Katheyondu Shuruvagide: ಬಹದ್ದೂರ್ ಮನೆ ಸೇರಲು ವರ್ಣಿಕಾ ಗರ್ಭಿಣಿ ಅಂತ ಸುಳ್ಳು ಹೇಳಿದ್ಲಾ?
ಸಾಮ್ರಾಟ್ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾದಾಗ ವರ್ಣಿಕಾಗೆ ಶಾಕ್ ಆಗಿದೆ. ಎಷ್ಟೇ ಬೇಡಿಕೊಂಡರು ಸಾಮ್ರಾಟ್ ಒಪ್ಪಿಕೊಳ್ಳುತ್ತಿಲ್ಲ. ವರ್ಣೀಕಾಳನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾನೆ. ಇದನ್ನು ಕಂಡು ವರ್ಣಿಕಾ ಕೆಂಡಕಾರಿದ್ದಾಳೆ. ಹೇಗಾದರೂ ಮಾಡಿ ಸಾಮ್ರಾಟ್ ನನ್ನು ಪಡೆಯುವುದಕ್ಕೆ ಹಠ ಮಾಡಿದ್ದಾಳೆ. ಅದಕ್ಕೆಂದೆ ಹೊಸ ಸುಳ್ಳು ಹೇಳಿದ್ದಾಳೆ.
ಚರಿತಾಳನ್ನ ನೋಡಿ ಸಾಮ್ರಾಟ್ ಇಂಪ್ರೆಸ್ ಆಗಿದ್ದಾನೆ. ಈಗ ಸ್ಟಾಂಡರ್ಡ್ ಆಗಿ ಮ್ಯಾಚ್ ಆಗ್ತಾಳೆ ಅಂತ ವರ್ಣಿಕಾಳನ್ನ ಬಿಟ್ಟು, ಚರಿತಾಳನ್ನು ಮದುವೆಯಾಗುವುದಕ್ಕೆ ಹೊರಟಿದ್ದಾನೆ. ಕೃತಿಗೆ, ಸಾಮ್ರಾಟ್ ನ ಎಲ್ಲಾ ಮೋಸ ಬಟಾ ಬಯಲಾಗಿದೆ. ಕೃತಿ ಹಿಡಿದ ಹಠವನ್ನು ಬಿಡುವುದಿಲ್ಲ. ಮೋಸ ಮಾಡಿದವರನ್ನು ಸುಮ್ಮನೆ. ಅದಕ್ಕೆಂದೆ ಕೃತಿ ಬಹದ್ದೂರ್ ಮನೆಯವರ ಎದುರು ಸಾಮ್ರಾಟ್ ಬಣ್ಣ ಬಯಲು ಮಾಡಿದ್ದಾಳೆ.

