For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಜತೆ ನಿರೂಪಕಿಯಾಗಲು ನಾನು ಸಿದ್ಧ ಎಂದ ಕತ್ರೀನಾ, ಆದರೆ...

  By ಜೇಮ್ಸ್ ಮಾರ್ಟಿನ್
  |

  ಬಹು ಜನಪ್ರಿಯ, ಬಹು ವಿವಾದಿತ ರಿಯಾಲಿಟಿ ಶೋ ಬಿಗ್ ಬಾಸ್ 12ರ ಆರಂಭಕ್ಕೆ ಸಕಲ ಸಿದ್ಧತೆಯಾಗಿದೆ. ನಟ ಸಲ್ಮಾನ್ ಖಾನ್ ಅವರು ನಿನ್ನೆಯಿನ್ನೂ ಗೋವಾದಲ್ಲಿ ಭರ್ಜರಿಯಾಗಿ ಬಿಗ್ ಬಾಸ್ ಶೋಗೆ ಚಾಲನೆ ನೀಡಿದ್ದಾರೆ. ಆರನೇ ಬಾರಿಗೆ ಈ ಶೋನ ನಿರೂಪಣೆ ಮಾಡುತ್ತಿರುವ ಸಲ್ಮಾನ್ ಗೆ ಜೋಡಿಯಾಗಿ ಕತ್ರೀನಾ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

  ಸಲ್ಮಾನ್ ಅವರು ಬಿಗ್ ಬಾಸ್ ಶೋ ಬಗ್ಗೆ ಮಾತನಾಡಿ, ಈ ಬಾರಿ ನಿರೂಪಣೆ ಮಾಡಲು ಶಾರುಖ್ ಖಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಭುಜದ ನೋವಿನಿಂದ ಬಳಲುತ್ತಿರುವ ಕಿಂಗ್ ಖಾನ್ ಅವರು ವಿಶ್ರಾಂತಿ ಬಯಸಿದ್ದರಿಂದ ನಾನು ಮತ್ತೆ ಹೋಸ್ಟ್ ಆಗಿ ನಿಮ್ಮ ಮುಂದಿದ್ದೇನೆ ಎಂದರು.

  'ಬಿಗ್ ಬಾಸ್'ಗೆ ಬರಲು ಈ ನಟಿಗೆ ಇಷ್ಟೊಂದು ದುಡ್ಡು ಕೊಡಬೇಕಾ.?'ಬಿಗ್ ಬಾಸ್'ಗೆ ಬರಲು ಈ ನಟಿಗೆ ಇಷ್ಟೊಂದು ದುಡ್ಡು ಕೊಡಬೇಕಾ.?

  ಈ ಬಾರಿಯ ಥೀಮ್ 'ವಿಚಿತ್ರ ಜೋಡಿ' ಗೆ ನಿಮ್ಮ ಆಯ್ಕೆ ತಿಳಿಸಿದರೆ ಎಂದರೆ, ಸಂಜಯ್ ದತ್ ಹಾಗೂ ಶಾರುಖ್ ಖಾನ್ ಎಂದು ತಕ್ಷಣವೇ ಹೇಳಿದರು. ಕತ್ರೀನಾ ಕೈಫ್ ಕೋ ಹೋಸ್ಟ್ ಆಗುವುದರ ಬಗ್ಗೆ ಸಲ್ಮಾನ್ ಏನು ಹೇಳಿದರು ಮುಂದೆ ಓದಿ...

  ಕತ್ರೀನಾ ನಿಮ್ಮ ಕೋ ಹೋಸ್ಟ್ ಅಂತೆ ಹೌದಾ?

  ಕತ್ರೀನಾ ನಿಮ್ಮ ಕೋ ಹೋಸ್ಟ್ ಅಂತೆ ಹೌದಾ?

  ಕತ್ರೀನಾ ನಿಮ್ಮ ಕೋ ಹೋಸ್ಟ್ ಅಂತೆ ಹೌದಾ? ಎಂದು ಸಲ್ಮಾನ್ ಅವರನ್ನು ಕೇಳಿದ್ದಕ್ಕೆ ತಮಾಷೆಯಾಗಿ ಉತ್ತರಿಸಿದ ಸಲ್ಮಾನ್, ಬಹುಶಃ ಹೀಗೊಂದು ಗಾಳಿ ಸುದ್ದಿಯನ್ನು ಖುದ್ದು ಕತ್ರೀನಾಳೇ ಎಲ್ಲೆಡೆ ಹರಿದಾಡುವಂತೆ ಮಾಡಿರಬೇಕು ಎಂದರು.

  ಈ ಬಾರಿ ಜೋಡಿ ಥೀಮ್ ಇದೆಯಂತೆ ಹೌದಾ ಎಂದು ಕೇಳಿದ್ಳು. ಹಾಗಾದರೆ ನಾನು ಬರ್ತೀನಿ ಅಂದಳು, ನಾನು ಯಾಕೆ ಎಂದು ಪ್ರಶ್ನಿಸಿದೆ. ನಿನ್ನ ಜೋಡಿಯಾಗಿ ಕಾಲೆಳೆಯುವೆ ಎಂದಳು. ಅದ್ಸರಿ ನಿಂಗೆ ಎಷ್ಟು ಕೊಡ್ತಾರೆ? ಎಂದು ನನ್ನನ್ನು ಕೇಳಿದಳು. ಯಾಕೆ ಅಂದೆ, ನಿಂಗೆ ಎಷ್ಟು ಪೇ ಮಾಡ್ತಾರೋ ನಂಗೂ ಅಷ್ಟೇ ಮಾಡಿದ್ರೆ ಮಾತ್ರ ನಾನು ಹೋಸ್ಟ್ ಆಗ್ತೀನಿ ಅಂದಳು ಎನ್ನುತ್ತಾ ಕತ್ರೀನಾ ಜತೆಗಿನ ಸಂಭಾಷಣೆಯನ್ನು ಸಲ್ಮಾನ್ ಬಿಚ್ಚಿಟ್ಟರು.

