For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಕವಿತಾ ಲಂಕೇಶ್ ಸೆಕೆಂಡ್ ಇನ್ನಿಂಗ್ಸ್

  By Rajendra
  |

  ಪ್ರಯೋಗಶೀಲ ನಿರ್ದೇಶಕಿ ಕವಿತಾ ಲಂಕೇಶ್ ಅವರು ಕಿರುತೆರೆಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಈ ಹಿಂದೊಮ್ಮೆ ಅವರು ಕಸ್ತೂರಿ ವಾಹಿನಿಗಾಗಿ ಧಾರಾವಾಹಿಯೊಂದನ್ನು ನಿರ್ದೇಶಿಸಿದ್ದರು. ಈಗ ಜೀ ಕನ್ನಡ ವಾಹಿನಿಗಾಗಿ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ.

  ಈ ಬಾರಿ ಅವರು ಸೆಂಟಿಮೆಂಟ್, ಎಮೋಷನಲ್ ಹಾಗೂ ಸಸ್ಪೆನ್ಸ್ ಅಂಶಗಳೊಂದಿಗೆ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೇ ಅಕ್ಟೋಬರ್ 22ರಿಂದ ಸೋಮವಾರದಿಂದ ಶುಕ್ರವಾರದತನಕ ರಾತ್ರಿ 8ಗಂಟೆಗೆ ಕವಿತಾ ಅವರ ಧಾರಾವಾಹಿ ಮೂಡಿಬರಲಿದೆ.

  ಮದುವೆಯಾಗದೆ ಉಳಿದಿರುವ ಅಕ್ಕ ರೇವತಿ ಹಾಗೂ ಅವಳ ಪ್ರೀತಿಯ ತಂಗಿ ಶ್ರೀಮತಿ ಈ ಧಾರಾವಾಹಿಯ ಪ್ರಮುಖ ಪಾತ್ರಗಳು. ಇವರಿಬ್ಬರ ಬಾಳಿನಲ್ಲಿ ಬಿರುಗಾಳಿಯಂತೆ ಪ್ರಭಾಕರ ಪ್ರವೇಶಿಸುತ್ತಾನೆ. ಆತನೊಬ್ಬ ಸ್ಯಾಡಿಸ್ಟ್.

  ಇವರಿಬ್ಬರಲ್ಲಿ ತನ್ನ ಪ್ರೀತಿಯ ಶ್ರೀಮತಿಯಾಗಿ ಪ್ರಭಾಕರ ಯಾರನ್ನು ಆಯ್ಕೆ ಮಾಡುತ್ತಾನೆ ಎಂಬುದೇ ಕಥೆಯ ಸಾರಾಂಶ. ಹಾಗಾಗಿಯೇ ಧಾರಾವಾಹಿಗೆ "ನನ್ನ ಪ್ರೀತಿಯ ಶ್ರೀಮತಿ: ಎಂದು ಹೆಸರಿಡಲಾಗಿದೆ.

  ಕಿರುತೆರೆ ಕಲಾವಿದರಾದ ಸ್ನೇಹಾ (ರೇವತಿ ಪಾತ್ರ), ಅನುಶ್ರೀ (ಶ್ರೀಮತಿ ಪಾತ್ರ), ಹರ್ಷವರ್ಧನ್ ಚಿತ್ರದ ನಾಯಕ ನಟ. ಇವರ ಜೊತೆಗೆ ಶೃಂಗೇರಿ ರಾಮಣ್ಣ, ಶೋಭಾ, ಬಿಎಲ್ ಮಂಜುಳಾ, ಅಕ್ಷಯ್, ಚಿಕ್ಕಣ್ಣ, ರಶ್ಮಿ, ಪ್ರಕೃತಿ ಸೇರಿದಂತೆ ಹೊಸ ಕಲಾವಿದರ ಬಳಗವೇ ಇದೆ.

  ಈ ಧಾರಾವಾಹಿ ಮೂಲಕ ಜೀ ಕನ್ನಡದ ಟಿಆರ್ ಪಿಯನ್ನೂ ಹೆಚ್ಚಿಸುವ ಕೆಲಸಕ್ಕೆ ಕವಿತಾ ಲಂಕೇಶ್ ಮುಂದಾಗಿದ್ದಾರೆ. ಒಟ್ಟಿನಲ್ಲಿ ದೇವಿರಿ, ಪ್ರೀತಿ ಪ್ರೇಮ ಪ್ರಣಯ, ಅವ್ವ ಹಾಗೂ ಕ್ರೇಜಿಲೋಕದಂತಹ ಸದಭಿರುಚಿಯ ಚಿತ್ರಗಳನ್ನು ಕೊಟ್ಟಂತಹ ಕವಿತಾ ಅವರು ಕಿರುತೆರೆ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತಾರೆ ಎಂಬುದನ್ನು ಕಾದುನೋಡಬೇಕು. (ಒನ್ಇಂಡಿಯಾ ಕನ್ನಡ)

  English summary
  Noted Kannada films director Kavitha Lankesh's new mege television serial Nanna Preethiya Srimathi to air on Zee Kannada from 22nd of October, 2012 at 8 pm. It's a women centric television serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X