ಅಮಿತಾಭ್-ವಿಕ್ರಂ ಜೋಡಿಯಿಂದ ವಾಸವದತ್ತಾ ಪ್ರೇಮಕಥೆ

By Srinath
<ul id="pagination-digg"><li class="previous"><a href="/tv/kbc-vikram-fails-to-answer-simple-question-aid0135.html">« Previous</a>

kbc-vikram-bhadravathi-vasavadatta-love-story
ಬೆಂಗಳೂರು, ಸೆ. 02: ಕೆಬಿಸಿಯಲ್ಲಿ ಅಮಿತಾಭ್‌ ಬಚ್ಚನ್‌ ಅವರಿಂದ 50 ಲಕ್ಷ ರುಪಾಯಿ ಚೆಕ್ ಸ್ವೀಕರಿಸಿ ಭದ್ರಾವತಿಯ ವಿಕ್ರಂ ಲಕ್ಷ್ಮೀಕಾಂತ ಬೀಗುತ್ತಿದ್ದಾರೆ. ಆದರೂ...! ಇನ್ನೇನು ಗೋಳು? ಎಂದು ಕೇಳಬೇಡಿ. ಏಕೆಂದರೆ ವಿಕ್ರಂಗೂ ಒಂದು ಬೇಜಾರು ಹಾಗೇ ಉಳಿದಿದೆ.

ಏನೆಂದರೆ ಕರೋಡ್ ಪತಿಯಾದರೆ ಹೀರೊ ಆಗಿ ಅಮಿತಾಭ್ ಎಂಬ ಮೇರುಪರ್ವತವನ್ನು ಹಾಕಿಕೊಂಡು ಅದ್ಭುತ ಕನ್ನಡಾ ಸಿನಿಮಾ ಮಾಡಬೇಕು ಎಂಬುದು ವಿಕ್ರಂ ಅವರ ಕನಸಾಗಿತ್ತಂತೆ. ಅದಕ್ಕೆ ಕಾರ್ಯಕ್ರಮದ ಮಧ್ಯೆ ಅಮಿತಾಭ್ ಸ್ಪಂದಿಸಿದ ರೀತಿ ಗಮನಿಸಿದಾಗ ಅಮಿತಾಭ್ ಹಿಮಾಲಯದ ಎತ್ತರಕ್ಕೆ ಏರಿರುವುದು ಶೃತಪಡುತ್ತದೆ.

ಈ ಇಳಿವಯಸ್ಸಿನಲ್ಲೂ ನಟನೆಯಲ್ಲಿ ಒಂದೇ ಒಂದು ಚಾನ್ಸ್ ಗಾಗಿ ನಿರ್ಮಾಪಕ/ನಿರ್ದೇಶಕರ ಮನೆ ಬಾಗಿಲು ಬಡಿಯುವ ಅಪ್ಪಟ ಕಲಾವಿದ ತಾನು ಎಂಬುದನ್ನು ಅವರು ತೋರಿಸಿಕೊಟ್ಟರು. ಇದನ್ನು ನೋಡಿದಾಗ ಒಂದೆರಡು ಸಿನಿಮಾಗಳು ಕ್ಲಿಕ್ ಆಗುತ್ತಿದ್ದಂತೆ ಆಕಾಶದಲ್ಲಿ ಹಾರಾಡುವ ಇಂದಿನ ಕಲಾವಿದರು ಎಷ್ಟೊಂದು ಕುಬ್ಜರಾಗುತ್ತಿದ್ದಾರೆ ಎನಿಸುತ್ತದೆ.

ವಿಕ್ರಂ ತಮ್ಮ ಮನವಿಯನ್ನು rather ಕನಸನ್ನು ಅಮಿತಾಭ್ ಮುಂದೆ ಹರವಿಕೊಂಡಾಗ 'ಚಿತ್ರರಂಗದಲ್ಲಿ ನನಗೆ 40 ವರ್ಷಗಳ ಅನುಭವವಷ್ಟೇ ಇರುವುದು. ಈ ಕಲಾವಿದನನ್ನು ನಿನ್ನ ಸೇವೆಗೆ ಮುಡಿಪಾಗಿಡುತ್ತೇನೆ. ಹೇಗೆ ಬೇಕಾದರೂ ಬಳಸಿಕೋ. ವಿಳಾಸ ಕೊಟ್ಟರೆ ನಾನೇ ನಿನ್ನ ಮನೆ ಬಾಗಿಲಿಗೆ ಬರುವೆ' ಎಂದು ವಿಕ್ರಂಗೆ ವಿನಮ್ರವಾಗಿ ಉತ್ತರಿಸಿದರು.

ಸರಿ, ಇಷ್ಟಕ್ಕೂ ವಿಕ್ರಂ ಹೇಳಿದ ಕಥೆ ಯಾವುದು ಎಂದು ಕೇಳಿದಿರಾ. ಅದೇ ಅದ್ಭುತ ಕಥೆ. ಸಂಸ್ಕೃತ ನಾಟಕ ವಾಸವದತ್ತಾ ಪ್ರೇಮ ಕಥೆ. ವಿಕ್ರಂ ತಮ್ಮ ಈ ಚಿತ್ರದ ಕಲ್ಪನೆಯಲ್ಲಿ ಅಮಿತಾಭರನ್ನು ಚಿತ್ರಸೇನಾ ಪಾತ್ರಧಾರಿಯನ್ನಾಗಿ ಕಂಡಿದ್ದಾರಂತೆ! ಮುಂದೊಂದು ದಿನ ವಿಕ್ರಂಗೆ ಇದೂ ಕೈಗೂಡಲಿ ಎಂದು ಹಾರೈಸುತ್ತಾ...

<ul id="pagination-digg"><li class="previous"><a href="/tv/kbc-vikram-fails-to-answer-simple-question-aid0135.html">« Previous</a>

More from Filmibeat

English summary
Kaun Banega Crorepati-5 which took off on Aug 15th, has given a good chance to Vikram Bhadravati Laxmikant from Karnataka to direct a film on Vasavadatta Chitrasena love story. And hero of the movie will be none ather than Amitabhji, KBC host!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X