Katheyondu shuruvagide: ಕಡೆಗೂ ಸಾಮ್ರಾಟ್ ಹುಡುಗಿಯರ ಶೋಕಿ ಯುವರಾಜ್ ಮುಂದೆ ರಿವೀಲ್ ಆಗಿದೆ..ಮುಂದೇನು?

By ಎಸ್ ಸುಮಂತ್

ಸಾಮ್ರಾಟ್ ತಾನೊಬ್ಬನೇ ಬುದ್ದಿವಂತ ಅಂತ ಮೆರೆಯುತ್ತಿದ್ದಾನೆ. ಆದ್ರೆ, ಬುದ್ದಿವಂತ ಎಂದುಕೊಂಡವನೆ ಇನ್ಯಾವುದೋ ಮಿಸ್ಟೇಕ್ ಮಾಡಿ, ತಗಲಾಕಿಕೊಳ್ಳುವುದಕ್ಕೆ ಸಾಕ್ಷಿ ಈ ಸಾಮ್ರಾಟ್ . ತಾನು ಮಾಡಿದ ಗಲೀಜು ಕೆಲಸಗಳಿಗೆಲ್ಲಾ ಸಾಕ್ಷಿಗಳನ್ನು ಅಳಿಸಿ ಹಾಕಿದ್ದೇನೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ ಸಾಮ್ರಾಟ್. ಅದಕ್ಕೆ ಎಂಗೇಜ್ಮೆಂಟ್ ಜಾಗಕ್ಕೆ ಬಂದು ವರ್ಣಿಕಾ ರಂಪಾಟ ಮಾಡಿದರೂ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ ಈ ಸಾಮ್ರಾಟ್.

ವರ್ಣಿಕಾ ಪ್ರೀತಿ - ಪ್ರೇಮಾ ಅಂತ ನಂಬಿಕೊಂಡು ಮೋಸ ಹೋಗಿದ್ದಾಳೆ. ಬರೀ ಪ್ರೀತಿ ಮಾಡಿದ್ದಾಳೆ ಎಂಬ ಕಾರಣಕ್ಕೇ ಕೃತಿ, ವರ್ಣಿಕಾಳ ಪರ ನಿಂತಿದ್ದಳು. ಅವನು ದೊಡ್ಡ ಮೋಸಗಾರ ಅಂತ ಗೊತ್ತಾದ ಮೇಲೆ ಇದೇ ಕೃತಿ ಅವನನ್ನು ಬಿಟ್ಟು ಬಿಡು ಅಂತ ಸಲಹೆ ನೀಡಿದ್ದಳು. ಆದರೆ ಈಗ ತನ್ನ ಅಕ್ಕ ಗರ್ಭೀಣಿ ಎಂಬ ಸತ್ಯ ಗೊತ್ತಾಗಿದೆ. ಹೀಗಾಗಿ ಸಾಮ್ರಾಟ್ ಬಣ್ಣ ಬಯಲು ಮಾಡದೆ ಬಿಡಲು ಸಾಧ್ಯವೇ ಇಲ್ಲ.

Katheyondu shuruvagide Written Update on April 14th episode

ಅಮೃತಾ ಬಳಿ ಸಹಾಯ ಕೇಳಲು ಹೋದ ಕೃತಿ

ಎಂಗೇಜ್ಮೆಂಟ್ ನಡೆಯುವಾಗ ಸಾಮ್ರಾಟ್‌ನ ಮತ್ತೊಂದು ಮುಖ ಕೃತಿಯ ಮುಂದೆ ಅನಾವರಣವಾಗಿತ್ತು. ಯುವರಾಜ್ ಮದುವೆಯಲ್ಲಿ ಹೆಚ್ಚು ಸುದ್ದಿ ಮಾಡಲು ಓಡಾಡಿದ್ದ ರಿಪೋರ್ಟರ್ ಅಮೃತಾ, ಈ ಕಡೆ ಸಾಮ್ರಾಟ್ ಎಂಗೇಜ್ಮೆಂಟ್‌ನಲ್ಲಿ ಗಮನ ಸೆಳೆದಿದ್ದಳು. ಸಾಮ್ರಾಟ್‌ನನ್ನು ನಂಬಿ ಅವಳು ಮೋಸ ಹೋಗಿದ್ದಳು. ಅದು ಕೃತಿಗೆ ತಿಳಿದಿದ್ದ ಕಾರಣ, ಈಗ ಅಮೃತಾಳ ಸಹಾಯ ಸಿಕ್ಕರೆ ವರ್ಣಿಕಾಳ ಜೀವನ ಸರಿಯಾಗುತ್ತೆ ಎಂದು ಭಾವಿಸಿದ್ದಾಳೆ.

