ಕವಿತಾ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕಬಹುದು ಎಂದ ಅಕ್ಷತಾ.!

Recommended Video

Bigg Boss Kannada Season 6:ಕವಿತಾ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕಬಹುದು ಎಂದ ಅಕ್ಷತಾ.!

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿದು ವಾರಗಳೇ ಉರುಳಿದರೂ, ಅದರ ಸುತ್ತಲಿನ ವಿವಾದ ಮಾತ್ರ ಇನ್ನೂ ಕಮ್ಮಿ ಆಗಿಲ್ಲ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ ಕವಿತಾ ಗೌಡ ಬೇಸರಗೊಂಡಿದ್ದಾರೆ, ಗರಂ ಆಗಿದ್ದಾರೆ. ಹೀಗಾಗಿ ಆಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ.

''ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೂ ಆಂಡಿ ಕಿರುಕುಳ ನೀಡುತ್ತಿದ್ದಾರೆ'' ಎನ್ನುವುದು ಕವಿತಾ ಗೌಡ ಆರೋಪ. ಆದ್ರೆ, ಆಂಡಿ ಹೀಗೆಲ್ಲ ಮಾಡುವವನಲ್ಲ ಅಂತ ಮುರಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಅಕ್ಷತಾ ಪಾಂಡವಪುರ ಕೂಡ ಆಂಡ್ರ್ಯೂ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.

''ಕವಿತಾ ಹೊರಗೆ ಬಂದ್ಮೇಲೆ ಕಪಾಳೆ ಹೊಡೆಯುವೆ'' ಅಂತ ಹಿಂದೊಮ್ಮೆ ಅಕ್ಷತಾ ಪಾಂಡವಪುರ ಗುಡುಗಿದ್ದರು. ಕಾರಣ, ಅಕ್ಷತಾ-ರಾಕೇಶ್ ಬಗ್ಗೆ ಗಾಸಿಪ್ ಶುರು ಮಾಡಿದ್ದೇ ಕವಿತಾ.! ಇದೀಗ ಅದೇ ಕವಿತಾ ವಿರುದ್ಧ ಅಕ್ಷತಾ ಸಿಡಿಮಿಡಿಗೊಂಡಿದ್ದಾರೆ. ಮುಂದೆ ಓದಿರಿ....

ಕವಿತಾ ಆಕ್ಟ್ ಮೇಲೆ ಡೌಟ್.!

ಕವಿತಾ ಆಕ್ಟ್ ಮೇಲೆ ಡೌಟ್.!

''ಕವಿತಾ ಕೊಟ್ಟಿರುವ ದೂರಿನ ಪ್ರಕಾರ ಆಂಡಿ ಮಾಡಿದ್ದರೆ ಅದು ತಪ್ಪು. ಆದರೆ ಆಂಡಿ ಹಾಗೆ ಮಾಡಿಲ್ಲ ಎಂಬ ನಂಬಿಕೆ ನನಗೆ ಇದೆ. ಯಾಕಂದ್ರೆ, ಕವಿತಾ ಆಕ್ಟ್ ಮೇಲೂ ನನಗೆ ಡೌಟ್ ಇದೆ'' ಅಂತಾರೆ ಅಕ್ಷತಾ ಪಾಂಡವಪುರ.

ಕವಿತಾ ಸ್ವಾರ್ಥಿ

ಕವಿತಾ ಸ್ವಾರ್ಥಿ

''ಕವಿತಾ ತುಂಬಾ ಸ್ವಾರ್ಥಿ. ನಾನು ಹೊರಗೆ ಬಂದ್ಮೇಲೆ ಕವಿತಾ ಮಾಡಿರುವ ಗಾಸಿಪ್ ನೋಡಿದ್ದೇನೆ. ಹಾಗ್ನೋಡಿದ್ರೆ, ನಾನು ಕೂಡ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು. ಆದರೆ ನಾನು ಹಾಕಲಿಲ್ಲ. ಯಾಕಂದ್ರೆ, ಅಲ್ಲಿ ಎಲ್ಲರೂ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಅಣ್ತಮ್ಮ ಅನ್ನೋರೇ ಬೆನ್ನ ಹಿಂದೆ ಚೂರಿ ಹಾಕುತ್ತಾರೆ'' - ಅಕ್ಷತಾ ಪಾಂಡವಪುರ

ಆಂಡಿ ಮೃಗ ಅಲ್ಲ.!

ಆಂಡಿ ಮೃಗ ಅಲ್ಲ.!

''ಬಿಗ್ ಬಾಸ್ ಮುಗಿದ್ಮೇಲೆ ಆಂಡಿ ತುಂಬಾ ಕೆಲಸ ಮಾಡುತ್ತಿದ್ದಾನೆ. ಇದರ ಮಧ್ಯೆ ಆತ ಎಲ್ಲಿ ಕವಿತಾಗೆ ತೊಂದರೆ ಕೊಡುತ್ತಾನೆ.? ಕವಿತಾ ಗಂಭೀರ ಆರೋಪ ಮಾಡಿದ್ದಾರೆ. ಖಂಡಿತ ಆಂಡಿ ಹಾಗೆ ಮಾಡಿರಲು ಸಾಧ್ಯವೇ ಇಲ್ಲ. ತಾನು ತಿಂದು ಬೇರೆಯವರ ಮೂತಿಗೆ ಒರೆಸುವ ಕ್ಯಾರೆಕ್ಟರ್ ಕವಿತಾ ರದ್ದು. ಅದು ನಮಗೆ ಗೊತ್ತಾಗಿದೆ. ಆಂಡಿ ಆಟ ಆಡಿದ್ದಾನೆ ನಿಜ. ಆದ್ರೆ, ಆತ ಮನುಷ್ಯ. ಮೃಗ ಅಲ್ಲ'' - ಅಕ್ಷತಾ ಪಾಂಡವಪುರ

ಇದು ಸೃಷ್ಟಿ

ಇದು ಸೃಷ್ಟಿ

''ಇದು ನಿಜವಾಗಿಯೂ ಸೃಷ್ಟಿ. ಚಾನೆಲ್ ನವರ ಮೇಲೆಯೂ ಕವಿತಾ ಕಂಪ್ಲೇಂಟ್ ಕೊಟ್ಟಿದ್ದಾಳೆ. ಬಹುಶಃ ಅವಳಿಗೆ ಏನು ಆಗಬೇಕಿತ್ತೋ, ಅದು ಆಗಿಲ್ಲ. ಅದಕ್ಕೆ ಇದೆಲ್ಲ ಅನ್ಸುತ್ತೆ. ಕೆಲಸ ಇಲ್ಲದಿರುವಾಗಲೇ ಹೀಗೆಲ್ಲಾ ಆಗೋದು'' ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ ಅಕ್ಷತಾ ಪಾಂಡವಪುರ. (ಕೃಪೆ - ಫಸ್ಟ್ ನ್ಯೂಸ್)

More from Filmibeat

English summary
Bigg Boss Kannada 6 Contestant Kavitha Gowda's complaint in Women's Commission: Akshata supports Andrew.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X