ಕ್ಯಾನ್ಸರ್ ವಿರುದ್ಧ ಹೋರಾಟ; ₹25 ಲಕ್ಷದ ಪ್ರಶ್ನೆಗೆ ಉತ್ತರ ಗೊತ್ತಿದ್ದು ಕೈಚೆಲ್ಲಿದ ಯುವಕ
ಹಿಂದಿ ಕಿರುತೆರೆಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಒಂದ್ಕಾಲದಲ್ಲಿ ಬಹಳ ಜನಪ್ರಿಯತೆ ಪಡೆದಿತ್ತು. ಬಳಿಕ ಕನ್ನಡ ದಕ್ಷಿಣದ ಭಾಷೆಗಳಲ್ಲಿ ಈ ಶೋ ಮೂಡಿ ಬಂದಿತ್ತು. ಇದೀಗ ಹಿಂದಿಯಲ್ಲಿ 16ನೇ ಸೀಸನ್ ನಡೀತಿದೆ. ಅಮಿತಾಬ್ ಬಚ್ಚನ್ ಕಾರ್ಯಕ್ರಮ ನಿರೂಪಣೆ ಮುಂದುವರೆಸಿದ್ದಾರೆ.
ಸಮಾನ್ಯ ಜ್ಞಾನದ ಪ್ರಶ್ನೆಗಳು, ಅದಕ್ಕೆ ನಾಲ್ಕ ಆಪ್ಷನ್. ಸರಿಯಾದ ಉತ್ತರ ಹೇಳಿದರೆ ಹಣದ ಬಹುಮಾನ. ಪ್ರಶ್ನೆಯಿಂದ ಪ್ರಶ್ನೆಗೆ ಹೆಚ್ಚಾಗುವ ಬಹುಮಾನದ ಮೊತ್ತ. ತಪ್ಪು ಉತ್ತರಕ್ಕೆ ಅದಾಗಲೇ ಗೆದ್ದಿರುವ ಬಹುಮಾನದ ಮೊತ್ತ ಕಡಿತವಾಗುವುದು. ಮೂರು ಲೈಫ್‌ಲೈನ್ ಎಲ್ಲವೂ ನೆನಪಿದೆ. ಆದರೆ ಇತ್ತೀಚೆಗೆ ಬೇರೆ ರಿಯಾಲಿಟಿ ಶೋಗಳ ನಡುವೆ ಈ ಶೋ ಕೊಂಚ ಡಲ್ಲಾಗಿದೆ.

ಹೊಸ ಸೀಸನ್‌ನಲ್ಲಿ ದೆಹಲಿ ಮೂಲದ ಅಕ್ಷಯ್ ನಾರಂಗ್ ಎಂಬ ಯುವಕ ಸ್ಪರ್ಧಿಯಾಗಿ ಭಾಗವಹಿಸಿದ್ದರು. 12.5 ಲಕ್ಷ ರೂಪಾಯಿ ಬಹುಮಾನ ಮೊತ್ತ ಗೆದ್ದಿದ್ದಾರೆ. ಅಚ್ಚರಿ ಎಂದರೆ 25 ಲಕ್ಷ ರೂ. ಪ್ರಶ್ನೆಗೆ ಸರಿಯಾದ ಉತ್ತರವನ್ನೇ ಆರಿಸಿದ್ದರು. ಆದರೆ ಅದನ್ನು ಹೇಳುವ ಧೈರ್ಯ ಮಾಡಲಿಲ್ಲ. ಬದಲಿಗೆ ಆಟವನ್ನು ಕ್ವಿಟ್ ಮಾಡಿದ್ದಾರೆ. ಬಳಿಕ ನಿಮ್ಮ ಆಯ್ಕೆಯ ಉತ್ತರ ಯಾವುದಾಗಿತ್ತು? ಎಂದಾಗ ಅಕ್ಷಯ್ ಸರಿಯಾದ ಉತ್ತರವನ್ನೇ ಹೇಳಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೂ 12.5 ಲಕ್ಷ ರೂ.ಗೆ ತೃಪ್ತರಾಗಿರುವುದಾಗಿ ತಿಳಿಸಿದ್ದಾರೆ.
ಅಕ್ಷಯ್ ನಾರಂಗ್ ಭಾಗವಹಿಸಿದ್ದ ಎಪಿಸೋಡ್ ಪ್ರೋಮೊಗಳು ವೈರಲ್ ಆಗುತ್ತಿದೆ. ಮುಖ್ಯವಾಗಿ ಆತ ತನ್ನ ಕ್ಯಾನ್ಸರ್ ವಿರುದ್ಧ ಹೋರಾಟದ ಬಗ್ಗೆ ಮಾತನಾಡಿರುವುದು ಕೆಲವರನ್ನು ಭಾವುಕರನ್ನಾಗಿ ಮಾಡಿದೆ. ಸೋನಿ ಟಿವಿಯಲ್ಲಿ KBC-16 ಶೋ ಪ್ರಸಾರವಾಗುತ್ತಿದೆ.
