Kaveri Kannada Medium: ವಿವೇಕ್ ಕೇಳಿದ ವರದಕ್ಷಿಣೆ ಪ್ರಮೋದಾದೇವಿ, ಅಗಸ್ತ್ಯನ ತಲೆ ಕೆಡಿಸಿದೆ !!

By ಎಸ್ ಸುಮಂತ್

'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಕಾವೇರಿ ತಾಳಿಯ ವಿಚಾರಕ್ಕೆ ಹೆಚ್ಚು ಆದ್ಯತೆ ಕೊಡುತ್ತಾಳೆ. ಮನೆಯಲ್ಲಿ ಸ್ಥಾನವೇ ಸಿಗದೆ ಹೋದರು, ಅಗಸ್ತ್ಯನನ್ನು ಮನಸ್ಸಿನಲ್ಲಿಯೇ ಆರಾಧಿಸುತ್ತಾಳೆ. ಗಂಡನ ಆಯಸ್ಸಿಗಾಗಿ ಹಾರೈಕೆ ಮಾಡುತ್ತಾಳೆ. ಇತ್ತೀಚೆಗಷ್ಟೇ ದುಷ್ಟರು ತಾಳಿಗೆ ಕೈ ಹಾಕಿದ್ದೆ ತಡ, ರುಂಡ ಮುಂಡವನ್ನೆಲ್ಲಾ ಚಂಡಾಡಿ ಬಿಟ್ಟಳು. ಅದನ್ನು ಕಂಡ ಅಗಸ್ತ್ಯನೇ ದಂಗಾಗಿ ಹೋಗಿದ್ದ.

ತಾಳಿಗೆ ಕೈ ಹಾಕಿದರೇನೆ ಬಿಡದಾ ಕಾವೇರಿ, ಗಂಡನನ್ನೇ ಕಿತ್ತುಕೊಂಡರೆ ಬಿಡುತ್ತಾಳಾ..? ಈಗ ಕಾವೇರಿಯ ವೈಯಕ್ತಿಕ ಜೀವನಕ್ಕೆ ವೃಂದಾ ಕೈ ಹಾಕುತ್ತಿದ್ದಾಳೆ. ಅದನ್ನ ಕಾವೇರಿ ಹೇಗೆ ಸಹಿಸುತ್ತಾಳೆ..? ಅಗಸ್ತ್ಯ ಹೇಗೆ ಅದರಿಂದ ದೂರ ಸರಿಯುತ್ತಾನೆ ಎಂಬುದನ್ನು ನೋಡುವ ಕುತೂಹಲವಿದೆ.

Kaveri Kannada Medium Serial

ಅನಿಕಾ-ವಿವೇಕ್ ನಿಶ್ಚಿತಾರ್ಥ

ಪ್ರಮೋದಾ ದೇವಿ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ ಜೋರಾಗಿದೆ. ಮನೆಯ ಮುದ್ದಿನ ಮಗಳು ಅನಿಕಾ, ತಾನೂ ಇಷ್ಟಪಟ್ಟಿದ್ದ ಹುಡುಗನ ಕೈ ಹಿಡಿಯುತ್ತಿದ್ದಾಳೆ‌. ಅನಿಕಾಳ ಆಸೆಗೆ ಮನೆಯಲ್ಲಿ ಯಾರೂ ಬೇಡ ಎನ್ನುವುದಿಲ್ಲ. ಅದರಂತೆ ಈಗ ನಿಶ್ಚಿತಾರ್ಥ ಕೂಡ ಅದ್ದೂರಿಯಾಗಿ ನಡೆಯುತ್ತಿದೆ. ಮನೆ ಮಂದಿಯೆಲ್ಲಾ ಸಂತಸದಿಂದ ಇದ್ದಾರೆ. ಅಷ್ಡೆ ಅಲ್ಲ ಅನಿಕಾ ಕೂಡ ಸಿಕ್ಕಾಪಟ್ಟೆ ಖುಷಿಯಲ್ಲಿದ್ದು, ವಿವೇಕ್ ಜೊತೆಗೆ ಮದುವೆಯಾದ ಮೇಲೆ ಅಮೆರಿಕಾದಲ್ಲಿಯೇ ಸೆಟಲ್ ಆಗಲಿದ್ದಾಳೆ. ಹೀಗಾಗಿಯೇ ಅಗಸ್ತ್ಯ ತಂಗಿ ಹೇಳಿದ್ದೆಲ್ಲವನ್ನು ನೆರವೇರಿಸಿಕೊಡಲಿದ್ದಾನೆ.

