ಉದಯ ಟಿವಿಯಲ್ಲಿ ಹೊಸ 'ಕಾವೇರಿ'ಯ ಮಹಾಸಂಚಿಕೆ ಸೋಮವಾರ ಸಂಜೆ 7ಕ್ಕೆ
ಕನ್ನಡ ಕಿರುತೆರೆಗೆ ನಿಮ್ಮ ಉದಯ ಟಿವಿ ಸಾಕಷ್ಟು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದೆ. 2 ದಶಕಗಳಿಂದ 'ದಂಡಪಿಂಡಗಳು', 'ದುಡ್ಡು ದುಡ್ಡು ದುಡ್ಡು', 'ಕಾವ್ಯಾಂಜಲಿ', 'ಕುಂಕುಮ ಭಾಗ್ಯ', 'ಕಾದಂಬರಿ' ಮೊದಲಾದ ಹತ್ತು ಹಲವಾರು ನವನವೀನ ಕಥೆಗಳೊಂದಿಗೆ ಪ್ರೇಕ್ಷಕರನ್ನು ಮೆಚ್ಚಿಸಿದೆ. ಈಗ ಆ ಸರಣಿಯಲ್ಲಿ 'ಕಾವೇರಿ' ಧಾರಾವಾಹಿಯೂ ಸೇರ್ಪಡೆಯಾಗಿದೆ.
ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ 'ಕಾವೇರಿ' ಈಗಾಗಲೇ 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ವೀಕ್ಷಕರ ಫೇವರೇಟ್ ಧಾರಾವಾಹಿಯಾಗಿದೆ.

ಮಧ್ಯಮ ವರ್ಗದ ಹುಡುಗಿ ಕಾವೇರಿ. ಕಾವೇರಿಯ ಶುದ್ಧಮನಸ್ಸಿಗೆ ಫಿದಾ ಆಗುವ ಮಿಥುನ್ ಆಕೆಯನ್ನು ಮನಸಾರೆ ಪ್ರೀತಿಸುತ್ತಾನೆ. ತನ್ನ ಸ್ನೇಹಿತೆಯನ್ನು ದುಷ್ಟ ರಾಕಿಯಿಂದ ಕಾಪಾಡುವ ಕಾವೇರಿ ಅವನನ್ನು ಪೋಲೀಸ್ ವಶಕ್ಕೆ ಒಪ್ಪಿಸುತ್ತಾಳೆ. ಇದೇ ಕೋಪಕ್ಕೆ ಪ್ರತೀಕಾರವಾಗಿ ಕಾವೇರಿಯ ಬದುಕನ್ನೇ ಬರಡು ಮಾಡಬೇಕೆಂದು ಯೋಚಿಸಿ ರಾಕಿ ಆಕೆಯನ್ನು ಮದುವೆ ಮನೆಯಿಂದ ಅಪಹರಿಸಿ ಅವಳ ವ್ಯಕ್ತಿತ್ವಕ್ಕೆ ಮಸಿ ಬಳೆವ ಹುನ್ನಾರ ಮಾಡಿ, ಅದರಲ್ಲಿ ಸಫಲನೂ ಆಗುತ್ತಾನೆ. ಈಗ ಕಾವೇರಿಯ ಮದುವೆಯೂ ಮುರಿದು ಬಿದ್ದು ಮನೆಯವರಿಂದಲೂ ತಿರಸ್ಕಾರಕ್ಕೊಳಗಾಗಿ ಬೀದಿ ಪಾಲಾಗುತ್ತಾಳೆ. ಅಸಹಾಯಕಳಾದ ಕಾವೇರಿಯನ್ನು ಆಕೆಯ ಸ್ನೇಹಿತ ಸಂತೋಷ್ ತನ್ನ ಮನೆಯಲ್ಲಿರಿಸಿಕೊಂಡು ಆಕೆ ಮತ್ತೆ ಸಹಜ ಮನಸ್ಥಿತಿಗೆ ಬರಲು ಸಹಾಯ ಮಾಡುತ್ತಾನೆ. ಸಮಾಜದ ಮುಂದೆ ಮತ್ತು ಪರಿಸ್ಥಿತಿಯ ಒತ್ತಡಕ್ಕೆ ಬಿದ್ದು ಕಾವೇರಿ ಮದುವೆಯಾದೇ ತನ್ನ ಕೊರಳಿಗೆ ಮಾಂಗಲ್ಯ ಧರಿಸಿಕೊಳ್ಳುತ್ತಾಳೆ ಮತ್ತು ತನ್ನದಲ್ಲದ ಮಕ್ಕಳಿಗೆ ತಾಯಿಯಾಗಿ ನಟಿಸುತ್ತಾಳೆ. ಹೀಗೆ ಮದುವೆಯಾಗದೇ ಮಡದಿ, ಜನ್ಮ ನೀಡದೇ ತಾಯಿಯಾದ ಕಾವೇರಿಯ ಬಾಳಪಥ ಎತ್ತ ಸಾಗುತ್ತೆ? ಅನ್ನೋದೇ ಸಸ್ಪೆನ್ಸ್. ಹೀಗೆ ಕಾವೇರಿ ಧಾರಾವಾಹಿ, ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಅಪರೂಪದ ಕಥೆ.
ಈಗ ಇದರಲ್ಲಿ ಮತ್ತೊಂದು ತಿರುವು. ಕಾವೇರಿ ಬದಲಾಗಿದ್ದಾಳೆ. ಅಂದರೆ ಕಾವೇರಿ ಪಾತ್ರಧಾರಿ ಬದಲಾಗಿದ್ದಾರೆ. ಕಾವೇರಿ ಪಾತ್ರವನ್ನು ಇನ್ನು ಮುಂದೆ ಶೋಭಾ ಶೆಟ್ಟಿ ನಿರ್ವಹಿಸುತ್ತಾರೆ.

ಹೊಸ ರೂಪದಲ್ಲಿ ಬರುವ 'ಕಾವೇರಿ'ಯ ಸಂಚಿಕೆ ಇದೇ ಸೋಮವಾರದಿಂದ ಅಂದ್ರೆ ಡಿಸೆಂಬರ್ 11 ರಿಂದ ಶುರುವಾಗತ್ತೆ ಮತ್ತು ಇದೇ ಕಾರಣಕ್ಕೆ ಸೋಮವಾರ ಮತ್ತು ಮಂಗಳವಾರ ಒಂದು ಗಂಟೆಯ ಮಹಾ ಎಪಿಸೋಡ್ ಕೂಡ ಇದೆ. ಹಾಗಾಗಿ ಕಾವೇರಿ ಮೊದಲಿಗಿಂತಲೂ ವೀಕ್ಷಕರನ್ನು ಸೆರೆ ಹಿಡಿದಿರುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಾಗಾದರೆ ಹೊಸ ರೂಪದಲ್ಲಿ ಹರಿಯಲಿರುವ ಕಾವೇರಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಬರಲಿದೆ. ನೋಡಿರಿ....


Click it and Unblock the Notifications











