ಸೀರಿಯಲ್‌ಗೆ ಮತ್ತೆ ಕಂ ಬ್ಯಾಕ್ ಮಾಡುತ್ತಿರುವ ಕಾವ್ಯ ಶಾಸ್ತ್ರಿ! ಯಾವ ಧಾರಾವಾಹಿ?
ಕನ್ನಡ ಕಿರುತೆರೆಯಲ್ಲಿ ಹೆಸರುವಾಸಿ ಆಗಿರುವ ನಟಿಯರಲ್ಲಿ ಕಾವ್ಯ ಶಾಸ್ತ್ರಿ ಕೂಡ ಒಬ್ಬರು. ತನ್ನ ನಟನೆ ಮೂಲಕವೇ ಗಮನ ಸೆಳೆದಿದ್ದ ನಟಿ ಕಾವ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶುಭ ವಿವಾಹ ಧಾರಾವಾಹಿ ಮೂಲಕ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದ್ದರು. ತನ್ನ ನಟನೆ ಮೂಲಕವೇ ಮನೆ ಮನೆಗಳಲ್ಲಿ ಪರಿಚಿತರಾಗಿದ್ದ ಕಾವ್ಯ ನಟನೆ ಬಿಟ್ಟು ನಿರೂಪಣೆಯತ್ತ ತೆರಳಿದ್ದರು. ಸಾಕಷ್ಟು ದೊಡ್ಡ ಕಾರ್ಯಕ್ರಮಗಳು, ಅವಾರ್ಡ್ ಫಂಕ್ಷನ್‌ಗಳನ್ನು ನಿರೂಪಣೆ ಮಾಡುತ್ತಿದ್ದ ಕಾವ್ಯ ಶಾಸ್ತ್ರಿ ಇದೀಗ ಮತ್ತೆ ನಟನೆಯತ್ತ ಮರಳುತ್ತಿದ್ದಾರೆ.
ಇತ್ತೀಚೆಗೆ ಹೊಸ ಹೊಸ ಧಾರಾವಾಹಿಗಳ ಹೆಚ್ಚೆಚ್ಚು ಆರಂಭವಾಗುತ್ತಿದೆ. ಒಂದಾದ ಮೇಲೊಂದರಂತೆ ಅದೆಷ್ಟೋ ಹೊಸ ಧಾರಾವಾಹಿಗಳು ಕಿರುತೆರೆಗೆ ಲಗ್ಗೆ ಇಡುತ್ತಿದೆ. ಕಿರುತೆರೆಯಲ್ಲಿ ಧಾರಾವಾಹಿಗಳು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಲೇ ಇರುತ್ತವೆ. ಚಾನೆಲ್‌ಗಳ ಟಿಆರ್‌ಪಿ ಗೋಸ್ಕರ ಹೊಸ ಹೊಸ ಕಥೆಗಳನ್ನು ಹುಡುಕಿ ಜನರ ಮುಂದೆ ತರುತ್ತಲೇ ಇರುತ್ತವೆ. ಸದ್ಯಕ್ಕೆ ಉದಯವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಬರಲು ಸಜ್ಜಾಗಿದೆ. ಕೊರೋನಾ ಹಾವಳಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಡಬ್ಬಿಂಗ್ ಧಾರಾವಾಹಿಗಳ ಸದ್ದು ಜೋರಾಗಿಯೇ ಇದೆ. ಅದರಲ್ಲೂ ಕೋವಿಡ್‌ನಿಂದಾಗಿ ಬೇರೆ ಭಾಷೆಯಲ್ಲಿ ಸೂಪರ್ ಹಿಟ್ ಆದಂತಹ ಧಾರಾವಾಹಿಗಳನ್ನು ಕನ್ನಡಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಹಿಂದಿಯಿಂದ ಅದೆಷ್ಟೋ ಧಾರಾವಾಹಿಗಳು ಈಗಾಗಲೇ ಡಬ್ ಆಗಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಇದೀಗ ರಾಧಿಕಾ ಎಂಬ ಹೆಸರಿನಲ್ಲಿ ಬರುತ್ತಿರುವ ಹೊಸ ಧಾರಾವಾಹಿ, ತಮಿಳು ಭಾಷೆಯಿಂದ ಡಬ್ ಆಗುತ್ತಿದೆ. ತಮಿಳಿನ ಸನ್ ಟಿವಿಯಲ್ಲಿ ಪ್ರಸಾರವಾಗುವ 'ಕಾಯಲ್' ಎಂಬ ಧಾರಾವಾಹಿ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಧಾರಾವಾಹಿಯು ಒಬ್ಬ ಹೆಣ್ಣುಮಗಳು ತನ್ನ ಕುಟುಂಬ ಹಾಗೂ ಮನೆಗಾಗಿ ಒಬ್ಬಳೇ ದುಡಿಯುತ್ತಿರುತ್ತಾಳೆ. ತುಂಬಾ ಧೈರ್ಯವಂತೆ ಯಾಗಿರುವ ಇವಳ ಸುತ್ತ ನಡೆಯುವ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ. ಈ ಗಟ್ಟಿಗಿತ್ತಿಯ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು.

ಈಗಾಗಲೇ ಈ ಪಾತ್ರಕ್ಕಾಗಿ ನಟಿಯನ್ನು ಆಯ್ಕೆ ಮಾಡಲಾಗಿದೆ. ಹೌದು ರಾಧಿಕಾ ಧಾರಾವಾಹಿಯಲ್ಲಿ ರಾಧಿಕಾ ಪಾತ್ರಕ್ಕಾಗಿ ನಟಿ ಕಾವ್ಯ ಶಾಸ್ತ್ರಿ ಬಣ್ಣ ಹಚ್ಚುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನರ್ಸ್ ಪಾತ್ರವನ್ನು ವಹಿಸುತ್ತಿರುವ ಇವರು, ತಾನೊಬ್ಬಳೇ ಮನೆಯನ್ನು ನಿಭಾಯಿಸುತ್ತಿರುತ್ತಾರೆ. ನಟಿ ಕಾವ್ಯ ಶಾಸ್ತ್ರಿಯವರು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶುಭವಿವಾಹ ಧಾರಾವಾಹಿಯ ಮೂಲಕ ಎಲ್ಲರ ಮನೆಮಾತಾಗಿದ್ದರು. ಅಲ್ಲದೆ ಇವರಿಗೆ ರಿಯಾಲಿಟಿ ಶೋ ಮೂಲಕವು ಹೆಚ್ಚು ಪ್ರಸಿದ್ಧಿ ಸಿಕ್ಕಿತ್ತು.

ಶುಭ ವಿವಾಹ ಧಾರಾವಾಹಿ ಇಂದ ಒಳ್ಳೆಯ ಹೆಸರು ಗಳಿಸಿದ್ದರು ಕಾವ್ಯ. ಇದಾದ ನಂತರ ತಮ್ಮ ಕಿರುತೆರೆ ಜರ್ನಿಗೆ ಕೊಂಚ ಬ್ರೇಕ್ ನೀಡಿದ ನಟಿ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ದರ್ಶಿತ್ ಭಟ್ ನಿರ್ದೇಶನ ಮಾಡುತ್ತಿರುವ ಈ ಧಾರಾವಾಹಿಯಿಂದ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿರುವ ಕಾವ್ಯ ಶಾಸ್ತ್ರೀ ಅವರಿಗೆ ಅವರ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾಧಿಕಾ ಮೂಲಕ ಕಾವ್ಯಾ ಶಾಸ್ತ್ರೀ ಅವರು ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದ್ದಾರೆ.


Click it and Unblock the Notifications











