Kaveri kannada Medium: ಪಮ್ಮಿ ಪ್ಲ್ಯಾನ್ ವರ್ಕೌಟ್: ಅಗಸ್ತ್ಯ ಪಾಡು ಕೇಳೋರಿಲ್ಲ!
ಕಾವೇರಿ ಹಾಗೂ ಅಗಸ್ತ್ಯನ ಮದುವೆ ಯಾವುದೋ ಪರಿಸ್ಥಿತಿಗೆ ಗಂಟು ಬಿದ್ದೇ ಆಗಿದ್ದರು ಕೂಡ, ಕಾವೇರಿ ಗಂಡನನ್ನು ಪೂಜಿಸುತ್ತಾಳೆ, ಆರಾಧಿಸುತ್ತಾಳೆ. ಗಂಡನಿಗೆ ಕಷ್ಟ ಬರದಂತೆ ನೋಡಿಕೊಳ್ಳುತ್ತಾಳೆ. ಇಷ್ಟು ದಿನ ಈ ಮದುವೆ ಗುಟ್ಟಾಗಿಯೇ ಇತ್ತು. ಪ್ರಮೋದಾ ದೇವಿ, ಶಶಿ, ಅಗಸ್ತ್ಯ ಹಾಗೂ ಕಾವೇರಿಗೆ ಮಾತ್ರ ಗೊತ್ತಿತ್ತು.
ಅಗಸ್ತ್ಯ ಕೂಡ ಮದುವೆಯನ್ನು ಗುಟ್ಟಾಗಿ ಇಟ್ಟುಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದ. ಆದರೆ ಅದೆಲ್ಲವೂ ಈಗ ಉಲ್ಟಾ ಆಗಿದೆ. ಇಬ್ಬರ ಮದುವೆ ವಿಚಾರ ಮುಖ್ಯವಾಗಿ ತಾಯಿಗೆ ಗೊತ್ತಾಗಿದೆ. ಇದರಿಂದ ಈಗಾಗಲೇ ರಂಪಾಟ ಮಾಡಿ ಆಗಿದೆ. ಜೊತೆಗೆ ಅಗಸ್ತ್ಯನಿಗೆ ಬೇರೆ ಮದುವೆ ಮಾಡಲು ತಯಾರಿಯೂ ನಡೆಸಿದ್ದಾಳೆ. ಇದರ ನಡುವೆಯೂ ಅಗಸ್ತ್ಯ ಹಾಗೂ ಕಾವೇರಿಯ ಮಧ್ಯೆ ಪ್ರೀತಿ ಚಿಗುರೊಡೆಯುತ್ತಿದೆ.

ಪ್ರಮೋದಾ ದೇವಿಯಿಂದ ನಾಟಕ ಶುರು
ಕಾವೇರಿಗೂ ಪ್ರಮೋದಾ ದೇವಿಗೂ ಏನೋ ಒಂದು ಲಿಂಕ್ ಇರುವುದಂತು ಸತ್ಯ. ಅಗಸ್ತ್ಯನಿಗಾಗಿ ಪ್ರಮೋದಾ ದೇವಿ ಹುಡುಕಿದ್ದ ಸಂಬಂಧವೇ ಕಾವೇರಿ. ಆದರೆ ವಿಧಿಯ ಆಟವೂ ಅದೇ ಆಗಿದ್ದರಿಂದ ಮದುವೆ ಏನೋ ಆಗಿ ಹೋಯಿತು. ಆದರೆ ಇಬ್ಬರ ನಡುವೆ ಪ್ರೀತಿ ಅಂತು ಚಿಗುರಿಲ್ಲ ಎಂಬುದು ಅರ್ಥವಾಗಿದೆ. ಹೀಗಾಗಿ ತಾನೇ ಮದುವೆ ಮಾಡಿಸಿದ ಅಗಸ್ತ್ಯ ಹಾಗೂ ಕಾವೇರಿ ನಡುವೆ ಪ್ರೀತಿ ಚಿಗುರಿಸುವ ಎಲ್ಲಾ ಪ್ರಯತ್ನಗಳನ್ನು ಪ್ರಮೋದಾದೇವಿ ಮಾಡುತ್ತಿದ್ದಾರೆ.
ಅಗಸ್ತ್ಯನಿಗೆ ಮಸಾಜ್ ಮಾಡಲು ಹೇಳಿದ ಪಮ್ಮಿ
ಕಾವೇರಿ ನಡೆಯುವಾಗ ಬಿದ್ದು, ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದಾಳೆ. ಅದನ್ನು ಎಣ್ಣೆ ಹಾಕಿ ಮಸಾಜ್ ಮಾಡಬೇಕಿದೆ. ಪ್ರಮೋದಾ ದೇವಿ ಇದೇ ಅವಕಾಶವನ್ನು ಬಳಸಿಕೊಂಡಿದ್ದಾರೆ. ಮಸಾಜ್ ಮಾಡುವುದಕ್ಕೆ ನನಗೂ ಸೊಂಟ ನೋವಿದೆ. ಈ ವಯಸ್ಸಲ್ಲೆಲ್ಲಾ ಆಗಲ್ಲ. ಇನ್ನು ಕೆಲಸದವರು ಹೆಂಗಸರಿಲ್ಲ, ನಿಮ್ ಅಮ್ಮ-ಅಕ್ಕನಿಗೆ ಕಾವೇರಿ ಕಂಡರೆ ಆಗಲ್ಲ. ಹೀಗಾಗಿ ನೀನೆ ಮಸಾಜ್ ಮಾಡಬೇಕೆಂದು ತಾಕೀತು ಮಾಡಿದ್ದಾರೆ. ಆರಂಭದಲ್ಲಿ ಕಾವೇರಿ ಹಾಗೂ ಅಗಸ್ತ್ಯ ಇಬ್ಬರು ಇದಕ್ಕೆ ನೋ ಎಂದೊದ್ದಾರೆ. ಆದರೆ ಅಜ್ಜಿಯ ಮಾತನ್ನು ಮೀರುವ ಧೈರ್ಯ ಯಾರಿಗಿದೆ ಹೇಳಿ.

