KBC 16 ; ಮದ್ವೆಯಾಗದ ಹೆಣ್ಣು ಮನೆಗೆ ಭಾರ ಎಂದ ಸ್ಫರ್ಧಿಯ ಬಾಯಿ ಮುಚ್ಚಿಸಿದ ಅಮಿತಾಬ್ ಬಚ್ಚನ್ ..!

ತಮ್ಮ 81ನೇ ವಯಸ್ಸಿನಲ್ಲಿಯೂ ಸಾಲು ಸಾಲು ಸಿನಿಮಾಗಳ ಜೊತೆಯಲ್ಲಿ ಹಲವಾರು ಜಾಹೀರಾತು ಮತ್ತು ಕಿರುತೆರೆಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿಯಾಗಿರುವವರು ಅಮಿತಾಬ್ ಬಚ್ಚನ್.

ಇಂಥಾ ದಣವರಿಯದ ಮಹಾನಾಯಕ ಈಗ ತಮ್ಮ ಬದುಕು ಬದಲಿಸಿದ ಕೌನ್ ಬನೇಗಾ ಕರೋಡ್ ಪತಿಯ ಹದಿನಾರನೇ ಸೀಸನ್‌ನಲ್ಲಿ ಸ್ಫರ್ಧಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಖಡಕ್ ಉತ್ತರವನ್ನು ನೀಡುವುದರ ಮೂಲಕ ಆ ವ್ಯಕ್ತಿಯ ಬಾಯಿಯನ್ನು ಮುಚ್ಚಿಸಿದ್ದಾರೆ.

Kaun Banega Crorepati 16 Amitabh Bachchan silences contestant for his burden remark on women

ಹೌದು, ಕಳೆದ 24 ವರ್ಷಗಳಿಂದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾ ಬಂದಿರುವ ಅಮಿತಾಬ್, ತಮ್ಮೆದುರು ಕುಳಿತ ವ್ಯಕ್ತಿಗೆ ಪ್ರಶ್ನೆಯನ್ನು ಕೇಳುವುದಷ್ಟೇ ಅಲ್ಲದೇ ಅವರ ಜೊತೆ ಮುಕ್ತವಾಗಿ ಮಾತನಾಡಿಕೊಂಡು ಬಂದಿದ್ದಾರೆ. ಸ್ಫರ್ಧಿಗಳ ಬದುಕಿನ ಸುಖ ದುಃಖವನ್ನೂ ಕೇಳುತ್ತಾ ಬಂದಿದ್ದಾರೆ. ತಾವೂ ನಕ್ಕಿದ್ದಾರೆ.ಸ್ಫರ್ಧಿಗಳನ್ನು ನಗಿಸಿದ್ದಾರೆ. ಸ್ಪರ್ಧಿಗಳು ಕಣ್ಣೀರಾದಾಗ ಅಮಿತಾಬ್ ಕೂಡ ಕಣ್ಣೀರಾಗಿದ್ದಾರೆ. ಆದರೆ ಸ್ಫರ್ಧಿಗಳ ಮಾತುಗಳಿಂದ ಅಮಿತಾಬ್ ಬೇಸರಗೊಂಡಿರಲಿಲ್ಲ. ತಿರುಗೇಟು ನೀಡಿರಲಿಲ್ಲ. ಆದರೆ ಮೊನ್ನೆ ಕೃಷ್ಣ ಸುಲೇಖರ್ ಎಂಬ ಸ್ಫರ್ಧಿಯ ಮಾತು ಅಮಿತಾಬ್ ಅವರ ಬೇಸರಕ್ಕೆ ಕಾರಣವಾಯಿತು.

