KBC ಸೀಸನ್ 12: ಒಂದು ಕೋಟಿ ರೂ. ಗೆದ್ದ ಮೊದಲ ಸ್ಪರ್ಧಿ, 7 ಕೋಟಿಯ ಪ್ರಶ್ನೆಗೆ ಉತ್ತರಿಸುತ್ತಾರಾ?
ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ ಪತಿ 12' ಯಶಸ್ವಿಯಾಗಿ ನಡೆಯುತ್ತಿದೆ. ಸೀಸನ್ 12ರಲ್ಲಿ ದೆಹಲಿ ಮೂಲಕ ಸ್ಪರ್ಧಿಯೊಬ್ಬರು ಒಂದು ಕೋಟಿ ರೂಪಾಯಿ ಗೆದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸೀಸನ್ 12ರಲ್ಲಿ ಇದುವರೆಗೂ ಯಾರು ಒಂದು ಕೋಟಿ ಗೆದ್ದಿರಲಿಲ್ಲ. ಆದರೀಗ ಮೊದಲ ಸ್ಪರ್ಧಿ 1 ಕೋಟಿ ರೂ. ಬಾಚಿಕೊಂಡಿದ್ದಾರೆ.
ದೆಹಲಿ ಮೂಲದ ನಾಜಿಯಾ ನಸೀಮ್ 1 ಕೋಟಿ ರೂ. ಗೆದ್ದಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಬುದ್ಧಿವಂತಿಕೆಯಿಂದ ಉತ್ತರ ಕೊಡುವ ಮೂಲಕ ಕೋಟಿ ಒಡತಿಯಾಗಿದ್ದಾರೆ. ಈ ಎಪಿಸೋಡ್ ನ ಪ್ರೋಮೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ದೆಹಲಿ ಮೂಲದ ಸಂವಹನ ವ್ಯಸ್ಥಾಪಕಿ ನಜಿಯಾ ನಸೀಮ್ ಹಾಟ್ ಸೀಟಿನಲ್ಲಿ ಕುಳಿತು ಉತ್ತರ ನೀಡುತ್ತಿರುವ ರೀತಿಗೆ ಅಮಿತಾಬ್ ಫಿದಾ ಆಗಿದ್ದಾರೆ.
ಈ ಎಪಿಸೋಡ್ ನವೆಂಬರ್ 1ರಂದು ಪ್ರಸಾರವಾಗಲಿದೆ. ಸದ್ಯ 1 ಕೋಟಿ ರೂಪಾಯಿ ಗೆದ್ದಿರುವ ನಾಜಿಯಾಗೆ ಅಮಿತಾಬಾ 16ನೇ ಪ್ರಶ್ನೆಯ ಕೇಳಲು ಮುಂದಾಗಿದ್ದಾರೆ. 7 ಕೋಟಿ ರೂಪಾಯಿಯ 16ನೇ ಪ್ರಶ್ನೆ ಎಂದು ಬಿಗ್ ಬಿ ಪ್ರೋಮೋದಲ್ಲಿ ಹೇಳಿದ್ದಾರೆ. ನಾಜಿಯಾ 16ನೇ ಪ್ರಶ್ನೆಯ ಸವಾಲನ್ನು ಸ್ವೀಕರಿಸಿ, ಉತ್ತರ ನೀಡಿ 7 ಕೋಟಿ ಗೆಲ್ಲುತ್ತಾರಾ ಅಥವಾ ಆಟ ಕ್ವಿಟ್ ಮಾಡ್ತಾರಾ ಎನ್ನುವುದು ಪ್ರೇಕ್ಷಕರ ಕುತೂಹಲವಾಗಿದೆ.

ಕಳೆದ ಸೀಸನ್ ನಲ್ಲಿ 4 ಜನರು ಒಂದು ಕೊಟಿ ರೂಪಾಯಿ ಗೆದ್ದಿದ್ದರು. ಆದರೇ ಈ ಬಾರಿ ಇದುವರೆಗೂ ಒಬ್ಬರೇ ಸ್ಪರ್ಧಿ 1 ಕೋಟಿ ರೂಪಾಯಿ ಗೆದ್ದು ಗಮನ ಸೆಳೆದಿದ್ದಾರೆ.
ಈ ಬಾರಿಯ ಕೌನ್ ಬನೇಗಾ ಕರೋಡ್ ಪತಿ 12 ಸೀಸನ್ ಸೆಪ್ಟಂಬರ್ 28ರಿಂದ ಪ್ರಾರಂಭವಾಗಿದೆ. ಲಾಕ್ ಡೌನ್ ಬಳಿಕ ಕಾರ್ಯಕ್ರಮ ಪ್ರಾರಂಭವಾಗಿದ್ದು, ಸಾಕಷ್ಟು ಬದಲಾವಣೆಯಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಆಡಿಯನ್ಸ್ ಪೋಲ್ ಲೈಫ್ ಲೈನ್ ಅನ್ನು ತೆಗೆದುಹಾಕಲಾಗಿದೆ.


Click it and Unblock the Notifications