  ಸೆಪ್ಟೆಂಬರ್ 16 ರಿಂದ 'ಬಿಗ್ ಬಾಸ್-12' ಶುರು: ವಿಚಿತ್ರ ಜೋಡಿ ನೋಡಲು ರೆಡಿ ಆಗಿ..ಸೆಪ್ಟೆಂಬರ್ 16 ರಿಂದ 'ಬಿಗ್ ಬಾಸ್-12' ಶುರು: ವಿಚಿತ್ರ ಜೋಡಿ ನೋಡಲು ರೆಡಿ ಆಗಿ..

  ಅವಧಿಗೆ ಮುನ್ನ ಬಿಗ್ ಬಾಸ್ ಶೋ ಲಾಂಚ್

  ಅವಧಿಗೆ ಮುನ್ನ ಬಿಗ್ ಬಾಸ್ ಶೋ ಲಾಂಚ್

  ಅಕ್ಟೋಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಆರಂಭವಾಗುವ ಬಿಗ್ ಬಾಸ್ ಶೋ, ಈ ಬಾರಿ ಅವಧಿಗೆ ಮುನ್ನ ಆರಂಭವಾಗುತ್ತಿದೆ. ಸೆಪ್ಟೆಂಬರ್ 16,2018ರಂದು ಪ್ರೀಮಿಯರ್ ಶೋ ಆರಂಭವಾಗಲಿದ್ದು, ಕಲರ್ಸ್ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 10.30ಕ್ಕೆ ಹಾಗೂ ಶನಿವಾರ ಮತ್ತು ಭಾನುವಾರದಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

  ಹಿಂದಿ 'ಬಿಗ್ ಬಾಸ್'ನಲ್ಲಿ 'ವಯಸ್ಕರ' ಚಿತ್ರದ ನಟ.! ಒಂದು ಕಂಡಿಷನ್ಹಿಂದಿ 'ಬಿಗ್ ಬಾಸ್'ನಲ್ಲಿ 'ವಯಸ್ಕರ' ಚಿತ್ರದ ನಟ.! ಒಂದು ಕಂಡಿಷನ್

  ಕುತೂಹಲ ಮೂಡಿಸಿರುವ ಜೋಡಿಗಳು

  ಕುತೂಹಲ ಮೂಡಿಸಿರುವ ಜೋಡಿಗಳು

  ಸೆಪ್ಟೆಂಬರ್ 16ಕ್ಕೆ ಬಿಗ್ ಬಾಸ್ ಆರಂಭವಾಗಲಿದ್ದು. ಸ್ಪರ್ಧಿಗಳ ಬಗ್ಗೆ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ. ಕಾಮಿಡಿಯನ್ ಭಾರ್ತಿ ಸಿಂಗ್ ಹಾಗೂ ಹರ್ಷ್ ಲಿಂಬಚಿಯಾ ಅವರನ್ನು ಮೊದಲ ಜೋಡಿ ಎಂದು ಪರಿಚಯಿಸಲಾಗಿದೆ. ವಿಭಾ ಹಾಗೂ ಪುರು ಚಿಬ್ಬಾರ್ ಅವರ ಹೆಸರು ಓಡಾಡುತ್ತಿದೆ. ಟೀನಾ ದತ್ತಾ ಹಾಗೂ ಶ್ರೀಶಾಂತ್ ಗೂ ಆಹ್ವಾನ ಸಿಕ್ಕಿದೆ. ಆದರೆ, ಯಾರ ಹೆಸರು ಅಧಿಕೃತವಾಗಿ ಹೊರ ಬಿದ್ದಿಲ್ಲ.

  ಸೆಲೆಬ್ರಿಟಿಗಳಿಗೆ ಅವಕಾಶ

  ಸೆಲೆಬ್ರಿಟಿಗಳಿಗೆ ಅವಕಾಶ

  ದೀಪಿಕಾ ಕಕ್ಕರ್, ಕರಣ್ ವೀರ್ ಬೊಹ್ರಾ ಅವರು ತಮ್ಮ ಜೋಡಿಗಳಾದ ಶೋಯೆಬ್ ಇಬ್ರಾಹಿಂ, ತೀಜಯ್ ಸಿಧು ಇಲ್ಲದೆ ಬಿಗ್ ಬಾಸ್ ಮನೆ ಪ್ರವೇಶಿಸುವ ಸಾಧ್ಯತೆಯಿದೆ. ಅಲ್ಲದೆ, ಗುರ್ ಮೀತ್ ಚೌಧರಿ, ದೆಬಿನಾ ಬ್ಯಾನರ್ಜಿ, ಸುಮೇರ್ ಪರ್ಸಿಚಾ, ಶಾಲೀನ್ ಬನೋಟ್, ಸ್ಕಾರ್ಲೆಟ್ ರೋಸ್ ಹೀಗೆ ಅನೇಕರ ಹೆಸರುಗಳು ಕೇಳಿ ಬಂದಿವೆ.

  English summary
  The much-awaited controversial reality show Bigg Boss 12 has been hitting the headlines since a long time. Salman Khan launched the show yesterday (September 4, 2018) in Goa. The actor, who is returning as the host of the show for the sixth time, revealed some interesting and quirky trivia!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X