ಅಸಲಿಗೆ ಕೃಷ್ಣ ಸುಲೇಖರ್ ತಮ್ಮ ಬದುಕಿನ ಕರಾಳ ಅಧ್ಯಾಯದ ಕುರಿತು ಮಾತನಾಡುತ್ತಿದ್ದರು. ಕೊರೊನಾ ಸಮಯದಲ್ಲಿ ಕೆಲಸವನ್ನು ಕಳೆದುಕೊಂಡಾಗ ತಾವು ಅನುಭವಿಸಿದ ನರಕಯಾತನೆಯ ಕುರಿತು ಹೇಳುತ್ತಿದ್ದರು. ಇದೇ ಸಮಯದಲ್ಲಿ ಕೆಲಸ ಕಳೆದುಕೊಂಡಾಗ ನನಗೆ ಅರ್ಥವಾಗಿದ್ದು ಏನೆಂದರೆ ಸರ್ ಹೇಗೆ ಮದುವೆಯಾಗದ ಹೆಣ್ಣು ಮಕ್ಕಳು ಮನೆಗೆ ಭಾರವಾಗಿರುತ್ತಾರೋ ಅದೇ ರೀತಿ ಕೆಲಸ ಇಲ್ಲದ ಗಂಡು ಮಕ್ಕಳು ಕೂಡ ಮನೆಗೆ ಭಾರ ಆಗುತ್ತಾರೆ ಎಂದರು.

Kaun Banega Crorepati 16 Amitabh Bachchan silences contestant for his burden remark on women

ಕೃಷ್ಣ ಸುಲೇಖರ್ ಅವರ ಈ ಮಾತುಗಳಿಂದ ಮೊದಲು ಮೌನಕ್ಕೆ ಶರಣಾದ ಅಮಿತಾಬ್ ಆ ನಂತರ ಅಸಮಾಧಾನ ವ್ಯಕ್ತಪಡಿಸಿದರು. ನಾನು ನಿಮಗೆ ಒಂದು ಮಾತು ಹೇಳಲು ಬಯಸುತ್ತೇನೆ ಕೃಷ್ಣ ಎಂದ ಬಿಗ್ ಬಿ ಹೆಣ್ಣುಮಕ್ಕಳು ಯಾವತ್ತೂ ಕೂಡ ಮನೆಗೆ ಭಾರವಲ್ಲ ಎಂದರು. ಹೆಣ್ಣು ಮಕ್ಕಳು ಮನೆಯ ಭಾಗ್ಯ ಎಂದು ಹೇಳುವ ಮೂಲಕ ಕೃಷ್ಣ ಸುಲೇಖರ್ ಅವರ ಬಾಯಿ ಮುಚ್ಚಿಸಿದರು. ಈ ಮೂಲಕ ಅಲ್ಲಿದ್ದವರ ಹೃದಯವನ್ನು ಅಮಿತಾಬ್ ಬಚ್ಚನ್ ಗೆದ್ದರು.

ಸದ್ಯಕ್ಕೆ ಅಮಿತಾಬ್ ಬಚ್ಚನ್ ಅವರ ಈ ಹೇಳಿಕೆಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಉಳಿದಂತೆ ಅಮಿತಾಬ್ ಬಚ್ಚನ್ ಇತ್ತೀಚೆಗಷ್ಟೇ ಕಲ್ಕಿ 2898ಎಡಿ ಚಿತ್ರದ ಮೂಲಕ ತಮ್ಮ ಅಭಿನಯದಿಂದ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದರು. ಇನ್ನೂ ಸೂಪರ್ ಸ್ಟಾರ್ ರಜಿನಿಕಾಂತ್ ಜೊತೆ 32 ವರ್ಷಗಳ ನಂತರ ಅಮಿತಾಬ್ ಮತ್ತೆ ಸಿನಿಮಾ ಮಾಡಿದ್ದಾರೆ. ಇವರು ಇಬ್ಬರು ಅಭಿನಯದ ವೆಟ್ಟೈಯನ್ ಅಕ್ಟೋಬರ್ ಹತ್ತರಂದು ಬಿಡುಗಡೆಯಾಗಲಿದೆ. ಮಿಕ್ಕಂತೆ ಸದ್ಯ ಕೌನ್ ಬನೇಕಾ ಕರೋಡ್‌ಪತಿಯಲ್ಲಿ ಬ್ಯುಸಿಯಾಗಿರುವ ಅಮಿತಾಬ್ ಬೇರೆ ಯಾವ ಹೊಸ ಚಿತ್ರವನ್ನು ಒಪ್ಪಿಕೊಂಡಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X