'KBC' ಶೋನಲ್ಲಿ ಶಾರುಖ್ ಖಾನ್ ಅಭಿಮಾನಿಗೆ ಕ್ಷಮೆಯಾಚಿಸಿದ ಅಮಿತಾಬ್ ಬಚ್ಚನ್
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸದ್ಯ ಕೌನ್ ಬನೇಗಾ ಕರೋಡ್ ಪತಿ 12 ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಕರೋಡ್ ಪತಿ ಕಾರ್ಯಕ್ರಮ ಪ್ರಾರಂಭಿಸಿರುವ ಅಮಿತಾಬ್ ಈಗಾಗಲೇ 27 ಎಪಿಸೋಡ್ ಗಳನ್ನು ಪೂರ್ಣಗೊಳಿಸಿದ್ದಾರೆ.
ಇತ್ತೀಚಿಗೆ ಪ್ರಸಾರವಾದ ಎಪಿಸೋಡ್ ನಲ್ಲಿ ಅಮಿತಾಬ್, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಅವರ ಅಭಿಮಾನಿಗೆ ಕ್ಷಮೆ ಕೇಳುವಂತ ಪ್ರಸಂಗ ಎದುರಾಗಿತ್ತು. ಅಮಿತಾಬ್ ಮುಂದೆ ಹಾಟ್ ಸೀಟಿನಲ್ಲಿ ಅಪರ್ಣ ವ್ಯಾಸ್ ಎನ್ನುವ ಸ್ಪರ್ಧಿ ಕುಳಿತಿದ್ದರು. ಮಧ್ಯಪ್ರದೇಶದ ಈ ಯುವ ಸ್ಪರ್ಧಿ ತನ್ನ ಜೀವನದ ಬಗ್ಗೆ ಮತ್ತು ಆಕೆ ಎದುರಿಸಿದ ಕಷ್ಟಗಳ ಬಗ್ಗೆ ಅಮಿತಾಬ್ ಮುಂದೆ ವಿವರಿಸುತ್ತ ಆಟವಾಡುತ್ತಿರು. ಅಪರ್ಣ ಆಟ ನೋಡಿ ಅಮಿತಾಬ್ ಸಹ ಸಂತಸ ಪಟ್ಟರು. ಅಪರ್ಣ 12,50,000 ರೂಪಾಯಿ ಗೆದ್ದು ಆಟದಿಂದ ನಿರ್ಗಮಿಸಿದರು.
ಅಪರ್ಣ ಬಳಿಕ ರೇಖಾ ರಾಣಿ ಎನ್ನುವ ಸ್ಪರ್ಧಿ ಹಾಟ್ ಸೀಟ್ ಏರಿದರು. 27 ವರ್ಷದ ರೇಖಾ ರಾಣಿ ಸಿವಿಲ್ ಸರ್ವೀಸ್ ಆಕ್ಷಾಂಕ್ಷಿ ಯಾಗಿದ್ದಾರೆ. ತನ್ನ ಮಾತುಗಳಿಂದ ಬಿಗ್ ಬಿ ಅಮಿತಾಬ್ ಅವರನ್ನು ರಂಜಿಸಿದ್ದಾರೆ. ಶಾರುಖ್ ಖಾನ್ ಬಗ್ಗೆ ಎದುರಾದ ಪ್ರಶ್ನೆಯ ಸಮಯದಲ್ಲಿ ರೇಖಾ ರಾಣಿ ಶಾರುಖ್ ಖಾನ್ ಅಭಿಮಾನಿ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಶಾರುಖ್ ಅವರನ್ನು ಎಷ್ಟು ಇಷ್ಟಪಡುತ್ತಿದ್ದರು ಎನ್ನುವುದನ್ನು ಬಿಗ್ ಬಿ ಬಳಿ ಹೇಳಿಕೊಂಡಿದ್ದಾರೆ.

ರೇಖಾ ಚಿಕ್ಕ ವಯಸ್ಸಿನಿಂದ ಶಾರುಖ್ ಖಾನ್ ಅವರ ಅಭಿಮಾನಿಯಂತೆ. ಆದರೆ ಅಮಿತಾಬ್ ಕಂಡರೆ ತುಂಬಾ ಕೋಪ ಬರುತ್ತಿತ್ತಂತೆ. ಶಾರುಖ್ ಅಭಿನಯದ ಮೊಹಬತ್ತೇ ಮತ್ತು ಕಭಿ ಖುಷಿ ಕಭಿ ಗಮ್ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಿರಲಿಲ್ಲವಂತೆ.
ಯಾಕಂದರೆ ಕಭಿ ಖುಷಿ ಕಭಿ ಗಮ್ ಸಿನಿಮಾದಲ್ಲಿ ಮನೆಯಿಂದ ಹೊರಹೋಗುವಂತೆ ಅಮಿತಾಬ್, ಶಾರುಖ್ ಹೇಳಿದಾಗ ರೇಖಾ ರಾಣಿ ತುಂಬಾ ಅಳುತ್ತಿದ್ದರಂತೆ. ಇದರಿಂದ ಅಮಿತಾಬ್ ಮೇಲೆ ಕೋಪಗೊಳ್ಳುತ್ತಿದ್ದರಂತೆ. ರೇಖಾ ರಾಣಿ ದೂರಿಗೆ ಅಮಿತಾಬ್ ಒಮ್ಮೆ ಅಚ್ಚರಿ ಪಟ್ಟರು. ಬಳಿಕ ಅಮಿತಾಬ್ ಖುಷಿಯಿಂದ ಶಾರುಖ್ ಖಾನ್ ಮತ್ತು ಶಾರುಖ್ ಅಭಿಮಾನಿ ರೇಖಾ ರಾಣಿ ಬಳಿ ಕ್ಷಮೆಯಾಚಿಸಿದರು.


Click it and Unblock the Notifications