ಕೃತಿಯ ಯೋಚನೆ ಬೇರೆಯದ್ದಾಗಿತ್ತು. ಆದರೆ ಅಮೃತಾ, ಸಾಮ್ರಾಟ್ ಮಾಡಿದ ಮೋಸಕ್ಕೆ ಇಡೀ ಬಹದ್ದೂರ್ ವಂಶದ ಬಗ್ಗೆ ಬರೆಯುವ ಯೋಚನೆ ಮಾಡುತ್ತಿದ್ದಳು. ಆಗ ಕೃತಿಯೇ ಬುದ್ದಿ ಹೇಳಿದ್ದಾಳೆ. ನಿಮ್ಮ ಬಳಿ ಸಹಾಯ ಕೇಳಿಕೊಂಡು ಬಂದೆ ಎಂದು ತನ್ನ ಅಕ್ಕನಿಗಾದ ಮೋಸವನ್ನು ತಿಳಿಸಿದ್ದಾಳೆ. ಆಗ ಅದನ್ನು ಕೇಳಿ ಶಾಕ್ ಆದ ಅಮೃತಾ, "ನನಗೆ ಮಾತ್ರ ಮೋಸ ಮಾಡಿದ್ದಾನೆ ಅಂದುಕೊಂಡೆ. ಆದ್ರೆ ಸಾಕಷ್ಟು ಜನರಿಗೆ ಮೋಸ ಮಾಡಿರುವುದು ಕೇಳಿ ಶಾಕ್ ಆಗಿದೆ. ನಾನು ನಿಮಗೆ ಸಹಾಯ ಮಾಡುತ್ತೀನಿ" ಎಂದಿದ್ದಾಳೆ.

Katheyondu shuruvagide Written Update on April 14th episode

ಸಾಮ್ರಾಟ್ ಬಣ್ಣ ಬಯಲು ಮಾಡಲು ಕೃತಿ ನಿರ್ಧಾರ

ಅಮೃತಾಗೆ, ಸಾಮ್ರಾಟ್‌ನ ಎಲ್ಲಾ ವಿಚಾರಗಳು ಗೊತ್ತು. ಎಲ್ಲಿ ಹೋಗುತ್ತಾನೆ..? ಎಲ್ಲಿ ಬರುತ್ತಾನೆ..? ಹೀಗೆ ಅವನ ಫೇವರಿಟ್ ಪ್ಲೇಸ್‌ಗಳು, ಮಾಮೂಲಿ ಹೊಟೇಲ್ ಎಲ್ಲವೂ ಗೊತ್ತಿತ್ತು. ಹೀಗಾಗಿ ಕೃತಿ ಕೇಳಿದಾಗ ಅಮೃತಾ ಇಲ್ಲ ಎನ್ನಲಿಲ್ಲ. ಸಹಾಯ ಮಾಡ್ತೀನಿ ಎಂದಾಗ ಮೊದಲು ಅವಳು ಐಡಿಯಾ ಕೊಟ್ಟಿದ್ದು, ಹೊಟೇಲ್ ವಿಚಾರವನ್ನೇ. ಅವನು ಯಾವಾಗಲೂ ಸ್ಟೇ ಆಗುವ ಹೊಟೇಲ್ ಬಗ್ಗೆ ಹೇಳಿದಳು.

ಅಮೃತಾ ಹೇಳಿದ ಹೊಟೇಲ್‌ಗೆ ಹೋದರೆ ಏನಾದರೂ ಕ್ಲೂ ಸಿಗಬಹುದು ಎಂಬ ಸತ್ಯವಂತು ಗೊತ್ತಾಯಿತು. ಅದಕ್ಕಾಗಿ ಕೃತಿ, ಯುವರಾಜ್‌ನನ್ನು ಕರೆದಳು. ಅಮೃತಾ, ಕೃತಿ, ಯುವರಾಜ್ ಮೂರು ಜನ ತನ್ನ ವೇಷವನ್ನು ಮರೆಮಾಚಿ ಅಲ್ಲಿಗೆ ಹೋದರು. ಹೊಟೇಲ್ ಮಾಲೀಕರ ಬಳಿ, ನಾವೂ ಸಾಮ್ರಾಟ್ ಕಡೆಯಿಂದ ಬಂದವರು. ನಮಗೆ ಒಂದು ರೂಮ್ ಬೇಕು ಎಂದಾಗ, ಅವರಿಗೆ ಅಂತಾನೆ ಇಲ್ಲಿ ಒಂದು ರೂಮು ಇದೆ ಎಂದರು. ಬಳಿಕ ವರ್ಣಿಕಾಳ ಫೋಟೋ ತೋರಿಸಿ ಕೇಳಿದಾಗ, ಹೌದು ನಾಲ್ಕು ದಿನ ಇದೇ ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು ಎಂದು ಹೇಳಿದರು.

More from Filmibeat

English summary
Star suvarna serial Katheyondu shuruvagide Written Update on April 14th episode. Here is the details about Samrat Lock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X