1 ತಿಂಗಳಿನಲ್ಲಿ ಟಿವಿಯಲ್ಲಿ ಬರಲಿದೆ 'ಕವಚ' ಸಿನಿಮಾ
'ಕವಚ' ಸಿನಿಮಾ ಕಳೆದ ತಿಂಗಳು (ಏಪ್ರಿಲ್) 5 ರಂದು ಬಿಡುಗಡೆಯಾಗಿತ್ತು. ಆದರೆ, ಒಂದೇ ತಿಂಗಳಿನಲ್ಲಿ ಈ ಸಿನಿಮಾ ಕಿರುತೆರೆಗೆ ಬಂದಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಕವಚ' ಸಿನಿಮಾ ಪ್ರಸಾರ ಆಗುತ್ತಿದೆ. ಈಗಾಗಲೇ ಸ್ಟಾರ್ ಸುವರ್ಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಚಿತ್ರದ ಪ್ರೊಮೋ ಹಂಚಿಕೊಂಡಿದೆ. ಚಿತ್ರದ ಪ್ರಸಾರದ ದಿನಾಂಕ ಇನ್ನು ಬಹಿರಂಗ ಪಡಿಸದೆ, ಶೀಘ್ರದಲ್ಲೇ ಸಿನಿಮಾ ಪ್ರಸಾರ ಆಗುವುದು ಎಂದಷ್ಟೇ ತಿಳಿಸಲಾಗಿದೆ.
'ಕವಚ' ಒಂದೊಳ್ಳೆ ಸಿನಿಮಾವಾಗಿದ್ದು, ಮಲೆಯಾಳಂ ಭಾಷೆಯ 'ಒಪ್ಪಂ' ಚಿತ್ರದ ರಿಮೇಕ್ ಮಾಡಲಾಗಿತ್ತು. ಸಿನಿಮಾದ ವಿಷಯ, ಶಿವರಾಜ್ ಕುಮಾರ್ ನಟನೆ, ನಿರ್ದೇಶಕ, ಸಂಗೀತ, ಕ್ಯಾಮರಾ ಹೀಗೆ ಪ್ರತಿ ವಿಭಾಗದಲ್ಲಿ ಕೂಡ ದಿ ಬೆಸ್ಟ್ ಆಗಿತ್ತು.

ಸಿನಿಮಾ ಚೆನ್ನಾಗಿ ಇದ್ದರೂ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಉಳಿಯಲು ಸಾಧ್ಯ ಆಗಲಿಲ್ಲ. ಸಿನಿಮಾದ ಸೋಲಿಗೆ ಕಾರಣ ಏನು ಎನ್ನುವುದೇ ಪ್ರಶ್ನೆಯಾಗಿದೆ. ಚಿತ್ರದ ಬಿಡುಗಡೆಯ ದಿನಾಂಕ ಪದೇ ಪದೇ ಬದಲಿ ಆಗಿದ್ದೂ ಕೂಡ ಪ್ರೇಕ್ಷಕರ ಗೊಂದಲಕ್ಕೆ ಕಾರಣ ಆಗಿತ್ತು.
ಏನೇ ಆಗಿದ್ದರೂ, 'ಕವಚ' ಸಿನಿಮಾ ಶಿವರಾಜ್ ಕುಮಾರ್ ಕೆರಿಯರ್ ನಲ್ಲಿ ಬಂದ ಸುಂದರ ಸಿನಿಮಾಗಳಲ್ಲಿ ಒಂದಾಗಿದೆ. ಮೊದಲ ಬಾರಿಗೆ ಶಿವಣ್ಣ ಅಂಧನ ಪಾತ್ರ ಮಾಡಿದ್ದು, ಅದ್ಭುತವಾಗಿ ಅದನ್ನು ನಿಭಾಯಿಸಿದ್ದಾರೆ.


Click it and Unblock the Notifications











