ಕರೋಡ್‌ಪತಿ 13ನೇ ಸೀಸನ್ ನಿರೂಪಣೆಗೆ ಅಮಿತಾಬ್ ಸಜ್ಜು: ಹಾಟ್ ಸೀಟ್‌ನಲ್ಲಿ ಗಂಗೂಲಿ-ಸೆಹ್ವಾಗ್?

ಹಿಂದಿ ಕಿರುತೆರೆ ಲೋಕದ ಜನಪ್ರಿಯ ಕ್ವಿಜ್ ರಿಯಾಲಿಟಿ ಶೋ ಕೌನ್ ಬನೇಗ ಕರೋಡ್ ಪತಿ. ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿ ಕೊಡುವ ಈ ಶೋ ಈಗಾಗಲೇ ಸೂಪರ್ ಸಕ್ಸಸ್ ಆಗಿದೆ. ಕೌನ್ ಬನೇಗ ಕರೋಡ್‌ಪತಿ 12 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇದೀಗ 13ನೇ ಸೀಸನ್‌ಗೆ ಭರ್ಜರಿ ತಯಾರಿ ನಡೆದಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್ ಕಿರುತೆರೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಈಗಾಗಲೇ ಶೋ ಚಿತ್ರೀಕರಣ ಪ್ರಾರಂಭವಾಗಿದ್ದು, ಆಗಸ್ಟ್ 23ರಿಂದ ಕೌನ್ ಬನೇಗಾ ಕರೋಡ್ ಪತಿ ಶೋ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಕಳೆದ ವರ್ಷ ಕೊರೊನಾ ನಡುವೆಯೂ ಅಮಿತಾಬ್ ಕ್ವಿಜ್ ಶೋಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಸಾಕಷ್ಟು ಕಟ್ಟಿನಿಟ್ಟಿನ ಕ್ರಮಗಳೊಂದಿಗೆ ಕೌನ್ ಬನೇಗಾ ಕರೋಡ್‌ಪತಿ ಶೋ ನಡೆದಿತ್ತು. ಈ ಬಾರಿ ಕೂಡ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಶೋ ಪ್ರಾರಂಭವಾಗಿದೆ.

ಈ ಬಾರಿ ಶೋನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಏನೆಲ್ಲ ಬದಲಾವಣೆಯಾಗಿದೆ ಎನ್ನುವುದು ಶೋ ಪ್ರಸಾರವಾದ ಬಳಿಕವೇ ಗೊತ್ತಾಗಲಿದೆ. ಅಂದಹಾಗೆ ಈ ಬಾರಿಯ ಶೋ ಬಗ್ಗೆ ಕೇಳಿಬರುತ್ತಿರುವ ಸುದ್ದಿಯೆಂದರೆ ಕ್ರಿಕೆಟ್ ದಿಗ್ಗಜರಿಬ್ಬರು ಅಮಿತಾಬ್ ಎದುರು ಹಾಟ್ ಸೀಟ್ ನಲ್ಲಿ ಕೂರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅದು ಮತ್ಯಾರು ಅಲ್ಲ ವಿರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ. ಈ ಇಬ್ಬರು ಕ್ರಿಕೆಟ್ ದಿಗ್ಗಜರು, ಬಾಲಿವುಡ್ ಲೆಜೆಂಡ್ ಅಮಿತಾಬ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರಂತೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕೌನ ಬನೇಗಾ ಕರೋಡ್ ಪತಿ 13 ಸೀಸನ್ ನೋಡಲು ಪ್ರೇಕ್ಷಕರ ಕಾತರ ಹೆಚ್ಚಾಗಿದೆ.

