Kaveri kannada Medium: ಅಗಸ್ತ್ಯ-ಕಾವೇರಿಯ ಕೋಳಿ ಜಗಳದ ನಡುವೆ ಪ್ರಮೋದಾ ದೇವಿ ಲಾಕ್..!
ಪ್ರಮೋದಾ ದೇವಿಗೆ ತನ್ನ ಶಾಲೆಯ ವಿಚಾರದಲ್ಲಿ ಎಲ್ಲಾ ರೀತಿಯಾದ ಅಧಿಕಾರವಿದೆ. ಆದರೆ ಮೊಮ್ಮಕ್ಕಳನ್ನು ನೋಡಿಕೊಂಡು ಅಧಿಕಾರ ಚಲಾಯಿಸಬೇಕಾದ ಅನಿವಾರ್ಯತೆ ಇದೆ. ಈಗ ಕಾವೇರಿ ವಿಚಾರದಲ್ಲಿಯೂ ಅದೇ ರೀತಿ ಆಗಿದೆ. ಪ್ರಮೋದಾ ದೇವಿ ಶಿಕ್ಷಕಿಯಾಗಲು ಅನುಮತಿಯನ್ನೇನೋ ಕೊಟ್ಟಿದ್ದಾರೆ. ಆದರೆ, ಮುಂದಿನ ಸವಲತ್ತುಗಳದ್ದೇ ಚಿಂತೆಯಾಗಿದೆ.
ಕಾವೇರಿಗೆ ಸವಾಲು ಹಾಕಿದವರು ಅಗಸ್ತ್ಯ ಅಂಡ್ ಟೀಂ. ಆದರೆ, ಆ ಸವಾಲು ಗೆಲ್ಲುವುದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅದನ್ನು ಪ್ರಮೋದಾ ದೇವಿ ಒದಗಿಸಿಕೊಟ್ಟಿದ್ದಾರೆ. ಇದು ಅಗಸ್ತ್ಯನ ಕೆಂಗಣ್ಣಿಗೆ ಗುರಿಯಾಗಿದೆ. ಈಗ ಕಾವೇರಿ ಎಲ್ಲಾ ಅಡೆ ತಡೆಗಳನ್ನು ಮೀರಿ, ಹೇಗೆ ಜಯಭೇರಿಯಾಗುತ್ತಾಳೆ ಎಂಬುದೆ ಎಲ್ಲರ ಕುತೂಹಲ.

ಪ್ರಮೋದಾ ದೇವಿಯಿಂದ ಕಾವೇರಿ ಆಯ್ಕೆ
ಅಗಸ್ತ್ಯನಿಗೆ ಒಂದು ಮದುವೆ ಮಾಡಿಸಬೇಕೆಂಬುದು ಪ್ರಮೋದಾ ದೇವಿಯ ಆಸೆಯಾಗಿದೆ. ಹೀಗಾಗಿಯೇ ಹೆಣ್ಣು ಹುಡುಕಾಟವೂ ಶುರುವಾಗಿದೆ. ಅಗಸ್ತ್ಯನಿಗೆ ತಕ್ಕ ಜೋಡಿಯನ್ನು ಅದಾಗಲೇ ಹುಡುಕಿ ಆಗಿದೆ. ಅದೇ ಕಾವೇರಿ. ಆದರೆ, ಅಗಸ್ತ್ಯನಿಗೆ ಆ ಹುಡುಗಿ ಇಷ್ಟ ಇಲ್ಲ. ಅದು ಕಾವೇರಿ ಅನ್ನುವುದು ಅಗಸ್ತ್ಯನಿಗೆ ಗೊತ್ತಿಲ್ಲ. ಗೊತ್ತಿರುವುದು ಅಜ್ಜಿ ನೋಡಿರುವ ಹುಡುಗಿ ಕನ್ನಡ ಮೀಡಿಯಂ. ಹೀಗಾಗಿ ಬೇಡ ಅನ್ನೋದು ಅಗಸ್ತ್ಯನ ವಾದವಾಗಿದೆ.
ಶಾಲೆಯಲ್ಲಿ ಕಾವೇರಿಯನ್ನು ಕಾಪಾಡಿದ ಅಗಸ್ಯ
ಕಾವೇರಿ ಈಗ ಅಗಸ್ತ್ಯನ ಶಾಲೆಯಲ್ಲಿ ಸೈನ್ಸ್ ಟೀಚರ್. ಪಾಪ ಊರಿಂದ ಓಡೋಡಿ ಬಂದರೂ ಹೆಬ್ಬೆಟ್ಟು ಒತ್ತುವುದಕ್ಕೆ ತಡವಾಗಿಯೇ ಬಿಡುತ್ತದೆ. ಕಾವೇರಿಯನ್ನು ಅರ್ಥ ಮಾಡಿಕೊಂಡಿದ್ದ ಸೆಕ್ಯೂರಿಟಿ ಹೂ ಕಿತ್ತು ಇಟ್ಟಿದ್ದರು. ಆ ಹೂ ತೆಗೆದುಕೊಂಡು ಗಣೇಶನ ಪಾದಕ್ಕೆ ಇಟ್ಟು, ಓಡಿ ಹೋಗಬೇಕು. ಅಷ್ಟರಲ್ಲಿ ಕೆಡುಕು ಬಯಸಲೆಂದೆ ಬಂದ ಸಹ ಶಿಕ್ಷಕಿಯಿಂದ ಕಾವೇರಿ ಕಾಲು ಎಡವಿ ಬೀಳುತ್ತಾಳೆ. ಆದರೆ, ಕಾವೇರಿ ನೆಲಕ್ಕೆ ಬೀಳದೆ ನೇರ ಅಗಸ್ತ್ಯನ ಮೇಲೆ ಬಿದ್ದಿದ್ದಾಳೆ. ಇಬ್ಬರು ಚೇರ್ ಮೇಲೆ ಕೂತು ಗೋಡೆಗೆ ಹೋಗಿ ಡಿಕ್ಕಿ ಹೊಡೆದುಕೊಂಡಿದ್ದಾರೆ.

