Kaveri kannada Medium: ವೃಂದಾಳ ಅಹಂಕಾರಕ್ಕೆ ಬ್ರೇಕ್ ಹಾಕಿದ ಅಗಸ್ತ್ಯ : ಕಾವೇರಿ ಬಗ್ಗೆ ಇನ್ನಿಲ್ಲದ ಕಾಳಜಿ!
'ಕಾವೇರಿ ಕನ್ನಡ ಮೀಡಿಯಂ' ನಾಯಕಿ ಇಂಗ್ಲೀಷ್ ಮೀಡಿಯಂಗೆ ಬಂದು ಪಾಠ ಮಾಡುತ್ತಿದ್ದಾಳೆ. ಯಾವುದೋ ಒಂದು ಸವಾಲಿನ ಮೇಲೆ ಈ ಕೆಲಸ ಒಪ್ಪಿಕೊಂಡಿದ್ದಾಳೆ. ಆದರೆ ಇದೆ ನಡುವೆ ಕಾವೇರಿಯ ಜೀವನ ದಿಕ್ಕೆ ಬದಲಾಗಿ ಹೋಗಿದೆ. ಮದುವೆಯೆಂಬ ಬಂಧಕ್ಕೆ ಸಿಲುಕಿ, ಪ್ರೀತಿಯೇ ಹುಟ್ಟದ ಹೃದಯದಲ್ಲಿ ಪ್ರೀತಿಯನ್ನು ಬಯಸುತ್ತಿದ್ದಾಳೆ.
ಅಗಸ್ತ್ಯ ಇಷ್ಟಪಟ್ಟ ಜೀವನವೇ ಬೇರೆ, ಇಷ್ಟಪಟ್ಟ ಸಂಗಾತಿಯೇ ಬೇರೆ. ಆದರೆ ಅಜ್ಜಿಯ ಆಜ್ಞೆಯಂತೆ ಕಾವೇರಿಗೆ ತಾಳಿಯನ್ನೇನೋ ಕಟ್ಟಿದ. ಕಾವೇರಿಗೂ ನಿರೀಕ್ಷಿಸಿದ ಹುಡುಗ ಅಗಸ್ತ್ಯ ಆಗಿರಲಿಲ್ಲ. ಕನಸ್ಸನ್ನು ಕಂಡವಳಲ್ಲ. ವಿಧಿ ಮೊದಲೇ ಬರೆದಿತ್ತು ಎನಿಸುತ್ತದೆ. ಅದು ಪ್ರಮೋದಾ ದೇವಿಯಿಂದ ನೆರವೇರಿದೆ. ಅಗಸ್ತ್ಯನಿಗೆ ಪ್ರೀತಿ ಇಲ್ಲದೆ ಇರಬಹುದು. ಆದರೆ ಕಾಳಜಿಯಂತು ಕಡಿಮೆಯಾಗಿಲ್ಲ. ಕಾವೇರಿ ಕಂಡರೆ ಅಹಂಕಾರ ತೋರಿಸುವ ವೃಂದಾಳಿಗೆ, ಅಗಸ್ತ್ಯ ಸರಿಯಾದ ಪಾಠವನ್ನೆ ಕಲಿಸಿದ್ದಾನೆ.

ಅಗಸ್ತ್ಯನದ್ದೆ ಚಿಂತೆಯಲ್ಲಿದ್ದ ಕಾವೇರಿಗೆ ಮತ್ತೆ ಆತಂಕಕ್ಕೆ ನೂಕಿದ ವಿವೇಕ್ ಬೇಡಿಕೆ
ಅನಿಕಾ ಹಾಗೂ ವಿವೇಕ್ ನಿಶ್ಚಿತಾರ್ಥದ ಬಳಿಕ ಕಾವೇರಿ ಹಾಗೂ ಪ್ರಮೋದಾ ದೇವಿ ಶಾಕ್‌ನಲ್ಲಿಯೇ ಇದ್ದಾರೆ. ಅಗಸ್ತ್ಯ ಕೂಡ ಏನು ಮಾಡಬೇಕು ಎಂಬ ಗೊಂದಲದಲ್ಲಿಯೇ ಇದ್ದಾನೆ. ಅಗಸ್ತ್ಯನಿಗೆ ಪ್ರೀತಿ ಹುಟ್ಟಿಲ್ಲದೆ ಇರಬಹುದು. ಆದರೆ ಕಾವೇರಿಯನ್ನು ಮದುವೆಯಾಗಿದ್ದೀನಿ ಎಂಬ ನೆನಪಂತು ಇದೆ. ಆದರೆ ಕಾವೇರಿಗೆ, ಅಗಸ್ತ್ಯ ಎಲ್ಲಿ ತನ್ನಿಂದ ದೂರವಾಗಿ ಬಿಡುತ್ತಾನೋ ಎಂಬ ಆತಂಕವಿದೆ. ಅದೇ ಚಿಂತೆಯಲ್ಲಿ ಮಂಕಾಗಿ ಹೋಗಿದ್ದಾಳೆ.
ಕಾವೇರಿಗೆ ಗುದ್ದಿದ ವೃಂದಾಳ ಕಾರು, ಕಾವೇರಿಯನ್ನು ಕಾಪಾಡಿದ ಅಗಸ್ತ್ಯ
ಕಾವೇರಿ ಮುಂದೆ ಬರುತ್ತಾ ಇರುವುದನ್ನು ನೋಡಿದರು ಕೂಡ, ವೃಂದಾ ತನ್ನ ಅಹಂಕಾರವನ್ನು ಪ್ರದರ್ಶನ ಮಾಡಿದ್ದಾಳೆ. ಕಾವೇರಿಗೆ ಕಾರು ಗುದ್ದಿದ್ದಾಳೆ. ಕಾರಿನಿಂದ ಕೆಳಗೆ ಇಳಿದ ವೃಂದಾ, ಮೊದಲು ರಕ್ಷಣೆ ಮಾಡುವುದನ್ನು ಬಿಟ್ಟು, ಕಾವೇರಿಯನ್ನೇ ಬಾಯಿಗೆ ಬಂದಂತೆ ಬೈದಿದ್ದಾಳೆ. ಅಲ್ಲಿಗೆ ಓಡೋಡಿ ಬಂದ ಅಗಸ್ತ್ಯ, ಮೊದಲು ಕಾವೇರಿಯನ್ನು ಮೇಲಕ್ಕೆ ಎತ್ತಿದ್ದಾನೆ. ಕಾವೇರಿ, ನನ್ನದೇ ತಪ್ಪು ಬಿಡಿ ಸರ್ ಎಂದು ಅಲ್ಲಿಂದ ಹೊರಟು ಬಿಟ್ಟಿದ್ದಾಳೆ.