ಅಕ್ಷಯ್ ನಾರಂಗ್ ಕ್ಯಾನ್ಸರ್‌ಗೆ ವಿರುದ್ಧ ಹೋರಾಡಿ ಗೆದ್ದವರು. ಕೌನ್ ಬನೇಗಾ ಕರೋಡ್‌ಪತಿ ವೇದಿಕೆಯಲ್ಲಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ಇನ್ನು ಅಕ್ಷಯ್ ನಾರಂಗ್‌ಗೆ ಎದುರಾಗಿದ್ದ 25 ಲಕ್ಷ ರೂ. ಪ್ರಶ್ನೆ ಏನು ಗೊತ್ತಾ? 4000 ವರ್ಷಗಳ ಹಿಂದೆ ಪ್ರಾರಂಭವಾದ ಭೂಮಿಯ ಭೌಗೋಳಿಕ ಯುಗಕ್ಕೆ ಭಾರತದ ಯಾವ ರಾಜ್ಯವನ್ನು ಹೆಸರಿಸಲಾಗಿದೆ? ಆಯ್ಕೆಗಳು: A. ರಾಜಸ್ಥಾನ, B. ಕೇರಳ, C. ಗುಜರಾತ್, D. ಮೇಘಾಲಯ.
ಬಿಗ್ ಬಿ ಕೇಳಿದ ಪ್ರಶ್ನೆಗೆ ಮೇಘಾಲಯ ಎಂದು ಉತ್ತರವನ್ನು ಅಕ್ಷಯ್ ಗೆಸ್ ಮಾಡಿದ್ದರು. ಆದರೆ ಒಂದು ವೇಳೆ ತಪ್ಪಾದರೆ ಹಣ ಕಡಿತಗೊಳ್ಳುತ್ತದೆ ಎಂದು ರಿಸ್ಕ್ ತೆಗೆದುಕೊಳ್ಳಲು ಹೋಗಲಿಲ್ಲ. ಅದಾಗಲೇ 3 ಲೈಫ್‌ಲೈನ್ ಕೂಡ ಬಳಸಿಕೊಂಡುಬಿಟ್ಟಿದ್ದರು. ಹಾಗಾಗಿ ಆಟವನ್ನು ಕ್ವಿಟ್ ಮಾಡಿದ್ದರು. ಅಮಿತಾಬ್ ಬಚ್ಚನ್ ಕೂಡ ಇದಕ್ಕೆ ಮೆಚ್ಚುಗೆ ಸೂಚಿಸಿದ್ದರು. ನೀವು ಸರಿಯಾಗಿ ಆಡಿದ್ದರೆ ಚೆನ್ನಾಗಿರ್ತಿತ್ತು. ಆದರೂ ಕೆಲವೊಮ್ಮೆ ನಿಮ್ಮ ಮನಸ್ಸಿಗೆ ಏನು ಅನ್ನಿಸುತ್ತೆ ಅದೇ ಮಾಡಬೇಕು ಎಂದಿದ್ದಾರೆ.
ಇದೇ ಶೋನಲ್ಲಿ ಅಕ್ಷಯ್ ತಮ್ಮ ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆಯೂ ಮಾತನಾಡಿದ್ದಾರೆ. 2018ರಲ್ಲಿ ತಮಗೆ ಕ್ಯಾನ್ಸರ್ ಇರುವುದು ವೈದ್ಯರಿಂದ ದೃಡಪಟ್ಟಿತ್ತು. ಬಳಿಕ ವೈದ್ಯರ ಚಿಕಿತ್ಸೆಯಿಂದ ಚೇತರಿಸಿಕೊಂಡೆ. ಸತತ 2 ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿದ್ದಾಗೆ ಅಕ್ಷಯ್ ವಿವರಿಸಿದ್ದಾರೆ. ನಮ್ಮ ಸ್ನೇಹಿತರು ಕಾಲೇಜಿನಲ್ಲಿ ಇದ್ದಾಗ ನಾನು ಆಸ್ಪತ್ರೆಯಲ್ಲಿದ್ದೆ ಎಂದು ನೋವು ಹೊರ ಹಾಕಿದ್ದಾರೆ.
ಕೊನೆಗೆ ತಾವು ಗೆದ್ದ 12.5 ಲಕ್ಷ ರೂಪಾಯಿ ಚೆಕ್ ಅನ್ನು ತಮ್ಮ ತಾಯಿ ಕೈಗೆ ನೀಡುವಂತೆ ಅಕ್ಷಯ್ ಮನವಿ ಮಾಡಿದ್ದರು. ಅದಕ್ಕೆ ಅಮಿತಾಬ್ ಸಹ ಒಪ್ಪಿದರು. ನಾನು ದೊಡ್ಡದಾಗಿ ಹಣ ಗೆದ್ದರೆ ತಾಯಿ ಕೈಗೆ ಕೊಡ್ತೀನಿ ಎಂದು ಮಾತು ಕೊಟ್ಟಿದ್ದೆ. ಹಾಗಾಗಿ ಆಕೆ ಕೈಗೆ ಚೆಕ್ ಕೊಡಿ ಎಂದು ಅಕ್ಷಯ್ ಮನವಿ ಮಾಡಿರುವ ಪ್ರೋಮೊಸ ಸಹ ವೈರಲ್ ಆಗಿದೆ.


Click it and Unblock the Notifications











