ಮಗ ಫೋಟೊ ಹಂಚಿಕೊಂಡ 'ಲಕ್ಷ್ಮಿ ಬಾರಮ್ಮ' ನಟಿ ಕವಿತಾ ಗೌಡ; ಪುತ್ರನ ಆಗಮನದ ಬಳಿಕೆ ಹೇಗಿದೆ ಲೈಫ್?
ಚಿನ್ನು, ಚಂದು.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ಬಾರಮ್ಮ' ಪಾತ್ರಗಳ ಹೆಸರಿದು. ಚಿನ್ನು ಪಾತ್ರದಲ್ಲಿ ನಟಿ ಕವಿತಾ ಗೌಡ ನಟಿಸಿದ್ದರೆ, ನಾಯಕನಾಗಿ ಚಂದನ್ ಕುಮಾರ್ ಅಭಿನಯಿಸಿದ್ದರು. ರೀಲ್ ಲೈಫ್‌ನಲ್ಲಿ ಮದುವೆಯಾಗಿದ್ದ ಚಿನ್ನು ಹಾಗೂ ಚಂದು ಮುಂದೆ ರಿಯಲ್ ಲೈಫ್‌ನಲ್ಲೂ ಜೋಡಿಯಾಗಿದ್ದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ.
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವರು ನಾಯಕ ಚಂದು ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಮೊದಲು ಲಚ್ಚಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಕವಿತಾ ಗೌಡ ಅವರು ಲಚ್ಚಿ ಪಾತ್ರಕ್ಕೆ ಆಯ್ಕೆಯಾದರು. ಚಂದನ್ ಕುಮಾರ್ ಅವರು ಮುಂದೆ ಧಾರಾವಾಹಿಯಿಂದ ಹೊರಬಂದರು. ಕವಿತಾ ಗೌಡ ಮಾತ್ರ ಲಚ್ಚಿಯಾಗಿ ನಟಿಸುತ್ತಿದ್ದರು.

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಸಮಯದಲ್ಲಿ ಕವಿತಾ ಗೌಡ, ಚಂದನ್ ನಡುವೆ ಸ್ನೇಹ ಬೆಳೆದಿದೆ. ಮುಂದೆ ಅದೇ ಸ್ನೇಹ ಪ್ರೀತಿಗೆ ತಿರುಗಿತ್ತು. ಕುಟುಂಬದವರ, ಗುರು ಹಿರಿಯರ ಒಪ್ಪಿಗೆ ಪಡೆದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. 2021 ಮೇ 14ರಂದು ಅಂದರೆ ಕೊರೊನಾ ಸಮಯದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಇವರ ಮದುವೆ ನಡೆದಿತ್ತು. ಅದು ಕೊವಿಡ್ ಸಮಯವಾದ ಕಾರಣದಿಂದ ಕೇವಲ ಆಪ್ತರಷ್ಟೇ ಅವರ ಮದುವೆಗೆ ಆಹ್ವಾನ ನೀಡಿದ್ದರು.