ವೃಂದಾಳ ಅಹಂಕಾರಕ್ಕೆ ಬ್ರೇಕ್ ಹಾಕಿದ ಅಗಸ್ತ್ಯ
ಮನೆಯ ಕಾಂಪೌಂಡ್ ಒಳಗೆ ನಿಂತಿದ್ದ ಅಗಸ್ತ್ಯ, ಕಾವೇರಿಯನ್ನು ಹಾಗೂ ವೃಂದಾಳನ್ನು ಗಮನಿಸಿದ್ದಾನೆ. ವೃಂದಾ ವಾದ ಮಾಡುವುದಕ್ಕೆ ಬಂದಾಗ ಬೈದು ಬುದ್ದಿ ಹೇಳಿದ್ದಾನೆ. ವೃಂದಾಳಿಗೆ ಜಗಳ ಮಾಡಿದರೆ ಪ್ರಯೋಜನವಿಲ್ಲ ಎಂಬುದು ಗೊತ್ತಾಗಿ, ಆ ವಿಚಾರವನ್ನು ಅಲ್ಲಿಗೆ ನಿಲ್ಲಿಸಿದ್ದಾಳೆ. ಶಾಪಿಂಗ್ ಹೋಗೋಣಾ ಎಂದು ಕರೆದಿದ್ದಾಳೆ. ಆದರೆ ಇದಕ್ಕೆ ಒಪ್ಪದ ಅಗಸ್ತ್ಯ, ನನಗೆ ಕಾಲೇಜಿನಲ್ಲಿ ಹೆಚ್ಚು ಕೆಲಸ ಇದೆ ಎಂದು ಮುಖಕ್ಕೆ ಹೊಡೆದವನಂತೆ ಹೇಳಿ, ಕಾರು ಹತ್ತಿ ಹೊರಟೇ ಬಿಟ್ಟಿದ್ದಾನೆ. ಇದನ್ನು ಗಮನಿಸಿದ ಅಗಸ್ತ್ಯನ ತಾಯಿಗೂ ಒಂದು ಕ್ಷಣ ಶಾಕ್ ಆಗಿದೆ. ವೃಂದಾಳಿಗಂತೂ ಕೋಪವೇ ಬಂದಿದೆ.
ಕಾವೇರಿ ಮನಸ್ಸಿನ ನೋವನ್ನು ಅರ್ಥ ಮಾಡಿಕೊಳ್ಳುತ್ತಾನಾ ಅಗಸ್ತ್ಯ..?
ಅಗಸ್ತ್ಯನ ಮನಸ್ಸಲ್ಲಿ ಕಾವೇರಿಗೆ ಹೆಚ್ಚು ಪೆಟ್ಟಾಗಿದೆಯಾ ಎಂಬ ಕಾಳಜಿ. ಕಾವೇರಿಗೆ, ಅಗಸ್ತ್ಯ, ವೃಂದಾಳನ್ನು ಮದುವೆಯಾಗಿ ಬಿಟ್ಟರೆ ಎಂಬ ಭಯ. ಕಾಲೇಜುನ ಲಿಫ್ಟ್ ನಲ್ಲಿ ಗಂಡ - ಹೆಂಡತಿ ಎದುರು ಬದುರಾಗಿದ್ದಾರೆ. ಕಾಲಿನ ನೋವಿನ ಬಗ್ಗೆ ಕಾವೇರಿ ಬಳಿ ಕೇಳುತ್ತಿದ್ದರೆ, ಮೌನವಾಗಿ ವೃಂದಾಳ ಬಗ್ಗೆ ಯೋಚಿಸುತ್ತಿದ್ದಾಳೆ ಕಾವೇರಿ. ಇದೇ ಸಮಯಕ್ಕೆ ಲಿಫ್ಟ್ ಕೂಡ ಆಫ್ ಆಗಿದೆ. ಇಬ್ಬರೇ ಹೀಗೆ ಒಂದೇ ಕಡೆ ಲಾಕ್ ಆಗಿದ್ದು, ಈಗಲಾದರೂ ಮನ ಬಿಚ್ಚಿ ಮಾತನಾಡುತ್ತಾರಾ ನೋಡಬೇಕಿದೆ. ಕಾವೇರಿ ಮೇಲೆ ಅಗಸ್ತ್ಯನಿಗೆ ಪ್ರೀತಿಯಾಗುತ್ತಾ ಎಂಬ ಕುತೂಹಲವಿದೆ.


Click it and Unblock the Notifications











