For Quick Alerts
  ALLOW NOTIFICATIONS  
  For Daily Alerts

  ಕೌನ್ ಬನೇಗಾ ಕರೋಡ್‌ಪತಿ 14: ಒಂದು ಕೋಟಿ ಗೆದ್ದ ಮೊದಲ ಮಹಿಳೆ ಇವರೆ

  |

  ಕೌನ್ ಬನೇಗಾ ಕರೋಡ್‌ಪತಿ ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ. ಸೋಮವಾರದಿಂದ ಶುಕ್ರವಾರದ ವರೆಗೆ ಪ್ರಸಾರವಾಗುವ ಈ ರಿಯಾಲಿಟಿ ಶೋ ಮೊದಲಿನಿಂದಲೂ ತನ್ನದೇ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಈ ಕಾರ್ಯಕ್ರಮದ ನಿರೂಪಕರಾಗಿದ್ದು, ಈ ಮೆಗಾಸ್ಟಾರ್‌ ಮಾತುಗಳನ್ನು ಕೇಳಲೆಂದೆ ಅನೇಕರು ಕೌನ್ ಬನೇಗಾ ಕರೋಡ್ ಪತಿ ವೀಕ್ಷಿಸುತ್ತಾರೆ.

  ಈಗಾಗಲೇ ಯಶಸ್ವಿಯಾಗಿ 13 ಆವೃತ್ತಿಗಳನ್ನು ಮುಗಿಸಿರುವ ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋ, 2022ರ ಆಗಸ್ಟ್‌ 7ರಿಂದ 14ನೇ ಆವೃತ್ತಿ ಆರಂಭಿಸಿದೆ. ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋ ಈ ಬಾರಿಯೂ ಜನರಿಂದ ಉತ್ತಮ ಸ್ಪಂದನೆ ಪಡೆದುಕೊಂಡಿದೆ. ಈಗಾಗಲೇ ಅನೇಕ ಸ್ಫರ್ಧಿಗಳು ಕೌನ್ ಬನೇಗಾ ಕರೋಡ್ ಪತಿ 14ನೇ ಆವೃತ್ತಿಯಲ್ಲಿ ಭಾಗವಹಿಸಿದ್ದು, ಕೋಲ್ಹಾಪುರದ ಮಹಿಳೆಯೊಬ್ಬರು ಈ ಸೀಜನ್ ಅಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

  ಕೌನ್ ಬನೇಗಾ ಕರೋಡ್ ಪತಿ ಸೀಜನ್ 14ರ ಮೊದಲ ಕೋಟ್ಯಧಿಪತಿಯಾಗಿ ಕೊಲ್ಹಾಪುರ ನಿವಾಸಿ ಕವಿತಾ ಚಾವ್ಲಾ ಹೊರಹೊಮ್ಮಿದ್ದಾರೆ. ಮೊದಲಿನಿಂದಲೂ ಕೌನ್ ಬನೇಗಾ ಕರೋಡ್ ಪತಿ ಶೋಗೆ ಬರಬೇಕೆಂದು ಕನಸು ಕಾಣುತ್ತಿದ್ದ ಕವಿತಾ ಚಾವ್ಲಾ ಕಳೆದ ಸೀಜನ್ ನಲ್ಲೂ ಭಾಗಿಯಾಗಿದ್ದರು. ಆದರೆ ಫಾಸ್ಟ್‌ ಆಫ್‌ ಫಿಂಗರ್‌ನಲ್ಲಿ ಸೋಲು ಕಂಡು ಹಾಟ್‌ ಸೀಟ್‌ ತಲುಪಿರಲಿಲ್ಲ. ಆದರೆ ಧೃತಿಗೆಡದ ಅವರು ಕೌನ್ ಬನೇಗಾ ಕರೋಡ್ ಪತಿ ಸೀಜನ್ 14ಕ್ಕೂ ಕೂಡ ಪ್ರಯತ್ನ ಪಟ್ಟಿದ್ದು ಕೊನೆಗೂ ಸಾಧಿಸಿದ್ದಾರೆ.

  ಕೌನ ಬನೇಂಗಾ ಕರೋಡ್ ಪತಿ ಸೀಜನ್ 14ರ ಮೊದಲ ಕೋಟ್ಯಧಿಪತಿ

  ಕೌನ ಬನೇಂಗಾ ಕರೋಡ್ ಪತಿ ಸೀಜನ್ 14ರ ಮೊದಲ ಕೋಟ್ಯಧಿಪತಿ

  ಕೊಲ್ಹಾಪುರ ನಿವಾಸಿಯಾಗಿರುವ ಕವಿತಾ ಚಾವ್ಲಾ ಗೃಹಿಣಿಯಾಗಿದ್ದಾರೆ. ಶೋ ಪ್ರಾರಂಭದಿಂದಲೂ ಒಮ್ಮೆ ಈ ವೇದಿಕೆ ಹತ್ತ ಬೇಕು ಎಂದು ಕಸನು ಕಾಣುತ್ತಿದ್ದರು. ಜೊತೆಗೆ ಬಾಲಿವುಡ್‌ ಬಿಗ್ ಬಿ ಅಮಿತಾಭ್‌ ಬಚ್ಚನ್‌ ಅವರನ್ನು ಭೇಟಿಯಾಗಬೇಕೆಂದುಕೊಂಡಿದ್ದರು. ಸದ್ಯ ಅವರ ಕನಸುಗಳು ನನಸಾಗಿದ್ದು, ಕೌನ್ ಬನೇಗಾ ಕರೋಡ್ ಪತಿ ಸೀಜನ್ 14ರ ಮೊದಲ ಕೋಟ್ಯಧಿಪತಿಯಾಗಿ ಕವಿತಾ ಚಾವ್ಲಾ ಹೊರಹೊಮ್ಮಿದ್ದಾರೆ.

