Kaveri Kannada Medium: ಕಾವೇರಿ ಖುಷಿ ತಂದ ಟೀಚರ್ ಪಾತ್ರ.. ಕನ್ನಡ ಭಾಷೆ ಬಗ್ಗೆ ಏನಂತಾರೆ ಪ್ರಿಯಾ ಆಚಾರ್?
ಇತ್ತೀಚೆಗೆ ಕನ್ನಡ ಕಿರುತೆರೆಯಲ್ಲಿ ಕನ್ನಡ ಭಾಷೆಯ ಬಗೆಗಿನ ಪ್ರೀತಿ ಹೆಚ್ಚಾಗಿರುವುದು ಕಾಣುತ್ತಿದೆ. 'ಕನ್ನಡತಿ' ಧಾರಾವಾಹಿ ಬಹಳಷ್ಟು ಖ್ಯಾತಿಯನ್ನು ಪಡೆದ ನಂತರ ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದು ತಮ್ಮ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಹೊರ ಬರುತ್ತಿದೆ.
ಕನ್ನಡ ಧಾರಾವಾಹಿಗಳಲ್ಲಿ ಪಾತ್ರಗಳನ್ನು ಮಾಡಿ ಜನರ ಮೆಚ್ಚುಗೆ ಪಾತ್ರವಾಗಿರುವ ನಟಿ ಪ್ರಿಯಾ ಆಚಾರ ಇತ್ತೀಚಿಗಷ್ಟೇ ತನ್ನ ಬಹುದಿನದ ಗೆಳೆಯನನ್ನು ಮದುವೆಯಾಗಿ ವೈವಾಹಿಕ ಜೀವನದಲ್ಲೂ ಬ್ಯುಸಿಯಾಗಿದ್ದಾರೆ. ವಿವಾಹದ ಬಳಿಕ ಇದೀಗ ಒಂದು ಹೊಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ಮಾಡುತ್ತಿದ್ದು, ಈ ಬಗ್ಗೆ ಬಹಳ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ
ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಧಾರಾವಾಹಿ ಇದಾಗಿದ್ದು ಪ್ರಿಯಾ ಆಚಾರ್‌ಗೆ ಈ ಅವಕಾಶ ಸಿಕ್ಕಿರುವುದು ಬಹಳ ಸಂತೋಷ ತಂದಿದೆಯಂತೆ. ಪ್ರಿಯಾ ಆಚಾರ್‌ಗೆ ತಮ್ಮ ಕನಸು ಮನಸ್ಸಿನಲ್ಲಿಯೂ ಇಷ್ಟು ಒಳ್ಳೆ ಪಾತ್ರ ಸಿಗುತ್ತದೆ ಎಂದು ಭಾವಿಸಿರಲಿಲ್ಲವಂತೆ. ಪ್ರಿಯಾ ಪತಿ ಸಿದ್ಧು ಮೂಲಿಮನಿ ಕನ್ನಡ ತುಂಬಾ ನಿರರ್ಗಳವಾಗಿದ್ದು ಆಕೆಗೂ ಕೂಡಾ ಆ ರೀತಿ ಕನ್ನಡ ಮಾತನಾಡಬೇಕೆಂಬ ಆಸೆ ತುಂಬಾ ದಿನಗಳಿಂದ ಇತ್ತಂತೆ.
ಕಾವೇರಿ ಟೀಚರ್ ಪಾತ್ರ ಖುಷಿ ತಂದಿದೆ
ಪ್ರಿಯಾ ಅವರ ಸ್ನೇಹಿತರು ಕೂಡ ಕನ್ನಡವನ್ನು ಉತ್ತಮಪಡಿಸಿಕೊಳ್ಳಲು ಆಗಾಗ ಸಲಹೆ ನೀಡುತ್ತಿದ್ದರಂತೆ. ಇದೀಗ ಈ ಧಾರಾವಾಹಿ ಎಲ್ಲಕ್ಕೂ ಒಂದೊಳ್ಳೆ ಅವಕಾಶ ಎಂದು ಆಕೆ ನಂಬಿದ್ದಾರೆ. ಕಾವೇರಿ ಟೀಚರ್ ಆಗಿ ಪಾತ್ರವನ್ನು ಮಾಡಲು ಬಹಳ ಖುಷಿಯಿದೆ ಎನ್ನುವ ಪ್ರಿಯಾ ಅವರು ಉತ್ತರ ಕರ್ನಾಟಕದ ಕನ್ನಡವನ್ನು ಮಾತನಾಡಲು ತುಂಬಾ ಎಕ್ಸೈಟ್ ಆಗಿದ್ದಾರೆ.

ಅದಿತಿಯಾಗಿ ಕಿರುತೆರೆಗೆ ಎಂಟ್ರಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ತಂಗಿ ಅದಿತಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಿಯಾ ಆಚಾರ್ ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದರೂ ನಟನೆಯ ಮೂಲಕ ಮನ ಸೆಳೆದಿದ್ದರು. ಜೀ ಕುಟುಂಬ ಅವಾರ್ಡ್‌ನಲ್ಲಿ ಬೆಸ್ಟ್ ಸಹೋದರಿ ಪ್ರಶಸ್ತಿಯನ್ನು ಕೂಡಾ ಆಕೆ ಪಡೆದುಕೊಂಡಿದ್ದರು.
ಪರಭಾಷೆಯಲ್ಲಿ ಬ್ಯುಸಿ
ಮುಂದೆ ತೆಲುಗಿನ 'ಆನಂದರಾಗಂ' ಧಾರಾವಾಹಿಯಲ್ಲಿ ನಾಯಕಿ ಐಶ್ವರ್ಯಾ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರಿಯಾ ಆಚಾರ್ ಧಮಾಕಾ ಸಿನಿಮಾದಲ್ಲಿ ನಾಯಕಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿಯೂ ಕಮಾಲ್ ಮಾಡಿದ್ದಾರೆ.
ಸಿದ್ಧುಮೂಲಿಮನಿ ಪತ್ನಿ ಈಕೆ!
"ದೇವನೊಬ್ಬ ಜಾದೂಗಾರ" ಎನ್ನುವ ಸಿರೀಸ್ ನಲ್ಲಿ ಮಂಜುಳ ಆಗಿ ಅಭಿನಯಿಸುತ್ತಿರುವ ಪ್ರಿಯಾ ಆಚಾರ್ ಅವರ ಪತಿ ಕೂಡಾ ನಟ! ಹೌದು, ಧಮಾಕಾ ಸಿನಿಮಾದಲ್ಲಿ ಸಹನಟನಾಗಿ ನಟಿಸಿದ್ದ ಸಿದ್ಧು ಮೂಲಿಮನಿ ಅವರು ಪ್ರಿಯಾ ಜೆ ಆಚಾರ್ ಅವರ ಪತಿ. ಧಮಾಕಾ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಈ ಜೋಡಿಯ ನಡುವೆ ಸ್ನೇಹ ಉಂಟಾಗಿ ಅದು ಪ್ರೀತಿಯಾಗಿ ತಿರುಗಿತು. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಈ ಜೋಡಿ ನಟನಾ ಜಗತ್ತಿನಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











