Kaveri Kannada Medium: ಕಾವೇರಿಯ ಕೆಲಸಕ್ಕೆ ಮನಸೋತ ಅಗಸ್ತ್ಯ.. ಪ್ರಮೋದಾ ದೇವಿಗೆ ಇನ್ನು ಹತ್ತಿರ!
ಕಾವೇರಿ ಅಗಸ್ತ್ಯ ಹಾಕಿದ್ದ ಸವಾಲನ್ನು ಒಪ್ಪಿಕೊಂಡಿದ್ದಾಳೆ. ಮೂರು ತಿಂಗಳುಗಳ ಕಾಲ ಅವರ ಶಾಲೆಯಲ್ಲಿ ಟೀಚರ್ ಆಗಿ ಹೋಗುವುದಕ್ಕೆ ರೆಡಿಯಾಗಿದ್ದಾಳೆ. ಆದರೆ ಅಗಸ್ತ್ಯನಿಗೆ ಮನಸ್ಸಿಲ್ಲ. ಸವಲನ್ನೇನೋ ಹಾಕಿದ, ಆದರೆ ಒಪ್ಪಿಕೊಳ್ಳುವ ಮನಸ್ಸು ಇರಲಿಲ್ಲ. ಹೀಗಾಗಿಯೇ ಕಾವೇರಿಗೆ ಸಂದರ್ಶನ ಅಟೆಂಡ್ ಮಾಡುವುದಕ್ಕೆ ಹೇಳಿದ್ದಾನೆ.
ಕಾವೇರಿಗೆ ತುಂಬಾ ಮುಖ್ಯವಾಗಿರುವುದು ತನ್ನ ಊರಿನ ಮರ್ಯಾದೆ ಉಳಿಸುವುದು, ಶಾಲೆ ಕಾಪಾಡಿಕೊಳ್ಳುವುದು, ಮಕ್ಕಳ ಭವಿಷ್ಯ ಉಜ್ವಲವಾಗಿಸುವುದು. ಹೀಗಾಗಿ ಇಂಟರ್ ವ್ಯೂಗೂ ಬಂದಿದ್ದಾಳೆ. ಈಗ ಅಗಸ್ತ್ಯನ ಮೇಲೆ ಎಲ್ಲವೂ ಡಿಪೆಂಡ್ ಆಗಿತ್ತು. ಆದರೆ ಪ್ರಮೋದಾ ದೇವಿಯಿಂದ ಎಲ್ಲವೂ ಸಕ್ಸಸ್ ಆಗಲಿದೆ.

ಇಂಟರ್‌ವ್ಯೂನಲ್ಲಿ ಎಲ್ಲದಕ್ಕೂ ಉತ್ತರ
ಕಾವೇರಿಯಲ್ಲಿ ಎಲ್ಲಾ ಗುಣಗಳು ಇದೆ. ಇಂಟರ್‌ವ್ಯೂನಲ್ಲಿ ಕೇಳಿದ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆಲ್ಲಾ ಉದಾಹರಣೆ ಸಮೇತ ಉತ್ತರ ಕೊಟ್ಟಿದ್ದಾಳೆ. ಆದರೆ, ಅಗಸ್ತ್ಯನಿಗೆ ಕಾವೇರಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮನಸ್ಸು ಇರಲಿಲ್ಲ ಹೀಗಾಗಿಯೇ ರಿಜೆಕ್ಟ್ ಮಾಡಿದ್ದಾನೆ. ಎಲ್ಲಾ ಉತ್ತರವೂ ಸರಿಯಾಗಿದ್ದರೂ, ಇಂಗ್ಲಿಷ್ ಬರುತ್ತಿಲ್ಲ ಎಂಬ ಕಾರಣ ನೀಡಿ ರಿಜೆಕ್ಟ್ ಮಾಡಿದ್ದಾನೆ. ಕಾವೇರಿ ಎಷ್ಟೇ ಮನವಿ ಮಾಡಿದರೂ ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೆ ಒಪ್ಪುತ್ತಿಲ್ಲ.
ಶಾಲೆ ಹೆಸರು ಕಾಪಾಡಿದ ಕಾವೇರಿ
ಅಗಸ್ತ್ಯನ ಒಡೆತನದ ಶಾಲೆಯಲ್ಲಿ ಈ ಮೊದಲು ಕೆಲಸ ಮಾಡುತ್ತಿದ್ದ ಟೀಚರ್ ಒಬ್ಬ, ಶಾಲೆಯ ವಸ್ತುಗಳನ್ನೇ ಕದಿಯುತ್ತಿದ್ದ. ಆದರೆ ಅಗಸ್ತ್ಯ ಅವನನ್ನು ಶಾಲೆಯಿಂದ ಹೊರಗೆ ಹಾಕಿದ್ದ. ಅದೇ ದ್ವೇಷವನ್ನು ಮನಸ್ಸಲ್ಲಿಟ್ಟುಕೊಂಡು ಮಕ್ಕಳ ಲ್ಯಾಬ್‌ನಲ್ಲಿ ಆತ ಬೆಂಕಿ ಹಚ್ಚುವ ಅನಾಹುತ ಮಾಡಿದ್ದಾನೆ. ಎಲ್ಲರೂ ಗಾಬರಿಯಾಗಿದ್ದರು. ಶಾಲೆಗೆ ಕೆಟ್ಟ ಹೆಸರು ಬರುತ್ತೆ ಎಂಬ ಭಯ ಎಲ್ಲರಲ್ಲೂ ಇತ್ತು. ಆ ಕಡೆ ಮಕ್ಕಳನ್ನು ಕಾಪಾಡಲೇಬೇಕಾಗಿತ್ತು. ಯಾರಿಂದಲೂ ಆಗದ ಕೆಲಸವನ್ನು ಕಾವೇರಿ ಮಾಡಿ ತೋರಿಸಿದ್ದಾಳೆ.

