ಸೀರಿಯಲ್‌ನಿಂದ ಸಿನಿಮಾಗೆ ಕಾಲಿಟ್ಟ 'ನನ್ನರಸಿ ರಾಧೆ' ಕೌಸ್ತುಭ

ಸಾಕಷ್ಟು ನಟಿಮಣಿಯರು ಸೀರಿಯಲ್‌ನಿಂದ ಸಿನಿಮಾ, ಸಿನಿಮಾದಿಂದ ಸೀರಿಯಲ್‌ಗೆ ಪದಾರ್ಪಣೆ ಮಾಡಿ ಸಖತ್ ಸದ್ದು ಮಾಡುತ್ತಿದ್ದಾರೆ. ಹೀಗೆ ಪ್ರಮೋಷನ್ ಪಡೆದು ಕೆಲವರು ಸಕ್ಸಸ್ ಆದರೇ ಮತ್ತೆ ಕೆಲವರೂ ಆಯ್ಕೆಯಲ್ಲಿ ಎಡವಿರುತ್ತಾರೆ. ಈಗಾಗಲೇ ಕನ್ನಡ ಕಿರುತೆರೆಯಿಂದ ನಟಿ ರಚಿತಾ ರಾಮ್, ರಾಧಿಕಾ ಪಂಡಿತ್, ನಟಿ ಮಯೂರಿ, ಅನು ಸಿರಿಮನೆ, ಕಾವ್ಯ ಗೌಡ ಮುಂತಾದವರು ಸೀರಿಯಲ್‌ನಿಂದ ಸಿನಿಮಾಗೆ ಬಂದು ಪ್ರೇಕ್ಷಕರನ್ನ ರಂಜಿಸಿದ್ದರು. ಇದೀಗ ಇದೇ ಪಟ್ಟಿಗೆ ಸೇರಲು ಸಜ್ಜಾಗಿದ್ದಾರೆ ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಮೋಡಿ ಮಾಡಿರುವ ಮತ್ತೋರ್ವ ನಟಿ.

ಈಗಾಗಲೇ ಪ್ರಸಾರವಾಗುತ್ತಿರುವ ನನ್ನರಸಿ ಸೀರಿಯಲ್‌ ಅನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸೀರಿಯಲ್ ಕಥೆಯ ಹೊಸತನಕ್ಕೆ ಮಾರುಹೋಗಿದ್ದಾರೆ. ಟಿಆರ್‌ಪಿಯಲ್ಲೂ ಮೊದಲ ಸ್ಥಾನ ಪಡೆದಿದ್ದ ಈ ಸೀರಿಯಲ್‌ನ ಪ್ರಮುಖ ಇಂಚರಾ ಪಾತ್ರಧಾರಿ ಕೌಸ್ತುಭಮಣಿ ಈಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈಗಾಗಲೇ ಸೀರಿಯಲ್ ಮೂಲಕ ಹೆಚ್ಚು ಜನ ಪ್ರಸಿದ್ಧಿಯನ್ನು ಪಡೆದಿರುವ ಕೌಸ್ತುಭ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಸಾಕಷ್ಟು ಎಕ್ಸೈಟ್ ಆಗಿದ್ದಾರಂತೆ. ಅಷ್ಟಕ್ಕು ಇಂಚರಾ ಅಲಿಯಾಸ್ ಕೌಸ್ತುಭ ಮಣಿ ಸ್ಯಾಂಡಲ್‌ವುಡ್‌ನ ಯಾವ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆಯುತ್ತಿದ್ದಾರೆ ಅನ್ನೋದನ್ನ ಮುಂದೆ ಓದಿ.

ಕೌಸ್ತುಭ ಮಣಿ. ತನ್ನ ನಟನೆ, ಮುದ್ದು ಮುಖ, ಸುಂದರ ಧ್ವನಿಯ ಮೂಲಕವೇ ವೀಕ್ಷಕರನ್ನು ಸೆಳೆದಿದ್ದಾರೆ. ಇದೀಗ ಇವರು ಸ್ಯಾಂಡಲ್‌ವುಡ್‌ನ ರಾಮಾಚಾರಿ 2.0 ಚಿತ್ರಕ್ಕೆ ಆಯ್ಕೆಯಾಗಿದ್ದು, ವಿಶೇಷ ಪಾತ್ರದ ಮೂಲಕ ಅವರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ರಾಮಾಚಾರಿ 2.0 ಚಿತ್ರದಲ್ಲಿ ನಟಿ ಕೌಸ್ತುಭ ಮಾರ್ಗರೇಟ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಯುವ ಪ್ರತಿಭೆ ತೇಜ್‌ಗೆ ಕೌಸ್ತುಭ ಜೋಡಿಯಾಗಿ ಅಭಿನಯಿಸಲಿದ್ದು, ತೇಜ್ ಅವರೇ ಈ ಸಿನಿಮಾದ ನಿರ್ದೇಶನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ನಟಿ ಕೌಸ್ತುಭ ಕೂಡ ಹತ್ತಿರದಲ್ಲೇ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

