ಧಾರಾವಾಹಿಯಿಂದ ದೂರ ಉಳಿದಿರೊ ಕಾವ್ಯಾ ಗೌಡ ಈಗ ಜ್ಯೂವೆಲರಿ ಡಿಸೈನರ್: ಕಂಪನಿ ಯಾವುದು?
ಕಳೆದ ದಶಕದಲ್ಲಿ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ನಟಿ ಕಾವ್ಯಾ ಗೌಡ. ಇದೀಗ ಧಾರಾವಾಹಿಯಿಂದ ಒಂದು ದೊಡ್ಡ ಬ್ರೇಕ್ ಪಡೆದುಕೊಂಡಿದ್ದಾರೆ. ಅಂದ ಹಾಗೆ 'ಮೀರಾ ಮಾಧವ', 'ಗಾಂಧಾರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕಾವ್ಯಾ ಗೌಡ ಕೊನೆಯದಾಗಿ ನಟಿಸಿದ್ದು ಆರಾಧನಳಾಗಿ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕಿ ಆರಾಧನಾಳಾಗಿ ಅಭಿನಯಿಸಿದ್ದ ಕಾವ್ಯಾ ಗೌಡ ಕನ್ನಡದ ಹೊರತಾಗಿ ತೆಲುಗು ಧಾರವಾಹಿಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಪ್ರತಿಭೆ.

ಹೊಸ ವೃತ್ತಿ ಆರಂಭಿಸಿದ ಕಾವ್ಯಾ ಗೌಡ
ನಟನೆಯ ಹೊರತಾಗಿ ತುಂಬಾ ಒಳ್ಳೆಯ ಫ್ಯಾಷನ್ ಸೆನ್ಸ್ ಇರುವ ನಟಿ ಕಾವ್ಯಗೌಡ. ತಮ್ಮ ಬಟ್ಟೆ-ಬರೆ, ಮೇಕಪ್ ಮೂಲಕವೇ ತಮ್ಮನ್ನು ಎಲಿಗೆಂಟಾಗಿ ತೋರಿಸಿಕೊಳ್ಳುತಿದ್ದರು. ಹೀಗಿರುವಾಗ ಇದೀಗ ಈಕೆ, ಧಾರಾವಾಹಿಯಿಂದ ಹೊರ ಬಂದಿರುವುದರಿಂದ ಹೊಸ ವೃತ್ತಿಯೊಂದನ್ನು ಆರಂಭಿಸಿದ್ದಾರೆ.
ಜ್ಯುವೆಲ್ಲರಿ ಡಿಸೈನರ್ ಆದ ಕಾವ್ಯಾ
ಹೌದು! ಒಂದು ಇಟಾಲಿಯನ್ ಜ್ಯುವೆಲ್ಲರಿ ಬ್ರಾಂಡ್‌ಗೆ ಜುವೆಲ್ಲರಿ ಡಿಸೈನರ್ ಆಗಿ ಕಾವ್ಯಾ ಗೌಡ ಕೆಲಸ ಮಾಡುತ್ತಿದ್ದಾರೆ. ನಟಿ ಕಾವ್ಯ ಗೌಡ ವಾಚ್ ಹಾಗೂ ಬೇರೆ ಬೇರೆ ಜ್ಯುವೆಲರಿಗಳನ್ನು ಡಿಸೈನ್ ಮಾಡುತ್ತಿದ್ದಾರಂತೆ. ನಟನೆಯಿಂದ ತಮ್ಮ ಹೊಸ ಪ್ಯಾಶನ್ ಕಡೆಗೆ ಕಾಲಿಟ್ಟಿರುವುದು ಈಕೆಗೆ ತುಂಬಾ ಸಂತಸ ತಂದಿದೆಯಂತೆ. ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಅವರ ವೃತ್ತಿಯ ಬಗ್ಗೆ ವಿಚಾರಿಸಿದ ಒಬ್ಬ ಫ್ಯಾನ್‌ಗೂ ಅವರು ಇದೇ ಮಾತನ್ನು ಹೇಳಿದರು.
ಅಷ್ಟೇ ಅಲ್ಲದೆ ಇತ್ತೀಚೆಗೆ ಮದುವೆ ಆಗಿರುವ ಕಾವ್ಯಾ ಗೌಡ ಸುಂದರ ದಾಂಪತ್ಯ ಜೀವನವನ್ನು ಹೊಂದಿದ್ದಾರೆ. ತಮ್ಮ ಪತಿಯೊಂದಿಗೆ ಆಗಾಗ ಹೊರಗೆ ಹೊಸ ಹೊಸ ಜಾಗಗಳಿಗೆ ಸುತ್ತಾಡುವ ಇವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಮೂಲಕ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಆಗಾಗ ಅಪ್ಡೇಟ್ ಹಾಕುತ್ತಿರುತ್ತಾರೆ.


Click it and Unblock the Notifications