ಮನೆಯವರಿಗೆಲ್ಲಾ ಶಾಕ್

ಅದ್ದೂರಿ ನಿಶ್ಚಿತಾರ್ಥದಲ್ಲಿ ವಿವೇಕ್ ಒಂದು ಕ್ಷಣ ಎಲ್ಲರಿಗೂ ಶಾಕ್ ನೀಡಿದ್ದಾನೆ. ಎಲ್ಲರೂ ಇನ್ನೇನು ಚಪ್ಪಾಳೆ ತಟ್ಟಬೇಕು ಎನ್ನುವಷ್ಟರಲ್ಲಿ ವಿವೇಕ್ ಶಾಕ್ ಕೊಟ್ಟಿದ್ದಾನೆ. ಉಂಗುರ ಹಾಕುವುದನ್ನು ನಿಲ್ಲಿಸಿದ್ದಾನೆ. ಎಲ್ಲರೂ ಯಾಕೆ ಎಂದು ಕೇಳಿದಾಗ ನನಗೆ ವರದಕ್ಷಿಣೆ ಬೇಕು ಎಂದಿದ್ದಾನೆ. ವಿವೇಕ್ ತಮ್ಮಷ್ಟೇ ಸ್ಟೇಟಸ್ ಇರುವ ವ್ಯಕ್ತಿ, ಘನತೆ, ಗೌರವ ಹೊಂದಿರುವ ವ್ಯಕ್ತಿ. ಆದರೂ ವರದಕ್ಷಿಣೆ ಕೇಳಿ ಬಿಟ್ಟನಲ್ಲ ಎಂಬ ಬೇಸರ ಮನೆ ಮಂದಿಗೆಲ್ಲ ಕಾಡಿದೆ. ಬಳಿಕ ಎಲ್ಲರೂ ಸಾವಧಾನದಿಂದಾನೇ ಕೇಳಿದ್ದು, ಏನು ಬೇಕಾದರೂ ಕೇಳಿ ಕೊಡುತ್ತೀವಿ ಎಂದು ಎಲ್ಲರೂ ಪ್ರಾಮೀಸ್ ಮಾಡಿದ್ದಾರೆ.

Kaveri Kannada Medium Serial

ತಂಗಿಗಾಗಿ ಅಗಸ್ತ್ಯನನ್ನು ಕೇಳಿದ ವಿವೇಕ್

ವೃಂದಾಳಿಗೆ ಅಗಸ್ತ್ಯನ ಮೇಲೆ ಮನಸ್ಸಾಗಿದ್ದಿದ್ದು ವಿವೇಕ್‌ಗೆ ಕೂಡ ಗೊತ್ತು. ಅದೇ ಕಾರಣಕ್ಕೆ ಈಗ ತಂಗಿಗಾಗಿ ವರದಕ್ಷಿಣೆ ಕೇಳಿದ್ದಾನೆ. ಅಗಸ್ತ್ಯ, ನೀವೂ ಏನು ಬೇಕಾದರೂ ಕೇಳಿ ಕೊಡುತ್ತೀನಿ. ನನಗೆ ಅಕ್ಕನ ಸಂತೋಷ್ ಮುಖ್ಯ ಎಂದಾಗ, ನೀವೆ ಬೇಕು ಎಂದಿದ್ದಾರೆ. ನೀವೂ ನನ್ನ ತಂಗಿಯನ್ನು ಮದುವೆಯಾಗಬೇಕು. ಇದೇ ನೀವೂ ನನಗೆ ಕೊಡುವ ವರದಕ್ಷಿಣೆ ಎಂದಿದ್ದಾನೆ. ಇದನ್ನು ಕೇಳಿದ ವೃಂದಾ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾಳೆ.

ಪ್ರಮೋದಾ ದೇವಿ ಸಹಿಸುತ್ತಾರಾ?

ಅಗಸ್ತ್ಯ ಕೊಟ್ಟ ಮಾತಿಗೂ, ವಿವೇಕ್ ಕೇಳುದ ವರದಕ್ಷಿಣೆಗೂ ಎರಡನ್ನು ನೋಡಿ ಪ್ರಮೋದಾ ದೇವಿ ಶಾಕ್ ಆಗಿದ್ದಾರೆ. ಇನ್ನು ಕಾವೇರಿ ಕೂಡ ದಂಗು ಬಡಿದವಳಂತೆ ನಿಂತಿದ್ದಾಳೆ. ಕಾವೇರಿ ಜೊತೆಗೆ ಮದುವೆಯಾಗಿರುವುದು ಇಡೀ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ವೃಂದಾ ಇಷ್ಟಪಡುತ್ತಿರುವುದು ಮನೆಯವರಿಗೆಲ್ಲಾ ಅರ್ಥವಾದಂತೆ‌ ಕಾಣುತ್ತಿದೆ. ಅನಿಕಾಳ ಸಂತೋಷವೂ ಮುಖ್ಯ. ಹೀಗಾಗಿ ಮನೆಯವರೆಲ್ಲ ವೃಂದಾಳ ಮದುವೆಗೆ ಓಕೆ ಎಂದರೆ, ಅದನ್ನು ತಪ್ಪಿಸುವುದಕ್ಕೆ ಪ್ರಮೋದಾ ದೇವಿ, ಕಾವೇರಿಯಿಂದಾನೂ ಸಾಧ್ಯವಾಗುವುದಿಲ್ಲ. ಈಗ ಅಗಸ್ತ್ಯ ಮೊದಲೇ ಎದುರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಅಗಸ್ಯನಿಗೆ ದಾರಿ ಕಾಣದಾಗಿದೆ.

More from Filmibeat

English summary
Kaveri Kannada Medium Serial Written Update on December 19th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X