KBC 13: ಅಮಿತಾಬ್ ಬಚ್ಚನ್ ಮುಂದೆ ಕಣ್ಣೀರಿಟ್ಟ ನಟಿ ಜೆನಿಲಿಯಾ ದಂಪತಿ

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್​ಪತಿ ಶೋ ಅನೇಕ ಕಾರಣಗಳಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗುತ್ತಿರುವ ಈ ಶೋನಲ್ಲಿ ಶುಕ್ರವಾರದ 'ಶಾನ್ದಾರ್ ಶುಕ್ರವಾರ್' ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ವಿಶೇಷ ಸಂಚಿಕೆ ಪ್ರಸಿದ್ಧಿ ಪಡೆದಿದೆ. ಈ ಸಂಚಿಕೆಯಲ್ಲಿ ಖ್ಯಾತ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಾರೆ. ಚಾರಿಟಿಯ ಉದ್ದೇಶದಿಂದ ಸೆಲೆಬ್ರಿಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದ ಹಣವನ್ನು ಸಾಮಾಜಿಕ ಕೆಲಸಕ್ಕೆ ನೀಡುತ್ತಾರೆ.

ಈಗಾಗಲೇ ಈ ವಿಶೇಷ ಶೋನಲ್ಲಿ ಅನೇಕ ಜನ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಸಾಕಷ್ಟು ಹಣವನ್ನು ಟ್ರಸ್ಟ್ ಗೆ ನೀಡುವ ಮೂಲಕ ಕಷ್ಟದಲ್ಲಿರೋರಿಗೆ ಸಹಾಯ ಮಾಡಿದ್ದಾರೆ. ಈ ಬಾರಿ ಖ್ಯಾತ ಸ್ಟಾರ್ ಕಪಲ್ ಜೆನಿಲಿಯಾ ಮತ್ತು ರಿತೇಶ್ ದೇಶಮುಖ್, ಅಮಿತಾಬ್ ಮುಂದೆ ಹಾಟ್ ಸೀಟ್ ಏರಿದ್ದಾರೆ. ಈ ವಾರದ ಶಾನ್ದಾರ್ ಶುಕ್ರವಾರ್ ವಿಶೇಷ ಎಪಿಸೋಡ್‌ನಲ್ಲಿ ಜೆನಿಲಿಯಾ ದಂಪತಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಅಂದಹಾಗೆ ಹಾಟ್‌ಸೀಟ್‌ನಲ್ಲಿ ಕುಳಿತಿರುವ ತಾರಾಜೋಡಿ ಜೆನಿಲಿಯಾ ಮತ್ತು ರಿತೇಶ್ ಅಮಿತಾಬ್ ಮುಂದೆ ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ ಜೆನಿಲಿಯಾ ಶೋನಲ್ಲಿ ಕಣ್ಣೀರಿಡಲು ಕಾರಣವೇನು ಅಂತೀರಾ?. ಕ್ಯಾನ್ಸರ್ ಪೀಡಿತ ಮಕ್ಕಳನ್ನು ನೋಡಿ. ಜೆನಿಲಿಯಾ ದಂಪತಿ ಈ ಕಾರ್ಯಕ್ರಮಕ್ಕೆ ಬಂದಿದ್ದು, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಕ್ಕಳ ಸಹಾಯಕ್ಕಾಗಿ ಜೆನಿಲಿಯಾ ದಂಪತಿ ಈ ಬಾರಿ ಹಾಟ್ ಸೀಟ್ ಏರಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳ ವಿಡಿಯೋ ನೋಡಿದ ನಂತರ ಜೆನಿಲಿಯಾ ಮತ್ತು ರಿತೇಶ್ ಇಬ್ಬರೂ ಭಾವುಕರಾಗಿದ್ದಾರೆ.

KBC 13: Bollywood star couple Riteish deshmukh and genelia dsouza are special guest on KBC 13 show

ಬಳಿಕ ಮಾತನಾಡಿದ ಜೆನಿಲಿಯಾ, "ಮಕ್ಕಳು ಏನನ್ನು ಅನುಭವಿಸಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ರಿತೇಶ್ ಹೇಳಿದ್ದಾರೆ. ಜೆನಿಲಿಯಾ ಮತ್ತು ರಿತೇಶ್ ಇಬ್ಬರು ಬಾಲಿವುಡ್‌ನ ಸುಂದರ ಜೋಡಿಗಳಲ್ಲಿ ಒಂದು. ಆಗಾಗ ಇಬ್ಬರ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. 2012ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇತ್ತೀಚಿಗಷ್ಟೆ ಜೆನಿಲಿಯಾ ದಂಪತಿ ಟ್ರೋಲ್ ವಿಚಾರಕ್ಕೆ ಸುದ್ದಿಯಾಗಿದ್ದರು. "ನೆಟ್ಟಿಗನೊಬ್ಬ ಜೆನಿಲಿಯಾಗೆ ಓವರ್​ಆಕ್ಟಿಂಗ್, ಅಶ್ಲೀಲ​ ಆಂಟಿ, ನಾಚಿಕೆ ಆಗಬೇಕು ನಿಮಗೆ ಎಂಬಿತ್ಯಾದಿ ಕಾಮೆಂಟ್​ಗಳನ್ನು ಮಾಡಿದ್ದರು. ಅಷ್ಟೇ ಅಲ್ಲ ನಿಮಗೆ ವಯಸ್ಸಾಗಿದೆ, ಇಬ್ಬರು ಮಕ್ಕಳಿದ್ದಾರೆ. ನಿಮ್ಮ ಅವತಾರ ನೋಡಿ ಮಕ್ಕಳು ಕೂಡ ಶಾಕ್​ಆಗಬಹುದು" ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು.

ಟ್ರೋಲಿಗರಿಗೆ ಉತ್ತರ ನೀಡಿದ್ದ ಜೆನಿಲಿಯಾ "ಬಹುಶಃ ಕಾಮೆಂಟ್​ಮಾಡಿದ ವ್ಯಕ್ತಿಯ ದಿನ ಕೆಟ್ಟದಾಗಿತ್ತು ಅನಿಸುತ್ತದೆ. ಈ ಕಾರಣಕ್ಕೆ ಅವರು ಆ ರೀತಿ ಕಾಮೆಂಟ್​ ಹಾಕಿರಬಹುದು. ಅವರ ಮನೆಯಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ" ಎಂದು ಪ್ರತಿಕ್ರಿಯೆ ನೀಡಿದ್ದರು. ಇನ್ನು ನಟ ರಿತೇಶ್ ಕೂಡ ಖಡಕ್ ಆಗಿ ಪ್ರತಿಕ್ರಿಯಿಸಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ ಜನಿಲಿಯಾ ತುಜೆ ಮೇರಿ ಕಸಮ್ ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿದರು. ಚೆನ್ನೈ ಕಾದಲ್, ಸಂತೋಷ್ ಸುಬ್ರಮಣ್ಯಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಮದುವೆ ಬಳಿಕ ಜೆನಿಲಿಯಾ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ನಟ ರಿತೇಶ್ ದೇಶಮುಖ್ ಕೊನೆಯದಾಗಿ ಬಾಘಿ-3 ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

More from Filmibeat

English summary
KBC 13: Bollywood star couple Riteish deshmukh and genelia d'souza are special guest on KBC 13 show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X