ತಂದೆ-ತಾಯಿಯಾಗಿ ಬಡ್ತಿ ಪಡೆದ ಜೋಡಿ : ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ

By ಪ್ರಿಯಾ ದೊರೆ

ನಟಿ ಕವಿತಾ ಗೌಡ ಅವರು ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿದ್ದು, ಪತಿ-ಪತ್ನಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗುವಿನ ಕಾಲಿನ ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ. ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ ಆಂಡ್ ದಿ ಎವೊಲ್ಯೂಷನ್ ಕಂಟಿನ್ಯೂಸ್ ಎಂದು ಬರೆದುಕೊಂಡಿದ್ದಾರೆ. ಸಂತಸದ ಸುದ್ದಿ ಕೇಳಿದ ಅಭಿಮಾನಿಗಳು ಕೂಡ ಫುಲ್ ಹ್ಯಾಪಿ ಆಗಿದ್ದಾರೆ.

ಪೋಷಕರಾಗಿ ಬಡ್ತಿ ಪಡೆದ ಜೋಡಿ

2021 ರಲ್ಲಿ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಕೋವಿಡ್ ನಿಯಮದಂತೆ ಸಿಂಪಲ್ ಆಗಿ ಸಪ್ತಪದಿ ತುಳಿದಿದ್ದರು. ಕಳೆದ ಮೂರು ವರ್ಷಗಳಿಂದ ಅಭೀಮಾನಿಗಳು ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಕಾಯುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಕವಿತಾ ಅವರು ಇನ್ ಸ್ಟಾಗ್ರಾಂ ನಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಮೊನ್ನೆಯಷ್ಟೇ ಕವಿತಾ ಘೌಡ ಅವರ ಸೀಮಂತ ಕಾರ್ಯವನ್ನು ಅದ್ಧೂರಿಯಾಗಿ ನೆರವೇರಿಸಲಾಗಿತ್ತು. ದಂಒತಿಗಳಿಗೆ ಗಂಡು ಮಗು ಜನಿಸಿರುವುದಕ್ಕೆ ಅಭಿಮಾನಿಗಳು ಸಂತಸಗೊಂಡಿದ್ದು, ಎಲ್ಲರೂ ಶುಭ ಹಾರೈಸಿದ್ದಾರೆ.

Written update on actress kavitha gowda

ಖುಷಿಪಟ್ಟ ಅಭಿಮಾನಿಗಳು

ಕವಿತಾ ಗೌಡ ಮತ್ತು ಚಂದನ್ ಇಬ್ಬರೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಪರಿಚಯವಾಗಿದ್ದರು. ಇಬ್ಬರೂ ಈ ಸೀರಿಯಲ್ ಮೂಲಕ ಚಿರಪರಿಚಿತರಾಗಿದ್ದರು. ಕವಿತಾ ಅವರು ಲಕ್ಷ್ಮೀಬಾರಮ್ಮ ಸೀರಿಯಲ್ ಮೂಲಕ ಇಂದಿಗೂ ಚಿನ್ನು ಎಂದೇ ಕರೆಸುಕೊಳ್ಳುತ್ತಿದ್ದಾರೆ. ಇಬ್ಬರೂ ಮದುವೆಯಾದ ಬಳಿಕ ಹೊಸ ಹೋಟೆಲ್ ಪ್ರಾರಂಭಿಸಿದರು. ತಮ್ಮದೇ ಆದ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರು. ಇನ್ನು ತಮ್ಮ ಚೊಚ್ಚಲ ಕಂದಮ್ಮನಿಗೆ ಜನ್ಮ ನೀಡಿದ್ದು, ಇಂದೇ ವಿಷ್ಣುವರ್ಧನ್, ಉಪೇಂದ್ರ ಹಾಗೂ ಶೃತಿ ಅವರ ಹುಟ್ಟುಹಬ್ಬ. ಇಂತಹ ಶುಭ ದಿನವೇ ಕವಿತಾ ಅವರು ತಮ್ಮ ಮಗುವಿಗೆ ಜನ್ಮ ನೀಡಿದ್ದು, ಕೆಲ ಅಭಿಮಾನಿಗಳ ಸಂತಸವನ್ನು ಡಬಲ್ ಮಾಡಿದೆ.

ಕವಿತಾ ಗೌಡ ಪ್ರಾಜೆಕ್ಟ್ ಗಳು

ಇನ್ನು ನಟಿ ಕವಿತಾ ಗೌಡ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಬಳಿಕ 2015 ರಲ್ಲಿ ತೆರೆಕಂಡ ಹುಚ್ಚ ವೆಂಕಟ್' ಮತ್ತು 2017 ರಲ್ಲಿ ತೆರೆಕಂಡ ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ವಿದ್ಯಾ ವಿನಾಯಕ' ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ತದನಂತರ ಬಿಗ್‌ಬಾಸ್ ಸೀಸನ್ 6ರಲ್ಲಿ ಭಾಗವಹಿಸಿದ್ದರು. ಇನ್ನು ನಟ ಚಂದನ್‌ ಕುಮಾರ್‌ ಅವರು ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಆ ಬಳಿಕ ಲಕ್ಷ್ಮೀ ಬಾರಮ್ಮ, ಸರ್ವಮಂಗಳ ಮಾಂಗಲ್ಯೆ, ಸಾವಿತ್ರಮ್ಮಗಾರಿ ಅಬ್ಬಾಯಿ, ಮರಳಿ ಮನಸಾಗಿದೆ, ಶ್ರೀಮತಿ ಶ್ರೀನಿವಾಸ್‌ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

kavitha-gowda-wife-of-chandan-gave-birth-to-baby

ಚಂದನ್‌ ನಟನೆಯ ಸಿನಿಮಾಗಳು

ಇದನ್ನು ಹೊರತು ಪಡಿಸಿ ನಟ ಚಂದನ್‌ ಕುಮಾರ್‌ ಅವರು ಬಿಗ್‌ ಬಾಸ್‌ ಸೀಸನ್‌ 3 ರಲ್ಲಿ ಭಾಗವಹಿಸಿದ್ದರು. ಇನ್ನು ದಂಪತಿಗಳಿಬ್ಬರೂ ಕೂಡ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಕುಕ್‌ ವಿತ್‌ ಕಿರಿಕ್ಕು ರಿಯಾಲಿಟಿ ಶೋನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನು ಚಂದನ್‌ ಅವರು ಪರಿಣಯ, ಲೈಫು ಇಷ್ಟೇನೇ, ಕಥೆ, ಎರಡೊಂದ್ಲಾ ಮೂರು, ಲವ್‌ ಯೂ ಆಲಿಯಾ, ಬೆಂಗಳೂರು- 560023, ಪ್ರೇಮ ಬರಹ, ಶ್ರೀಕೃಷ್ಣ ಅಟ್‌ ಜಿಮೇಲ್‌.ಕಾಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಫ್ಲರ್ಟ್‌ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದು, ಸ್ವತಃ ಚಂದನ್‌ ಅವರೇ ಡೈರೆಕ್ಷನ್‌ ಮಾಡಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X