ಗಟ್ಟಿಯಾಗಿ ನಿಂತು ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಗಟ್ಟಿಗಿತ್ತಿ ಎಂಬ ಆತ್ಮವಿಶ್ವಾಸವದು. ಅಂತ ಹೆಣ್ಣಿನ ಕಥೆಯನ್ನು ಹೊತ್ತು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದೊಂದು ಕಥೆ ಶುರುವಾಗಿದೆ.

  ವಿಕ್ರಂ ಜಾಲದಿಂದ ತಂಗಿಯನ್ನು ಹೇಗೆ ರಕ್ಷಿಸುತ್ತಾಳೆ ಲೀಲಾ?ವಿಕ್ರಂ ಜಾಲದಿಂದ ತಂಗಿಯನ್ನು ಹೇಗೆ ರಕ್ಷಿಸುತ್ತಾಳೆ ಲೀಲಾ?

  ನವೆಂಬರ್ 28ರಿಂದ ಹೊಸ ಧಾರಾವಾಹಿ

  ನವೆಂಬರ್ 28ರಿಂದ ಹೊಸ ಧಾರಾವಾಹಿ

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಮೂಡಿ ಬರುತ್ತಿವೆ. ದೇವರ ಭಕ್ತಿಯ 'ಯಡಿಯೂರು ಸಿದ್ದಲಿಂಗೇಶ್ವರ', ಕೂಡು ಕುಟುಂಬದ 'ಜೇನುಗೂಡು', ಇಬ್ಬರ ಹೆಂಡಿರ 'ಬೆಟ್ಟದ ಹೂ', ಫ್ಯಾಮಿಲಿಯಲ್ಲಿ ವಿಲನ್ ಗಳಿದ್ದರೆ ಏನೆಲ್ಲಾ ಆಗುತ್ತೆ ಎಂದು ತೋರಿಸುವ 'ಮುದ್ದುಮಣಿಗಳು'. ಹೀಗೆ ಹಲವು ಧಾರಾವಾಹಿಗಳು ಜನರನ್ನು ರಂಜಿಸುತ್ತಿವೆ. ಅದರ ನಡುವೆ ಸೇರ್ಪಡೆಯಾಗಿರುವುದು 'ಕಥೆಯೊಂದು ಶುರುವಾಗಿದೆ'. ಇದೇ ತಿಂಗಳ 28ರಿಂದ 'ಕಥೆಯೊಂದು ಶುರುವಾಗಿದೆ' ಆರಂಭವಾಗುತ್ತಿದೆ.

  ಕೀರ್ತನಾ ಮಾಡಿರುವ ಈ ಪ್ಲಾನ್‌ನಿಂದ ಸತ್ಯಗೆ ಗ್ರಹಚಾರ ಒಕ್ಕರಿಸಿಕೊಳ್ಳುತ್ತಾ?ಕೀರ್ತನಾ ಮಾಡಿರುವ ಈ ಪ್ಲಾನ್‌ನಿಂದ ಸತ್ಯಗೆ ಗ್ರಹಚಾರ ಒಕ್ಕರಿಸಿಕೊಳ್ಳುತ್ತಾ?

  ಮನೆಗಾಗಿ ದುಡಿಯುವ ಹೆಣ್ಣು

  ಮನೆಗಾಗಿ ದುಡಿಯುವ ಹೆಣ್ಣು

  ಕಷ್ಟ ಏನೇ ಇರಲಿ. ಆದರೆ ಸ್ವಾಭಿಮಾನ ಒಂದಿದ್ದರೆ ಯಾವುದೇ ರೀತಿಯ ಕಷ್ಟವನ್ನು ಎದುರಿಸಬಹುದು ಎಂಬುದಕ್ಕೆ ಕೃತಿ ಸಾಕ್ಷಿಯಾಗುತ್ತಾಳೆ. ಬಡತನದಲ್ಲಿಯೇ ಹುಟ್ಟಿದ್ದರು, ಮಿಡಲ್ ಕ್ಲಾಸ್ ಜೀವನವನ್ನೇ ಕಳೆಯುತ್ತಿದ್ದರು. ಎಲ್ಲಿಯೂ ತನ್ನ ಸ್ವಾಭಿಮಾನ ಬಿಟ್ಟು ಮಾತ್ರ ಬದುಕುವುದು ಅವಳ ಗುಣವಲ್ಲ. ಫ್ಯಾಮಿಲಿ ಎಂದರೆ ಕಾವಲು ಕಾಯುವುದಕ್ಕೆ ಸದಾ ಸಿದ್ದಳಿರುತ್ತಾಳೆ. ತಮ್ಮ, ತಂಗಿಯ ಜೀವನ ಸೆಟಲ್ ಮಾಡುವುದಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟು ದುಡಿಯುತ್ತಾಳೆ. ಇದು ಕೃತಿಯ ಜೀವನ. ಹಾಗಂತ ನಾನು ಶ್ರೀಮಂತ ಎಂಬ ದರ್ಪ ತೋರಿದರೆ ಅದಕ್ಕೆಲ್ಲ ಬಗ್ಗುವವಳಲ್ಲ.