ಅಜ್ಜಿ ಮಾತಂದ್ರೆ ಮಾತು.. ನೋ ಆಪ್ಶನ್
ಕಾವೇರಿಗೆ ಮಸಾಜ್ ಮಾಡುವುದಕ್ಕೆ ಅಗಸ್ತ್ಯ ಒಪ್ಪಿಕೊಂಡಿದ್ದೆ ತಡ, ಪ್ರಮೋದಾ ದೇವಿ ಸ್ಕೂಲ್ ವಿಚಾರ ತೆಗೆದುಕೊಂಡು ಮಗ ಶಶಿಯನ್ನು ಕರೆದುಕೊಂಡು ಹೊರಗೆ ಹೊರಟಿದ್ದಾನೆ. ಅಜ್ಜಿ ಮಾತಿಗೆ ಒಪ್ಪಿ ಮಸಾಜ್ ಮಾಡಲೆಂದೆ ಕುಳಿತ. ಆದರೆ ಕೈ ತಾಕಿದ ಕೂಡಲೇ ಕಾವೇರಿ ಜೋರು ಕಿರುಚಿದ್ದಾಳೆ. ಕಚಗುಳಿ ಆಗುತ್ತೆ ಎಂದಿದ್ದಾಳೆ. ಇದೆಲ್ಲವನ್ನು ನೋಡಿ ಅಗಸ್ತ್ಯನಿಗೆ ಏನು ಮಾಡಬೇಕೆಂಬುದು ತೋಚದಂತೆ ಆಗಿದೆ.
ರೊಮ್ಯಾಂಟಿಕ್ ಮೂಡಿಗೆ ಜಾರಿದ ಅಗಸ್ತ್ಯ
ಅಜ್ಜಿಯ ಮಾತು ಮೀರುವಂತೆಯೂ ಇಲ್ಲ. ಏನು ಮಾಡಲಾಗದೆ ನಿಧಾನವಾಗಿ ಎಣ್ಣೆಯನ್ನು ಬೆರಳಿಗೆ ಸವರಿಕೊಂಡು, ಕಾವೇರಿಯ ಸೊಂಟಕ್ಕೆ ಹಚ್ಚಲು ಶುರು ಮಾಡಿದ. ಅಷ್ಟರಲ್ಲಾಗಲೇ ಅಗಸ್ತ್ಯನ ಮನಸ್ಸಲ್ಲಿ 'ಸೊಂಟದ ವಿಷ್ಯ ಬೇಡವೋ ಶಿಷ್ಯ' ಹಾಡು ಗುನುಗುತ್ತಿತ್ತು. ಮುಂದುವರೆದು ಮಸಾಜ್ ಮಾಡಿದರೆ 'ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ' ಎಂಬ ರೊಮ್ಯಾಂಟಿಕ್ ಹಾಡಿಗೆ ಮನಸ್ಸು ಟರ್ನ್ ಆಗಿತ್ತು. ಕಾವೇರಿ ಕೂಡ ಗಂಡನ ಮಸಾಜ್ ಸೇವೆಯನ್ನು ಆನಂದಿಸಿದಳು. ಒಟ್ನಲ್ಲಿ ಅಗಸ್ತ್ಯನ ಪ್ರೀತಿಯ ಪಮ್ಮು ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿದೆ.


Click it and Unblock the Notifications











