Katheyondu Shuruvagide: ಕಡೆಗೂ ತನ್ನ ತಪ್ಪು ಒಪ್ಪಿಕೊಂಡ ಸಾಮ್ರಾಟ್..!

By ಎಸ್ ಸುಮಂತ್

ವರ್ಣಿಕಾಳಿಗೆ ಆರಾಮಾವಾಗಿ ಮೋಸ ಮಾಡಿ, ಮತ್ತೊಂದು ಮದುವೆಯಾಗಬೇಕೆಂದು ಸಾಮ್ರಾಟ್ ಕನಸು ಕಾಣುತ್ತಿದ್ದ. ಸಾಮ್ರಾಟ್ ನಿಶ್ಚಿತಾರ್ಥದ ವಿಚಾರ ತಿಳಿದು ವರ್ಣಿಕಾ ಬಹದ್ದೂರ್ ಮನೆಗೆ ಬಂದಿದ್ದಳು. ಮೋಸ ಮಾಡುವವನಿಗೆ ಮೋಸವನ್ನು ಮುಚ್ಚಾಕುವುದು ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ವರ್ಣಿಕಾಳ ಬಳಿ ಉಳಿಸಿದ್ದ ಎಲ್ಲಾ‌ ಸಾಕ್ಷಿಗಳು ನಕಲಿಯಾಗಿತ್ತು. ವರ್ಣಿಕಾ ತಪ್ಪನ್ನು ಪ್ರೂವ್ ಮಾಡಲು ಆಗಲಿಲ್ಲ. ವರ್ಣಿಕಾಳ ಜೊತೆಗೆ ಕೃತಿಯೂ ಬಹದ್ದೂರು ಮನೆತನ ಬಿಟ್ಟು ಹೋಗಿದ್ದಳು.

ಬಳಿಕ ಸಾಮ್ರಾಟ್‌ನಿಂದ ಮೋಸಕ್ಕೆ ಒಳಗಾಗಿದ್ದವರ ಸಹಾಯ ತೆಗೆದುಕೊಂಡ ಕೃತಿಗೆ ಎಲ್ಲಾ ಸಾಕ್ಷಿಯೂ ಸಿಕ್ಕಿತ್ತು. ಸಾಕ್ಷಿ‌ ಸಿಕ್ಕ‌ ಮೇಲೆ ಯುವರಾಜ್ ಬಿಡುವ ಮಾತೇ ಇಲ್ಲ. ಹೀಗಾಗಿ ಮನೆಗೆ ಬಂದು ಎಲ್ಲರ ಮುಂದೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಆದರೂ ಸಾಮ್ರಾಟ್ ಗೆ ಮೊಂಡು ಧೈರ್ಯ. ನಾನು ತಪ್ಪೆ ಮಾಡಿಲ್ಲ ಅಂತ ಹೇಳಿ ಕಪಾಳಕ್ಕೆ ತಿಂದಿದ್ದಾನೆ.

Katheyondu Shuruvagide Written Update on April 19th episode

ಚರಿತಾಳ ಜೊತೆಗೆ ಎಂಗೇಜ್ ಆದ ಸಾಮ್ರಾಟ್

ಚರಿತಾ ಮತ್ತು ಸಾಮ್ರಾಟ್ ಎಂಗೇಜ್‌ಮೆಂಟ್ ದಿನವೇ ವರ್ಣಿಕಾ ಬಂದು ಗಲಾಟೆ ಮಾಡಿದ್ದಳು. ಆಗ ಎಂಗೇಜ್‌ಮೆಂಟ್ ಅರ್ಧಕ್ಕೆ ನಿಂತಿತ್ತು. ಆದ್ರೆ, ಸಾಮ್ರಾಟ್‌ಗೆ ಬುದ್ದಿ ಸಿಕ್ಕಾಪಟ್ಟೆ ಇದೆ. ಯಾರನ್ನು ಹೇಗೆ ಬೇಕಾದರೂ ಮರಳು ಮಾಡಿ ಬಿಡುತ್ತಾನೆ. ವರ್ಣಿಕಾಳ ವಿಚಾರದಲ್ಲೂ ಅಷ್ಟೇ ಚರಿತಾಳಿಗೆ ಬ್ರೈನ್ ವಾಶ್ ಮಾಡಿದ್ದಾನೆ. ಅದಕ್ಕೆ ಚರಿತಾ ಎಲ್ಲವನ್ನೂ ನಂಬಿ ಈಗ ಮನೆಯವರೇ ಇಲ್ಲದೆ ಉಂಗುರ ಬದಲಾಯಿಸಿಕೊಂಡು, ಬಹದ್ದೂರ್ ಮನೆಯವರ ಎದುರು ಬಂದು ನಿಂತಿದ್ದಾರೆ.

