Kaveri kannada Medium: ಸೊಸೆಯಂದಿರ ಆಯ್ಕೆ ಬಗ್ಗೆ ಅಂಬಿಕಾ- ಪ್ರಮೋದಾ ದೇವಿ ಮಧ್ಯೆ ಚರ್ಚೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿ ಶುರುವಾದಾಗಿನಿಂದ ಎಲ್ಲರಿಗೂ ಇಷ್ಟವಾಗುತ್ತಿದೆ. ಕನ್ನಡ ಮೀಡಿಯಂ ಮಕ್ಕಳಲ್ಲಿ ಎಷ್ಟೇ ಪ್ರತಿಭೆ ಇದ್ದರು, ಇಂಗ್ಲಿಷ್ ಮೀಡಿಯಂನವರು ಯಾವ ರೀತಿ ನೋಡುತ್ತಾರೆ..? ಇಂಗ್ಲಿಷ್ ಮೀಡಿಯಂ ಶಾಲೆಯಲ್ಲೂ ಕನ್ನಡದ ಅಗತ್ಯ ಎಷ್ಟಿದೆ ಎಂಬುದೆಲ್ಲವನ್ನು ಈ ಧಾರಾವಾಹಿ ಮೂಲಕ ಅಚ್ಚುಕಟ್ಟಾಗಿ ತೋರಿಸಲಾಗುತ್ತಿದೆ. ಎಲ್ ಕೆ ಜಿಯಿಂದಾನೇ ಇಂಗ್ಲೀಷ್ ಮೀಡಿಯಂನಲ್ಲಿ ಬೆಳೆದ ಮಕ್ಕಳಾದರೂ ಕನ್ನಡ ಮೀಡಿಯಂ ಮಕ್ಕಳು ಅವರಿಗೆ ಸ್ಪರ್ಧೆ ನೀಡುತ್ತಾರೆ ಎಂಬುದು ತಿಳಿದಿದೆ.
ಅನಿಕಾ, ವೃಂದಾ ಸೇರಿಕೊಂಡು ಕಾವೇರಿಯನ್ನು ಹೇಗಾದರೂ ಮಾಡಿ ಮನೆಯಿಂದ, ಶಾಲೆಯಿಂದ ಹೊರಗೆ ಹಾಕುವುದಕ್ಕೆ ಸಾಕಷ್ಟು ಐಡಿಯಾಗಳನ್ನು ಮಾಡುತ್ತಿರುತ್ತಾರೆ. ಆದರೆ ಈಗ ಅಗಸ್ತ್ಯನ ಒಲವು ಜಾರುಗೆ, ಬಲವು ಸಿಕ್ಕಿದೆ. ಹೀಗಾಗಿ ಕಾವೇರಿ ನೆಮ್ಮದಿಯಾಗಿದ್ದಾಳೆ.

