Kaveri Kannada Medium: ಕಾವೇರಿ-ಅಗಸ್ತ್ಯನ ಜಗಳ ವೀಕ್ಷಕರಿಗೆ ಮನರಂಜನೆ.. ಪ್ರಮೋದಾದೇವಿ ಆಯ್ಕೆಗೆ ಫುಲ್ ಮಾರ್ಕ್ಸ್
ಧಾರಾವಾಹಿಗಳಲ್ಲಿಯೇ ಆಗಲಿ, ಸಿನಿಮಾಗಳಲ್ಲಿಯೇ ಆಗಲಿ ಮನರಂಜನೆ ತುಂಬಾ ಮುಖ್ಯ. ಸಂದೇಶದ ಜೊತೆಗೆ ನಕ್ಕು ನಲಿದರೆ ಆ ಧಾರಾವಾಹಿಗೆ ನೋಡುಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತದೆ. ಸದ್ಯಕ್ಕೆ ಈ ರೀತಿ ನೋಡಿಗರಿಗೆ ಥ್ರಿಲ್ ಎನಿಸುವಂತೆ ಮಾಡುತ್ತಿರುವುದು 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿ ಶುರುವಾದಾಗಿನಿಂದ ಎಲ್ಲರ ಫೇವರಿಟ್ ಆಗಿದೆ. ಯಾಕಂದ್ರೆ ಧಾರಾವಾಹಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂ ನಡುವಿನ ಸ್ಪರ್ಧೆಯ ಬಗ್ಗೆ ಕಥೆ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಅಗಸ್ತ್ಯ ಹಾಗೂ ಕಾವೇರಿಯ ಕೋಳಿ ಜಗಳ ಎಲ್ಲರನ್ನು ಮನರಂಜಿಸುತ್ತಿದೆ.

ಅಗಸ್ತ್ಯನ ಪರ ನಿಂತ ಕಾವೇರಿ
ಪ್ರಮೋದಾ ದೇವಿಯ ಹುಟ್ಟುಹಬ್ಬ ಗ್ರ್ಯಾಂಡ್ ಆಗಿ ನಡೆದಿದೆ. ಈ ವೇಳೆ ಕಾವೇರಿಯನ್ನು ಮನೆಗೆ ಆಹ್ವಾನ ಮಾಡಲಾಗಿತ್ತು. ಆದರೆ, ಊರಿಗೆ ಹೋಗುವುದಕ್ಕೆ ಬಸ್ ವ್ಯವಸ್ಥೆ ಇರಲಿಲ್ಲ. ಹೀಗಾಗಿಯೇ ಕಾವೇರಿಯನ್ನು ಮನೆಗೆ ಬಿಡುವ ಜವಾಬ್ದಾರಿಯನ್ನು ಅಗಸ್ತ್ಯನೇ ಹೊತ್ತುಕೊಂಡಿದ್ದ. ಊರಿಗೆ ಹೋದಾಗ ಕಾವೇರಿಯ ಮಾವ, ಅಗಸ್ತ್ಯನ ಮೇಲೆಯೆ ಕೈ ಮಾಡಿದ್ದ. ಆದರೆ, ಈ ವೇಳೆ ಕಾವೇರಿ, ಅಗಸ್ತ್ಯನ ಪರ ನಿಂತಿದ್ದಳು. ಮಾವನನ್ನು ಬೈದು ಕಳುಹಿಸಿದ್ದಳು.
ಎಲ್ಲಿ ಸಿಕ್ಕಿದರು ಕೋಳಿ ಜಗಳ ಶುರು
ಅಗಸ್ತ್ಯ ಹಾಗೂ ಕಾವೇರಿ ಯಾವಾಗಲೇ ಜೊತೆಗೆ ಸಿಕ್ಕಿದರು ಇಬ್ಬರು ಜಗಳ ಶುರು ಮಾಡದೆ ಇರುವುದಿಲ್ಲ. ಆದರೆ, ಆ ಜಗಳ ಏರು ಧ್ವನಿಯಲ್ಲಿ ಇರುವುದಿಲ್ಲ. ಒಬ್ಬರಿಗೊಬ್ಬರು ವಾದದ ಮೂಲಕ ಜಗಳ ಶುರು ಮಾಡುತ್ತಾರೆ. ಯಾರೂ ಸೋಲುವುದಿಲ್ಲ. ಅದರಲ್ಲೂ ಕಾವೇರಿ ಜಗಳ ಆಡುವುದರಲ್ಲೂ ತಾಳ್ಮೆ ತೋರುತ್ತಾಳೆ. ಆ ತಾಳ್ಮೆಯೇ ಎಲ್ಲರಲ್ಲೂ ಖುಷಿ ಮೂಡಿಸುವುದು. ಅಗಸ್ತ್ಯ ಹಾಗೂ ಕಾವೇರಿಯ ಜಗಳ ಪ್ರಮೋದಾ ದೇವಿಗೆ ಹೇಗೆ ನಗು ತರಿಸುತ್ತದೆಯೋ ಅದೇ ರೀತಿ ನೋಡುಗರಿಗೂ ನಗು ತರಿಸುತ್ತದೆ.

