ನಟಿ ಲಕ್ಷ್ಮೀ ಸಿದ್ದಯ್ಯ ಆಕ್ಸಿಡೆಂಟ್ ಮಾಡಿ, ಕೆಟ್ಟ ಭಾಷೆ ಬಳಸಿದ್ರಾ? ಇಬ್ಬರ ಆರೋಪ-ಪ್ರತ್ಯಾರೋಪ ಏನು?
ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಕಾರು ಅಪಘಾತ ಮಾಡಿದ್ದು ಅಲ್ಲದೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಧುರಿ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ದೂರು ಕೂಡ ದಾಖಲಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 6ನೇ ತಾರೀಖು ಈ ಘಟನೆ ನಡೆದಿದೆ.
ತನ್ನ ಸಹೋದರಿ ಜೊತೆಗೆ ಗಾಡಿಯಲ್ಲಿ ಹೋಗುತ್ತಿದ್ದಾಗ ಡಿಕ್ಕಿ ಹೊಡೆದಿದ್ದಾರೆ. ಜೊತೆಗೆ ಹಲ್ಲೆಮಾಡಿ, ಮೊಬೈಲ್ ಕೂಡ ಕಿತ್ತುಕೊಂಡಿದ್ದಾರೆ ಎಂದು ಮಾಧುರಿ ಆರೋಪ ಮಾಡಿದ್ದಾರೆ. I20 ಕಾರಿನಲ್ಲಿ ಆಕ್ಸಿಡೆಂಟ್ ಮಾಡಿದ್ದಾರೆ ಎಂದು ಆರೋಪಿಸಿದ್ದು ಈ ಘಟನೆ ಸಂಬಂಧ ಇಬ್ಬರೂ ಟಿವಿ9 ವಾಹಿನಿಗೆ ಸ್ಪಷ್ಟನೆ ನೀಡಿದ್ದಾರೆ.

ದೂರು ಕೊಟ್ಟ ಐಶ್ವರ್ಯಾ ಹೇಳಿದ್ದೇನು?
'ಅಂದು ನಾನು ನನ್ನ ಸಿಸ್ಟರ್ ಇಬ್ಬರು ಗಾಡಿಯಲ್ಲಿ ಹೋಗುತ್ತಾ ಇದ್ದೆವು. ಆಗ ಐ20 ಕಾರಲ್ಲಿ ಹೋಗುತ್ತಿದ್ದ ಅವರು ಡಿಕ್ಕಿ ಹೊಡೆದರು. ನಾನು ಅಕ್ಕ ಕೆಳಗಡೆ ಬಿದ್ದೆವು. ಯಾಕೆ ಮೇಡಂ ಈ ಥರ ಮಾಡಿದ್ದೀರಾ ಅಂತ ಕೇಳಿದೆವು. ಆಗ ಅಸಭ್ಯ ಭಾಷೆ ಬಳಸಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಮಾಡಿ, ಎತ್ತು ಗಾಡಿ ಎತ್ತು ಅಂದ್ರು. ಅದನ್ನು ಪೊಲೀಸ್ ಠಾಣೆಗೆ ಹೋಗಿ ಹೇಳಿದರೆ ಅದಕ್ಕೆಲ್ಲಾ ಏನು ಮಾಡೋಕೆ ಆಗಲ್ಲ ಅಂದ್ರು" ಎಂದು ದೂರಿದ್ದಾರೆ.
ದೂರು ತೆಗೆದುಕೊಳ್ಳದಿರಲು ಕಾರಣವೇನು?
'ಪೊಲೀಸರಿಗೆ ದೂರು ಕೊಟ್ಟರೂ ಅದನ್ನು ತೆಗೆದುಕೊಳ್ಳಲಿಲ್ಲ. ಏನೇ ಕೇಳಿದರು ನಿಮ್ಮ ಹತ್ತಿರ ಅದಕ್ಕೆ ಪ್ರೂಫ್ ಇಲ್ಲ ಅಂತಾರೆ. ಮೊಬೈಲ್ ವಿಚಾರಕ್ಕೂ ಅದೇ ಹೇಳಿದರು. ಸಿಗ್ನಲ್‌ನಲ್ಲಿ ಸಿಸಿ ಕ್ಯಾಮೆರಾ ಇರುತ್ತೆ ಚೆಕ್ ಮಾಡಿ ಎಂದರೆ, ಅದು ವರ್ಕ್ ಆಗ್ತಿಲ್ಲ ಅಂತಾರೆ. ಪ್ರತಿ ಸಲ ಹೋದಾಗಲೂ ನಮಗೆ ಸಮಾಧಾನ ಮಾಡಿ ಕಳುಹಿಸುತ್ತಿದ್ದಾರೆ. ಸಿಸಿಟಿವಿ ಇದೆ ಸಿಗ್ನಲ್‌ನಲ್ಲಿ. ಆದರೆ ಅದು ಆ್ಯಕ್ಟಿವ್ ಇಲ್ಲ ಅಂತಾರೆ. ಸಿಗ್ನಲ್ ಇದ್ದರು ಮೊಬೈಲ್ ಅನ್ನು ಫಾಸ್ಟ್ ಆಗಿ ಕಿತ್ತುಕೊಂಡು ಹೋಗಿ ಬಿಟ್ಟರು" ಎಂದಿದ್ದಾರೆ.
ಅಂದು ಆಗಿದ್ದಾದರೂ ಏನು..?
ಲಕ್ಷ್ಮೀ ಸಿದ್ಧಯ್ಯ ಮಾತನಾಡಿ "ನನ್ನಿಂದ ಯಾವ ಹಲ್ಲೆಯೂ ಆಗಿಲ್ಲ. ಮೈಸೂರು ರೋಡ್‌ನಲ್ಲಿ ತುಂಬಾ ಟ್ರಾಫಿಕ್ ಇತ್ತು. ಬಂಪರ್ ಟು ಬಂಪರ್ ಮೂವ್ ಆಗ್ತಾ ಇತ್ತು. ಈ ಹುಡುಗಿಯರು ಎಲ್ಲಿದ್ದರು ಅಂತ ಗೊತ್ತಿಲ್ಲ. ಇದ್ದಕ್ಕಿದ್ದ ಹಾಗೇ ಬಂದು ಕಾರಿಗೆ ಬಡಿದು ಕಾಮನ್ ಸೆನ್ಸ್ ಇಲ್ವಾ ಅಂತ ಬೈಯೋದಕ್ಕೆ ಶುರು ಮಾಡಿದರು. ಗಾಡಿ ಮೂಮೆಂಟ್ ಇದ್ದ ಕಾರಣ ಅವರ ಮಿರರ್ ಹಾಗೂ ನನ್ನ ಗಾಡಿ ಮಿರರ್‌ಗೆ ಟಚ್ ಆಯ್ತು. ಬಳಿಕ ನನ್ನ ಗಾಡಿ ಮುಂದೆಯೇ ಬಂದು ನಿಲ್ಲಿಸಿದರು. ನಾನು ಸಾಧ್ಯವಾದಷ್ಟು ಬ್ರೇಕ್ ಹಾಕಿದೆ. ಗ್ಯಾಪ್ ಇಲ್ಲದೇ ಇದ್ದ ಕಾರಣ ಸ್ವಲ್ಪ ಅವರ ಗಾಡಿಗೆ ಟಚ್ ಆಯ್ತು. ಆಗ ಏಕವಚನದಲ್ಲಿ ಮಾತನಾಡಿದರು. ನಾನು ಕೂಡ ಕೇಳಿದೆ. ಅದು ಮಾತಿಗೆ ಮಾತು ಜಾಸ್ತಿ ಆಯ್ತು. ತೀರಾ ಕೆಟ್ಟದಾಗಿ ಮಾತನಾಡಿ ಅಂತ ಆರೋಪ ಮಾಡಿದ್ದಾರೆ. ನಾನು ಅಲ್ಲಿಗೆ ಆ ವಿಚಾರವನ್ನು ಬಿಟ್ಟಿದ್ದೆ. ಆದರೆ ಮೂರು ತಿಂಗಳಾದ ಮೇಲೆ ಅವರು ಮೀಡಿಯಾಗೆ ಬಂದಿದ್ದಾರೆ" ಎಂದಿದ್ದಾರೆ.