ಯುವನ ಕೋಪಕ್ಕೆ ಬೆಸ್ತು ಬಿದ್ದ ಮನೆಯವರು

ಸಾಮ್ರಾಟ್ ಮತ್ತು ವರ್ಣಿಕಾ ಉಳಿದಿದ್ದ ಹೊಟೇಲ್‌ಗೆ ಹೋಗಿ ಎಲ್ಲಾ ರೀತಿಯ ಸಾಕ್ಷಿಗಳನ್ನು ಕಲೆಕ್ಟ್ ಮಾಡಿ ಆಗಿದೆ. ಯುವ ಆ ಎಲ್ಲಾ ಸಾಕ್ಷಿಗಳನ್ನು ಹಿಡಿದು ಮನೆಗೆ ಬಂದಿದ್ದಾನೆ. ಸಾಮ್ರಾಟ್ ಬಳಿ ಹೇಳಿದ್ರೆ, ಆತ ಮತ್ತೆ ಅದೇ ರಾಗ ತೆಗೆದು ಸಾಕ್ಷಿ ಏನು ಅಂತ ಕೇಳ್ತಿದ್ದಾನೆ‌. ಅದಕ್ಕೆ ಕೃತಿ ಮನೆಗೆ ವಾಪಾಸ್ ಬಂದಿದ್ದರ ಸಮೇತ ಸಾಕ್ಷಿಯನ್ನು ಕರೆಸಿದ್ದಾನೆ. ಸಾಕ್ಷಿ ನೋಡಿ ತಡಬಡಾಯಿಸಿದ ಸಾಮ್ರಾಟ್ ಮತ್ತೆ ತನ್ನನ್ನೇ ಪ್ರೂವ್ ಮಾಡಿಕೊಳ್ಳಲು ಹೊರಟಿದ್ದಾನೆ.

ಸಾಮ್ರಾಟ್‌ಗೆ ಹೊಡೆದ ಮನೆಯವರು

ವರ್ಣಿಕಾಳಿಗೆ ಸಾಮ್ರಾಟ್ ಮೋಸ ಮಾಡಿರುವುದು ಸತ್ಯ ಎಂದು ಯುವರಾಜ್ ಮನೆಯವರಿಗೆಲ್ಲಾ ಹೇಳಿದ್ದಾನೆ. ಆದರೂ ಸಾಮ್ರಾಟ್ ಒಪ್ಪಿಲ್ಲ. ಕಡೆಗೆ ವರ್ಣಿಕಾ, ತಾನು ಗರ್ಭಿಣಿ. ಅದಕ್ಕೆ ಸಾಮ್ರಾಟ್ ಕಾರಣ ಎಂದಾಗ, ಮನೆಯ ಹಿರಿಯನಿಗೆ ಕೋಪ ನೆತ್ತಿಗೇರಿದೆ. ಕಪಾಳಕ್ಕೊಂದು ಬಿಟ್ಟಿದ್ದಾರೆ. ಮನೆಯವರೆಲ್ಲರೂ ನಿಂಧಿಸಿದರೂ ಸಾಮ್ರಾಟ್ ಮಾತ್ರ ತನ್ನ ಹಠ ಬಿಡುತ್ತಿಲ್ಲ. ವರ್ಣಿಕಾಳನ್ನು ಮದುವೆಯಾಗಲು ಒಪ್ಪುತ್ತಿಲ್ಲ.

Katheyondu Shuruvagide Written Update on April 19th episode

ಕಡೆಗೂ ಸತ್ಯ ಒಪ್ಪಿಕೊಂಡ ಸಾಮ್ರಾಟ್

ವರ್ಣಿಕಾಗೆ ಸಾಮ್ರಾಟ್ ನನ್ನು ಬಗ್ಗಿಸುವುದು ಹೇಗೆ ಎಂಬುದು ಚೆನ್ನಾಗಿಯೇ ಗೊತ್ತು. ಅದಕ್ಕೆ ನಾನೀಗ ಪೊಲೀಸ್ ಠಾಣೆಗೆ ಹೋಗುತ್ತೇನೆ. ಆಗ ನಿನ್ನ ಸ್ಥಿತಿ ಏನಾಗಬಹುದು ಎಂದು ಊಹೆ ಮಾಡಿಕೋ ಎಂದಿದ್ದಾಳೆ. ತಕ್ಷಣ ಸಾಮ್ರಾಟ್‌ನ ಮಾವ ಎಚ್ಚರಿಸಿದ್ದಾನೆ. ಬೀಸೋ ದೊಣ್ಣೆಯಿಂದ ಮೊದಲು ತಪ್ಪಿಸಿಕೋ. ತಪ್ಪನ್ನು ಒಪ್ಪಿಕೊಂಡು ಬಿಡು ಅಂತ. ಸಾಮ್ರಾಟ್‌ಗೂ ಪೊಲೀಸ್ ಠಾಣೆ ಎಂದರೆ ಭಯ. ಅದಕ್ಕೆ ತನ್ನದೇ ತಪ್ಪು. ನೀವೇಳಿದಂತೆ ಕೇಳುತ್ತೇನೆ ಎಂದು ಒಪ್ಪಿಕೊಂಡಿದ್ದಾನೆ. ವರ್ಣಿಕಾ, ಕೃತಿ ಸೇರಿದಂತೆ ಮನೆಯವರೆಲ್ಲಾ ಖುಷಿಯಾಗಿದ್ದಾರೆ. ಆದರೆ ಚರಿತಾ ಸ್ಥಿತಿ ಪಾಪ ಎನಿಸುತ್ತಿದೆ.

More from Filmibeat

English summary
Star suvarna serial Katheyondu shuruvagide Written Update on April 19th episode. Here is the details about Samrat Lock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X