  ಅಮಿತಾಭ್‌ ಬಚ್ಚನ್‌ ಅವರ ಮಾತನಿಂದ ಕೋಟಿ ಗೆದ್ದೆ

  ಅಮಿತಾಭ್‌ ಬಚ್ಚನ್‌ ಅವರ ಮಾತನಿಂದ ಕೋಟಿ ಗೆದ್ದೆ

  ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಕವಿತಾ ಚಾವ್ಲಾ ತಮ್ಮ ಕೌನ ಬನೇಗಾ ಕರೋಡ್ ಪತಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಕೌನ ಬನೇಗಾ ಕರೋಡ್ ಪತಿ ನಮ್ಮ ಜ್ಞಾನವನ್ನು ಹೆಚ್ಚಿಸುವ ವೇದಿಕೆ. ಈ ಸ್ಫರ್ಧಿಸಿದವರು ಹೆಚ್ಚಿನ ಗೌರವ ಗಳಿಸುತ್ತಾರೆ. ಕಳೆದ ಬಾರಿ ನಾನು ಸೋತಾಗ ಅಮಿತಾಭ್‌ ಬಚ್ಚನ್‌ ಅವರು ಧೃತಿಗೆಡಬೇಡಿ ಮರಳಿ ಯತ್ನಸಿ ಎಂದಿದ್ದರು. ಅವರ ಮಾತುಗಳು ಕಳೆದ ವರ್ಷದಿಂದಲೂ ತನ್ನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿದೆ. ಅದರಿಂದಲೇ ನಾನು ಈ ಬಾರಿ ಕೋಟಿ ಗೆಲ್ಲಲು ಸಾಧ್ಯವಾಯಿತು ಎಂದರು.

  ಕವಿತಾ ಚಾವ್ಲಾಗೆ ಬಿಗ್‌ ಬಿಯಿಂದ ಶಹಭಾಷ್ ಗಿರಿ

  ಕವಿತಾ ಚಾವ್ಲಾಗೆ ಬಿಗ್‌ ಬಿಯಿಂದ ಶಹಭಾಷ್ ಗಿರಿ

  ಇನ್ನು ಹಾಟ್‌ ಸೀಟ್‌ ಹಾಗೂ ಅಮಿತಾಭ್‌ ಬಚ್ಚನ್ ಅವರೊಂದಿನ ಸಂವಾದದ ಬಗ್ಗೆ ಮಾತನಾಡಿದ ಅವರು, ನಾನು ಅವರಂತಹ ವ್ಯಕ್ತಿತ್ವವನ್ನು ಎಂದೂ ನೋಡಿಲ್ಲ. ಅವರು ತುಂಬಾ ನೇರವಾಗಿ ಹಾಗೂ ಮುಕ್ತವಾಗಿ ಮಾತನಾಡುತ್ತಾರೆ. ಹಾಟ್‌ ಸೀಟ್‌ನಲ್ಲಿ ಕೂತಿದ್ದರೂ ಕೂಡ ಅವರೊಂದಿನ ಮಾತುಕತೆಯನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ಕೊನೆಯಲ್ಲಿ ಅವರು ನನ್ನ ಬಳಿ ಬಂದು ನನ್ನ ಆಟವನ್ನು ಪ್ರಶಂಸಿಸಿದರು. ಅದನ್ನು ಮರೆಯುವುದಿಲ್ಲ. ಅವರಿಗೆ ನಾನು ಧನ್ಯವಾದ ಹೇಳಲು ಭಯಸುತ್ತೇನೆ. ಅದೇ ನನ್ನ ಕೌನ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಅಮೃತ ಘಳಿಗೆ ಎಂದರು.

  ಅರ್ಧ ಕೋಟಿ ಗೆದ್ದ ತಾರೆಯರು ಇವರೇ ನೋಡಿ

  ಅರ್ಧ ಕೋಟಿ ಗೆದ್ದ ತಾರೆಯರು ಇವರೇ ನೋಡಿ

  ಗೃಹಿಣಿಯೊಬ್ಬರು ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ 1 ಕೋಟಿ ರೂಪಾಯಿ ಗೆದ್ದಿರುವುದು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಈ ಹಿಂದೆ ಕೂಡ ಅನೇಕ ಸ್ಫರ್ಧಿಗಳು ಕೌನ ಬನೇಂಗಾ ಕರೋಡ್ ಪತಿಯಲ್ಲಿ 1 ಕೋಟಿ ರೂಪಾಯಿ ಗೆದ್ದಿದ್ದಾರೆ. ಕೌನ ಬನೇಗಾ ಕರೋಡ್ ಪತಿಯಲ್ಲಿ ಹರ್ಷವರ್ಧನ್ ಎನ್ನುವವರು ಮೊದಲ ಬಾರಿಗೆ 1 ಕೋಟಿ ರೂಪಾಯಿ ಗೆದ್ದಿದ್ದರು. ಇನ್ನು ಅನೇಕ ಬಾಲಿವುಡ್‌ ತಾರೆಯರು ಕೂಡ ಕೌನ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನಟ ಅಮೀರ್ ಖಾನ್‌, ನಟಿ ರಾಣಿ ಮುಖರ್ಜಿ, ಶಾರುಖ್ ಖಾನ್‌, ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಅರ್ಧ ಕೋಟಿ ಗಳಿಸಿದ್ದರು.

  English summary
  Kaun Banega Crorepati 14 1crore winner Kavita Chawla opens up about becoming the first crorepati of the season. Know more.
  Tuesday, September 20, 2022, 11:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X