Katheyondu Shuruvagide: ಸಾಮ್ರಾಟ್ ಎದುರು ಬಂದ್ಲು ವರ್ಣಿಕಾ.. ಯುವರಾಜ್ ಒಪ್ಪುತ್ತಾನಾ ಕೃತಿ ಮಾತು?

By ಎಸ್ ಸುಮಂತ್

ಸಾಮ್ರಾಟ್‌ಗೆ ಹುಡುಗಿಯರಿಗೆ ಮೋಸ ಮಾಡುವುದೆಂದರೆ ಒಂಥರ ರೋಟಿನ್ ವರ್ಕ್ ಅಂತಾನೇ ಅರ್ಥ. ಸಾಮ್ರಾಟ್ ಹುಡುಗಿಯರ ಜೀವನದಲ್ಲಿ ಆಟವಾಡ್ತಾ ಇದ್ದಾನೆ ಅನ್ನೋದು ಅವರ ಅಮ್ಮನಿಗೂ ಗೊತ್ತಿರುವ ವಿಚಾರವೇ. ಆದರೆ, ಅದನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ ಮಾತಂಗಿ. ಮಗನ ಹುಡುಗಿಯರ ಸಾಧನೆಗೆ ಹೆಮ್ಮೆ ಪಡುತ್ತಾಳೆ. ಆದರೆ ಅಕ್ಕನಿಗೆ ಅನ್ಯಾಯವಾಗುವುದನ್ನು ಕೃತಿ ನೋಡುತ್ತಾ ಕೂರುವುದಿಲ್ಲ. ಅದಕ್ಕೊಂದು ನ್ಯಾಯ ಕೊಡಿಸಲು ಹೊರಟಿದ್ದಾಳೆ. ತಮ್ಮನ ಮೋಸವನ್ನು ಹೇಳಿದರೆ ಯುವರಾಜ್‌ಗೆ ನಂಬಿಕೆಯೇ ಬರುತ್ತಿಲ್ಲ. ಸಾಕ್ಷಿ ಕೇಳುತ್ತಿದ್ದಾನೆ.

ಸಾಮ್ರಾಟ್ ಮೋಸವನ್ನು ಬಯಲಿಗೆಳೆಯಬೇಕಾದ ಅನಿವಾರ್ಯತೆ ಈಗ ಕೃತಿಯದ್ದು. ಯಾಕಂದ್ರೆ, ಒಂದು ಕಡೆ ಕೃತಿ ನೆಲೆ, ಮತ್ತೊಂದು ಕಡೆ ಅಕ್ಕನ ಬದುಕು ಕೂಡ ಸಾಮ್ರಾಟ್ ಮುಖವಾಡದಲ್ಲಿಯೇ ಅಡಗಿದೆ. ಅದಕ್ಕೆಂದೆ ಕೃತಿ ಹರಸಾಹಸ ಪಡುತ್ತಿದ್ದರೆ, ಆ ಕಡೆ ಪುಷ್ಪ, ಹೆದರಿಸಿ, ಬೆದರಿಸಿ ಮದುವೆ ಮಾಡಲು ಹೊರಟಿದ್ದಾಳೆ.

Katheyondu Shuruvagide Written Update on April 7th episode

ರಿಪೋರ್ಟರ್‌ಗೂ ಮೋಸ ಮಾಡಿದ ಸಾಮ್ರಾಟ್

ಸಾಮ್ರಾಟ್ ತನ್ನ ಕೆಲಸ ಆಗಬೇಕೆಂದರೆ ಯಾರಿಗೆ, ಹೇಗೆ ಬೇಕಾದರೂ ಮೋಸ ಮಾಡುತ್ತಾನೆ. ಮೋಸದ ಕಲೆಯನ್ನು ಬಹಳ ಚೆನ್ನಾಗಿಯೇ ತಿಳಿದಿದ್ದಾನೆ. ಸಾಮ್ರಾಟ್‌ನಿಂದ ಮೋಸ ಹೋದವರು ಒಬ್ಬಿಬ್ಬರಲ್ಲ. ಈಗ ಎಂಗೇಜ್ಮೆಂಟ್ ಕವರ್ ಮಾಡಲು ಬಂದಿರುವ ರಿಪೋರ್ಟರ್ ಕೂಡ ಸಾಮ್ರಾಟ್ ಮೋಸದ ಬಲೆಗೆ ಸಿಕ್ಕಿದ್ದಾಳೆ. ಬೈಟ್ ತೆಗೆದುಕೊಳ್ಳುವಾಗಲೂ, ಇದು ಬಲವಂತದ ನಿಶ್ಚಿತಾರ್ಥ ಅಂದ್ರೆ, ಇಲ್ಲ ಎಂದು ಅವಳ ಮನಸ್ಸನ್ನು ಘಾಸಿ ಮಾಡಿದ್ದಾನೆ. ಬಳಿಕ ಅಸಮಾಧಾನಗೊಂಡಿದ್ದ ರಿಪೋರ್ಟರ್‌ನ ಸಾಮ್ರಾಟ್ ಸಮಾಧಾನ ಮಾಡಲು ಬಂದಿದ್ದಾನೆ. ಮತ್ತೆ ನಿನ್ನ ಕೈ ಬಿಡಲ್ಲ ಅಂತ ಯಾಮಾರಿಸಿದ್ದಾನೆ. ಇದೆಲ್ಲವೂ ಕೃತಿ ಕಣ್ಣಿಗೆ ಬಿದ್ದಿದೆ.