ಮನೆ ದೇವರಿಗೆ ಬಂದ ಪ್ರಮೋದಾ ದೇವಿ ಕುಟುಂಬ
ಮನೆಯವರೆಲ್ಲಾ ಮನೆ ದೇವರಿಗೆ ಹೊರಟಿದ್ದಾರೆ. ಮನೆಯಲ್ಲಿ ಕಾವೇರಿ ವಿಚಾರ ತಿಳಿದ ಮೇಲೆ ಅವಮಾನ ಮಾಡುವುದೇ ಜಾಸ್ತಿಯಾಗಿದೆ. ಹೀಗಾಗಿ ಅಗಸ್ತ್ಯ, ಮನೆ ದೇವರಿಗೆ ಬರುವುದು ಬೇಡ, ಅಲ್ಲಿಯೂ ಅವಮಾನ ಮಾಡುತ್ತಾರೆ ಎಂದು ಕಾವೇರಿಗೆ ಹೇಳಿದ್ದ. ಆದರೆ ಕಾವೇರಿ ಅದನ್ನು ಕೇಳಲಿಲ್ಲ. ದೇವರ ಆಶೀರ್ವಾದವೇ ಇರಬೇಕು, ಬರುತ್ತೀನಿ ಅಂತ ಹೇಳಿ ಹೊರಟೆ ಬಿಟ್ಟಳು.
ವೃಂದಾಳಿ ಪೂಜೆ ನಿರೀಕ್ಷೆ ಕಷ್ಟ
ದೇವಸ್ಥಾನ ತಲುಪಿದಾಗ ಪ್ರಸಾದ ಮಾಡುವ ವಿಚಾರಕ್ಕೆ ಅಂಬಿಕಾಳೆ ನೆನಪು ಮಾಡಿದ್ದಾಳೆ. ಬೇಗ ಬೇಗ ರೆಡಿ ಮಾಡಿಕೊಳ್ಳಿ ಪ್ತಸಾದಕ್ಕೆ ಎಂದು. ಪ್ರಸಾದವನ್ನು ಮನೆಯವರೇ ಸಿದ್ಧ ಮಾಡಬೇಕು. ಅದು ಸೌದೆ ಒಲೆಯಲ್ಲಿ. ಇದನ್ನು ಕೇಳಿದ ವೃಂದಾಗೆ ಒಂದು ಕಡೆ ಕುತೂಹಲ ಹುಟ್ಟಿ, ಅತ್ತೆಯ ಬಳಿ ಕೇಳಿದ್ದಾಳೆ. ಆದರೆ ಮುಂದಿನ ವರ್ಷಗಳಲ್ಲಿ ನೀನೆ ಇದೆಲ್ಲವನ್ನು ಮಾಡಬೇಕು ಎಂದರೆ, ನೇರವಾಗಿಯೇ ಅದೆಲ್ಲಾ ಸಾಧ್ಯವಿಲ್ಲ ಎಂದೇ ಹೇಳಿದ್ದಾಳೆ. ಇದು ಅಂಬಿಕಾಗೂ ಶಾಕಿಂಗ್ ಎನಿಸಿದೆ.
ಸೊಸೆಯ ಆಯ್ಕೆ ಬಗ್ಗೆ ಕ್ಲಾಸ್
ವೃಂದಾಳ ಮಾತು ಕೇಳಿ ಪ್ರಮೋದಾ ದೇವಿಗೆ ಖುಷಿ. ಅಂಬಿಕಾಳ ಬಳಿ ಬಂದು, ನೀನು ಆಯ್ಕೆ ಮಾಡಿರುವ ಸೊಸೆ ಈ ರೀತಿಯಾದಂತವಳು. ಮುಂದೆ ನಮ್ಮ ಶಾಸ್ತ್ರ, ಸಂಪ್ರದಾಯದ ಕಥೆ ಅಷ್ಟೇ ಎಂದಿದ್ದಾರೆ. ಅಷ್ಟಕ್ಕೂ ಅಂಬಿಕಾ ತನ್ನ ಭವಿಷ್ಯದ ಸೊಸೆಯನ್ನು ಬಿಟ್ಟುಕೊಡುವುದಕ್ಕೆ ಸಿದ್ಧವಿಲ್ಲ. ಇದೇನು ರಾಕೆಟ್ ಸೈನ್ಸ್ ಹಃ ಕಲಿಯುತ್ತಾಳೆ. ನಾನೇ ಹೇಳಿಕೊಡುತ್ತೀನಿ ಎಂದಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಕಾವೇರಿ, ಶಾಸ್ತ್ರಗಳನ್ನು ಶುರು ಮಾಡಿದ್ದಳು. ಪ್ರಸಾದಕ್ಕೆ ಬೇಕಾದ ವ್ಯವಸ್ಥೆ ಮಾಡುವುದಕ್ಕೆ ಶುರು ಮಾಡಿದ್ದಳು.

ಕಾವೇರಿಗೆ ಸಹಾಯ ಮಾಡಲು ಹೋದ ಅಗಸ್ತ್ಯ
ಅಜ್ಜಿ ಹಾಗೂ ಶಶಿ ಅಲ್ಲಿಂದ ಬೇರೆ ಕಡೆಗೆ ಹೋದರು. ಅಗಸ್ತ್ಯ ತನ್ನ ಹೆಂಡತಿಗೆ ಸಹಾಯ ಮಾಡಲು ಹೋದ. ಇನ್ನು ಚಿಕ್ಕಪ್ಪ ಕೂಡ ಆ ಸೀನ್‌ಗಳನ್ನು ನೋಡುವುದು ಬೇಡ ಎಂದು ಹೊರಟೆ ಹೋದ. ಉಳಿದದ್ದು ವೃಂದಾ, ಅಂಬಿಕಾ. ಇತ್ತ ಅಗಸ್ತ್ಯ ತನ್ನ ಹೆಂಡತಿಗೆ ಸಹಾಯ ಮಾಡಲೆಂದು ಬಂದು ಕಣ್ಣಿನ ನೋಟದಲ್ಲಿಯೇ ಕಳೆದು ಹೋಗಿದ್ದಾನೆ. ಮೊದಲೇ ವೃಂದಾಗೆ, ಕಾವೇರಿಯನ್ನು ಕಂಡರೆ ಆಗುವುದಿಲ್ಲ. ಈಗ ಇಬ್ಬರು ಕಳೆದೋದ ದೃಶ್ಯ ನೋಡಿ ಕೋಪ ಜಾಸ್ತಿಯಾಗಿದೆ. ನಿಂತಲ್ಲಿ ನಿಲ್ಲಲಾರದೆ ನೇರವಾಗಿ ಅಗಸ್ತ್ಯನ ಬಳಿ ಹೋಗಿ, ಗದರಿದ್ದಾಳೆ.


Click it and Unblock the Notifications