ಈಗ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರ ಜೀವನದಲ್ಲಿ ಮುದ್ದು ಮಗನ ಆಗಮನವಾಗಿರುವುದು ಕೂಡಾ ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಕವಿತಾ ಚಂದನ್ ದಂಪತಿಗಳ ಮಗನಿಗೆ ಆರು ತಿಂಗಳು ತುಂಬಿದೆ. ಈ ಸಮಯದಲ್ಲಿ ಕವಿತಾ ಗೌಡ ಅವರು ಪತಿ ಹಾಗೂ ಮಗನೊಂದಿಗೆ ಇರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
"ಹೊಸ ಜೀವನದ ಆರು ತಿಂಗಳುಗಳು. ಗುಂಡಪ್ಪ" ಎಂದು ಶೀರ್ಷಿಕೆಯನ್ನು ಕೂಡಾ ಕೊಟ್ಟಿದ್ದಾರೆ. ಇದರ ಜೊತೆಗೆ "ಆರು ತಿಂಗಳ ಹಿಂದೆ ನಮ್ಮ ಹೃದಯಗಳು ನಾವು ಊಹಿಸದ ರೀತಿಯಲ್ಲಿ ಬೆಳೆದವು. ಇಂದಿಗೆ ನೀನು ನಮ್ಮ ಬದುಕಿನಲ್ಲಿ ಬಂದು ಆರು ತಿಂಗಳುಗಳಾಯಿತು. ಈ ಸುಂದರ ಕ್ಷಣವನ್ನು ನಾವು ಖುಷಿಯಿಂದ ಆಚರಿಸುತ್ತಿದ್ದೇವೆ. ನಿನ್ನ ಪೋಷಕರಾಗಿರುವುದಕ್ಕೆ ನಾವು ತುಂಬಾನೇ ಅದೃಷ್ಟವಂತರು ಎಂದು ನೆನಪಿಸಿಕೊಳ್ಳುವ ಕ್ಷಣವದು. ನಿನ್ನ ಪೋಷಕರಾಗಿದ್ದಕ್ಕೆ ನಮಗೆ ಖುಷಿಯಿದೆ. ನಮ್ಮ ಜೀವನವನ್ನು ನಗುವಿನಿಂದ ತುಂಬಿರುವಂತೆ ನೀನು ಮಾಡಿರುವೆ. ನೀನು ನಮ್ಮ ಜೀವನದ ಅತ್ಯಮೂಲ್ಯವಾದ, ಸಿಹಿಯಾದ ಉಡುಗೊರೆ" ಎಂದು ಕವಿತಾ ಗೌಡ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಕವಿತಾ ಗೌಡ ಅವರು ನಾಲ್ಕು ಗಂಟೆಗಳ ಹಿಂದೆಯಷ್ಟೇ ಈ ಪೋಸ್ಟ್ ಹಾಕಿದ್ದು, ಈಗಾಗಲೇ ಇಪ್ಪತ್ತೊಂಬತ್ತು ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಜೊತೆಗೆ ಈ ಚಿಕ್ಕದಾದ, ಚೊಕ್ಕದಾದ ಕ್ಯೂಟ್ ಫ್ಯಾಮಿಲಿ ಫೋಟೋವನ್ನು ನಾನ್ನೂರಕ್ಕೂ ಅಧಿಕ ಮಂದಿ ಶೇರ್ ಕೂಡಾ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಕಮೆಂಟ್ ಗಳ ಮಹಾಪೂರವೇ ಹರಿದುಬಂದಿದೆ.
"ಜ್ಯೂನಿಯರ್ ಚಂದನ್", "ಸೋ ಕ್ಯೂಟ್ ಫ್ಯಾಮಿಲಿ", "ಕ್ಯೂಟ್ ಗುಂಡಪ್ಪ", "ಸೂಪರ್ಬ್, ಬೇಬಿ ಲುಕ್ಕಿಂಗ್ ಲೈಕ್ ಚಂದು", "ಗುಂಡಪ್ಪ ಚಂದು ಚಿನ್ನು ಇಬ್ರ ಥರವೂ ಇದೆ", "ಲವ್ಲಿ", " ಬ್ಯೂಟಿಫುಲ್", "ಹಿ ಈಸ್ ಸೋ ಕ್ಯೂಟ್", " ಅಡೊರೇಬಲ್ ಬೇಬಿ", "ಬ್ಯೂಟಿಫುಲ್ ಪಿಕ್ ಆಫ್ ದಿ ಡೇ", " ಕ್ಯೂಟ್ ನೆಸ್ ಓವರ್ ಲೋಡೆಡ್", "ಜೆರಾಕ್ಸ್ ಕಾಫಿ ಅಪ್ಪ ಮಗ ಅಮ್ಮ ಒಂದೇ ಫೇಸ್ ಕಟ್", "ಮೇಡ್ ಫಾರ್ ಈಚ್ ಅದರ್" ಎಂಬ ಕಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ.


Click it and Unblock the Notifications