ಬಹದ್ದೂರ್ ಸೊಸೆಯಾಗಲಿದ್ದಾಳೆ ವರ್ಣಿಕಾ?
ಬಹದ್ದೂರ್ ಮನೆಯಲ್ಲಿ ಮರ್ಯಾದೆಗೆ ಬಹಳ ಅಂಜುತ್ತಾರೆ. ವರ್ಣಿಕಾ, ಸಾಮ್ರಾಟ್‌ಗೆ ತಪ್ಪನ್ನು ಪ್ರೂವ್ ಮಾಡುವಲ್ಲಿ ಸೋತಿದ್ದಳು. ಯಾವುದೇ ಸಾಕ್ಷಿಗಳು ಸಿಕ್ಕಿರಲಿಲ್ಲ. ಹೀಗಾಗಿ ಅವಳನ್ನು ಹೊರಗೆ ಹಾಕಲಾಗಿತ್ತು. ಆದ್ರೆ, ವರ್ಣಿಕಾ ಗರ್ಭಿಣಿ ಅಂತ ಗೊತ್ತಾದ ಮೇಲೆ ಸಾಮ್ರಾಟ್‌ಗೆ ಮನೆಯವರೆಲ್ಲ ಕ್ಲಾಸ್ ತೆಗೆದುಕೊಂಡ್ರು. ಈಗ ವರ್ಣಿಕಾಳನ್ನು ಸೊಸೆ ಮಾಡಿಕೊಳ್ಳಲು ಎಲ್ಲಾ ತಯಾರಿ ನಡೆಸಿದ್ದಾರೆ.
ಬಹದ್ದೂರ್ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆ. ಮಾತಂಗಿ ಇಲ್ಲದ ವೇಳೆ ಮಗನ ಘನಂದಾರಿ ಕೆಲಸ ಪ್ರೂವ್ ಆಗಿದೆ. ಹೀಗಾಗಿ ಅವಳಿಗೆ ಏನು ಗೊತ್ತಿಲ್ಲ. ಅದಕ್ಕೆ ಬಹದ್ದೂರ್ ಮನೆಯಲ್ಲಿ ಮದುವೆ ಮಾತುಕತೆ ನಡೆಯುತ್ತಿರುವುದನ್ನು ತಡೆದಿದ್ದಾಳೆ. ಯಾವುದೇ ಕಾರಣಕ್ಕೂ ಅವಳು ನಮ್ಮ ಮನೆ ಸೊಸೆಯಾಗೋದು ಬೇಡ ಎಂದಿದ್ದಾಳೆ. ಮೊದಲೇ ವರ್ಣಿಕಾ ಫ್ಯಾಮಿಲಿ ಕಂಡರೆ ಮಾತಂಗಿಗೆ ಇಷ್ಟವಿಲ್ಲ. ಕೃತಿಯನ್ನೇ ಹೊರಗೆ ಕಳುಹಿಸಲು ಯೋಚನೆ ಮಾಡುತ್ತಿದ್ದಾಳೆ. ಹೀಗಿರುವಾಗ ವರ್ಣಿಕಾಳನ್ನ ಸೊಸೆ ಮಾಡಿಕೊಳ್ಳಲು ಸಾಧ್ಯವಾ..?
ವರ್ಣಿಕಾ ಸುಳ್ಳು ಹೇಳಿಬಿಟ್ಲಾ..?
ಯುವರಾಜ್‌ಗೆ ತನ್ನ ಅಕ್ಕ ಏನು ಎಂಬುದನ್ನು ಕೃತಿ ಪ್ರೂವ್ ಮಾಡಿ ಆಗಿದೆ. ಸಾಮ್ರಾಟ್ ಮೋಸ ಮಾಡಿದ್ದು, ಯುವರಾಜ್‌ಗೂ ಗೊತ್ತಾಯ್ತು. ಇದೇ ಕೃತಿಗೆ ಬೇಕಾಗಿದ್ದು. ಅಂದುಕೊಂಡಿದ್ದೆಲ್ಲವನ್ನು ಮಾಡಿ ಆಯ್ತು. ಈಗ ಕೃತಿ ಬಹದ್ದೂರ್ ಕುಟುಂಬದಿಂದ ಹೊರಡಲು ಸಿದ್ಧಳಾಗಿದ್ದಳು. ಆಗ ತಡೆದ ಯುವರಾಜ್, ಹೊಗಬೇಡ ಎಂದಾಗ. ನನ್ನ ಸ್ಥಾನ ಏನು ಅಂತ ಕೇಳಿದ್ದಾಳೆ. ಆಗ ಯುವರಾಜ್, ನೀನು ಈ ಮನೆಯ ಸೊಸೆ ಎಂದು ಅಧಿಕೃತವಾಗಿ ಸ್ಥಾನಮಾನ ನೀಡಿದ್ದಾನೆ.

ಈ ಕಡೆ ವರ್ಣಿಕಾ ಆಡುತ್ತಿರುವ ನಾಟಕ ಕೃತಿ ಮುಂದೆ ಬಯಲಾಗಿದೆ. ಸಾಮ್ರಾಟ್‌ನನ್ನು ಮದುವೆಯಾಗಲೇ ಬೇಕೆಂದು ಹಠಕ್ಕೆ ಬಿದ್ದಿರುವ ವರ್ಣಿಕಾ ದೊಡ್ಡ ಸುಳ್ಳನ್ನೇ ಹೇಳಿದ್ದಾಳೆ. ತಾನು ಪ್ರಗ್ನೆಂಟ್ ಎಂದು ಹೇಳಿಕೊಳ್ಳದೆ ಹೋಗಿದ್ದರೆ ಬಹದ್ದೂರ್ ಮನೆಯಲ್ಲಿ ಯಾರೂ ಕೂಡ ಮದುವೆಗೆ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಈಗ ಎಲ್ಲರೂ ಒಪ್ಪಿಕೊಂಡಿದ್ದಾರೆ. ಕೃತಿ ಕೂಡ ತನ್ನ ಅಕ್ಕನ ಜೀವನ ಹಾಳಾಗಬಾರದು ಎಂದು ಕಷ್ಟ ಪಟ್ಟಿದ್ದಾಳೆ. ಅದಕ್ಕೆಂದೇ ಎಲ್ಲಾ ಸಾಕ್ಷಿಗಳನ್ನು ಕಲೆಕ್ಟ್ ಮಾಡು, ಬಹದ್ದೂರ್ ಮನೆಯ ಮುಂದೆ ಇಟ್ಟಿದ್ದಾಳೆ. ಅಷ್ಟು ಜೋರಾಗಿ ನಿಂತಿರುವ ಕೃತಿಗೆ ತಲೆ ತಗ್ಗಿಸುವಂತ ಸಮಯವೂ ಬರುವ ಸಾಧ್ಯತೆ ಇದೆ. ಯಾಕಂದ್ರೆ, ವರ್ಣಿಕಾ ತಾನೂ ಪ್ರೆಗ್ನೆಂಟ್ ಎಂಬುದನ್ನು ಸುಳ್ಳು ಹೇಳಿದ್ದಾಳೆ. ಸುಳ್ಳು ಸರ್ಟಿಫಿಕೇಟ್ ಕೊಟ್ಟು ಮೋಸ ಮಾಡಿದ್ದಾಳೆ ಎಂಬುದು ಕೃತಿ ಮುಂದೆಯೇ ಬಯಲಾಗಿದೆ.


Click it and Unblock the Notifications