ಚರಿತಾ ಹಾಗೂ ಸಾಮ್ರಾಟ್ ಚಿಕ್ಕ ವಯಸ್ಸಿನಿಂದಾನೂ ಫ್ರೆಂಡ್ಸ್. ಈಗ ಮದುವೆಯಾಗುವುದಕ್ಕೆ ಹೊರಟಿದ್ದಾರೆ. ಸಾಮ್ರಾಟ್ ಕೂಡ ಫುಲ್ ಎಕ್ಸೈಟ್ ಆಗಿದ್ದಾನೆ. ಚರಿತಾಗೆ ಕಲರ್ ಕಲರ್ ಕಾಗೆ ಹಾರಿಸುತ್ತಿದ್ದಾನೆ. ನೀನೆ ಬ್ಯೂಟಿಫುಲ್, ನೀನಂದ್ರೆ ಇಷ್ಟ ಅದು ಇದು ಅಂತ ಬಣ್ಣ ಬಣ್ಣದ ಒಕುಳಿ ಆಡುತ್ತಿದ್ದಾನೆ. ಇದು ಚರಿತಾಗೆ ಗೊತ್ತಾಗುತ್ತಿಲ್ಲ.

Katheyondu Shuruvagide Written Update on April 7th episode

ಕಡೆಗೂ ಬಹದ್ದೂರ್ ಮನೆಗೆ ಬಂದ

ಸಾಮ್ರಾಟ್ ಮೋಸ ಬಯಲು ಮಾಡುವುದಕ್ಕೆ ಯುವರಾಜ್ ಸಮಯ ಕೊಟ್ಟಿದ್ದಾನೆ. ಅದು ಸಾಕ್ಷಿ ಸಮೇತ. ಅದಕ್ಕೆ ವರ್ಣಿಕಾ ನಿಶ್ಚಿತಾರ್ಥದ ಜಾಗಕ್ಕೆ ಬರಲೇಬೇಕಿದೆ. ಮನೆಯಲ್ಲಿ ಆ ಪರಿಸ್ಥಿತಿ ಇಲ್ಲ. ಸಹನಾಗೆ ಹೇಳಿದರೆ ಯಾವುದು ಅಸಾಧ್ಯವಲ್ಲ. ಕೃತಿ, ಸಹನಾಳ ಸಹಾಯವನ್ನೇ ತೆಗೆದುಕೊಂಡಿದ್ದಾಳೆ. ಸಹನಾ ಕೂಡ ರಿಸ್ಕ್ ತೆಗೆದುಕೊಂಡು ವರ್ಣಿಕಾಳನ್ನು ಬಹದ್ದೂರ್ ಮನೆಗೆ ಕರೆ ತಂದಿದ್ದಾಳೆ. ಬಹದ್ದೂರ್ ಮನೆಯಲ್ಲಿ ಸಾಮ್ರಾಟ್ ಹೊಸ ಅವತಾರಗಳನ್ನು ನೋಡಿ ತಲೆ ತಿರುಗಿ ಬಿದ್ದಿದ್ದಾಳೆ. ತನಗೆ ಅಷ್ಟೆಲ್ಲಾ ಪ್ರಾಮೀಸ್ ಮಾಡಿದ ಸಾಮ್ರಾಟ್ ಇವನೇನಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾಳೆ.

ಕೃತಿಗೆ ಭರವಸೆಯೇ ಕಡಿಮೆಯಾಗಿತ್ತು. ಅಕ್ಕನ ಜೀವನದ ಪ್ರಶ್ನೆ ಎದುರಾಗಿತ್ತು. ಅದರದ್ದೇ ಯೋಚನೆ ಮಾಡಿಕೊಂಡು ಬರುವಾಗಲೇ ಅಕ್ಕ ಕಣ್ಣಿಗೆ ಬಿದ್ದಿದ್ದಾಳೆ. ತಕ್ಷಣ ಒಂದು ಧೈರ್ಯವೂ ಸಿಕ್ಕಿದೆ. ವರ್ಣಿಕಾ ಕೂಡ ನಾನು ಮೋಸ ಹೋಗಿಬಿಟ್ಟೆ ಅಂತ ಕೃತಿಯನ್ನು ತಬ್ಬಿಕೊಂಡು ಅತ್ತಿದ್ದಾಳೆ. ಕಥೆ ಮುಗಿದಿಲ್ಲ, ಈಗ ಶುರುವಾಗುತ್ತೆ ಎಂದು ಕೃತಿ ಧೈರ್ಯ ತುಂಬಿದ್ದಾಳೆ. ಆ ಕಡೆ ವೇದಿಕೆ ಮೇಲೆ ಮಾತಂಗಿಯ ಸಂತೋಷಕ್ಕೆ ಲಗಾಮೇ ಇರಲಿಲ್ಲ. ಬಾವಿ ಸೊಸೆಗೆ ನೆಕ್ಲೇಸ್ ಕೊಟ್ಟಾಯ್ತು, ಈಗ ರಿಂಗ್ ತೊಡಿಸುವ ಕಾರ್ಯಕ್ರಮ. ಅಷ್ಟರಲ್ಲಿ ಕೃತಿ ಜೋರಾಗಿಯೇ ಕಿರುಚಿದ್ದಾಳೆ. ನಿಲ್ಲಿಸಿ ಎಂದು.

More from Filmibeat

English summary
Star Suvarna serial Katheyondu Shuruvagide Written Update on April 7th episode. Here is the details about Varnika entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X