Kaveri kannada Medium: ಕನ್ನಡ ಮೀಡಿಯಂಗೆ ಪ್ರಮೋದಾ ದೇವಿ ಬೆಂಬಲ‌.. ನಿಮ್ದೆಲ್ಲಾ ಯಾವ ಮೀಡಿಯಂ?

By ಎಸ್ ಸುಮಂತ್

ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಮೀಡಿಯಂ ಶಾಲೆಗಳ ಸ್ಥಿತಿ ಏನಾಗಿದೆ ಅನ್ನೋದನ್ನು ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇಲ್ಲ. ಖಾಸಗಿ ಶಾಲೆಗಳ ಅಬ್ಬರದಿಂದ ಸರ್ಕಾರಿ ಶಾಲೆಗಳು ಬೆರಳೆಣಿಕೆಯಷ್ಟು ಆಗಿವೆ. ಅದರ ಬಗ್ಗೆ ಒಂದಷ್ಟು ಜಾಗೃತಿ ಮೂಡಿಸುವ ಅವಶ್ಯಕತೆ ತುಂಬಾ ಇದೆ. ಆ ಕೆಲಸವನ್ನು 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿ ಮಾಡುತ್ತಿದೆ.

ಸ್ಟಾರ್ ಸುವರ್ಣದಲ್ಲಿ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಹಲವು ವಿಚಾರಗಳನ್ನು ತಿಳಿಸಿಕೊಡಲಾಗುತ್ತಿದೆ. 'ಕನ್ನಡ ಮೀಡಿಯಂ' ಶಾಲೆಯ ಹಿಂದೆ ಎಷ್ಟು ಮಕ್ಕಳ ಭವಿಷ್ಯ ಅಡಗಿದೆ? ದಿಢೀರನೆ ಆ ಮಕ್ಕಳು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರುವುದು ಎಷ್ಟು ಕಷ್ಟ? ಹಣದ ವ್ಯವಸ್ಥೆ ಹೀಗೆ ಎಲ್ಲಾ ಸಮಸ್ಯೆಗಳನ್ನು ಆ ಧಾರಾವಾಹಿಯಲ್ಲಿ ಅನಾವರಣ ಮಾಡಲಾಗಿದೆ.

kaveri-kannada-medium-serial

ಅಗಸ್ತ್ಯನ ಟೀಂ ಕೆಂಗಣ್ಣಿಗೆ ಗುರಿಯಾದ ಕಾವೇರಿ

ಶಾಲೆಯ ಲ್ಯಾಬ್‌ಗೆ ಬೆಂಕಿ ಬಿದ್ದ ಘಟನೆಯನ್ನು ನೆನೆದು ಎಲ್ಲರೂ ಆತಂಕದಲ್ಲಿದ್ದರು. ಅದನ್ನೇ ಯೋಚನೆ ಮಾಡುತ್ತಿರುವಾಗ ಕಾವೇರಿ ಬಾಗಿಲು ತೆಗೆದು ಮೆಲ್ಲನೆ ಒಳ ಬಂದಳು. ಇದು ಅಗಸ್ತ್ಯನ ಅಕ್ಕನ ಕೋಪ ಹೆಚ್ಚು ಮಾಡಿತ್ತು. ಸಿಂಪತಿ ಗಿಟ್ಟಿಸಿಕೊಂಡು ಕೆಲಸ ಕೇಳುವುದಕ್ಕೆ ಬಂದೆಯಾ ಎಂದು ರೇಗಿದಳು. ಆದರೆ, ಕಾವೇರಿ ಮುಗ್ಧೆಯಾಗಿರುವ ಕಾರಣ ಸುಮ್ಮನೆ ನಿಂತು ಬಿಟ್ಟಳು. ಹಿಂದೆಯೇ ದೊಡ್ಡ ಬಲದಂತೆ ಬಂದದ್ದು ಪ್ರಮೋದಾ ದೇವಿ.

ಪ್ರಮೋದಾ ದೇವಿಯಿಂದ ಸಿಕ್ಕಿತು ಕೆಲಸ

ಕಾವೇರಿ ಅಟೆಂಡ್ ಮಾಡಿದ ಇಂಟರ್‌ವ್ಯೂ ಪ್ರಮೋದಾ ದೇವಿಯ ಗಮನಕ್ಕೂ ಬಂದಿತ್ತು. ಎಲ್ಲರಿಗೂ ಒಪ್ಪಿಗೆಯೂ ಆಗಿತ್ತು. ಆದರೆ ಬೇಕು ಅಂತಾನೇ ರಿಜೆಕ್ಟ್ ಮಾಡಿರುವುದು ಗೊತ್ತಾಗಿತ್ತು. ಆ ಕಾರಣದಿಂದಾಗಿಯೇ ಪ್ರಮೋದಾ ದೇವಿ ತನ್ನ ಅಧಿಕಾರ ಉಪಯೋಗಿಸಿಕೊಂಡು ಕೆಲಸಕ್ಕೆ ಸೇರಿಸಿಕೊಂಡರು. ಆದರೆ, ಮೊಮ್ಮಕ್ಕಳು ಆ ನಿರ್ಧಾರವನ್ನು ಪ್ರಶ್ನಿಸಿದರು. ಆಗ ಪ್ರಮೋದಾ ದೇವಿ, ಕಾವೇರಿಯ ಟ್ಯಾಲೆಂಟ್ ಬಗ್ಗೆ ವಿವರಿಸಿದ್ದಾರೆ.

