ಹಾಟ್ ಸೀಟಿನಲ್ಲಿ ಸೆಹ್ವಾಗ್- ಗಂಗೂಲಿ: ಪಾಕಿಸ್ತಾನದ ವಿರುದ್ಧ ಗೆದ್ದಾಗ ಸೆಹ್ವಾಗ್ ಏನ್ಮಾಡ್ತಾರಂತೆ ನೋಡಿ

ಹಿಂದಿ ಕಿರುತೆರೆ ಲೋಕದ ಜನಪ್ರಿಯ ಕ್ವಿಜ್ ರಿಯಾಲಿಟಿ ಶೋ ಕೌನ್ ಬನೇಗ ಕರೋಡ್ ಪತಿ ಪ್ರಾರಂಭವಾಗಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿ ಕೊಡುವ ಈ ಶೋ ಈಗಾಗಲೇ ಸೂಪರ್ ಸಕ್ಸಸ್ ಆಗಿದೆ. ಕಿರುತೆರೆಯ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಕೌನ್ ಬನೇಗ ಕರೋಡ್ ಪತಿ ಈಗಾಗಲೇ 12 ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇದೀಗ 13ನೇ ಸೀಸನ್ ಪ್ರಾರಂಭವಾಗಿದ್ದು, ಈಗಾಗಲೇ ಅಮಿತಾಬ್ ಹಾಟ್ ಸೀಟ್ ನಲ್ಲಿರುವ ಸ್ಪರ್ಧಿಗಳಿಗೆ ಪ್ರಶ್ನೆ ಕೇಳುತ್ತಿದ್ದಾರೆ.

ಕಳೆದ ವರ್ಷ ಕೊರೊನಾ ನಡುವೆಯೂ ಅಮಿತಾಬ್ ಕ್ವಿಜ್ ಶೋಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಸಾಕಷ್ಟು ಕಟ್ಟಿನಿಟ್ಟಿನ ಕ್ರಮಗಳೊಂದಿಗೆ ಕೌನ್ ಬನೇಗಾ ಕರೋಡ್ ಪತಿ ಶೋ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ಕೂಡ ಸಾಕಷ್ಟು ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಶೋ ಪ್ರಾರಂಭ ಮಾಡಲಾಗಿದೆ.

ಸೀಸನ್ 13 ಪ್ರಾರಂಭವಾಗುತ್ತಿದ್ದಂತೆ ದಿಗ್ಗಜ ಕ್ರಿಕೆಟ್ ಆಟಗಾರರಿಬ್ಬರು ಅಮಿತಾಬ್ ಮುಂದೆ ಹಾಟ್ ಸೀಟಿನಲ್ಲಿ ಕುಳಿತುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಖ್ಯಾತ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಇಬ್ಬರೂ ಈ ಬಾರಿಯ ಹಾಟ್ ಸೀಟಿನಲ್ಲಿ ಕುಳಿತಿದ್ದಾರೆ. ಈ ಇಬ್ಬರು ದಿಗ್ಗಜ ಕ್ರಿಕೆಟ್ ಆಟಗಾರರು ಕರೋಡ್ ಪತಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕಳೆದ ಒಂದು ವಾರದಿಂದ ಸುದ್ದಿಯಾಗುತ್ತಿತ್ತು. ಆದರೆ ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ ಕರೋಡ್ ಪತಿತಂಡ. ಇದೀಗ ಸೆಹ್ವಾಗ್ ಮತ್ತು ಗಂಗೂಲಿ ಇಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರೋಮೋ ಬಿಡುಗಡೆಯಾಗಿದೆ.

Kaun Banega Crorepati-13: Sourav Ganguly and Virendra Sehwag on hot seat in Amitabh bachchan show

ಪ್ರಶ್ನೆ-ಉತ್ತರದ ಜೊತೆಗೆ ಬಿಗ್ ಬಿ ಜೊತೆ ಇಬ್ಬರೂ ಆಟಗಾರರು ಒಂದಿಷ್ಟು ತಮಾಷೆಯ ಕ್ಷಣವನ್ನು ಕಳೆದಿದ್ದಾರೆ. ಅಮಿತಾಬ್ ಬಚ್ಚನ್, ಪಾಕಿಸ್ತಾನ ವಿರುದ್ಧ ಗೆದ್ದಾಗ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೆಹ್ವಾಗ್, 1988ರಲ್ಲಿ ಬಂದ ಶಹೆನ್ಶಾ ಚಿತ್ರದ ಪ್ರಸಿದ್ಧ ಡೈಲಾಗ್ ಇದೆ ಎಂದರು. ಅಮಿತಾಬ್, "ರಿಶ್ತೆ ಮೈನ್ ತು ಹಮ್ ತುಮ್ಹಾರೆ ಬಾಪ್ ಲಗ್ತಾ ಹೈ" ಎಂದು ಹೇಳಿದರು. ಬಳಿಕ ಸೆಹ್ವಾಗ್ "ಹಮ್ ತೋ ಬಾಪ್ ಹೈ ಉನ್ಕೋ" ಎಂದು ಡೈಲಾಗ್ ನೆನಪಿಸಿಕೊಂಡರು.