Kaun Banega Crorepati 13: Virender Sehwag and Sourav Ganguly likely to on hot seat in Amitabh Bachchan show

ಕಳೆದ ಸೀಸನ್‌ನಲ್ಲಿ ಕರಮ್ ಮೀರ್ ಎನ್ನುವ ಎಪಿಸೋಡ್ ಮಾಡಲಾಗಿತ್ತು. ಈ ಎಪಿಸೋಡ್‌ನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕರೆದುಕೊಂಡು ಬಂದು ಹಾಟ್‌ಸೀಟ್‌ನಲ್ಲಿ ಕೂರಿಸಲಾಗುತ್ತಿತ್ತು. ಇದು ತುಂಬಾ ಫೇಮಸ್ ಆಗಿತ್ತು. ಹಾಗೆ ಈ ಬಾರಿ ಕೂಡ ವಿಶೇಷ ಅತಿಥಿಗಳಿಗೆ ವಿಶೇಷವಾದ ಎಪಿಸೋಡ್ ಪರಿಚಯಿಸಲಾಗಿದ್ದು, ಶಾಂದರ್ ಶುಕ್ರವಾರ ಎಂದು ಹೆಸರಿಡಲಿಡಲಾಗಿದೆ. ಶಾಂದರ್ ಶುಕ್ರವಾರದ ಎಪಿಸೋಡ್‌ನಲ್ಲಿ ಸೆಹ್ವಾಗ್ ಮತ್ತು ಗಂಗೂಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಇದುವರೆಗೂ ಯಾವುದೇ ಪ್ರೋಮೋ ಬಿಡುಗಡೆಯಾಗಿಲ್ಲ.

ಸೆಹ್ವಾಗ್ ಮತ್ತು ಗಂಗೂಲಿ ಇಬ್ಬರೂ ಹಾಟ್ ಸೀಟಿನಲ್ಲಿರುವ ಸಂಚಿಕೆ ಆಗಸ್ಟ್ 27ರಂದು ಪ್ರಸಾರವಾಗಲಿದೆ ಎಂಬ ಸುಳಿವು ನೀಡಿದೆ ಅಮಿತಾಬ್ ಆಪ್ತ ಮೂಲಗಳು. ಆದರೆ ಈ ಬಗ್ಗೆ ಸೋನಿ ವಾಹಿನಿ ಅಧಿಕೃತ ಮಾಹಿತಿ ಎಲ್ಲೂ ಶೇರ್ ಮಾಡಿಲ್ಲ. ಆದರೆ ಇಬ್ಬರು ಕ್ರಿಕೆಟ್ ದಿಗ್ಗಜರು ಎಷ್ಟು ಹಣ ಗಳಿಸಲಿದ್ದಾರೆ, ಯಾವೆಲ್ಲ ಪ್ರಶ್ನೆಗಳು ಎದುರಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದ್ದು, ಶಾಂದರ್ ಶುಕ್ರವಾರ ಎಪಿಸೋಡ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಅಂದಹಾಗೆ ಕೌನ್ ಬನೇಗಾ ಕರೋಡ್ ಪತಿ ಸೋಮವಾರದಿಂದ-ಶುಕ್ರವಾರದವರೆಗೂ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈ ಬಾರಿಯ ಜನಪ್ರಿಯ ಕ್ವಿಜ್ ಶೋ ಹೇಗೆ ಮೂಡಿಬರಲಿ, ಯಾರೆಲ್ಲ ಅತಿಥಿಗಳು ಭಾಗಿಯಾಗಲಿದ್ದಾರೆ ಎನ್ನುವುದು ಕಾದು ನೋಡಬೇಕು.

ಇನ್ನು ಅಮಿತಾಬ್ ಬಚ್ಚನ್ ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಬಿಗ್ ಬಿ ಗುಡ್ ಬೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಚಹ್ರೆ ಮತ್ತು ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಬಾಲಿವುಡ್ ಸಿನಿಮಾಗಳ ಜೊತೆಗೆ ತೆಲುಗು ಕಡೆಯೂ ಮುಖಮಾಡಿದ್ದು, ಪ್ರಭಾಸ್ ನಟನೆಯ ಸಿನಿಮಾದಲ್ಲಿ ಅಮಿತಾಬ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

More from Filmibeat

English summary
Kaun Banega Crorepati 13: Virender Sehwag and Sourav Ganguly likely to on hot seat in Amitabh Bachchan show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X