ಕಾವೇರಿಯ ಕೆಲಸಕ್ಕೆ ಮನಸೋತ ಅಗಸ್ತ್ಯ
ಮಕ್ಕಳನ್ನು ಕಾಪಾಡಿದ್ದು ಕಾವೇರಿ ಅನ್ನೋದು ಅಗಸ್ತ್ಯನಿಗೆ ಗೊತ್ತಾಗಿದೆ. ಆದರೆ ಮನಬಿಚ್ಚಿ ಥ್ಯಾಂಕ್ಯೂ ಹೇಳುವುದಕ್ಕೆ ತನ್ನ ಅಹಂ ಒಪ್ಪುತ್ತಿಲ್ಲ. ಹೀಗಾಗಿ ಮನಸ್ಸಲ್ಲಿಯೇ ಧನ್ಯವಾದ ಹೇಳಿಕೊಂಡಿದ್ದಾನೆ. 'ನೀನು ಇವತ್ತು ಬರದೆ ಇದ್ದಿದ್ದರೇ ಏನು ಆಗುತ್ತಿತ್ತೋ ಏನೋ. ನಮ್ಮ ಶಾಲೆಯ ಮರ್ಯಾದೆ ಮತ್ತು ಮಕ್ಕಳನ್ನು ಉಳಿಸಿದ್ದೀಯಾ ನೀನು. ಥ್ಯಾಂಕ್ಸ್' ಎಂದು ಮನಸ್ಸಲ್ಲಿಯೇ ಹೇಳಿಕೊಂಡಿದ್ದಾನೆ. ಅಗಸ್ತ್ಯನ ಅಕ್ಕ, ಕಾವೇರಿಗೆ ಎಷ್ಟು ಹಣ ಬೇಕು ಎಂದು ಕೇಳಿದಾಗ ಕಾವೇರಿ ಹಣವನ್ನು ರಿಜೆಕ್ಟ್ ಮಾಡಿದ್ದಾಳೆ. ಅಗಸ್ತ್ಯ ಏನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸುಮ್ಮನೆ ನಿಂತು ಬಿಟ್ಟಿದ್ದಾನೆ. ಆದರೆ, ಎಲ್ಲರೂ ಅವಳನ್ನು ಹೊರಗೆ ಕಳುಹಿಸಿದ್ದಾಳೆ.
ಪ್ರಮೋದಾ ದೇವಿಯಿಂದ ಸಿಕ್ತು ಕೆಲಸ
ಕಾವೇರಿ ಎಷ್ಟೇ ಸಹಾಯ ಮಾಡಿದರೂ ಅಗಸ್ತ್ಯನ ಶಾಲೆಯಲ್ಲಿ ಕೆಲಸ ಸಿಗಲಿಲ್ಲ. ಅಲ್ಲಿಂದ ಹೊರಡುವಾಗಲೇ ಪ್ರಮೋದಾ ದೇವಿ ಸಿಕ್ಕಿದ್ದಾರೆ. ಕಾವೇರಿಯನ್ನು ಮತ್ತೆ ಕರೆದುಕೊಂಡು ಬಂದಿದ್ದಾರೆ. ಮತ್ತೆ ಒಳಗೆ ಬಂದಾಗ ಅಗಸ್ತ್ಯನ ಅಕ್ಕ ಕೇಳಿದ್ದಾಳೆ. ಮತ್ತೆ ಯಾಕೆ ಬಂದು ಎಂಬುದನ್ನು. ಕಾವೇರಿಯ ಹಿಂದೆಯೇ ಪ್ರಮೋದಾ ದೇವಿ ಬಂದಿದ್ದಾರೆ. ಎಲ್ಲರ ಮಾತು ಮೀರಿ ಕಾವೇರಿಯನ್ನು ಶಿಕ್ಷಕಿಯಾಗಿ ಜಾಯಿನ್ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ನಮ್ಮ ಶಾಲೆಯಲ್ಲಿ ಕಾವೇರಿ ಶಿಕ್ಷಕಿಯಾಗಿ ಇರುತ್ತಾಳೆ ಎಂದು ಪ್ರಮೋದಾ ದೇವಿ ಆರ್ಡರ್ ಮಾಡಿದ್ದಾರೆ.


Click it and Unblock the Notifications