ಕಾವೇರಿಯ ಅಜ್ಜಿಯ ಪ್ರೀತಿಗೆ ಅಗಸ್ತ್ಯ ಫಿದಾ
ಕಾವೇರಿಯನ್ನು ಬಿಟ್ಟು ಬರಲು ಊರಿಗೆ ಬಂದಿದ್ದ ಅಗಸ್ತ್ಯ ಹಳ್ಳಿಯಲ್ಲಿಯೇ ಉಳಿದುಕೊಂಡಿದ್ದಾನೆ. ಅಗಸ್ತ್ಯನಿಗೆ ಜಗಳದಲ್ಲಿ ಆಗಿದ್ದ ನೋವಿಗೆ ಕಾವೇರಿ ಮನೆಯವರು ಮುಲಾಮು ಹಚ್ಚಿ, ಬಿಸಿ ಶಾಕ ನೀಡಿದ್ದಾರೆ. ಅದರಲ್ಲೂ ಕಾವೇರಿಯ ಅಜ್ಜಿ ಹೆಚ್ಚಿನ ಕಾಳಜಿಯನ್ನೇ ತೋರಿಸಿದ್ದಾರೆ. ಸ್ಟ್ರಾಂಗ್ ಆಗಿ ಶುಂಠಿ ಟೀ ಮಾಡಿಕೊಂಡು ಕೊಟ್ಟಿದ್ದಾರೆ. ಡಯೆಟ್‌ನಲ್ಲಿಯೇ ಇದ್ದ ಅಗಸ್ತ್ಯ ಈಗ ಎಲ್ಲವನ್ನು ಮರೆತು ಅಜ್ಜಿಯ ಪ್ರೀತಿಯಲ್ಲಿ ಮುಳುಗಿದ್ದಾನೆ. ಅಜ್ಜಿ ಪ್ರೀತಿಯಿಂದ ಕೊಟ್ಟ ಟೀಯನ್ನು ಕುಡಿದಿದ್ದಾನೆ.
ಪ್ರಮೋದಾ ದೇವಿ ಆಯ್ಕೆ ಸೂಪರ್
ಪ್ರಮೋದಾ ದೇವಿಗೆ ಅಗಸ್ತ್ಯನಿಗೆ ಮದುವೆ ಮಾಡಬೇಕೆಂಬ ಆಸೆ. ಹೀಗಾಗಿಯೇ ಅವನಿಗೆ ಬೆಸ್ಟ್ ಜೋಡಿಯೊಂದನ್ನ ಹುಡುಕಿದ್ದಾಳೆ. ಪ್ರಮೋದಾ ದೇವಿಯ ಆಯ್ಕೆ ಕಾವೇರಿಯೇ ಆಗಿದೆ. ಆದರೆ, ಈ ವಿಚಾರ ಕಾವೇರಿಗೂ ಗೊತ್ತಿಲ್ಲ. ಅಗಸ್ತ್ಯ ಆ ಫೋಟೋ ಕೂಡ ನೋಡಿಲ್ಲ. ಹೀಗಾಗಿ ಇಬ್ಬರು ಕೋಳಿ ಜಗಳವನ್ನು ಆಡುತ್ತಲೇ ಇರುತ್ತಾರೆ. ಪ್ರಮೋದಾ ದೇವಿಗೂ ಇದು ಬಹಳ ಖುಷಿಯಾಗಿದೆ. ಇಬ್ಬರು ಒಂದಾದರೇ ಜೀವನ ಚೆನ್ನಾಗಿಯೇ ಇರುತ್ತೆ ಎಂದುಕೊಂಡಿದ್ದಾರೆ. ಪ್ರಮೋದಾ ದೇವಿಯ ಆಯ್ಕೆ ನೋಡುಗರಿಗೂ ಇಷ್ಟವಾಗಿದೆ. ಹೀಗಾಗಿಯೇ ಆದಷ್ಟು ಬೇಗ ಇಬ್ಬರು ಒಂದಾಗಲಿ ಎಂದು ಹರಸಿದ್ದಾರೆ. ಮದುವೆಯಾದ ಮೇಲೆ ಅದಿನ್ನೆಷ್ಟು ವಾದ ಮಾಡುತ್ತಾರೊ ಏನೋ..?


Click it and Unblock the Notifications