Kaustubha mani of Nannarasi Radhe fame to make sandalwood debut

ಅಷ್ಟಕ್ಕೂ ನಟಿ ಕೌಸ್ತುಭ ಅರಸಿಕೊಂಡು ಬಣ್ಣದ ಲೋಕಕ್ಕೆ ಕಾಲಿಟ್ಟಿಲ್ಲ. ಟೆಕ್ಕಿ ಆಗಿ ಕೆಲಸ ಮಾಡುತ್ತಿದ್ದ ಇವರು, ಬಿಡುವಿನ ಸಂದರ್ಭದಲ್ಲಿ ಫ್ಯಾಷನ್ ಜಗತ್ತಿನಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಫ್ಯಾಷನ್ ಶೋ, ರ್‍ಯಾಂಪ್ ವಾಕ್ ಅಂತೆಲ್ಲಾ ಗುರುತಿಸಿಕೊಂಡಿದ್ದ ಕೌಸ್ತುಭ ತುಂಬಾ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಇವರ ಭಾವಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ ಹಲವರು ಸಿನಿಮಾಗೆ ಹಾಗೂ ಸಿರೀಯಲ್‌ಗೆ ಆಫರ್ ಮಾಡಿದ್ದಾಗ ಆಸಕ್ತಿ ತೋರದ ಕೌಸ್ತುಭ ಅವಕಾಶಗಳನ್ನು ತಳ್ಳಿಕೊಂಡು ಬರುತ್ತಿದ್ದರು. ಒಂದು ದಿನ ಸ್ಯಾಂಡಲ್‌ವುಡ್‌ನ ನಟಿ ಮಾನ್ವಿತಾ ಹರೀಶ್ ಅವರು ಕೌಸ್ತುಭ ಅವರ ಫ್ಯಾಷನ್ ಶೋಗೆ ತೆರಳಿದ್ದಾಗ, ಅಲ್ಲಿ ಅವರನ್ನು ಗುರುತಿಸಿದ ಮಾನ್ವಿತಾ ತಾವು ಯಾಕೆ ಬಣ್ಣದ ಜಗತ್ತಿಗೆ ಬರಬಾರದು ಎಂದು ಕೇಳಿದ್ದರು, ಆಗಷ್ಟೆ ಕಥೆ ಸಿದ್ದವಾಗುತ್ತಿದ್ದ ನನ್ನರಸಿ ರಾಧೆ ತಂಡಕ್ಕೂ ಕೌಸ್ತುಭ ಅವರನ್ನು ಮಾನ್ವಿತಾ ಪರಿಚಯಿಸಿದ್ದರು. ಅಲ್ಲಿ ಸ್ಕ್ರೀನ್ ಟೆಸ್ಟ್ ಹಾಗೂ ಪಾತ್ರಕ್ಕೆ ಮ್ಯಾಚ್ ಆಗುತ್ತಾರೆ ಎಂದು ಪರೀಕ್ಷೆ ಮಾಡಿದಾಗ ಎಲ್ಲವೂ ಸೂಕ್ತ ಎನ್ನಿಸಿದೆ. ಹೀಗೇ ನನ್ನರಸಿ ಧಾರಾವಾಹಿಗೆ ಆಯ್ಕೆ ಆದ ನಟಿ ಕೌಸ್ತುಭ ತನ್ನ ನಟನೆ ಮೂಲಕವೇ ಈಗ ಹೆಸರುವಾಸಿಯಾಗಿದ್ದಾರೆ.

Kaustubha mani of Nannarasi Radhe fame to make sandalwood debut

ಕೆಲದಿನದಲ್ಲೆ ಸಿನಿಮಾಗೆ ಪದಾರ್ಪಣೆ ಮಾಡಲಿರುವ ಕೌಸ್ತುಭ ಮಣಿ ಇದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಜಿಮ್ ಡಯೇಟ್ ಅಂತೆಲ್ಲಾ ಕಸರತ್ತು ಆರಂಭಿಸಿದ್ದಾರೆ. ಈ ಸುದ್ದಿಯನ್ನು ಸ್ವತಃ ಕೌಸ್ತುಭ ಮಣಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಕಮೆಂಟ್ ಮಾಡುವ ಮೂಲಕ ನೆಚ್ಚಿನ ನಟಿಯ ಮುಂದಿನ ಹೆಜ್ಜೆಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

More from Filmibeat

English summary
Kaustubha mani of Nannarasi Radhe fame to make sandalwood debut with Ramachari 2.0.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X