ಅಮಿತಾಬ್, ಸೆಹ್ವಾಗ್ ಬಳಿ ನೀವು ತುಂಬಾ ಹಾಡುಗಳನ್ನು ಗುನುಗುತ್ತಿರುತ್ತೀರಿ ಎಂದು ಕೇಳಿದ್ದೀನಿ ಎಂದು ಹೇಳಿದರು ಇದಕ್ಕೆ ಸೆಹ್ವಾಗ್ ಛಲ ಜಾತಾ ಹೂನ್ ಕಿಸಿಕೆ ಧುನ್ ಮೇ ಹಾಡನ್ನು ಹಾಡಿದರು. ಅಮಿತಾಬ್, ಫೀಲ್ಡಿಂಗ್ ಮಾಡುವಾಗ ಕ್ಯಾಚ್ ಬಿಟ್ಟರೆ? ಎಂದು ಕೇಳುತ್ತಾರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಸೆಹ್ವಾಗ್, ಕೋಚ್ ಗ್ರೆಗ್ ಚಾಪೆಲ್ ಆಗಿದ್ದರೆ ಎಂದು ಮತ್ತೊಂದು ಹಾಡನ್ನು ಹಾಡಿ ಅಮಿತಾಬ್ ಅವರನ್ನು ನಗೆಗಡಲಿನಲ್ಲಿ ತೇಲಿಸುತ್ತಾರೆ.

ಈ ಪ್ರೋಮೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೆಹ್ವಾಗ್ ಮತ್ತು ಗಂಗೂಲಿಯನ್ನು ಒಟ್ಟಿಗೆ ಹಾಟ್ ಸೀಟಿನಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಕಳೆದ ಸೀಸನ್ ನಲ್ಲಿ ಕರಮ್ ಮೀರ್ ಎನ್ನುವ ಎಪಿಸೋಡ್ ಮಾಡಲಾಗಿತ್ತು. ಈ ಎಪಿಸೋಡ್ ನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕರೆದುಕೊಂಡು ಬಂದು ಹಾಟ್‌ಸೀಟ್‌ನಲ್ಲಿ ಕೂರಿಸಲಾಗುತ್ತಿತ್ತು. ಹಳೆಯ ಎಪಿಸೋಡ್ ತುಂಬಾ ಫೇಮಸ್ ಆಗಿತ್ತು. ಹಾಗೆ ಈ ಬಾರಿ ಕೂಡ ವಿಶೇಷ ಅತಿಥಿಗಳಿಗಾಗಿ ವಿಶೇಷವಾದ ಎಪಿಸೋಡ್ ಪರಿಚಯಿಸಲಾಗಿದ್ದು, ಶಾಂದರ್ ಶುಕ್ರವಾರ ಎಂದು ಹೆಸರಿಡಲಿಡಲಾಗಿದೆ. ಶಾಂದರ್ ಶುಕ್ರವಾರದ ಎಪಿಸೋಡ್ ನಲ್ಲಿ ಸೆಹ್ವಾಗ್ ಮತ್ತು ಗಂಗೂಲಿ ಭಾಗಿಯಾಗಿರುವ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದರೆ ಸೆಪ್ಟಂಬರ್ 3 ರಾತ್ರಿ 9 ಗಂಟೆಗೆ ಈ ಎಪಿಸೋಡ್ ಪ್ರಸಾರವಾಗಲಿದೆ.

ಪ್ರಶ್ನೋತ್ತರದ ಜೊತೆಗೆ ಮೂವರು ಲೆಜೆಂಡ್ ಗಳ ಮಾತುಕತೆ, ಸಮಾಷೆಯನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಸೆಹ್ವಾಗ್ ಮತ್ತು ಗಂಗೂಲಿ ಈ ಶೋನಿಂದ ಎಷ್ಟು ಹಣ ಗೆಲ್ಲುತ್ತಾರೆ ಎಂದು ಕಾದುನೋಡಬೇಕು.

More from Filmibeat

English summary
Kaun Banega Crorepati-13: Sourav Ganguly and Virendra Sehwag on hot seat in Amitabh bachchan show's promo out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X