»   » ಹೊಚ್ಚ ಹೊಸ ಧಾರಾವಾಹಿಯಲ್ಲಿ 'ಲಕ್ಷ್ಮಿ ಬಾರಮ್ಮ' ಚಿನ್ನು ನಾಯಕಿ.!

ಹೊಚ್ಚ ಹೊಸ ಧಾರಾವಾಹಿಯಲ್ಲಿ 'ಲಕ್ಷ್ಮಿ ಬಾರಮ್ಮ' ಚಿನ್ನು ನಾಯಕಿ.!

Posted By:
Subscribe to Filmibeat Kannada

ಕಿರುತೆರೆಯ ಜನಪ್ರಿಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ 'ಚಿನ್ನು' ಪಾತ್ರಕ್ಕೆ ಜೀವ ತುಂಬಿದ್ದ ನಟಿ ಕವಿತಾ ಗೌಡ ಅನಂತರ ಬೆಳ್ಳಿತೆರೆಗೆ ಪರಿಚಿತರಾದರು.

'ಚಿನ್ನು' ಪಾತ್ರಕ್ಕೆ ಗುಡ್ ಬೈ ಹೇಳಿ 'ಶ್ರೀನಿವಾಸ ಕಲ್ಯಾಣ' ಮತ್ತು 'ಫಸ್ಟ್ ಲವ್' ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದ ನಟಿ ಕವಿತಾ ಗೌಡ ಇದೀಗ ವಾಪಸ್ ಕಿರುತೆರೆ ಕಡೆಗೆ ಮುಖ ಮಾಡಿದ್ದಾರೆ.

Kavitha Gowda to play lead in 'Vidhya Vinayaka' serial

'ಲಕ್ಷ್ಮಿ ಬಾರಮ್ಮ' ಚಿನ್ನು(ಕವಿತಾ)ಗೂ ಕಾಡಿತ್ತು 'ಕಾಸ್ಟಿಂಗ್ ಕೌಚ್' ಪೆಡಂಭೂತ.!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ 'ವಿದ್ಯಾ ವಿನಾಯಕ' ಧಾರಾವಾಹಿಯ ನಾಯಕಿ 'ವಿದ್ಯಾ' ಪಾತ್ರದಲ್ಲಿ ಕವಿತಾ ಗೌಡ ಮಿಂಚಲಿದ್ದಾರೆ. ಸೀರಿಯಲ್ ನಲ್ಲಿ ಕವಿತಾ ಗೌಡ ರವರದ್ದು ಹೆಸರಿಗೆ ತಕ್ಕ ಹಾಗೆ ವಿದ್ಯಾವಂತೆಯ ಪಾತ್ರವಂತೆ.

ಪ್ರಾಬ್ಲಂ 'ಚಿನ್ನು'ದಲ್ಲ: 'ಫಸ್ಟ್ ಲವ್' ನೆಗೆಟಿವ್ ಪಬ್ಲಿಸಿಟಿ ಅಷ್ಟೆ.!

ಪಾತ್ರ ತುಂಬಾ ಚೆನ್ನಾಗಿರುವ ಕಾರಣಕ್ಕೆ ಒಪ್ಪಿಕೊಂಡೆ ಎನ್ನುವ ಕವಿತಾ ಗೌಡ ಸದ್ಯ 'ವಿದ್ಯಾ ವಿನಾಯಕ' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

ಅಂದ್ಹಾಗೆ, 'ವಿದ್ಯಾ ವಿನಾಯಕ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿದೆ. ದಿನಾಂಕ ಹಾಗೂ ಸಮಯ ನಿಗದಿ ಇನ್ನೂ ಆಗಿಲ್ಲ. ಸದ್ಯಕ್ಕೆ ಧಾರಾವಾಹಿಯ ಪ್ರೋಮೋ ಬಿಡುಗಡೆ ಆಗಿದ್ದು, ಅದರಲ್ಲಿ 'ವಿದ್ಯಾ' ಹಾಗೂ 'ವಿನಾಯಕ' ಪರಿಚಯ ಹೀಗಿದೆ. ನೋಡ್ಕೊಂಡ್ ಬನ್ನಿ....

English summary
Actress Kavitha Gowda is playing lead in 'Vidhya Vinayaka' serial which will telecast in Zee Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X