ಅಗಸ್ತ್ಯ- ಕಾವೇರಿ ಕೋಳಿ ಜಗಳ ಶುರು
ಇನ್ನೇನು ಸಣ್ಣ ಪ್ರೇಮರಾಗ ಶುರುವಾಗುತ್ತೇನೋ ಎಂದುಕೊಳ್ಳುವಾಗಲೇ ತಕ್ಷಣ ಎದ್ದಿದ್ದಾರೆ. ಇಬ್ಬರು ಜಗಳ ಮಾಡಲು ಶುರು ಮಾಡಿದ್ದಾರೆ. ಜೋರಾಗಿ ಅಲ್ಲ ಸಮಾಧಾನವಾಗಿ. ಅಗಸ್ತ್ಯ, 'ನೀನು ಎದುರಿಗೆ ಬಂದರೆ ಭಯ ಪಡಬೇಕು. ಏನನ್ನು ಬೀಳಿಸುತ್ತಿಯೋ ಎಂಬ ಆತಂಕ. ಈಗ ನೋಡು ಎಮ್ಮೆ ಥರ ಬಂದು ಬಿದ್ದೆ' ಎಂದಿದ್ದಾನೆ. ಇದಕ್ಕೆ ಉತ್ತರ ಕೊಟ್ಟ ಕಾವೇರಿ, 'ಎಮ್ಮೆ ಅಂತೆಲ್ಲ ಹೇಳಬೇಡಿ ಸರ್. ಇವತ್ತು ಮಾಡಿದ್ದು ನಂದೇ ತಪ್ಪು. ಆದರೆ ನಿನ್ನೆ ಆಗಿದ್ದೆಲ್ಲ ಮಿಸ್ ಆಗಿ ಆಯ್ತು' ಎಂದಿದ್ದಾಳೆ.
ಕಾವೇರಿಗೆ ಸಹಾಯ ಮಾಡುವ ದಾರಿ ಯಾವುದು?
ಶಾಲೆಯಲ್ಲಿ ಪ್ರಮೋದಾ ದೇವಿಗೂ ಅಧಿಕಾರ ಇದೆ. ಹೀಗಾಗಿ ಕಾವೇರಿಯನ್ನು ಕೆಲಸಕ್ಕೆ ತೆಗೆದುಕೊಂಡಿದ್ದಕ್ಕೆ ಯಾರಿಗೂ ಮಾತನಾಡುವ ಹಕ್ಕು ಇರಲಿಲ್ಲ. ಆದರೆ, ಇನ್ನು ಮುಂದೆ ಕಾವೇರಿ ವಿಚಾರದಲ್ಲಿ ಪ್ರಮೋದಾ ದೇವಿ ತಲೆ ಹಾಕಬಾರದು ಎಂಬ ಪ್ರಾಮೀಸ್ ಅನ್ನು ಅಗಸ್ತ್ಯ ಮಾಡಿಸಿಕೊಂಡಿದ್ದಾನೆ. ಈಗ ಕಾವೇರಿ ಶಾಲೆಯಲ್ಲಿ ಹಿಂಸೆ ಶುರುವಾಗಿದೆ. ಕೆಲಸಕ್ಕೇನೋ ತೆಗೆದುಕೊಂಡು ಆಗಿದೆ. ಆದರೆ, ತನ್ನ ಪ್ರತಿಭೆ ತೋರಿಸುವುದಕ್ಕೆ ಅವಕಾಶವನ್ನೇ ಕೊಡುತ್ತಿಲ್ಲ. ಒಂದು ಕ್ಲಾಸ್ ಅನ್ನು ಕಾವೇರಿಗೆ ನೀಡುತ್ತಿಲ್ಲ. ಇದನ್ನ ಪ್ರಮೋದಾ ದೇವಿಗೆ ಕಾವೇರಿ ಹೇಳಿದ್ದಾಳೆ. ಆದರೆ, ಮೊಮ್ಮಗನಿಗೆ ಕೊಟ್ಟ ಮಾತಿನಿಂದ ಕಾವೇರಿ ಸುಮ್ಮನೆ ನಿಂತಿದ್ದಾರೆ.


Click it and Unblock the Notifications