ಮೊಬೈಲ್ ಕಿತ್ತುಕೊಂಡಿದ್ದು ನಿಜನಾ..?
'ರೆಕಾರ್ಡ್ ಮಾಡಿಕೊಂಡು ಪ್ಲೇ ಮಾಡುತ್ತಿರುವ ವಿಡಿಯೋ ಎಲ್ಲಾ ಅದೇ ಮೊಬೈಲ್‌ನದ್ದೆ. ಮಾಧುರಿ ಎಂಬ ಹುಡುಗಿ ನನ್ನ ಜೊತೆಗೆ ಮಾತನಾಡುತ್ತಿದ್ದಾಳೆ. ಐಶ್ವರ್ಯಾ ಅನ್ನೋಳು ರೆಕಾರ್ಡ್ ಮಾಡ್ತಾ ಇದ್ದಾಳೆ. ಐಶ್ವರ್ಯಾಳ ಮೊಬೈಲ್ ಕಿತ್ತುಕೊಂಡು ಹೋದ್ರು ಅಂದ್ರೆ ಈಗ ರಿಲೀಸ್ ಆದ ವಿಡಿಯೋ ಎಲ್ಲಿಂದ ಬಂತು. ನಾವಿಬ್ಬರೇ ಇದ್ವಿ ಅಂತ ಹೇಳಿದ್ದಾರೆ. ಆನಂದ್ ನನ್ನ ಫ್ರೆಂಡ್. ಮೊಬೈಲ್ ಕಿತ್ತುಕೊಂಡಿಲ್ಲ ಯಾರು..? ಕುಡಿದು ಬಂದು ಬನ್ನಿ ನಮ್ಮ ಆಫೀಸ್‌ಗೆ ಅಂತ ಜೋರು ಮಾಡ್ತಾ ಇದ್ದರು. ಆಗ ನಾನು ನನ್ನ ಫ್ರೆಂಡ್ ಆನಂದ್‌ಗೆ ಕಾಲ್ ಮಾಡಿದ್ದೆ. ತಕ್ಷಣ ಬಂದು ನೋಡಿ ಅದನ್ನು ಸರಿ ಮಾಡುವುದಕ್ಕೆ ಪ್ರಯತ್ನ ಪಟ್ಟರೆ ವಿನಃ, ಗಲಾಟೆ ಮಾಡಲಿಲ್ಲ" ಎಂದಿದ್ದಾರೆ.


Click it and Unblock the Notifications











