For Quick Alerts
ALLOW NOTIFICATIONS  
For Daily Alerts

ದೇವಿಯೋ.ಸಜ್ಜನೋ 'ಕೆಬಿಸಿ 6' ಸೆಪ್ಟಂಬರ್ 7ರಿಂದ

By Shami
|

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಹಿನ್ನಡೆ ಅನುಭವಿಸಿದ್ದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಜೀವನಕ್ಕೆ ಸಂಜೀವಿನಿಯಾಗಿದ್ದು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ. ಈ ಗೇಂ ಶೋ ಅನ್ನು ಸ್ಟಾರ್ ಪ್ಲಸ್ ಚಾನೆಲ್ 2000 ಇಸವಿಯಲ್ಲಿ ಪ್ರಾರಂಭಿಸಿತು. ಬ್ರಿಟನ್ ನಲ್ಲಿ ಜನಪ್ರಿಯವಾಗಿದ್ದ 'Who Wants to be Millionaire' ಕಾರ್ಯಕ್ರಮವನ್ನು ಹಿಂದಿ ಭಾಷೆಯ ಮೂಲಕ ಸ್ಟಾರ್ ವಾಹಿನಿ ನಮ್ಮ ದೇಶಕ್ಕೆ ಪರಿಚಯಿಸಿತು.

ತನ್ನ ವಿಶಿಷ್ಟವಾದ ನಿರೂಪಣಾ ಶೈಲಿ, ಮ್ಯಾನರಿಸಂ ನಿಂದ ಈ ಗೇಂ ಶೋ ಅಮಿತಾಬ್ ಅವರಿಗೆ ಯಾವ ಮಟ್ಟದ ಜನಪ್ರಿಯತೆ ತಂದು ಕೊಟ್ಟಿತ್ತು ಅಂದರೆ ಅವರ ಸಿನಿಮಾ ಜೀವನದಲ್ಲಿ ಹಿಂದಿರುಗಿ ನೋಡಲಾಗದಷ್ಟು ಅಮಿತಾಬ್ ಗಗನದೆತ್ತರಕ್ಕೆ ಬೆಳೆದು ಬಿಟ್ಟರು.

ಈಗ ಸೋನಿ ಎಂಟರ್ಟೈನ್ಮೆಂಟ್ ವಾಹಿನಿ 'ಕೆಬಿಸಿ 6' ಎನ್ನುವ ಹೆಸರಿನಲ್ಲಿ ಗೇಂ ಶೋ ಆರಂಭಿಸುತ್ತಿದೆ. ಮತ್ತೆ ನಿರೂಪಕರಾಗಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದು ಈ ಕಾರ್ಯಕ್ರಮ ಸೆಪ್ಟಂಬರ್ 7ರಿಂದ ಆರಂಭವಾಗಲಿದೆ. ಗೇಂ ಶೋನ ಮೊದಲ ಚಿತ್ರೀಕರಣ ಗುರುವಾರದಿಂದ (ಆ 23) ಮುಂಬೈ ಫಿಲಂ ಸಿಟಿಯಲ್ಲಿ ಆರಂಭವಾಗಲಿದೆ.

'ದೇವಿಯೋ.. ಸಜ್ಜನೋ .. ನಮಸ್ಕಾರ್' ಎಂದು ಕಾರ್ಯಕ್ರಮ ಆರಂಭಿಸುವ ಅಮಿತಾಬ್ ಅವರ ಹಿಂದಿ ಉಚ್ಚಾರಣೆ ಸರಳ ಮತ್ತು ಸ್ಪಷ್ಟ. ಈ 90 ನಿಮಿಷದ ಕಾರ್ಯಕ್ರಮದ ಬಗ್ಗೆ ಈಗಾಗಲೇ ಜನ ಬಹಳ ಉತ್ಸುಕರಾಗಿದ್ದಾರೆ. ಪ್ರತಿ ಶುಕ್ರವಾರದಿಂದ ಭಾನುವಾರದವರೆಗೆ ರಾತ್ರಿ 8.30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಕಾರ್ಯಕ್ರಮಕ್ಕೆ ಭಾಗವಹಿಸಲು ಕನಿಷ್ಠ 18 ವರ್ಷವಾಗಿರಬೇಕು ಮತ್ತು ಭಾರತೀಯರಾಗಿರಬೇಕು. ಈ ಕಾರ್ಯಕ್ರಮವನ್ನು ಕ್ರಿಯೇಟ್ ಮಾಡಿದವರು ಸಿದ್ದಾರ್ಥ್ ಬಸು ಮತ್ತು ಬಿಗ್ ಸಿನರ್ಜಿ ಪ್ರೊಡಕ್ಷನ್ ಕಾರ್ಯಕ್ರಮದ ಆಯೋಜಕರು.

ನಿಮ್ಮೆಲ್ಲರ ಸಹಕಾರದಿಂದ 'ಕೆಬಿಸಿ 5' ಗೇಂ ಶೋ ಸಂಪೂರ್ಣ ಯಶಸ್ವಿಯಾಗಿತ್ತು. ಮತ್ತೆ ಕೆಬಿಸಿ 6 ಮೂಲಕ ಸೋನಿ ವಾಹಿನಿಯಲ್ಲಿ ಬರಲಿದ್ದೇನೆ, ನಿಮ್ಮ ಸಹಕಾರವಿರಲಿ ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ. 2000 ಇಸವಿಯಿಂದ 2007ರ ವರೆಗೆ ಸ್ಟಾರ್ ಪ್ಲಸ್ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದರೆ, 2010 ರಿಂದ ಸೋನಿ ವಾಹಿನಿ ಪ್ರಸಾರ ಮಾಡುತ್ತಿದೆ.

15.08.2011 ರಲ್ಲಿ ಆರಂಭವಾಗಿದ್ದ ಕೆಬಿಸಿ 5 ಕಾರ್ಯಕ್ರಮ ಭಾರೀ ಜನಪ್ರಿಯಗೊಂಡು ಕಿರುತೆರೆ ಟಿಆರ್ಪಿಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಇದೆ ಸ್ಪೂರ್ತಿಯಿಂದ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೂಡಾ ಈ ಗೇಂ ಶೋ ಪ್ರಸಾರ ಕಂಡಿತು. ಪುನೀತ್ ರಾಜಕುಮಾರ್ ನಿರೂಪಕರಾಗಿದ್ದ 'ಕನ್ನಡದ ಕೊಟ್ಯಾಧಿಪತಿ' ಕಾರ್ಯಕ್ರಮ ಪ್ರಚಂಡ ಯಶಸ್ಸು ಕಂಡಿತ್ತು.

English summary
Kaun Banega Crorepati Season 6 has been creating ripples in the Indian television industry as soon as it was formally announced. The biggest game show of Indian television, hosting by Amitabh Bachchan and this game show starts from September 7th. Friday to Sunday from 8.30PM onwards in Sony Entertainment channel.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more