kaveri-kannada-medium-serial

ಕಾವೇರಿ ಟ್ಯಾಲೆಂಟ್‌ಗೆ ಎಲ್ಲರೂ ಸಮ್ಮತಿ

ಅಗಸ್ತ್ಯನ ವಾದ ಏನಂದ್ರೆ, "ನಮ್ಮದು ಇಂಗ್ಲಿಷ್ ಮೀಡಿಯಂ ಶಾಲೆ. ಇಲ್ಲಿ ಇಂಗ್ಲಿಷ್ ಅವಶ್ಯಕತೆ ತುಂಬಾ ಇದೆ. ಆದರೆ, ಇವಳಿಗೆ ಇಂಗ್ಲಿಷ್ ಬರಲ್ಲ" ಎನ್ನೋದು ವಾದ. ಆದರೆ, ಕಾವೇರಿ ಮಾಡಿದ ಪಾಠ ಎಲ್ಲಾ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿಯೇ ಇತ್ತು. ಸಂದರ್ಶನಕ್ಕೆ ಕುಳಿತಿದ್ದವರನ್ನೇ ಪ್ರಮೋದಾ ದೇವಿ ಕೇಳಿದ್ದಾರೆ. ಕಾವೇರಿ ಮಾಡಿದ ಪಾಠ ಎಲ್ಲರಿಗೂ ಅರ್ಥವಾಯಿತಾ ಎಂದು. ಅದಕ್ಕೆ ಎಲ್ಲರೂ ಹೌದು ಎಂದಿದ್ದಾರೆ. ಆದರೆ, ಅಗಸ್ತ್ಯ ಅದನ್ನು ಒಪ್ಪುಕೊಳ್ಳುವುದಕ್ಕೆ ಸಿದ್ಧರಿಲ್ಲ. ಪ್ರಮೋದಾ ದೇವಿ ಕಡೆಗೂ, ಇಲ್ಲಿ ನಾನು ಛೇರ್ಮನ್. ನನಗೆ ಒಬ್ಬರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಅಧಿಕಾರ ಇದೆ. ಹೀಗಾಗಿ ಇಂದಿನಿಂದ ಕಾವೇರಿ ಸೈನ್ಸ್ ಟೀಚರ್ ಆಗಿ ಸೇರಿದ್ದಾರೆ ಎಂದು ಮಾತಿನ ಆದೇಶ ಹೊರಡಿಸಿಯೇ ಬಿಟ್ಟರು.

ಕನ್ನಡ ಮೀಡಿಯಂ ಬೆಂಬಲಿಸಿದ ಪ್ರಮೋದಾ ದೇವಿ

ಇಷ್ಟೆಲ್ಲಾ ಮಾತನಾಡುವಾಗಲೂ ಅಗಸ್ತ್ಯನ ಬಾಯಲ್ಲಿ ಬಂದಿದ್ದು ಮತ್ತದೇ ಇಂಗ್ಲಿಷ್ ಮೀಡಿಯಂ ಎಂಬ ಪದ. ಅದಕ್ಕೆ ಪ್ರಮೋದಾ ದೇವಿ ಕೂಡ ಸರಿಯಾಗಿಯೇ ತಿರುಗೇಟು ನೀಡಿದರು. ಇಂಗ್ಲಿಷ್ ಮೀಡಿಯಂ ಇಂಗ್ಲಿಷ್ ಮೀಡಿಯಂ ಅಂತಿಯಲ್ಲ. ಶಾಲೆಯ ಮರ್ಯಾದೆ ಉಳಿಸಿದ್ದು ಅದೇ ಕನ್ನಡ ಮೀಡಿಯಂ ಹುಡುಗಿ. ಲ್ಯಾಬ್‌ಗೆ ಬೆಂಕಿ ಬಿದ್ದಾಗ ಎಲ್ಲಿ ಹೋಗಿದ್ದರು ನಿಮ್ಮ ಇಂಗ್ಲಿಷ್ ಮೀಡಿಯಂ ಶಿಕ್ಷಕರು. ಕನ್ನಡ ಮೀಡಿಯಂ ಕಾವೇರಿಯಿಂದಾನೇ ಆ ಸಮಸ್ಯೆ ಬಗೆಹರಿದಿದ್ದು ಎಂದು ಮೊಮ್ಮಕ್ಕಳಿಗೆ ಅರ್ಥವಾಗುವಂತೆ ತಿಳಿಸಿದ್ದಾರೆ.

More from Filmibeat

English summary
Kaveri Kannada Medium Serial September 11th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X