  ಶ್ರೀಮಂತನೆಂಬ ಅಹಂ ಇರುವ ಯುವರಾಜ್

  ಶ್ರೀಮಂತನೆಂಬ ಅಹಂ ಇರುವ ಯುವರಾಜ್

  ಕಥೆಯೊಂದು ಶುರುವಾಗಬೇಕಿರುವುದು ಸ್ವಾಭಿಮಾನಿ ಹೆಣ್ಣಿನ ಮತ್ತು ಶ್ರೀಮಂತಿಕೆ ತುಂಬಿರುವ ಗಂಡಿನ ನಡುವೆ. "ನಾನು ಬಹದ್ದೂರ್ ಫ್ಯಾಮಿಲಿಯವ, ನಾನು ಯಾರಿಗೂ ಬಗ್ಗುವುದಿಲ್ಲ" ಎಂಬ ಧ್ಯೇಯ ವಾಕ್ಯವನ್ನು ಫಾಲೋ ಮಾಡುವುದು ಇದೇ ಯುವರಾಜ್ ಬಹದ್ದೂರು. ಆತನಿಗೆ ಇರುವ ಅಹಂಕಾರದ ಪರಮಾವಧಿಯನ್ನು ಈಗಾಗಲೇ ಪ್ರೋಮೋದಲ್ಲಿ ತೋರಿಸಲಾಗಿದೆ. ಸೈಕಲ್‌ನಲ್ಲಿ ಓಡಾಡುವ ನಮ್ ಹುಡುಗಿ ಕೃತಿಕಾಗೂ, ಕಾರಿನಲ್ಲಿ ಬಂದು ದರ್ಪ ತೋರುವ ಯುವರಾಜ್ ಬಹದ್ದೂರ್ ಅವರಿಗೂ ಮಾತಿಗೆ ಮಾತು ಬೆಳೆದಿದೆ. ಜಗಳವೂ ಆಗಿದೆ. ವಾರ್ನಿಂಗ್ ಕೂಡ ಕೊಟ್ಟಾಗಿದೆ.

  ಮೋನಿಕಾ ಬಂಡವಾಳ ಬಯಲು ಮಾಡುತ್ತಾಳ ಪಾರು?ಮೋನಿಕಾ ಬಂಡವಾಳ ಬಯಲು ಮಾಡುತ್ತಾಳ ಪಾರು?

  ನಡುಕೋಟೆ ಮನೆಗೆ ಭೇಟಿ ಕೊಟ್ಟಿದ್ದ ಕೃತಿ

  ನಡುಕೋಟೆ ಮನೆಗೆ ಭೇಟಿ ಕೊಟ್ಟಿದ್ದ ಕೃತಿ

  ಸ್ಟಾರ್ ಸುವರ್ಣದಲ್ಲಿ ಬರುವಂತ ಎಲ್ಲಾ ಆಕ್ಟರ್ಸ್ ಕೂಡ ಅದರ ಒಂದು ಭಾಗ. ಒಂದು ಫ್ಯಾಮಿಲಿ ಇದ್ದಂತೆ. ಹೊಸದಾಗಿ ಶುರುವಾಗುತ್ತಿರುವ ಧಾರಾವಾಹಿಯ ನಟಿ ಕೃತಿ ಅದಾಗಲೇ ನಡುಕೋಟೆ ಮನೆಗೆ ಭೇಟಿ ನೀಡಿ, ಎಲ್ಲರಿಗೂ ತನ್ನ ಪರಿಚಯ ಮಾಡಿಕೊಟ್ಟಿದ್ದಾರೆ. ಕೃತಿ ಎಷ್ಟು ಬುದ್ದಿವಂತೆ, ಎಷ್ಟು ಗಟ್ಟಿಗಿತ್ತಿ ಎಂಬುದನ್ನು ಅಲ್ಲಿಂದ ತೋರಿಸಿದ್ದಾರೆ. ವೀಣಾ ಮತ್ತು ಭಾಸ್ಕರ್ ಮದುವೆಗೆ ಹೋಗಿದ್ದ ಕೃತಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ. ಇಡೀ ಮದುವೆ ಕಾರ್ಯವನ್ನು ತಾನೊಬ್ಬಳೆ ನಿಂತು ಸಿದ್ದತೆ ಮಾಡಿದ್ದಾಳೆ. ದಾದಾ ಕಡೆಯಿಂದ ಶಬ್ಬಾಶ್ ಗಿರಿ ಪಡೆದು, ಖುಷಿ ಪಟ್ಟಿದ್ದಾಳೆ. ತನ್ನ ಫ್ಯಾಮಿಲಿಗೂ ಕೂಡ ಕೃತಿ ಅಷ್ಟೇ ಗಟ್ಟಿಯಾಗಿ ನಿಂತಿದ್ದಾಳೆ. ನವೆಂಬರ್ 28ರಿಂದ ಕೃತಿ ತನ್ನ ಫ್ಯಾಮಿಲಿಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದೆಲ್ಲಾ ಅನಾವರಣವಾಗಲಿದೆ.

  English summary
  Katheyondu Shuruvagide Serial Written Update on November 28th Episode. Here is the details about Katheyondu Shuruvagide Serial.
  Thursday, November 24, 2022, 21:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X